ಬ್ಲೇಡ್, ಚೇಳು, ಬೆರಳು, ಬಳಿಕ ಚಾಕೋಲೇಟ್ ಸಿರಪ್‌ನಲ್ಲಿ ಸತ್ತ ಇಲಿ.. ಚಿಪ್ಸ್ ಪ್ಯಾಕೇಟ್‌ನಲ್ಲಿ ಫ್ರೈಡ್ ಕಪ್ಪೆ ಪತ್ತೆ
ಆಹಾರದಲ್ಲಿ ಏನೇನೋ ಸಿಕ್ಕುವ ಪ್ರಕರಣಗಳು ಮುಂದುವರೆಯುತ್ತಲೇ ಇದೆ. ಇಂದು ಒಂದು ಪ್ರಕರಣದಲ್ಲಿ ಚಾಕೋಲೇಟ್ ಸಿರಪ್‌ನಲ್ಲಿ ಸತ್ತ ಇಲಿ ಪತ್ತೆಯಾಗಿದ್ದರೆ ಮತ್ತೊಂದು ಪ್ರಕರಣದಲ್ಲಿ ಚಿಪ್ಸ್ ಪ್ಯಾಕೇಟ್‌ನಲ್ಲಿ ಫ್ರೈಡ್ ಕಪ್ಪೆ ಪತ್ತೆಯಾಗಿದೆ.
ಇತ್ತೀಚೆಗೆ ಆಹಾರದಲ್ಲಿ ಬೇಡದ ವಸ್ತುಗಳು ವಿಷಾಕಾರಿ ಜಂತುಗಳು ಸಿಕ್ಕುವುದು ಸಾಮಾನ್ಯ ಎಂಬಂತಾಗಿದೆ. ಕೆಲ ದಿನಗಳ ಹಿಂದಷ್ಟೇ ಮುಂಬೈನ ಯುವಕನೋರ್ವನಿಗೆ ಐಸ್‌ಕ್ರೀಂನಲ್ಲಿ ಮಾನವ ಬೆರಳು ಸಿಕ್ಕಿತ್ತು. ಈ ಭಯಾನಕ ಘಟನೆ ಮಾಸುವ ಮೊದಲೇ ಮಹಿಳೆಯೊಬ್ಬಳು ಆರ್ಡರ್ ಮಾಡಿದ್ದ ಐಸ್‌ಕ್ರೀಂನಲ್ಲಿ ಝರಿ ಎಂದು ಕರೆಯಲ್ಪಡುವ ಸತ್ತ ಚೇಳು ಪತ್ತೆಯಾಗಿತ್ತು. ಇದಾದ ನಂತರ ಏರ್ ಇಂಡಿಯಾ ವಿಮಾನ ತನ್ನ ಪ್ರಯಾಣಿಕನಿಗೆ ನೀಡಿದ ಆಹಾರದಲ್ಲಿ ಕಬ್ಬಿಣದ ತುಂಡು ಪತ್ತೆಯಾಗಿತ್ತು. ಈ ಎಲ್ಲಾ ಘಟನೆಗಳು ಕೇವಲ ಒಂದು ವಾರದೊಳಗೆ ನಡೆದ ಪ್ರಕರಣಗಳಾಗಿದ್ದು, ಈ ರೀತಿ ಆಹಾರದಲ್ಲಿ ಏನೇನೋ ಸಿಕ್ಕುವ ಪ್ರಕರಣಗಳು ಮುಂದುವರೆಯುತ್ತಲೇ ಇದೆ. ಇಂದು ಒಂದು ಪ್ರಕರಣದಲ್ಲಿ ಚಾಕೋಲೇಟ್ ಸಿರಪ್‌ನಲ್ಲಿ ಸತ್ತ ಇಲಿ ಪತ್ತೆಯಾಗಿದ್ದರೆ ಮತ್ತೊಂದು ಪ್ರಕರಣದಲ್ಲಿ ಚಿಪ್ಸ್ ಪ್ಯಾಕೇಟ್‌ನಲ್ಲಿ ಫ್ರೈಡ್ ಕಪ್ಪೆ ಪತ್ತೆಯಾಗಿದೆ.
