ರಾಖಿ ಸಾವಂತ್ ಮಾಜಿ ಪ್ರೇಮಿಗೆ ವಿಮಾನದಲ್ಲಿ ಥಳಿತ: ವಿಮಾನದಲ್ಲಿ ಮಹಿಳೆಯೊಬ್ಬರು ದೀಪಕ್ ಕಲಾಲ್‌ಗೆ ಏಟು ನೀಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಘಟನೆಯಿಂದ ವಿಮಾನದಲ್ಲಿದ್ದ ಇತರೆ ಪ್ರಯಾಣಿಕರು ಆತಂಕಕ್ಕೊಳಗಾಗಿದ್ದರು.
ಮುಂಬೈ: ಬಾಲಿವುಡ್ ನಟಿ ಮಾಜಿ ಪ್ರೇಮಿ ದೀಪಕ್ ಕಲಾಲ್‌ಗೆ ಮಹಿಳೆಯೊಬ್ಬರು ಏಟು ನೀಡಿದ್ದಾರೆ. ಮಹಿಳೆಯ ಹೊಡೆತಕ್ಕೆ ಸಿಲುಕಿದ ದೀಪಕ್ ಕಲಾಲ್ ಮಕ್ಕಳಂತೆ ಕಣ್ಣೀರು ಹಾಕಿದ್ದಾನೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪಾದರಸದಂತೆ ಹರಿದಾಡುತ್ತಿದೆ. ವಿಮಾನದಲ್ಲಿ ಈ ಘಟನೆ ನಡೆದಿದ್ದು, ಗಗನಸಖಿಯರು ಮಹಿಳೆಯನ್ನು ಕಂಟ್ರೋಲ್ ಮಾಡಲು ಹರಸಾಹಸಪಟ್ಟಿದ್ದಾರೆ. ಈ ವಿಡಿಯೋ ನೋಡಿದ ನೆಟ್ಟಿಗರು, ಈ ವ್ಯಕ್ತಿಯನ್ನು ನೋಡಿ ತುಂಬಾ ದಿನವಾಗಿತ್ತು ಎಂದು ಕಮೆಂಟ್ ಮಾಡಿದ್ದಾರೆ. ನಟಿ ರಾಖಿ ಸಾವಂತ್ ಜೊತೆ ಕಾಣಿಸಿಕೊಂಡಿದ್ದರಿಂದ ದೀಪಕ್ ಕಲಾಲ್ ಮುನ್ನಲೆಗೆ ಬಂದಿದ್ದನು.
ದೀಪಕ್ ಕಲಾಲ್ ಎದೆಗೆ ಮಹಿಳೆ ಮೂರು ಬಾರಿ ಏಟು ನೀಡಿ ನಂತರ ಆತನ ಕಪಾಳಕ್ಕೂ ಹೊಡೆದಿದ್ದಾರೆ. ಇದಕ್ಕೂ ಮೊದಲು ದೀಪಕ್ ಕಲಾಲ್ ಮಹಿಳೆಯ ಕತ್ತು ಹಿಸುಕಲು ಹೋಗ್ತಾನೆ. ಇದರಿಂದ ಕೋಪಗೊಂಡ ಮಹಿಳೆ ಆತನನ್ನು ದೂರ ತಳ್ಳಿ ಹೊಡೆದಿದ್ದಾರೆ. Fly-high Institute ಇನ್‌ಸ್ಟಾಗ್ರಾಂನಲ್ಲಿ ಈ ವಿಡಿಯೋ ಶೇರ್ ಮಾಡಿಕೊಳ್ಳಲಾಗಿದೆ. Fly-high Institute ತರಬೇತಿ ಕೇಂದ್ರವಾಗಿದೆ.
ವಿಡಿಯೋ ಬಗ್ಗೆ ನೆಟ್ಟಿಗರಿಂದ ಅನುಮಾನ?
ಆಯೇಷಾ ಖಾನ್ (Ayesha Khan, @ayeshakhan7003) ಎಂಬವರು ಎಕ್ಸ್ ಖಾತೆಯಲ್ಲಿ ಈ ವಿಡಿಯೋ ಪೋಸ್ಟ್ ಮಾಡಿಕೊಂಡಿದ್ದಾರೆ. ಮೊದಲ ಬಾರಿ ವಿಮಾನದಲ್ಲಿ ಈ ರೀತಿಯ ಡ್ರಾಮಾ ನೋಡಿರಬಹುದು. ವಿಮಾನದಲ್ಲಿ ಅಂಕಲ್ ಆಂಡ್ ಆಂಟಿ ಸಂಚಲನ ಮೂಡಿಸಿದ್ದಾರೆ. ನಮ್ಮ ದೇಶ ವಿಶ್ವಗುರು ಆಗ್ತಿದೆಯಾ ಎಂದು ನೀವು ಭಾವಿಸುತ್ತೀರಾ ಎಂದು ಪ್ರಶ್ನೆ ಮಾಡಿದ್ದಾರೆ. ಈ ವಿಡಿಯೋಗೆ ಕಮೆಂಟ್ ಮಾಡಿರುವ ವ್ಯಕ್ತಿಯೊಬ್ಬರು, ಇದು ನಿಜವಾದ ವಿಮಾನ ಅನ್ನೋದು ಅನುಮಾನ. ಇದೊಂದು ಡ್ರಾಮಾ ಅಗಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಆಯೇಷಾ ಖಾನ್, ವಿಡಿಯೋ ನೋಡಿ ಮಜಾ ತೆಗೆದುಕೊಳ್ಳಿ ಎಂದಿದ್ದಾರೆ.
