ಅಕ್ಕಿ ಬೆಲೆಯಲ್ಲಿ ಶೇ.30ರಷ್ಟು ಏರಿಕೆ; ಜನಸಾಮಾನ್ಯರ ಜೇಬಿನ ಮೇಲೆ ಹೆಚ್ಚಿದ ಹೊರೆ
*ದೇಶದಲ್ಲಿ ಭತ್ತದ ಉತ್ಪಾದನೆಯಲ್ಲಿ ಇಳಿಕೆ
*ವಿದೇಶಗಳಿಂದ ಅಕ್ಕಿಗೆ ಹೆಚ್ಚಿನ ಬೇಡಿಕೆ
*ಭಾರತದಿಂದ ಈಗಾಗಲೇ ಅಕ್ಕಿ ಆಮದು ಪ್ರಾರಂಭಿಸಿರುವ ಬಾಂಗ್ಲಾ
ನವದೆಹಲಿ (ಆ.1): ಬಾಂಗ್ಲಾದೇಶ, ಇರಾನ್, ಇರಾಕ್ ಹಾಗೂ ಸೌದಿ ಅರೇಬಿಯಾದಂತಹ ರಾಷ್ಟ್ರಗಳಿಂದ ಹೆಚ್ಚುತ್ತಿರುವ ಬೇಡಿಕೆ ಹಾಗೂ ದೇಶಾದ್ಯಂತ ಅನೇಕ ರಾಜ್ಯಗಳಲ್ಲಿ ಭತ್ತದ ಬೆಳೆ ಇಳುವರಿಯಲ್ಲಿ ಇಳಿಕೆಯಾಗಿರುವ ಹಿನ್ನೆಲೆಯಲ್ಲಿ ಎಲ್ಲ ವಿಧದ ಅಕ್ಕಿಯ ಬೆಲೆಗಳಲ್ಲಿ ಈ ವರ್ಷದ ಜೂನ್ ಪ್ರಾರಂಭದಿಂದ ಈ ತನಕ ಶೇ.30 ರಷ್ಟು ಹೆಚ್ಚಳವಾಗಿದೆ. ಈಗಾಗಲೇ ಭಾರತದ ಜನರು ಹಣದುಬ್ಬರ ಏರಿಕೆಯಿಂದ ತತ್ತರಿಸಿದ್ದಾರೆ, ಹೀಗಿರೋವಾಗ ಬಹುತೇಕ ಜನರ ನಿತ್ಯದ ಆಹಾರವಾಗಿರುವ ಅಕ್ಕಿ ಬೆಲೆಯೇರಿಕೆ ಜನಸಾಮಾನ್ಯರ ಜೇಬಿನ ಹೊರೆಯನ್ನು ಇನ್ನಷ್ಟು ಹೆಚ್ಚಿಸಿದೆ. ಭತ್ತ ಬೆಳೆಯುವ ಹೆಚ್ಚಿನ ಪ್ರದೇಶ ಹೊಂದಿರುವ ಒಡಿಸ್ಸಾ ಹಾಗೂ ಛತ್ತೀಸ್ ಗಢ್ ನಲ್ಲಿ ಧಾನ್ಯಗಳ ಬಿತ್ತನೆಯಲ್ಲಿ ಇಳಿಕೆಯಾಗಿದೆ. ಮುಂಗಾರು ಋತುವಿನ ಪ್ರಮುಖ ಬೆಳೆಯಾಗಿರುವ ಭತ್ತದ ಬಿತ್ತನೆ ಜು. 29ರ ತನಕದ ಅಂಕಿಅಂಶಗಳನ್ನು ಗಮನಿಸಿದ್ರೆ ಕಳೆದ ವರ್ಷಕ್ಕೆ ಹೋಲಿಸಿದ್ರೆ ಈ ಬಾರಿ ಕಡಿಮೆಯಾಗಿದೆ. ಕಡಿಮೆ ಮಳೆಯ ಕಾರಣಕ್ಕೆ ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್ ಹಾಗೂ ಪಶ್ಚಿಮ ಬಂಗಾಳದಂತಹ ಭತ್ತ ಬೆಳೆಯುವ ಪ್ರಮುಖ ರಾಜ್ಯಗಳಲ್ಲಿ ರೈತರು ಬಿತ್ತನೆ ಕಾರ್ಯ ನಿಧಾನಗೊಳಿಸಿದ್ದಾರೆ. ಇನ್ನು ಇದೊಂದೇ ಅಕ್ಕಿಯ ಉತ್ಪಾದನೆ ಇಳಿಕೆಗೆ ಕಾರಣವಾಗಿಲ್ಲ ಕೂಡ. ಇನ್ನು ಉತ್ಪಾದನೆ ಇಳಿಕೆ ಜೊತೆಗೆ ರಫ್ತಿಗೆ ಹೆಚ್ಚಿನ ಬೇಡಿಕೆ ಸೃಷ್ಟಿಯಾಗಿರೋದು ಕೂಡ ಬೆಲೆ ಹೆಚ್ಚಳಕ್ಕೆ ಇಂಬು ನೀಡಿದೆ.
