ಸರಿಯಾದ ಸಮಯಕ್ಕೆ ಬಾರದ ವರ ಅದೇ ಮಂಟಪದಲ್ಲಿ ಸಂಬಂಧಿಯ ಮದುವೆಯಾದ ವಧು ಮಹಾರಾಷ್ಟ್ರದ ಬುಲ್ಧಾನಾ ಜಿಲ್ಲೆಯಲ್ಲಿ ಘಟನೆ

ಮಹಾರಾಷ್ಟ್ರ: ವರ ಸರಿಯಾದ ಸಮಯಕ್ಕೆ ಮದುವೆ ನಡೆಯಬೇಕಿದ್ದ ಸ್ಥಳವನ್ನು ತಲುಪದ ಹಿನ್ನೆಲೆಯಲ್ಲಿ ಅದೇ ಮಂಟಪದಲ್ಲಿ ವಧು ತನ್ನ ಸಂಬಂಧಿಯನ್ನು ಮದುವೆಯಾದ ವಿಚಿತ್ರ ಘಟನೆ ಮಹಾರಾಷ್ಟ್ರದ ಬುಲ್ಧಾನಾ ಜಿಲ್ಲೆಯಲ್ಲಿ ನಡೆದಿದೆ. ಕುತೂಹಲಕಾರಿ ಘಟನೆಯೊಂದರಲ್ಲಿ, ವಧುವಿನ ತಂದೆ ತನ್ನ ಮಗಳನ್ನು ವರನ ಬದಲಿಗೆ ತನ್ನ ಹಳೆಯ ಸಂಬಂಧಿಗೆ ಕೊಟ್ಟು ಮದುವೆ ಮಾಡಿಸಿದ್ದಾರೆ. ಏಕೆಂದರೆ ವರ ಹಾಗೂ ಆತನ ಸ್ನೇಹಿತರು ಕುಡಿದು ಮೋಜು ಮಸ್ತಿಯಲ್ಲಿ ತೊಡಗಿದ್ದು, ಮೂಹೂರ್ತ ಮೀರಿದ್ದರು ಮದುವೆ ಸ್ಥಳಕ್ಕೆ ತಲುಪಿರಲಿಲ್ಲ. ಇದರಿಂದ ಕಂಗೆಟ್ಟ ವಧುವಿನ ಕಡೆಯವರು ಮದುವೆಗೆ(Wedding) ಬಂದಿದ್ದ ತಮ್ಮ ಸಂಬಂಧಿಗೆ ವಧುವನ್ನು ಧಾರೆ ಎರೆದು ಕೊಟ್ಟಿದ್ದಾರೆ.

ಏಪ್ರಿಲ್ 22 ರಂದು ಬುಲ್ಧಾನಾ ಜಿಲ್ಲೆಯ (Buldhana district) ಮಲ್ಕಾಪುರ್ ಪಾಂಗ್ರಾ ಗ್ರಾಮದಲ್ಲಿ ( Malkapur Pangra village) ವಿವಾಹ ನಡೆಯಬೇಕಿತ್ತು. ಇದಕ್ಕಾಗಿ ಸಕಲ ಸಿದ್ಧತೆಗಳು ನಡೆದಿದ್ದವೂ ಸಂಜೆ 4 ಗಂಟೆಗೆ ಮದುವೆ ಸಮಾರಂಭಕ್ಕೆ (wedding ceremony) ಶುಭ ಮುಹೂರ್ತ (auspicious time)ಇಡಲಾಗಿತ್ತು. ವಧು ಮತ್ತು ಆಕೆಯ ಕುಟುಂಬದವರು ನೆಂಟರಿಷ್ಟರು ವರನಿಗಾಗಿ ಮೂಹೂರ್ತ ಮೀರಿದ ನಂತರವೂ ಕಾದಿದ್ದಾರೆ. ಆದರೆ ಸಂಜೆ 8 ಗಂಟೆಯಾದರೂ ವರ ಮಾತ್ರ ಮಂಟಪಕ್ಕೆ ಬಂದಿಲ್ಲ. ವರ ಮತ್ತು ಆತನ ಸ್ನೇಹಿತರು ಮದುವೆಯನ್ನು ಮರೆತು ಕುಡಿದು ಕುಣಿದು ಮೋಜಿನಲ್ಲಿ ತೊಡಗಿದ್ದರು ಎನ್ನಲಾಗಿದೆ.

ಇದರಿಂದ ಸಿಟ್ಟಿಗೆದ್ದ ವಧುವಿನ ಕಡೆಯವರು ತಮ್ಮ ಸಂಬಂಧಿಗೆ ಮಗಳನ್ನು ಕೊಟ್ಟು ಮದುವೆ ಮಾಡಿದ್ದಾರೆ. ಮದುವೆ ಮುಗಿದ ಬಳಿಕ ವರ ಮತ್ತು ಅವರ ಸ್ನೇಹಿತರು ಮದುವೆ ನಡೆದ ಸ್ಥಳಕ್ಕೆ ಬಂದು ಕುಡಿದು ಜಗಳವಾಡಲು ಪ್ರಾರಂಭಿಸಿದರು. ನಾವು ನಮ್ಮ ಮಗಳನ್ನು(Daughter) ನಮ್ಮ ಸಂಬಂಧಿಕರೊಬ್ಬರಿಗೆ ಕೊಟಟು ಮದುವೆ ಮಾಡಿದ್ದೇವೆ ಎಂದು ವಧುವಿನ ತಾಯಿ ಹೇಳಿದ್ದಾರೆ.

