Asianet Suvarna News Asianet Suvarna News

ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ; ಕಾಂಗ್ರೆಸ್ ನಾಯಕರು ಪೊಲೀಸರ ವಶಕ್ಕೆ

  • ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ
  •  ಕಪ್ಪುಪಟ್ಟಿಧರಿಸಿ ದೇಶಾದ್ಯಂತ ಕಾಂಗ್ರೆಸ್‌ ಪ್ರತಿಭಟನೆ
  • - ರಾಷ್ಟ್ರಪತಿ ಭವನ, ಪ್ರಧಾನಿ ನಿವಾಸಕ್ಕೆ ಮುತ್ತಿಗೆ ಯತ್ನ
rahul gandhi, priyanka vadra mallikarjun kharge protest against inflation at dehli
Author
Bengaluru, First Published Aug 6, 2022, 7:07 AM IST

ನವದೆಹಲಿ (ಆ.6): ಅಗತ್ಯ ವಸ್ತುಗಳ ಬೆಲೆ ಏರಿಕೆ, ಹಣದುಬ್ಬರ, ನಿರುದ್ಯೋಗ ಮತ್ತು ದಿನಬಳಕೆ ವಸ್ತುಗಳ ಮೇಲೆ ಜಿಎಸ್‌ಟಿ ಹೇರಿಕೆ ಖಂಡಿಸಿ ಕಾಂಗ್ರೆಸ್‌ ಶುಕ್ರವಾರ ದೇಶವ್ಯಾಪಿ ಬೀದಿಗಿಳಿದು ಹೋರಾಟ ನಡೆಸಿದೆ. ದೆಹಲಿ ಸೇರಿದಂತೆ ಹಲವು ರಾಜ್ಯಗಳಲ್ಲಿ ಭಾರೀ ಮಳೆಯನ್ನೂ ಲೆಕ್ಕಿಸದ ಕಾಂಗ್ರೆಸ್‌ ನಾಯಕರು ಕಪ್ಪು ವಸ್ತ್ರ ಧರಿಸಿ ರಸ್ತೆಗಿಳಿದು ಕೇಂದ್ರ ಸರ್ಕಾರದ ನೀತಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

 

ಅಕ್ಕಿ ಬೆಲೆಯಲ್ಲಿ ಶೇ.30ರಷ್ಟು ಏರಿಕೆ; ಜನಸಾಮಾನ್ಯರ ಜೇಬಿನ ಮೇಲೆ ಹೆಚ್ಚಿದ ಹೊರೆ

ದೆಹಲಿಯಲ್ಲಿ ಪಕ್ಷದ ಹಿರಿಯ ನಾಯಕರು ಎಐಸಿಸಿ ಕಚೇರಿ, ಸಂಸತ್ತಿನ ಒಳಗೆ ಮತ್ತು ಸಂಸತ್‌ ಭವನದ ಹೊರಗೆ ಕಪ್ಪುಬಟ್ಟೆಧರಿಸಿ ಪ್ರತಿಭಟನೆ ನಡೆಸಿದರು. ರಾಷ್ಟ್ರಪತಿ ಭವನ ಹಾಗೂ ಪ್ರಧಾನಿ ನಿವಾಸದತ್ತ ತೆರಳಿ ಮುತ್ತಿಗೆ ಹಾಕಲು ಯತ್ನಿಸಿದರು. ಈ ವೇಳೆ ಪೊಲೀಸರು ರಾಹುಲ್‌ ಗಾಂಧಿ, ಪ್ರಿಯಾಂಕಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಸೇರಿ ಕಾಂಗ್ರೆಸ್ ನಾಯಕರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಪ್ರತಿಭಟಿಸಿದರು. ಈ ವೇಳೆ  ಬ್ಯಾರಿಕೇಡ್‌ ಹತ್ತಿದ ಪ್ರಿಯಾಂಕಾ ವಾದ್ರಾ. ಪ್ರತಿಭಟನೆಗಿಳಿದ  ಎಲ್ಲರನ್ನೂ ಪೊಲೀಸರು ವಶಕ್ಕೆ ಪಡೆದರು. ವಿವಿಧ ರಾಜ್ಯಗಳಲ್ಲಿ ರಾಜಭವನಕ್ಕೆ ಮುತ್ತಿಗೆ ಹಾಕುವ ಯತ್ನದ ವೇಳೆ ಕಾಂಗ್ರೆಸ್‌ ನಾಯಕರನ್ನು ವಶಕ್ಕೆ ಪಡೆದು ಬಳಿಕ ಬಿಡುಗಡೆ ಮಾಡಲಾಯಿತು.