ಪ್ರಕರಣ ಒಂದು
ಆನ್‌ಲೈನ್ ವಸ್ತುಗಳ ಪೂರೈಕೆ ಆಪ್ ಜೆಪ್ಟೋದಲ್ಲಿ ಮಹಿಳೆಯೊಬ್ಬರು ಕೇಕ್‌ನೊಂದಿಗೆ ತಿನ್ನವುದಕ್ಕಾಗಿ ಹೇರ್ಶಿ ಸಂಸ್ಥೆ ನಿರ್ಮಿಸಿರುವ ಚಾಕೋಲೇಟ್ ಶಿರಪ್‌ನ್ನು ಆರ್ಡರ್ ಮಾಡಿದ್ದರು. ಆದರೆ ಅದರಲ್ಲಿ ಇಲಿ ಪತ್ತೆಯಾಗಿದೆ ಎಂದು ಮಹಿಳೆ ಆರೋಪಿಸಿದ್ದಾರೆ. ಪ್ರಮಿ ಶ್ರೀಧರ್ ಎಂಬುವವರು ಸಾಮಾಜಿಕ ಜಾಲತಾಣದಲ್ಲಿ ಈ ಆರೋಪ ಮಾಡಿದ್ದು, ತಾವು ಕೇಕ್ ಜೊತೆ ತಿನ್ನುವುದಕ್ಕಾಗಿ ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ್ದ ಚಾಕೋಲೇಟ್ ಶಿರಪ್‌ನಲ್ಲಿ ಇಲ್ಲಿ ಪತ್ತೆಯಾಗಿದೆ. ಇದನ್ನು ಸೇವಿಸಿದ ಮೂವರು ಕುಟುಂಬ ಸದಸ್ಯರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ.
ಬೆರಳು, ಚೇಳಿನ ಬಳಿಕ ಇದೀಗ ಆಹಾರದಲ್ಲಿ ಸತ್ತ ಹಾವು, 11 ಕಾಲೇಜು ವಿದ್ಯಾರ್ಥಿಗಳು ಅಸ್ವಸ್ಥ!
ಚಾಕೋಲೇಟ್ ಸಿರಫ್ ಬಾಟಲ್ ತೆರೆದಾಗ ಮಂದವಾದ ರೀತಿಯಲ್ಲಿ ಸಿರಪ್ ಕಂಡುಬಂತು, ಅದರ ಜೊತೆಗೆ ಸಣ್ಣ ಸಣ್ಣ ಕೂದಲುಗಳು ಕೂಡ ಇದ್ದವು. ಈ ಹಿನ್ನೆಲೆಯಲ್ಲಿ ಅನುಮಾನದಿಂದ ಬಾಟಲಿಯಲ್ಲಿರುವ ಪೂರ್ತಿ ಸಿರಪ್‌ನ್ನು ಪಾತ್ರೆಗೆ ಹಾಕಿ ನೋಡಿದಾಗ ಸತ್ತ ಇಲಿಮರಿ ಕಾಣಿಸಿಕೊಂಡಿದೆ. ಈ ಬಗ್ಗೆ ದೂರು ನೀಡಿದರು ಕಂಪನಿ ಕಡೆಯಿಂದ ಯಾವುದೇ ಉತ್ತರ ಸಿಕ್ಕಿಲ್ಲ, ಹೀಗಾಗಿ ಆರ್ಡರ್ ಮಾಡಿ ಆಹಾರ ತಿನ್ನುವ ಮೊದಲು ಎಚ್ಚರವಾಗಿರಿ ಎಂದು ಅವರು ಬರೆದಿದ್ದಾರೆ. ಇತ್ತ ಪ್ರಮಿ ಶ್ರೀಧರ್ ಅವರ ಈ ಪೋಸ್ಟ್‌ಗೆ ಹೆರ್ಶಿ ಸಂಸ್ಥೆ ಪ್ರತಿಕ್ರಿಯಿಸಿದ್ದು ಕ್ಷಮೆ ಕೇಳಿದೆ, ಜೊತೆಗ ಬಾಟಲ್‌ನ ಬ್ಯಾಚ್ ನಂಬರ್ ತಿಳಿಸುವಂತೆ ಮನವಿ ಮಾಡಿದೆ.
