ಕನ್ನಡಕ ಧರಿಸದೆ ಪತ್ರಿಕೆ ಓದಲು ಹುಡುಗ ವಿಫಲ; ಮದುವೆ ಕ್ಯಾನ್ಸಲ್ ಮಾಡಿದ ವಧು!
- ಮಂಟಪದಲ್ಲಿ ಮದುವೆ ರದ್ದಾದ ಪ್ರಕರಣಗಳಿಗೆ ಇದೀಗ ಮತ್ತೊಂದು ಸೇರ್ಪಡೆ
- ವರ ಕನ್ನಡಕ ಧರಿಸದೆ ನ್ಯೂಸ್ ಪೇಪರ್ ಓದಲು ವಿಫಲ, ಮದುವೆ ರದ್ದು
- ವರ ಹಾಗೂ ಕುಟುಂಬದ ವಿರುದ್ಧ ಪ್ರಕರಣ ದಾಖಲಿಸಿದ ವಧು
ಉತ್ತರ ಪ್ರದೇಶ(ಜೂ.25): ಇನ್ನೇನು ತಾಳಿ ಕಟ್ಟಬೇಕು ಅನ್ನುವಷ್ಟರಲ್ಲಿ ಸಿನಿಮೀಯ ರೀತಿಯಲ್ಲಿ ಅದೆಷ್ಟೋ ಮದುವೆಗಳು ಕ್ಯಾನ್ಸಲ್ ಆಗಿದೆ. ಮದುವೆಗೂ ಮೊದಲು, ಮದುವೆ ಆದ ಮರುದಿನ ಕ್ಷುಲ್ಲಕ ಕಾರಣಕ್ಕೆ ಸಂಬಂಧ ಕಡಿಕೊಂಡ ಹಲವು ಘಟನೆಗಳಿವೆ. ಇದೀಗ ಮಧುಮಗನಿಗೆ ಕನ್ನಡಕ ಧರಿಸಿದೆ ಪತ್ರಿಕೆ ಓದಲು ಸಾಧ್ಯವಾಗಿಲ್ಲ. ಇಷ್ಟೇ ನೋಡಿ, ವಧು ಹಾಗೂ ಆಕೆಯ ಕುಟುಂಬಸ್ಥರು ಮದುವೆಯನ್ನೇ ಕ್ಯಾನ್ಸಲ್ ಮಾಡಿದ್ದಾರೆ.
'ನನ್ನ ಗಂಡನಿಗೆ ಪುರುಷತ್ವವಿಲ್ಲ' ಮದುವೆ ಮರುದಿನ ದೂರು ಕೊಟ್ಟ ವಧು
ಉತ್ತರ ಪ್ರದೇಶದ ಜಮಲಪುರ ಗ್ರಾಮದ ಸದರ್ ಕೋಟ್ವಾಲಿಯಲ್ಲಿ ಈ ಘಟನೆ ನಡೆದಿದೆ. ಜಮಲಪುರ ಗ್ರಾಮದ ಅರ್ಚನಾ ಮದುವೆಯನ್ನು ಪಕ್ಕದ ಗ್ರಾಮದ ಶಿವಂ ವರನಿಗೆ ಮದುವೆ ಮಾಡಿಕೊಡಲು ನಿಶ್ಚಯಿಸಲಾಗಿತ್ತು. ಕೊರೋನಾ ವೈರಸ್ ಕಾರಣ ಹಡುಗ -ಹುಡುಗಿ ಹೆಚ್ಚಾಗಿ ಭೇಟಿಯಾಗಲು ಸಾಧ್ಯವಾಗಿಲ್ಲ.
