Asianet Suvarna News Asianet Suvarna News

ಡಿಜಿಟಲ್ ಇಂಡಿಯಾ ಕ್ರಾಂತಿ; ಮಿಲಿಟರಿ ಪ್ರಾಜೆಕ್ಟ್ ಮಾನಿಟರಿಂಗ್ ಪೋರ್ಟಲ್ ಲಾಂಚ್ ಮಾಡಿದ ರಾಜನಾಥ್ ಸಿಂಗ್!

  • ದೇಶದ ಮಿಲಿಟರಿ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆ
  • ಮಿಲಿಟರಿ ಎಂಜನೀಯರಿಂಗ್ ಸರ್ವೀಸ್‌ಗಾಗಿ ಹೊಸ ಪೋರ್ಟಲ್
  • ವೆಬ್ ಆಧಾರಿತ ಪ್ರಾಜೆಕ್ಟ್ ಮಾನಿಟರಿಂಗ್ ಪೋರ್ಟಲ್ ಲಾಂಚ್
Rajnath Singh launches web based project monitoring portal for Military Engineer Services ckm
Author
Bengaluru, First Published Oct 20, 2021, 5:05 PM IST

ನವದೆಹಲಿ(ಅ.20): ಭಾರತ ಸಂಪೂರ್ಣವಾಗಿ ಡಿಜಿಟಲೀಕರಣಗೊಳ್ಳುತ್ತಿದೆ. ಡಿಜಿಟಲೀಕರಣ(Digital India) ಮೂಲಕ ತ್ವರಿತಗತಿಯಲ್ಲಿ, ಸುಲಭ ಹಾಗೂ ಸರಳವಾಗಿ ಸೇವೆಗಳು ಲಭ್ಯವಾಗುತ್ತಿದೆ. ಇದೀಗ ಮಿಲಿಟರಿ ಕ್ಷೇತ್ರದಲ್ಲಿ ಎಂಜನೀಯರಿಂಗ್ ಸರ್ವೀಸ್ ಕೂಡ ಡಿಜಿಟಲ್ ಆಧಾರಿತವಾಗಿ ಮಾಡಲಾಗಿದೆ.  ಮಿಲಿಟರಿ ಎಂಜಿನಿಯರ್ ಸೇವೆಗಳಿಗಾಗಿ (MES) ವೆಬ್ ಆಧಾರಿತ ಪ್ರಾಜೆಕ್ಟ್ ಮಾನಿಟರಿಂಗ್ ಪೋರ್ಟಲ್ (WBPMP)  ಲಾಂಚ್ ಮಾಡಲಾಗಿದೆ.

200 ವರ್ಷ ಪುರಾ​ತನ OFB ವಿಸ​ರ್ಜ​ನೆ: ಸ್ವಾವಲಂಬಿ ಶಸ್ತ್ರಾಸ್ತ್ರ ಕ್ರಾಂತಿಗೆ ಮುನ್ನುಡಿ!

ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ನವದೆಹಲಿಯಲ್ಲಿ ನೂತನ ಪೋರ್ಟಲ್ ಲಾಂಚ್ ಮಾಡಿದ್ದಾರೆ. ಕೇಂದ್ರ ಸರ್ಕಾರದ ಡಿಜಿಟಲ್ ಇಂಡಿಯಾ ಮಿಷನ್ ಅಡಿ ನೂತನ ಪೋರ್ಟಲ್ ಅಭಿವೃದ್ಧಿ ಪಡಿಸಲಾಗಿದೆ. ಹೊಸದಾಗಿ ಅಭಿವೃದ್ಧಿಪಡಿಸಲಾದ ಪ್ರಾಜೆಕ್ಟ್ ಮಾನಿಟರಿಂಗ್ ಪೋರ್ಟಲ್ ಹಲವು ವಿಶೇಷತೆಗಳನ್ನು ಹೊಂದಿದೆ. ಈ ಪೋರ್ಟಲ್ ಮೂಲಕ ಹಲುವು ಮಾಹಿತಿಗಳು ಸುಲಭವಾಗಿ ಪಡೆಯಬಹುದು.