ಮುರಿದು ಬಿದ್ದ ಮದುವೆ, ಮೌನ ಮುರಿದ ರಕ್ಷಿತ್ ಶೆಟ್ಟಿ

ವರನು ಮದುವೆ ಮಂಟಪಕ್ಕೆ ಬಂದಾಗ ಆತನಿಗೆ ವಧುವನ್ನು ಕೊಡಲು ವಧುವಿನ ತಂದೆ ನಿರಾಕರಿಸಿದ್ದಾರೆ. ಮದುವೆಗೆ ಎಲ್ಲಾ ಸಿದ್ಧತೆಗಳು ನಡೆದ ಬಳಿಕ ವರನ ಬುದ್ಧಿ ತಿಳಿದ ವಧುವಿನ ತಂದೆ ತನ್ನ ಸಂಬಂಧಿಕರ ಜೊತೆ ಈ ಬಗ್ಗೆ ಚರ್ಚಿಸಿ ಸಂಬಂಧಿಕರ ಪೈಕಿಯಲ್ಲೇ ಒಬ್ಬನೊಂದಿಗೆ ಮಗಳ ಮದುವೆ ಮಾಡಿದ್ದಾರೆ. ಈ ಬಗ್ಗೆ ಮಾತನಾಡಿದ ವಧುವಿನ ತಂದೆ ಮದುವೆ ಸಮಾರಂಭವು ಏಪ್ರಿಲ್ 22 ರಂದು ನಡೆಯಬೇಕಿತ್ತು. ಆದರೆ ವರನ ಕಡೆಯವರು ಮೋಜಿನಲ್ಲಿ ತೊಡಗಿದ್ದರು. ಮದುವೆ ಸಮಯ 4 ಗಂಟೆಗೆ ಆದರೆ ಇವರು ರಾತ್ರಿ 8 ಗಂಟೆಗೆ ಸ್ಥಳಕ್ಕೆ ತಲುಪಿದರು. ಹಾಗಾಗಿ ನನ್ನ ಮಗಳನ್ನು ನನ್ನ ಸಂಬಂಧಿಕರೊಬ್ಬರಿಗೆ ಕೊಟ್ಟು ಮದುವೆ ಮಾಡಿದ್ದೇನೆ ಎಂದು ಹೇಳಿದರು.

ಕೆಲ ವರ್ಷಗಳ ಹಿಂದೆ ತುಮಕೂರಿನಲ್ಲಿ ಸೀರೆ ವಿಚಾರಕ್ಕೆ ಮದುವೆಯೊಂದು ಮುರಿದ ಬಿದ್ದ ಘಟನೆ ನಡೆದಿತ್ತು. ಯುವತಿ ಕುಟಂಬದವರು ಯುವಕನ ಕುಟುಂಬದವರಲ್ಲಿ ಸೀರೆ ಕೇಳಿದ್ದಕ್ಕೆ ಮದುವೆಯೇ ಬೇಡವೆಂದಿದ್ದಾರೆ. ಹೀಗಾಗಿ ತುಮಕೂರಿನ ಚಿಲುಮೆ ಕಲ್ಯಾಣ ಮಂಟಪದಲ್ಲಿ ನಡೆಯಬೇಕಿದ್ದ ಮದುವೆ ಮುರಿದು ಬಿದ್ದಿತ್ತು. ಈ ಅನ್ಯಾಯವನ್ನು ಪಶ್ನಿಸಿ ಯುವತಿ ಕುಟುಂಬದಿಂದ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು. ದೂರಿನ ಮೇರೆಗೆ ಮದುವೆ ಮಂಟಪಕ್ಕೆ ಬಂದಿದ್ದ ಮಹಿಳಾ ಪೊಲೀಸ್ ಮೇಲೆ ಯುವಕನ ಕುಟುಂಬಸ್ಥರು ಹಲ್ಲೆಗೆ ಯತ್ನ ನಡೆಸಿದ್ದ ವರದಿಯಾಗಿತ್ತು.

ಫೋನ್ ಕಾಲ್‌ನಿಂದ ಮುರಿದು ಬಿದ್ದ ಮದುವೆ..! ಭಾಗ್ಯಳ ಬಾಳಿಗೆ ನೆರೆಮನೆಯ 'ಆನಂದ'

ಭಾರತದಲ್ಲಿ ಸಣ್ಣಪುಟ್ಟ ಕಾರಣಕ್ಕೆ ಮದುವೆ ಮುರಿದು ಬೀಳುವುದು ಸಾಮಾನ್ಯವಾಗಿದೆ. ಸಾಂಬಾರು ಚೆನ್ನಾಗಿಲ್ಲ. ನಾವು ಹೇಳಿದ ಮೆನು ಊಟಕ್ಕೆ ಮಾಡಿಲ್ಲ ಎಂಬ ಕಾರಣಕ್ಕೆ ಹೇಳಿದಷ್ಟು ಚಿನ್ನ ಹಾಕಿಲ್ಲ, ಅದ್ದೂರಿತನ ಮಾಡಿಲ್ಲ, ಕಾರು ಕೊಟ್ಟಿಲ್ಲ, ಸರಿಯಾಗಿ ಸತ್ಕಾರ ಮಾಡಿಲ್ಲ ಹೀಗೆ ನೂರೊಂದು ಕಾರಣಗಳಿಗೆ ಮದುವೆಗಳು ಮಧ್ಯದಲ್ಲೇ ಮುರಿದು ಹೋಗುವುದು ಸಾಮಾನ್ಯ ಎನಿಸಿದೆ.