ಚುನಾವಣೆ ವೇಳೆ ಕಾಂಗ್ರೆಸ್‌ ನೀಡಿದ್ದ ‘5 ಗ್ಯಾರಂಟಿ’ ಯೋಜನೆ ವಿಚಾರವಾಗಿ ಸರ್ಕಾರ-ಪ್ರತಿಪಕ್ಷಗಳ ನಡುವೆ ಕದನ ಆರಂಭವಾಗಿದೆ. ಗ್ಯಾರಂಟಿ ಯೋಜನೆಗೆ ಷರತ್ತು ಹಾಗೂ ಅವುಗಳ ಅನುಷ್ಠಾನ ವಿಳಂಬಕ್ಕೆ ಬಿಜೆಪಿ, ಜೆಡಿಎಸ್‌ ತರಾಟೆಗೆ ತೆಗೆದುಕೊಂಡಿವೆ. ಇದಕ್ಕೆ ಸರ್ಕಾರ ತಿರುಗೇಟು ಕೊಟ್ಟಿದೆ.

ಬೆಂಗಳೂರು (ಮೇ.26): ಚುನಾವಣೆ ವೇಳೆ ಕಾಂಗ್ರೆಸ್‌ ನೀಡಿದ್ದ ‘5 ಗ್ಯಾರಂಟಿ’ ಯೋಜನೆ ವಿಚಾರವಾಗಿ ಸರ್ಕಾರ-ಪ್ರತಿಪಕ್ಷಗಳ ನಡುವೆ ಕದನ ಆರಂಭವಾಗಿದೆ. ಗ್ಯಾರಂಟಿ ಯೋಜನೆಗೆ ಷರತ್ತು ಹಾಗೂ ಅವುಗಳ ಅನುಷ್ಠಾನ ವಿಳಂಬಕ್ಕೆ ಬಿಜೆಪಿ, ಜೆಡಿಎಸ್‌ ತರಾಟೆಗೆ ತೆಗೆದುಕೊಂಡಿವೆ. ಇದಕ್ಕೆ ಸರ್ಕಾರ ತಿರುಗೇಟು ಕೊಟ್ಟಿದೆ.

ಫ್ರೀ ಎಂದವರಿಂದ ಷರತ್ತು: ಕಾಂಗ್ರೆಸ್‌ನವರು ಚುನಾವಣೆಗೂ ಮೊದಲು ಅಕ್ಕಿ ಫ್ರೀ, ಕರೆಂಟ್‌ ಫ್ರೀ, ನನಗೂ ಫ್ರೀ, ನಿಮಗೂ ಫ್ರೀ ಎಂದಿದ್ದರು. ಈಗ ಇದಕ್ಕೆ ಕಂಡೀಷನ್‌ ಇದೆ ಎನ್ನುತ್ತಾರೆ. ಇದೀಗ ಅವರ ಬಣ್ಣ ಬಯಲಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವ್ಯಂಗ್ಯವಾಡಿದ್ದಾರೆ. ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ನಂತರ ನಡೆವ ಮೊದಲ ಸಂಪುಟ ಸಭೆಯಲ್ಲೇ ಗ್ಯಾರಂಟಿ ಯೋಜನೆಗಳ ಆದೇಶ ಮಾಡುತ್ತೇವೆ ಎಂದಿದ್ದವರು ಈಗ ಇತಿಹಾಸ ಹೇಳಿ ಸಮಾಧಾನ ಮಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

ಸ್ತ್ರೀಯರಿಗೆ ಫ್ರೀ ಟಿಕೆಟ್‌ ಕೊಟ್ಟು ನಮ್ಮ ಕಾಪಾಡಿ: ಸಾರಿಗೆ ನೌಕರರ ಅಳಲು!

ಗ್ಯಾರಂಟಿ ಯೋಜನೆ ಜೆಡಿಎಸ್‌ಗೆ ಅಸ್ತ್ರ: ಐದು ಗ್ಯಾರಂಟಿಗಳನ್ನು ಜಾರಿ ಮಾಡುತ್ತೇವೆ, ಇದು ಪ್ರತಿಯೊಬ್ಬರಿಗೂ ಉಚಿತ ಎಂದು ಹೇಳಿದ್ದ ಕಾಂಗ್ರೆಸ್ಸಿಗರು ಈಗ ಷರತ್ತುಗಳ ಬಗ್ಗೆ ಮಾತನಾಡುತ್ತಿದ್ದಾರೆ. ಚುನಾವಣೆ ವೇಳೆ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌, ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿದ್ದನ್ನೇ ಇಟ್ಟುಕೊಂಡು ಜನರ ಮುಂದೆ ಹೋಗಬೇಕು. ಪಕ್ಷದ ಕಾರ್ಯಕರ್ತರು ಆಂದೋಲನ ನಡೆಸಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಕರೆ ನೀಡಿದ್ದಾರೆ.