ನೂತನ ಪೋರ್ಟಲ್ ಏಕೀಕೃತ ಪೋರ್ಟಲ್ ಆಗಿದ್ದು,ಮಿಲಿಟರಿ ಎಂಜಿನಿಯರ್ ಸೇವೆಗಳ(Military Engineer Services)  ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್ ಗವರ್ನೆನ್ಸ್ ಆಗಿದೆ. ನೈಜ ಸಮಯದಲ್ಲಿ ಮೇಲ್ವಿಚಾರಣೆಯನ್ನು ಸಕ್ರೀಯಗಗೊಳಿಸುತ್ತದೆ. ಎಲ್ಲಾ ಪಾಲುದಾರರು, MES ಮಾತ್ರವಲ್ಲ, ಸಶಸ್ತ್ರಪಡೆಗಳ ಬಳಕೆದಾರರು ಯೋಜನೆ ಮಾಹಿತಿ ಪಡೆಯಬಹುದು. ಈ ಪೋರ್ಟಲ್ ಮೂಲಕ ಮಿಲಿಟರಿ ಎಂಜಿನಿಯರ್ ಸೇವೆಗಳು ವೈಜ್ಞಾನಿಕ ನಿರ್ವಹಣೆಯಾಗಲಿದೆ.

MES ಯೋಜನೆಗಳ ಮೇಲ್ವಿಚಾರಣೆಗೆ ನೂತನ ಹಾಗೂ ಅತ್ಯಾಧುನಿಕ ಪೋರ್ಟಲ್  ನೆರವಾಗಲಿದೆ. ಇದರಿಂದ ಆಗುವ ಅನೂಕೂಲಗಳನ್ನು ರಾಜನಾಥ್ ಸಿಂಗ್ ಶ್ಲಾಘಿಸಿದರು. ಇದೇ ವೇಳೆ ಇದೇ ರೀತಿ ಇತರ 9 ಇ ಆಡಳಿತ ಆ್ಯಪ್ಲಿಕೇಶನ್ ಜಾರಿಗೆ ತಯಾರಿ ನಡೆಯುತ್ತಿದೆ ಎಂದು ರಾಜನಾಥ್ ಸಿಂಗ್ ಹೇಳಿದರು

ಅ.15ಕ್ಕೆ 7 ಹೊಸ ರಕ್ಷಣಾ ಕಂಪನಿ ರಾಷ್ಟ್ರಕ್ಕೆ ಸಮರ್ಪಿಸಿ ಪ್ರಧಾನಿ ಮೋದಿ ಭಾಷಣ!

ಡಿಜಿಟಲ್ ಇಂಡಿಯಾ ಮಿಷನ್ ಅಡಿ MES ಉತ್ಪಾದನೆ, ಪಾರದರ್ಶಕತೆ ಹೆಚ್ಚಿಸಲು ಹಾಗೂ ಸೇನೆಯ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ದಕ್ಷತೆ ಸಾಧಿಸಲು ಹೊಸದಾಗಿ ಲಾಂಚ್ ಆಗಲಿರುವ 9 ಇ ಆಡಳಿತ ಆ್ಯಪ್ಲಿಕೇಶನ್ ನೆರವಾಗಲಿದೆ.  ಇದರಿಂದ ಯೋಜನೆ ವೆಚ್ಚ, ಕೆಲದ ಅಂದಾಜು, ಅರ್ಜಿ, ಬಿಲ್ಲಿಂಗ್, ಅಭಿವೃದ್ಧಿ ಕಾಮಾಗಾರಿಗಳು, ಕ್ಯಾಶ್ ಬುಕ್ ನಿರ್ವಹಣೆ, ಲೆಕ್ಕ ಪತ್ರ ವ್ಯವಸ್ಥೆ,  ಗುತ್ತಿಗೆದಾರ ಮತ್ತು ಸಮಾಲೋಚಕರ ನೋಂದಣಿ ಪೋರ್ಟಲ್ ಮತ್ತು ಇ-ವಿಚಲನ ಸೇರಿವೆ. 2021ರ ಡಿಸೆಂಬರ್ ವೇಳೆಗೆ ಈ ನೂತನ ಆ್ಯಪ್ಲಿಕೇಶನ್ ಅಭಿವೃದ್ಧಿ ಪಡಿಸುವ ಗುರಿಯನ್ನು ರಕ್ಷಣಾ ಇಲಾಖೆ ಇಟ್ಟುಕೊಂಡಿದೆ. 

ಮಿಲಿಟರಿ ಎಂಜಿನಿಯರ್ ಸೇವೆಗಳಲ್ಲಿ ಅತ್ಯಾಧುನಿಕ ವಸತಿ ಸೌಕರ್ಯಗಳ ನಿರ್ಮಾಣ, ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ, ರನ್ ವೇ ನಿರ್ಮಾಣ, ಸಾಗರ ರಚನೆಗಳ ನಿರ್ಮಾಣ, ಕೊಳಚೆ ನೀರು ಸಂಸ್ಕರಣಾ ಘಟಕ ನಿರ್ಮಾಣ ಸೇರಿದಂತೆ ಹಲವು ವಿವಿಧ ಯೋಜನೆಗಳು ಸೇರಿವೆ.

Follow Us:
Download App:
  • android
  • ios