Asianet Suvarna News Asianet Suvarna News

ಕುಡಿದು ಕುಣಿಯುತ್ತಲೇ ಬಾಕಿಯಾದ ವರ: ಅದೇ ಮಂಟಪದಲ್ಲಿ ಬೇರೆಯವನ ಮದುವೆಯಾದ ವಧು

  • ತಾವು ಕುಡಿದರು ಮದುವೆ ಗಂಡಿಗೂ ಕುಡಿಸಿದ ಸ್ನೇಹಿತರು
  • ವರನ ಅವತಾರ ನೋಡಿ ಮದುವೆ ನಿರಾಕರಿಸಿದ ವಧು
  • ಅದೇ ಮಂಟಪದಲ್ಲಿ ಬೇರೆಯವನ ಮದುವೆಯಾದ ವಧು
     
Rajasthan Bride Marries Another Man After Drunk Groom Kept Dancing akb
Author
Bangalore, First Published May 18, 2022, 3:30 PM IST | Last Updated May 18, 2022, 3:30 PM IST

ರಾಜಸ್ಥಾನ: ತನ್ನದೇ ಮದುವೆಯಲ್ಲಿ ಮದ್ಯಪಾನ ಮಾಡಿ ಮೂಹೂರ್ತ ಮೀರುವವರೆಗೂ ಕುಣಿದು ಕುಪ್ಪಳಿಸಿದ ವರನನ್ನು ನೋಡಿದ ವಧು ಅದೇ ಮಂಟಪದಲ್ಲಿ ಬೇರೆಯವನನ್ನು ವಿವಾಹವಾದ ಘಟನೆ ರಾಜಸ್ತಾನದ ಚುರುವಿನಲ್ಲಿ ನಡೆದಿದೆ. ಮದುವೆಯಲ್ಲಿ ವರ ಮದ್ಯ ಸೇವಿಸಿ ಸ್ನೇಹಿತರೊಂದಿಗೆ ಡಾನ್ಸ್ ಮಾಡುತ್ತಾ ಬಾಕಿ ಆಗಿದ್ದಾನೆ. ಇದರಿಂದ ಮೆರವಣಿಗೆ ವಧುವಿನ ಮನೆ ತಲುಪಲು ಭಾರಿ ವಿಳಂಬವಾಗಿದೆ. ವರನ ಈ ಕುಡಿತದ ಚಟ ಬೇಜಾವಾಬ್ದಾರಿಯನ್ನು ನೋಡಿದ ವಧು  ಕೋಪಗೊಂಡರೆ, ಇತ್ತ ವಧುವಿನ ತಂದೆ ತಮ್ಮ ಮಗಳನ್ನ ಬೇರೆ ವ್ಯಕ್ತಿ ಜೊತೆ ಅದೇ ಕಲ್ಯಾಣ ಮಂಟಪದಲ್ಲಿ ಮದುವೆ ಮಾಡಿಸಿದ್ದಾರೆ. ರಾಜಸ್ಥಾನದ (Rajasthan) ಚುರುವಿನಲ್ಲಿ (Churu) ಈ ಘಟನೆ ನಡೆದಿದೆ. 