ಮುಂದಿನ ಸಂಪುಟದಲ್ಲಿ ಗ್ಯಾರಂಟಿ ಸರ್ಕಾರ: ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಮೊದಲ ಸಂಪುಟದಲ್ಲೇ ಐದೂ ಗ್ಯಾರಂಟಿಗಳಿಗೂ ನಾವು ತಾತ್ವಿಕ ಒಪ್ಪಿಗೆ ನೀಡಿದ್ದೇವೆ. ಮುಂದಿನ ಸಂಪುಟದ ವೇಳೆಗೆ ಸ್ಪಷ್ಟವಾಗಿ ರೂಪುರೇಷೆ ಸಿದ್ಧಪಡಿಸಿ ಅನುಷ್ಠಾನ ಮಾಡುತ್ತೇವೆ. ಪೂರಕ ಕೆಲಸಗಳು ನಡೆಯುತ್ತಿವೆ. ಹೀಗಾಗಿ ಪ್ರತಿಪಕ್ಷಗಳ ಹೇಳಿಕೆಗಳಿಗೆ ತಲೆಕೆಡಿಸಿಕೊಳ್ಳಬೇಕಿಲ್ಲ ಎಂದು ಸಚಿವರಾದ ಡಾ.ಜಿ. ಪರಮೇಶ್ವರ್‌ ಹಾಗೂ ರಾಮಲಿಂಗಾರೆಡ್ಡಿ ತಿರುಗೇಟು ನೀಡಿದ್ದಾರೆ.

ಕಾಂಗ್ರೆಸ್ಸಿನದ್ದು ರಿವರ್ಸ್‌ ಗೇರ್‌ ಸರ್ಕಾರ: ಕಾಂಗ್ರೆಸ್ಸಿನದ್ದು ರಿವರ್ಸ್‌ ಗೇರ್‌ ಸರ್ಕಾರ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಲೇವಡಿ ಮಾಡಿದರು. ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ ತುಷ್ಟೀಕರಣ ರಾಜಕಾರಣ ಮಾಡುತ್ತಿದೆ ಎನ್ನುವುದು ಗೊತ್ತಿದೆ. ಅವರಿಗೆ ಅಧಿಕಾರ ಇದೆ. ಏನೇನು ಮಾಡುತ್ತಾರೆ ನೋಡೋಣ. ಆದರೆ ಸಾರ್ವತ್ರಿಕವಾಗಿ ಜನ ಸಮುದಾಯಕ್ಕೆ ಅನ್ಯಾಯ ಮಾಡಿದರೆ ನಾವು ಕಾನೂನಾತ್ಮಕವಾಗಿ, ರಾಜಕೀಯವಾಗಿ ಹೋರಾಟ ಮಾಡುತ್ತೇವೆ. ಅಧಿಕಾರ ಬಂದಾಗ ಸ್ವೇಚ್ಛಾಚಾರವಾಗಿ ಎಲ್ಲವನ್ನು ಬದಲಾವಣೆ ಮಾಡುತ್ತೇವೆ ಎನ್ನುವುದು ದುರಹಂಕಾರದ ಮಾತು ಎಂದರು.

ಕರ್ನಾಟಕದ ಬಳಿಕ ತಮಿಳ್ನಾಡಲ್ಲಿ ಅಮುಲ್‌ ಕ್ಯಾತೆ: ಅಮಿತ್‌ ಶಾಗೆ ಸ್ಟಾಲಿನ್‌ ಪತ್ರ

ಕಾಂಗ್ರೆಸ್ಸಿನವರು ಗ್ಯಾರಂಟಿಯಲ್ಲೂ ರಿವರ್ಸ್‌ ಹೋಗುತ್ತಿದ್ದಾರೆ. ನಾವು ಮಾಡಿದ ಜನಪರ ಕಾನೂನಿನಲ್ಲಿ ರಿವರ್ಸ್‌ ಹೋಗುತ್ತಿದ್ದಾರೆ. ಇದರ ಪರಿಣಾಮ ಜನರಿಗೆ ಗೊತ್ತಾಗಿದೆ. ಇಷ್ಟುಬೇಗ ಸರ್ಕಾರ ಸೇಡಿನ ಕ್ರಮ ತೆಗೆದುಕೊಳ್ಳುತ್ತಿದೆ. ಇದು ರಿವರ್ಸ್‌ ಗೇರ್‌ ಸರ್ಕಾರ ಅಷ್ಟೇ ಅಲ್ಲ. ಕಾಂಗ್ರೆಸ್ಸಿನ ಸೇಡಿನ ಕ್ರಮ ಮಾಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.