ಅ.15ಕ್ಕೆ 7 ಹೊಸ ರಕ್ಷಣಾ ಕಂಪನಿ ರಾಷ್ಟ್ರಕ್ಕೆ ಸಮರ್ಪಿಸಿ ಪ್ರಧಾನಿ ಮೋದಿ ಭಾಷಣ!

  • 7 ಹೊಸ ರಕ್ಷಣಾ ಕಂಪನಿಗಳನ್ನು ರಾಷ್ಟ್ರಕ್ಕೆ ಸಮರ್ಪಣಾ ಕಾರ್ಯಕ್ರಮ
  • ಅ.15ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಮೋದಿ ಭಾಷಣ
  • ಆತ್ಮನಿರ್ಭರ್ ಭಾರತ್ ಅಡಿಯಲ್ಲಿ ಹೊಸ ಭಾರತ ನಿರ್ಮಾಣ
PM Modi to deliver address in event to dedicate 7 new Defence Companies to Nation on 15th October ckm

ನವದೆಹಲಿ(ಅ.14):  ಆತ್ಮನಿರ್ಭರ್ ಭಾರತ್(atmanirbhar bharat) ಮಿಷನ್ ಅಡಿಯಲ್ಲಿ ದೇಶ ಹಿಂದೆಂದು ಕಂಡಿರದ ರೀತಿಯಲ್ಲಿ ಸ್ವಾಲಂಬಿಯಾಗಿದೆ. ಇದೀಗ ರಕ್ಷಣಾ ಕ್ಷೇತ್ರದಲ್ಲೂ(Defence) ಮಹತ್ತರ ಬದಲಾವಣೆ ಹಾಗೂ ಸ್ವಾವಲಂಬಿಯಾಗಿದೆ. ಇದೀಗ ವಿಜಯದಶಮಿ ಪವಿತ್ರ ದಿನದಂದು ಪ್ರಧಾನಿ ನರೇಂದ್ರ ಮೋದಿ(Narendra modi) ಮತ್ತೊಂದು ಇತಿಹಾಸ ರಚಿಸುತ್ತಿದ್ದಾರೆ. ಅಕ್ಟೋಬರ್ 15 ರಂದು ಪ್ರಧಾನಿ ಮೋದಿ, ರಕ್ಷಣಾ ಸಚಿವಾಲಯ ಆಯೋಜಿಸಿರುವ 7 ಹೊಸ ರಕ್ಷಣಾ ಕಂಪನಿಗಳನ್ನು( Defence Companies) ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ.

ನರೇಂದ್ರ ಮೋದಿ ಸರ್ಕಾರದ ಮತ್ತೊಂದು ಐತಿಹಾಸಿಕ ನಡೆ, ಸೇನೆಗೆ ಹಣಕಾಸು ಹೊಣೆ!

ನಾಳೆ ಮಧ್ಯಾಹ್ನ 12.10ಕ್ಕೆ ಮೋದಿ 7 ಹೊಸ ರಕ್ಷಣಾ ಕಂಪನಿಗಳು ರಾಷ್ಟ್ರಕ್ಕೆ ಸರ್ಪಮಿಸಲಿದ್ದಾರೆ. ಬಳಿಕ ವಿಡಿಯೋ ಕಾನ್ಫೆರನ್ಸ್ ಮೂಲಕ ದೇಶವನ್ನುದ್ದೇಶಿ ಭಾಷಣ ಮಾಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್(Rajnath Singh), ರಕ್ಷಣಾ ಖಾತೆ ಸಹಾಯಕ ಸಚಿವರು ಮತ್ತು ರಕ್ಷಣಾ ಉದ್ಯಮದ ಸಂಸ್ಥೆಗಳ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. 

ರಾಷ್ಟ್ರೀಯ ಹೆದ್ದಾರಿಯಲ್ಲೇ IAF ತುರ್ತು ಭೂಸ್ವರ್ಶ ಏರ್‌ಸ್ಟ್ರಿಪ್‌ ಉದ್ಘಾಟನೆ; ಭಾರತದ ಪ್ರಯತ್ನಕ್ಕೆ ಮೆಚ್ಚುಗೆ