ಭಾನುವಾರದಂದು ವರ ಸುನೀಲ್ (Sunil) ಮತ್ತು ಆತನ ಸಂಬಂಧಿಕರು ವಧುವಿನ (Bride) ಗ್ರಾಮಕ್ಕೆ ಆಗಮಿಸಿದಾಗ ಈ ಘಟನೆ ನಡೆದಿದೆ. ಕುಟುಂಬದವರು ನಿಗದಿಪಡಿಸಿದಂತೆ ಮದುವೆಯ ಮುಹೂರ್ತ 1.15 ನಿಗದಿಯಾಗಿತ್ತು. ಆದರೆ ಆ ಸಮಯಕ್ಕೆ ವರನ ಕಡೆಯವರು ಬಂಧು ತಲುಪಿಲ್ಲ. ವರ ತನ್ನ ಸ್ನೇಹಿತರೊಂದಿಗೆ ಸೇರಿಕೊಂಡು ಕುಡಿದು ಡಿಜೆ  ಸಂಗೀತಕ್ಕೆ ನೃತ್ಯ (Music DJ)ಮಾಡಿದ್ದರಿಂದ ಗಂಟೆಗಟ್ಟಲೆ ಮೆರವಣಿಗೆ ವಿಳಂಬವಾಗಿದೆ. ಏತನ್ಮಧ್ಯೆ, ವಧುವಿನ ಕಡೆಯವರು ವರನ ಬರುವಿಕೆಗಾಗಿ ಕಾದು ಕಾದು ಸುಸ್ತಾಗಿದ್ದರು. ಇದರಿಂದ ಸಿಟ್ಟಿಗೆದ್ದ ವಧುವಿನ ಕಡೆಯವರು ವರನ ಕಡೆಯವರನ್ನು ವಾಪಸ್ ಕಳುಹಿಸಿದ್ದು, ವಧುವಿಗೆ ಬೇರೆಯವರೊಂದಿಗೆ ಅದೇ ಮಂಟಪದಲ್ಲಿ ಮದುವೆ ಮಾಡಿಸಲು ನಿರ್ಧರಿಸಿದರು. 

ಕನ್ನಡಕ ಧರಿಸದೆ ಪತ್ರಿಕೆ ಓದಲು ಹುಡುಗ ವಿಫಲ; ಮದುವೆ ಕ್ಯಾನ್ಸಲ್ ಮಾಡಿದ ವಧು!

ಆದರೆ ವರ ಮತ್ತು ಅವರ ಸಂಬಂಧಿಕರು ಅಂತಿಮವಾಗಿ ಮದುವೆ ಸ್ಥಳಕ್ಕೆ ಬಂದಾಗ, ವಧು ಈಗಾಗಲೇ ಇನ್ನೊಬ್ಬ ವ್ಯಕ್ತಿಯನ್ನು ಮದುವೆಯಾಗಲು ನಿರ್ಧರಿಸಿರುವುದನ್ನು ನೋಡಿ ಅವರು ಆಘಾತಕ್ಕೊಳಗಾಗಿದ್ದಾರೆ. ವಧುವಿನ ಮನೆಗೆ ಮೆರವಣಿಗೆ ಮೂಲಕ ಹೊರಡಲು ವರ (Groom) ಸಿದ್ಧಗೊಳ್ಳುತ್ತಿದ್ದಂತೆ ಆತನ ಸ್ನೇಹಿತರು ಮದ್ಯಪಾನ ಮಾಡಿದ್ದಾರೆ. ಹೀಗಾಗಿ ಮಧ್ಯರಾತ್ರಿ 2 ಗಂಟೆಯಾದ್ರೂ ಮೆರವಣಿಗೆ ವಧುವಿನ ಮನೆಗೆ ತಲುಪಿಲ್ಲ. ಜೊತೆಗೆ ವರನ ಸ್ನೇಹಿತರು ಕಂಠಪೂರ್ತಿ ಕುಡಿದು ಗಲಾಟೆ ಮಾಡಿದ್ದಾರೆ. ಗಲಾಟೆ ನಿಲ್ಲಿಸುವಂತೆ ವಧುವಿನ ಕಡೆಯವರು ಮನವಿ ಮಾಡಿಕೊಂಡಾಗ ಹುಡುಗನ ಸೋದರ ಮಾವ ಜಗಳಕ್ಕೆ ಮುಂದಾಗಿದ್ದಾರೆ. ಇದರಿಂದ ಆಕ್ರೋಶಗೊಂಡು ತಮ್ಮ ಮಗಳಿಗೆ ಬೇರೆ ಹುಡುಗನೊಂದಿಗೆ ಮದುವೆ ಮಾಡಲು ಯುವತಿ ಕಡೆಯವರು ನಿರ್ಧರಿಸಿದ್ದಾರೆ. ರಾತ್ರಿ ವೇಳೆ ಅದೇ ಮಂಟಪದಲ್ಲಿ ಬೇರೊಬ್ಬ ಹುಡುಗನೊಂದಿಗೆ ಮದುವೆ ಕಾರ್ಯಕ್ರಮ ಸಹ ಮುಗಿಸಿದ್ದಾರೆ.