ಈವರೆಗೆ ವಿಡಿಯೋಗೆ 68 ಸಾವಿರಕ್ಕೂ ಅಧಿಕ ವ್ಯೂವ್ ಮತ್ತು ನೂರಾರು ಕಮೆಂಟ್‌ಗಳು ಬಂದಿವೆ. ದೀಪಕ್ ಕಲಾಲ್ ಸ್ವತಃ ಈ ವಿಡಿಯೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ವಿಡಿಯೋಗಳಿಗೆ 1 ಲಕ್ಷಕ್ಕೂ ಅಧಿಕ ವ್ಯೂವ್ ಮತ್ತು ಸಾವಿರಾರು ಕಮೆಂಟ್‌ಗಳು ಬಂದಿವೆ.
ಇದನ್ನೂ ಓದಿ: ಒಬ್ಬ ಮಹಿಳೆಯಿಂದ 25 ಮಕ್ಕಳು ಹೆತ್ತು ತ್ರಿವಳಿ ತಲಾಕ್; ಮತ್ತೆ ವಿವಾದವೆಬ್ಬಿಸಿದ ರಾಮಭದ್ರಾಚಾರ್ಯರ ಹೇಳಿಕೆ
Fly-high Institute ಹೇಳಿದ್ದೇನು?
ಪ್ರಯಾಣಿಕರೊಬ್ಬರು ಸಹ ಮಹಿಳಾ ಪ್ರಯಾಣಿಕರೊಂದಿಗೆ ಅನುಚಿತವಾಗಿ ನಡೆದುಕೊಳ್ಳಲು ಆರಂಭಿಸಿದ್ದರು. ಮಹಿಳೆ ಮೇಲೆ ಹಲ್ಲೆ ನಡೆಸಿದ್ದರಿಂದ ಇಬ್ಬರ ನಡುವೆ ವಾಗ್ವಾದ ನಡೆಯಿತು. ವ್ಯಕ್ತಿಯ ವರ್ತನೆಯಿಂದ ಕೋಪಗೊಂಡ ಮಹಿಳೆ ಆತನಿಗೆ ಹೊಡೆದಿದ್ದಾರೆ. ಈ ಘಟನೆಯಿಂದ ವಿಮಾನದಲ್ಲಿದ್ದ ಇತರೆ ಪ್ರಯಾಣಿಕರು ಆತಂಕಗೊಂಡಿದ್ದರು. ಕೂಡಲೇ ಇಬ್ಬರನ್ನು ಬೇರೆ ಬೇರೆ ಸೀಟ್‌ನಲ್ಲಿ ಕೂರಿಸಿ ಸಮಾಧಾನ ಮಾಡಲಾಯ್ತು.
ದೆಹಲಿ ಮೆಟ್ರೋ ಪ್ರಯಾಣದಲ್ಲಿ ಬಿದ್ದಿತ್ತು ಏಟು?
ಈ ಹಿಂದೆ ದೆಹಲಿ ಮೆಟ್ರೋದಲ್ಲಿ ಪ್ರಯಾಣಿಸುವ ವೇಳೆ ದೀಪಕ್ ಕಲಾಲ್ ಸಾರ್ವಜನಿಕರಿಂದ ಧರ್ಮದೇಟು ತಿಂದಿದ್ದ. ಮೆಟ್ರೋದಲ್ಲಿ ದೀಪಕ್ ಕಲಾಲ್‌ನ್ನು ಗುರುತಿಸಿದ ಯುವತಿ ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದಳು. ಸೆಲ್ಫಿ ಕ್ಲಿಕ್ ಮಾಡುವಾಗ ಫಿಲ್ಟರ್ ಆನ್ ಮಾಡಿಲ್ಲ ಎಂದು ಯುವತಿಯೊಂದಿಗೆ ದೀಪಕ್ ಕಲಾಲ್ ಜಗಳ ಮಾಡಿಕೊಂಡಿದ್ದನು. ಇದರಿಂದ ಕೋಪಗೊಂಡ ಯುವತಿ ದೀಪಕ್ ಕಲಾಲ್ ಕಪಾಳಕ್ಕೆ ಏಟು ನೀಡಿದ್ದಳು. ಈ ವಿಡಿಯೋ ಸಹ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
ಇದನ್ನೂ ಓದಿ: ಹಲವು ಉನ್ನತ ಹುದ್ದೆಗಳ ಅಲಂಕರಿಸಿದ್ರು LinkedInನಲ್ಲಿ 'ಹೆಂಡ್ತಿ ಸಹಾಯಕ' ಎಂದು ಬರೆದ ವ್ಯಕ್ತಿ: ಪೋಸ್ಟ್ ವೈರಲ್