ಕಂಕಣ ಕೂಡಿ ಬಂದ ಕಾರಣ ಹುಡುಗಿ ಕುಟುಂಬಸ್ಥರು ತರಾತುರಿಯಲ್ಲಿ ಮದುವೆ ಏರ್ಪಾಡು ಮಾಡಿದರು. ಇತ್ತ ನಿಶ್ಟಿಯಿಸಿದ ದಿನ ಬಂದೇ ಬಿಡ್ತು. ಮದುವೆಗಾಗಿ ವರ ಮಂಟಪಕ್ಕೆ ಏರುತ್ತಿದ್ದಂತೆ, ವಧುವಿಗೆ ಅನುಮಾನ ಬಂದಿದೆ. ಮಂಟಪಕ್ಕೆ ಆಗಮಿಸಿದ ವೇಳೆಯಿಂದ ಕನ್ನಡಕ ಧರಿಸಿದ್ದಾನೆ. ಅದೂ ಕೂಡ ಹೆಚ್ಚು ಪವರ್ ಇರುವ ಗ್ಲಾಸ್.
ಆನೆ ರಂಪಾಟದಿಂದ ಮದುವೆ ಸಮಾರಂಭ ಕ್ಯಾನ್ಸಲ್; ಅಂಬಾನಿ ಮೇಲೇರಿ ಬಂದ ಮಧುಮಗ ಎಸ್ಕೇಪ್!
ವಿಶೇಷ ದಿನ, ಮದುವೆ ಉಡುಪಿಗೆ ಪವರ್ ಗ್ಲಾಸ್ ಚೆನ್ನಾಗಿ ಕಾಣಿಸುತ್ತಿಲ್ಲ ಎಂದುಕೊಂಡ ಹುಡುಗಿ ಕನ್ನಡಕ ತೆಗೆಯಲು ಸೂಚಿಸಿದ್ದಾಳೆ. ಆದರೆ ಗ್ಲಾಸ್ ತೆಗೆಯಲು ಹಿಂದೇಟು ಹಾಕಿದ ಕಾರಣ ವರನಿಗೆ ಕಣ್ಣಿನ ದೋಷವಿದೆ ಎಂಬ ತೀರ್ಮಾನಕ್ಕೆ ಬಂದಿದ್ದಾಳೆ. ತಕ್ಷಣವೇ ಪತ್ರಿಕೆಯನ್ನು ತರಿಸಿ ಮಂಟಪದಲ್ಲಿ ಈ ಕನ್ನಡಕವಿಲ್ಲದೆ ಪತ್ರಿಕೆ ಓದಲು ಹೇಳಿದ್ದಾಳೆ.
ಕನ್ನಡಕ ತೆಗೆದಿಟ್ಟು ಪತ್ರಿಕೆ ಓದಲು ವರ ವಿಫಲನಾಗಿದ್ದಾನೆ. ರೊಚ್ಚಿಗೆದ್ದ ವಧು ಮದುವೆ ರದ್ದು ಮಾಡಿದ್ದಾಳೆ. ಹುಡುಗಿ ಕುಟುಂಬಸ್ಥರು ವರನಿಗೆ ಕಣ್ಣಿನ ದೋಷವಿರುವುದು ನಮಗೆ ತಿಳಿದಿರಲಿಲ್ಲ. ಹೀಗಾಗಿ ಮದುವೆ ರದ್ದು ಮಾಡಿದ್ದೇವೆ. ವರದಕ್ಷಿಣೆಯಾಗಿ ನೀಡಿದ ಬುಲೆಟ್ ಬೈಕ್, ಹಣ ಹಾಗೂ ಮದುವೆ ಖರ್ಚು ಮರಳಿ ನೀಡುವಂತೆ ಹುಡುಗಿ ಕುಟುಂಬಸ್ಥರು ಒತ್ತಾಯಿಸಿದ್ದಾರೆ.
28 ಪತ್ನಿಯರೆದುರು 37ನೇ ಮದುವೆಯಾದ ಮುದುಕ!
ಖರ್ಚು ನೀಡಲು ನಿರಾಕರಿಸಿದ ಹುಡುಗ ವಿರುದ್ಧ ವಧುವಿನ ತಂದೆ ದೂರು ದಾಖಲಿಸಿದ್ದಾರೆ. ಇದೀಗ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.