2024ರ ಚುನಾವಣೆಯಲ್ಲಿ ಬಿಜೆಪಿ ಸೋಲಿಸಲು ಪಣ: ವಿಪಕ್ಷ ಸಭೆ ಮುಂದೂಡಿಕೆ

ಕಾಂಗ್ರೆಸ್‌ ಕೋರಿಕೆಯ ಆಧಾರದ ಮೇರೆಗೆ ಜೂ.12 ರಂದು ಪಟನಾದಲ್ಲಿ ನಡೆಯಬೇಕಿದ್ದ ವಿಪಕ್ಷಗಳ ಒಕ್ಕೂಟ ಸಭೆಯನ್ನು ಜೂ.23ಕ್ಕೆ ಮುಂದೂಡಲಾಗಿದೆ ಎಂದು ಜೆಡಿಯು ತಿಳಿಸಿದೆ.

Rahul visit to America: June 12 opposition meeting postponed to June 23 akb

ಪಟನಾ: ಕಾಂಗ್ರೆಸ್‌ ಕೋರಿಕೆಯ ಆಧಾರದ ಮೇರೆಗೆ ಜೂ.12 ರಂದು ಪಟನಾದಲ್ಲಿ ನಡೆಯಬೇಕಿದ್ದ ವಿಪಕ್ಷಗಳ ಒಕ್ಕೂಟ ಸಭೆಯನ್ನು ಜೂ.23ಕ್ಕೆ ಮುಂದೂಡಲಾಗಿದೆ ಎಂದು ಜೆಡಿಯು ತಿಳಿಸಿದೆ. ಸದ್ಯ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅಮೆರಿಕ ಪ್ರವಾಸದಲ್ಲಿದ್ದು (America Tour) ಜೂ.12 ರಂದು ಸಭೆ ನಡೆದರೆ ಭಾಗವಹಿಸಲು ಅವರಿಗೆ ಸಾಧ್ಯವಾಗುವುದಿಲ್ಲ. ಆದರೆ ಜೂ.23 ರಂದು ನಡೆಯಲಿರುವ ಸಭೆಗೆ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್‌ ಗಾಂಧಿ ಇಬ್ಬರೂ ಕಾಂಗ್ರೆಸ್‌ ವರಿಷ್ಠರು ಹಾಜರಿರುತ್ತಾರೆ. ಹೀಗಾಗಿ ಕಾಂಗ್ರೆಸ್‌ನ ಕೋರಿಕೆಯ ಆಧಾರದ ಮೇಲೆ ವಿಪಕ್ಷಗಳ ಸಭೆಯನ್ನು ಮುಂದೂಡಲಾಗಿದೆ. ಖರ್ಗೆ (Mallikarjun Kharge) ಮತ್ತು ರಾಹುಲ್‌ ಗಾಂಧಿ (Rahul Gandhi) ಅನುಪಸ್ಥಿತಿಯಲ್ಲಿ ಸಭೆಯು ಅರ್ಥಹೀನವಾಗುತ್ತಿತ್ತು ಎಂದು ಮೂಲಗಳು ತಿಳಿಸಿವೆ.

ಅದಾಗ್ಯೂ ಜೂ.12ರಂದು ಸಭೆ ನಡೆದರೆ ತಮಿಳುನಾಡು ಸಿಎಂ ಎಂ.ಕೆ ಸ್ಟಾಲಿನ್‌ (MK Stalin) ಸೇರಿದಂತೆ ಹಲವು ವಿಪಕ್ಷ ನಾಯಕರುಗಳಿಗೆ ಭಾಗವಹಿಸುವುದು ಕಷ್ಟವಾಗುತ್ತಿತ್ತು. ಹೀಗಾಗಿ ಅನಿವಾರ್ಯವಾಗಿ ದಿನಾಂಕ ಮುಂದೂಡಲಾಗಿದೆ ಎಂದು ಜೆಡಿಯು ನಾಯಕ ಬಿಹಾರ ಸಿಎಂ ನಿತೀಶ್‌ ಕುಮಾರ್‌ ಅವರ ನಿಕಟವರ್ತಿಗಳು ತಿಳಿಸಿದ್ದಾರೆ. 2024ರ ಲೋಕಸಭೆ ಚುನಾವಣೆಯಲ್ಲಿ ವಿಪಕ್ಷಗಳೆಲ್ಲ ಒಟ್ಟಾಗಿ ಆಡಳಿತಾರೂಢ ಬಿಜೆಪಿಯನ್ನು ಸೋಲಿಸಬೇಕು ಎಂದು ವಿಪಕ್ಷ ನಾಯಕರು ಒಟ್ಟಾಗುತ್ತಿದ್ದು, ಇದರ ಭಾಗವಾಗಿ ಒಟ್ಟು 18 ವಿಪಕ್ಷ ನಾಯಕರುಗಳ ಸಮ್ಮುಖದಲ್ಲಿ ಬಿಹಾರದಲ್ಲಿ ಸಭೆ ನಡೆಯುವುದಾಗಿ ಸಿಎಂ ನಿತೀಶ್‌ (Bihar CM nithish Kumar) ಘೋಷಿಸಿದ್ದರು.

ಇದನ್ನೂ ಓದಿಕಾಂಗ್ರೆಸ್‌ ಗ್ಯಾರಂಟಿ ಫೈಟ್‌: ಸರ್ಕಾರ-ಪ್ರತಿಪಕ್ಷಗಳ ನಡುವೆ ಕದನ ಆರಂಭ

ಇದನ್ನೂ ಓದಿ: ಪಕ್ಷ ಭೇದ ಮರೆತು ಎಲ್ಲರೊಂದಿಗೆ ಡಿ.ಕೆ.ಶಿವಕುಮಾರ್‌ ಉಭಯಕುಶಲೋಪರಿ

Latest Videos
Follow Us:
Download App:
  • android
  • ios