ದೇಶದ ರಕ್ಷಣಾ ಸನ್ನದ್ಧತೆಯಲ್ಲಿ ಸ್ವಾವಲಂಬನೆ ಸುಧಾರಿಸುವ ಕ್ರಮವಾಗಿ ಸರ್ಕಾರಿ ಇಲಾಖೆಯಿಂದ ಶಸ್ತ್ರಾಸ್ತ್ರ ಕಾರ್ಖಾನೆ ಮಂಡಳಿಯನ್ನು ಶೇ.100ರಷ್ಟು  ಸರ್ಕಾರಿ ಒಡೆತನದ 7 ಕಾರ್ಪೊರೇಟ್ ಸಂಸ್ಥೆಗಳನ್ನಾಗಿ(corporate entities) ಪರಿವರ್ತಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಇದು ಈ ಕ್ರಮವು  ಕ್ರಿಯಾತ್ಮಕ ಸ್ವಾಯತ್ತತೆ ವೃದ್ಧಿಸುತ್ತದೆ, ದಕ್ಷತೆಯನ್ನು ತರುತ್ತದೆ ಮತ್ತು ಹೊಸ ಬೆಳವಣಿಗೆಯ ಸಾಮರ್ಥ್ಯ ಮತ್ತು ನಾವೀನತ್ಯೆಯನ್ನು ಹುಟ್ಟು ಹಾಕುತ್ತದೆ.

ಚೀನಾ ಗಡಿಗೆ 50 ಸಾವಿರ ಯೋಧರ ಕಳಿಸಿದ ಭಾರತ!

ಸ್ಥಾಪನೆಯಾಗಿರುವ 7 ಹೊಸ ರಕ್ಷಣಾ ಕಂಪನಿಗಳೆಂದರೆ; ಮುನಿಷನ್ಸ್ ಇಂಡಿಯಾ ಲಿಮಿಟೆಡ್ (ಎಂಐಎಲ್); ಆರ್ಮೊರ್ಡ್ ವೆಹಿಕಲ್ಸ್(ಶಸ್ತ್ರ ಸಜ್ಜಿತ ವಾಹನಗಳು) ನಿಗಮ ಲಿಮಿಟೆಡ್(ಎವಿಎಎನ್ ಐ); ಅಡ್ವಾನ್ಸ್ಡ್ ವೆಪನ್ಸ್ ಅಂಡ್ ಎಕ್ಯೂಪ್ ಮೆಂಟ್ ಇಂಡಿಯಾ ಲಿಮಿಟೆಡ್(ಎಡಬ್ಲ್ಯೂಇ ಇಂಡಿಯಾ); ಟ್ರೂಪ್ ಕಂಫರ್ಟ್ಸ್ ಲಿಮಿಟೆಡ್(ಟಿಸಿಎಲ್); ಯಂತ್ರ ಇಂಡಿಯಾ ಲಿಮಿಟೆಡ್ (ವೈಐಎಲ್); ಇಂಡಿಯಾ ಒಪ್ಟೆಲ್ ಲಿಮಿಟೆಡ್(ಐಒಎಲ್ ) ಮತ್ತು ಗ್ಲೈಡರ್ಸ್ ಇಂಡಿಯಾ ಲಿಮಿಟೆಡ್(ಜಿಐಎಲ್).

ಡಿಆರ್‌ಡಿಒ ಸಯೋಗದಲ್ಲಿ ಭಾರತ ರಕ್ಷಣಾ ಇಲಾಖೆ ಅತ್ಯಾಧುನಿಕ ಮಿಸೈಲ್ ಸೇರಿದಂತೆ ಹಲವು ಕ್ಷಿಪಣಿಗಳನ್ನು ಪರೀಕ್ಷಿಸಿ ಯಶಸ್ವಿಯಾಗಿದೆ. ಸುಮಾರು 15ಕ್ಕೂ ಹೆಚ್ಚು ಹೊಸ ಕ್ಷಿಪಣಿಗಳು ಭಾರತೀಯ ಸೇನೆ ಸೇರಿಕೊಳ್ಳುತ್ತಿದೆ. ಇತ್ತ HAL ಮೂಲಕ ಸೇನಾ ಹೆಲಿಕಾಪ್ಟರ್ ಸೇರಿದಂತೆ ಲಘು ಯುದ್ಧ ವಿಮಾನಗಳು ನಿರ್ಮಾಣವಾಗುತ್ತಿದೆ. ಭಾರತ ತನ್ನ ರಕ್ಷಣಾ ಶಸ್ತ್ರಾಸ್ತ್ರಗಳನ್ನು ತಾನೇ ಉತ್ಪಾದನೆ ಮಾಡುವ ಹಂತಕ್ಕೆ ಬೆಳೆದು ನಿಂತಿದೆ. 

Latest Videos
Follow Us:
Download App:
  • android
  • ios