'ಬಾಂಗ್ಲಾದೇಶ ಭಾರತದಿಂದ ಅಕ್ಕಿ ಆಮದು ಮಾಡಿಕೊಳ್ಳಲು ಪ್ರಾರಂಭಿಸಿದೆ. ಇದು ಭಾರತದ ಮನೆಗಳಲ್ಲಿ ಹೆಚ್ಚಾಗಿ ಬಳಕೆಯಾಗುವ ಸೋನಾ ಮಸೂರಿ ಅಕ್ಕಿಯ ಮೇಲೆ ಪರಿಣಾಮ ಬೀರಿದ್ದು, ಅದರ ಬೆಲೆಯಲ್ಲಿ ಶೇ. 20ರಷ್ಟು ಹೆಚ್ಚಳವಾಗಿದೆ' ಎಂದು ಅಕ್ಕಿ ರಫ್ತುದಾರರ ಅಸೋಸಿಯೇಷನ್ ಅಧ್ಯಕ್ಷ ಬಿ.ವಿ. ಕೃಷ್ಣ ರಾವ್ ತಿಳಿಸಿದ್ದಾರೆ.
ಕೊರೋನಾದಲ್ಲಿ ದಾಖಲೆ ಬರೆದಿತ್ತು ಪಾರ್ಲೇಜಿ ಬಿಸ್ಕತ್ ಸೇಲ್!
ಜುಲೈ 29ರ ತನಕದ ಅಂಕಿಅಂಶಗಳನ್ನು ಗಮನಿಸಿದ್ರೆ ದೇಶಾದ್ಯಂತ ಭತ್ತ ಬೆಳೆಯುವ ಪ್ರದೇಶಗಳಲ್ಲಿ ಶೇ.13.3ರಷ್ಟು ಇಳಿಕೆಯಾಗಿದೆ. ಈ ಮೇಲೆ ವಿವರಿಸಲಾದ ಒಟ್ಟು ಆರು ಉತ್ತರ ಹಾಗೂ ಪೂರ್ವದ ರಾಜ್ಯಗಳಲ್ಲಿ ಕಳೆದ ವರ್ಷಕ್ಕೆ ಹೋಲಿಸಿದ್ರೆ ಈ ವರ್ಷ ಭತ್ತ ಬೆಳೆಯುವ ಪ್ರದೇಶದಲ್ಲಿ 3.7 ಮಿಲಿಯನ್ ಹೆಕ್ಟೇರ್ ಕಡಿಮೆಯಿದೆ. ಎಲ್ಲ ವಿಧದ ಅಕ್ಕಿ ಬೆಲೆಗಳಲ್ಲಿ ಶೇ.30ರಷ್ಟು ಹೆಚ್ಚಳವಾಗಿದೆ. ರತ್ನ ವಿಧದ ಅಕ್ಕಿ ಬೆಲೆ ಕೆಜಿಗೆ 26ರೂ. ಇದ್ದು, 33ರೂ.ಗೆ ಏರಿಕೆಯಾಗಿದೆ. ಹಾಗೆಯೇ ಬಾಸ್ಮತಿ ಅಕ್ಕಿ ಬೆಲೆಯಲ್ಲಿ ಕೂಡ ಸುಮಾರು ಶೇ.30ರಷ್ಟು ಏರಿಕೆಯಾಗಿದ್ದು, ಕೆಜಿಗೆ 62ರೂ.ನಿಂದ 80ರೂ.ಗೆ ಹೆಚ್ಚಳವಾಗಿದೆ. ಇರಾನ್, ಇರಾಕ್ ಹಾಗೂ ಸೌದಿ ಅರೇಬಿಯಾದಿಂದ ಬೇಡಿಕೆ ಹೆಚ್ಚಾಗಿದೆ' ಎನ್ನುತ್ತಾರೆ ತಿರುಪತಿ ಅಗ್ರಿ ಟ್ರೇಡ್ ಸಂಸ್ಥೆ ಸಿಇಒ ಸೂರಜ್ ಅಗರ್ವಾಲ್.