ಕೇಂದ್ರ ಸರ್ಕಾರದ ವಿರುದ್ಧ ಮಾತನಾಡಿದವರನ್ನೆಲ್ಲ ಜೈಲಿಗೆ ಹಾಕಲಾಗುತ್ತಿದೆ: ರಾಹುಲ್‌ ಗಾಂಧಿ

ದಿಲ್ಲಿಯಲ್ಲಿ ಹೈಡ್ರಾಮಾ:

ದೆಹಲಿಯಲ್ಲಿ ರಾಹುಲ್‌ ಗಾಂಧಿ(Rahul Gandhi), ಪ್ರಿಯಾಂಕಾ ವಾದ್ರಾ(Priyanka Vadra) , ಮಲ್ಲಿಕಾರ್ಜುನ ಖರ್ಗೆ(Mallikarjun Kharge), ಅಧೀರ್‌ ರಂಜನ್‌ ಚೌಧರಿ(Adhir Ranjan Chowdhari) ಸೇರಿದಂತೆ ಹಲವು ನಾಯಕರು ಶುಕ್ರವಾರ ಬೆಳಗ್ಗೆ ಕಪ್ಪುಬಟ್ಟೆಧರಿಸಿ ಎಐಸಿಸಿ ಕಚೇರಿ ಬಳಿ ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಅಲ್ಲಿಂದ ಕಾಂಗ್ರೆಸ್‌ ನಾಯಕರು ರಾಷ್ಟ್ರಪತಿ ಭವನದತ್ತ ತೆರಳಲು ಯತ್ನಿಸಿದರು. ಆಗ 64 ಸಂಸದರು ಸೇರಿದಂತೆ ಎಲ್ಲರನ್ನೂ ವಿಜಯ್‌ ಚೌಕ್‌ ಬಳಿ ವಶಕ್ಕೆ ಪಡೆಯಲಾಯಿತು. ಸಂಜೆ ಬಿಡುಗಡೆ ಮಾಡಲಾಯಿತು. ಈ ವೇಳೆ ಮಾತನಾಡಿದ ರಾಹುಲ್‌ ಗಾಂಧಿ, ‘ಪ್ರತಿಭಟನಾಕಾರರನ್ನು ಹತ್ತಿಕ್ಕಿ ಕೇಂದ್ರ ಸರ್ಕಾರ ಪ್ರಜಾಪ್ರಭುತ್ವದ ಹತ್ಯೆ ಮಾಡುತ್ತಿದೆ’ ಎಂದು ಕಿಡಿಕಾರಿದರು.

ಇದೇ ವೇಳೆ, ಎಐಸಿಸಿ ಕಚೇರಿ ಬಳಿ ಪ್ರತಿಭಟನೆ ಮಾಡುವ ವೇಳೆ ಪ್ರಿಯಾಂಕಾ ವಾದ್ರಾ ಅವರು ಕಚೇರಿ ಮುಂದೆ ಹಾಕಿದ್ದ ಬ್ಯಾರಿಕೇಡ್‌ ಹತ್ತಿ ಆಚೆ ಹಾರಿದ ಘಟನೆ ನಡೆಯಿತು. ಬಳಿಕ ಅವರನ್ನು ಪೊಲೀಸರು ಬಲವಂತವಾಗಿ ಎಳೆದು ಕಾರು ಹತ್ತಿಸಿ ವಶಕ್ಕೆ ತೆಗೆದುಕೊಂಡರು.

ಸಂಸತ್ತಲ್ಲೂ ಕಪ್ಪು ಬಟ್ಟೆಧರಿಸಿ ಪ್ರತಿಭಟನೆ:

ದೇಶದಲ್ಲಿ ಪ್ರಜಾಪ್ರಭುತ್ವದ ಹತ್ಯೆ ನಡೆಯುತ್ತಿದೆ. ಜನರ ಸಮಸ್ಯೆ ಪ್ರಸ್ತಾಪಿಸಿದ್ದಕ್ಕೆ ನಮ್ಮ ಕೆಲ ಸಂಸದರ ಮೇಲೆ ಪೊಲೀಸರು ಹಲ್ಲೆ ನಡೆಸಿ ಬಂಧಿಸಿದ್ದಾರೆ. ಸರ್ವಾಧಿಕಾರಿ ಸರ್ಕಾರ ಹೆದರಿಕೊಂಡಿದೆ ಎಂಬುದಕ್ಕೆ ಇದೇ ಸಾಕ್ಷಿ.

- ರಾಹುಲ್‌ ಗಾಂಧಿ, ಕಾಂಗ್ರೆಸ್‌ ನಾಯಕ

Follow Us:
Download App:
  • android
  • ios