ಪ್ರಕರಣ 2
ಹಾಗೆಯೇ ಗುಜರಾತ್‌ನಲ್ಲಿ ನಡೆದಿರುವ ಮತ್ತೊಂದು ಪ್ರಕರಣದಲ್ಲಿ ಚಿಪ್ಸ್ ಪ್ಯಾಕೇಟ್‌ನೊಳಗೆ ಚಿಪ್ಸ್‌ನಂತೆ ಫ್ರೈ ಆಗಿದ್ದ ಕಪ್ಪೆಯೊಂದು ಪತ್ತೆಯಾಗಿದ್ದು, ಚಿಪ್ಸ್ ತಿನ್ನುವುದಕ್ಕಾಗಿ ಪ್ಯಾಕೇಟ್ ಒಡೆದ ವ್ಯಕ್ತಿಗೆ ಶಾಕ್ ಆಗಿದೆ. ಗುಜರಾತ್ ಜಾಂನಗರದಲ್ಲಿ ಘಟನೆ ನಡೆದಿದೆ. ಆಲೂಗಡ್ಡೆ ಚಿಪ್ಸ್‌ನಲ್ಲಿ ಈ ಫ್ರೈ ಆಗಿದ್ದ ಕಪ್ಪೆ ಪತ್ತೆಯಾಗಿದೆ. ಘಟನೆಗೆ ಸಂಬಂಧಿಸಿದಂತೆ ಸ್ಥಳೀಯಾಡಳಿತವೂ ತನಿಖೆಗೆ ಆದೇಶಿಸಿದೆ.
ಐಸ್ ಕ್ರೀಮ್ ಆರ್ಡರ್ ಮಾಡಿದ ಮಹಿಳೆಗ ಶಾಕ್, ಪ್ಯಾಕ್ ತೆರೆದಾಗ ಪತ್ತೆಯಾಯ್ತು ಸತ್ತ ಚೇಳು!
ಜಾಸ್ಮೀನ್ ಪಟೇಲ್ ಎಂಬುವವರು ಖರೀದಿಸಿದ ಕ್ರಂಚೆಕ್ಸ್ ಹೆಸರಿನ ಆಲೂಗಡ್ಡೆ ಚಿಪ್ಸ್ ಪ್ಯಾಕೇಟ್‌ನಲ್ಲಿ ಕಪ್ಪೆ ಪತ್ತೆಯಾಗಿದ್ದು, ಬಾಲಾಜಿ ವಾಫೇರ್ಸ್ ಇದನ್ನು ನಿರ್ಮಿಸಿದೆ. ಕಳೆದ ರಾತ್ರಿ ಶಾಪ್‌ನಿಂದ ಚಿಪ್ಸ್ ಖರೀದಿಸಿದ್ದು, ಆ ಶಾಪ್‌ಗೆ ನಾವು ಭೇಟಿ ನೀಡಿದ್ದು, ಪ್ರಾಥಮಿಕ ತನಿಖೆಯ ವೇಳೆ ಇದು ಕಪ್ಪೆಯೇ ಎಂಬುದು ಕಂಡು ಬರುತ್ತದೆ ಎಂದು ಆಹಾರ ಸುರಕ್ಷತಾ ಅಧಿಕಾರಿ ಡಿಬಿ ಪರ್ಮರ್ ಹೇಳಿದ್ದಾರೆ.
ಒಟ್ಟಿನಲ್ಲಿ ಹೊರಗಿನ ಆಹಾರಗಳನ್ನು ಖರೀದಿಸುವ ಮುನ್ನ ಜಾಗರೂಕರಾಗಿರುವುದೊಳಿತು.
ಜೆಪ್ಟೊದಲ್ಲಿ ಐಸ್‌ಕ್ರೀಂ ಆರ್ಡರ್ ಮಾಡಿದ ಮುಂಬೈ ವೈದ್ಯನಿಗೆ ಶಾಕ್: ಕೋನ್ ಐಸ್‌ಕ್ರೀಂನಲ್ಲಿತ್ತು ಮಾನವ ಬೆರಳು
ಈ ಎರಡು ಭಯಾನಕ ವೀಡಿಯೋಗಳು ಇಲ್ಲಿದೆ.