ಸಮಯಕ್ಕೆ ಸರಿಯಾಗಿ ಬಾರದ ವರ: ಅದೇ ಮಂಟಪದಲ್ಲಿ ಬೇರೆಯವರನ್ನು ಮದುವೆಯಾದ ವಧು

ಬೆಳಗ್ಗೆ ಮದುಮಗ ಸುನೀಲ್​ ಹಾಗೂ ಆತನ ಸಂಬಂಧಿಕರು ಪೊಲೀಸ್ ಠಾಣೆಯಲ್ಲಿ (Police Station) ದೂರು ದಾಖಲು ಮಾಡಿದ್ದಾರೆ. ಇದಕ್ಕೆ ಪ್ರತಿಯಾಗಿ ಮಾತನಾಡಿದ ವಧುವಿನ ಪೋಷಕರು, ಮದುವೆ ಕಾರ್ಯಕ್ರಮದಲ್ಲೇ ಇಷ್ಟೊಂದು ಬೇಜವಾಬ್ದಾರಿಯಾಗಿ ನಡೆದುಕೊಳ್ಳುವ ಇವರು, ಮುಂದೆ ಹೇಗೆ ಸಂಬಂಧ ಇಟ್ಟುಕೊಳ್ಳಬಹುದು? ಎಂದು ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಪೊಲೀಸರು ಎರಡೂ ಕಡೆಯವರ ಮನವೊಲಿಕೆ ಮಾಡಿದ್ದಾರೆ. ಜೊತೆಗೆ ಮಧ್ಯರಾತ್ರಿ ಬೇರೆ ಯುವಕನೊಂದಿಗೆ ನಡೆದ ಮದುವೆ ರದ್ದುಗೊಳಿಸುವಂತೆ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ. 

ಇಂತಹದ್ದೇ ಘಟನೆ ಮಹಾರಾಷ್ಟ್ರದ ಬುಲ್ಧಾನಾ ಜಿಲ್ಲೆಯಲ್ಲಿ ಕೆಲ ದಿನಗಳ ಹಿಂದೆ ನಡೆದಿತ್ತು. ವರ ಸರಿಯಾದ ಸಮಯಕ್ಕೆ ಮದುವೆ ನಡೆಯಬೇಕಿದ್ದ ಸ್ಥಳವನ್ನು ತಲುಪದ ಹಿನ್ನೆಲೆಯಲ್ಲಿ ಅದೇ ಮಂಟಪದಲ್ಲಿ ವಧು ತನ್ನ ಸಂಬಂಧಿಯನ್ನು ಮದುವೆಯಾದ ವಿಚಿತ್ರ ಘಟನೆ  ನಡೆದಿದೆ. ಕುತೂಹಲಕಾರಿ ಘಟನೆಯೊಂದರಲ್ಲಿ, ವಧುವಿನ ತಂದೆ ತನ್ನ ಮಗಳನ್ನು ವರನ ಬದಲಿಗೆ ತನ್ನ ಹಳೆಯ ಸಂಬಂಧಿಗೆ ಕೊಟ್ಟು ಮದುವೆ ಮಾಡಿಸಿದ್ದಾರೆ. ಏಕೆಂದರೆ ವರ ಹಾಗೂ ಆತನ ಸ್ನೇಹಿತರು ಕುಡಿದು ಮೋಜು ಮಸ್ತಿಯಲ್ಲಿ ತೊಡಗಿದ್ದು, ಮೂಹೂರ್ತ ಮೀರಿದ್ದರು ಮದುವೆ ಸ್ಥಳಕ್ಕೆ ತಲುಪಿರಲಿಲ್ಲ. ಇದರಿಂದ ಕಂಗೆಟ್ಟ ವಧುವಿನ ಕಡೆಯವರು ಮದುವೆಗೆ(Wedding) ಬಂದಿದ್ದ ತಮ್ಮ ಸಂಬಂಧಿಗೆ ವಧುವನ್ನು ಧಾರೆ ಎರೆದು ಕೊಟ್ಟಿದ್ದಾರೆ.

Latest Videos
Follow Us:
Download App:
  • android
  • ios