ಈಗ ನಡೆಯುತ್ತಿರುವ ಮುಂಗಾರು ಋತುವಿನಲ್ಲಿ ಭಾರತ 112 ಮಿಲಿಯನ್ ಟನ್ ಗಳಷ್ಟು ಅಕ್ಕಿ ಉತ್ಪಾದನೆ ಮಾಡುವ ಗುರಿ ಹೊಂದಿದೆ. ಚಳಿಗಾಲದ ವ್ಯವಸಾಯ ಸೇರಿದಂತೆ 2022ನೇ ಆರ್ಥಿಕ ಸಾಲಿನಲ್ಲಿ ನಮ್ಮ ಧಾನ್ಯ ಉತ್ಪಾದನೆ 130 ಮಿಲಿಯನ್ ಟನ್ ಆಗಿದ್ದು, 21 ಮಿಲಿಯನ್ ಟನ್ ರಫ್ತು ಮಾಡಲಾಗಿದೆ.
ವಿಶ್ವದ ಗಮನ ಸೆಳೆದ ಬೆಂಗಳೂರಿನ ಶುಮ್ಮೆ ಟಾಯ್ಸ್, ಮೋದಿ ಶ್ಲಾಘನೆ
ಈ ಹಿಂದೆ ಮೇನಲ್ಲಿ ಕೇಂದ್ರ ಸರ್ಕಾರ ಗೋಧಿ ರಫ್ತಿನ ಮೇಲೆ ನಿಷೇಧ ಹೇರಿತ್ತು. ಜಾಗತಿಕ ಮಾರುಕಟ್ಟೆಯಲ್ಲಿ ಆಹಾರ ಧಾನ್ಯಗಳ ಬೆಲೆಯಲ್ಲಿ ದಿಢೀರ್ ಏರಿಕೆಯಾಗಿರುವ ಕಾರಣ ಹಾಗೂ ದೇಶದಲ್ಲಿ ಹೆಚ್ಚುತ್ತಿರುವ ಹಣದುಬ್ಬರ ತಡೆಗೆ ಈ ಕ್ರಮ ಕೈಗೊಳ್ಳಲಾಗಿತ್ತು. ಚೀನಾದ (China) ನಂತರ ವಿಶ್ವದ ಎರಡನೇ ಅತಿ ದೊಡ್ಡ ಗೋಧಿ ಉತ್ಪಾದಕ ರಾಷ್ಟ್ರ ಭಾರತ (India). ಆದರೆ, ದೇಶದಲ್ಲಿ ಅಧಿಕ ತಾಪಮಾನದಿಂದ ಉತ್ಪಾದನೆಯಲ್ಲಿ ಕೊರತೆ ಉಂಟಾಗಿದ್ದಲ್ಲದೇ ಗೋಧಿಯ ಬೆಲೆ ದಾಖಲೆಯ ಗರಿಷ್ಠ ಮಟ್ಟ ತಲುಪಿತ್ತು. ಮಾರ್ಚ್‌ನಲ್ಲಿ ಬಿಸಿಗಾಳಿಯಿಂದಾಗಿ (heatwave) ಭಾರತವು (India) ಭಾರಿ ಬೆಳೆ ನಷ್ಟವನ್ನು ದಾಖಲಿಸಿದೆ. ಹೀಗಾಗಿ ರಾಷ್ಟ್ರದಲ್ಲಿ ಆಹಾರ ಭದ್ರತೆಯನ್ನು (Food Security) ಖಚಿತಪಡಿಸಿಕೊಳ್ಳಲು ವಿದೇಶಗಳಿಗೆ (Foreign) ಭಾರತ (India) ರಫ್ತು (Export) ನಿಷೇಧಿಸಿತ್ತು. ಇನ್ನು ಜುಲೈನಲ್ಲಿ ಗೋಧಿ ಹಿಟ್ಟು(Wheat flour), ಮೈದಾ (Maida) ಮತ್ತು ರವೆ (Semolina) ರಫ್ತಿನ ನಿಗ್ರಹಕ್ಕೆ ಕೂಡ ಕೇಂದ್ರ ಮುಂದಾಗಿತ್ತು.