Punjab Elections 2022 ವಿಧಾನಾಸಭಾ ಚುನಾವಣೆ ಅಖಾಡಕ್ಕೆ ಹೊಸ ರೈತ ಪಕ್ಷ, ಸಂಯುಕ್ತ ಸಮಾಜ್ ಮೋರ್ಚಾ ಪಾರ್ಟಿ ಉದಯ!
- ರೈತ ಸಂಘಟನೆಗಳಿಂದ ಸಂಯುಕ್ತ ಕಿಸಾನ್ ಮೋರ್ಚಾ ಪಕ್ಷ ಸ್ಥಾಪನೆ
- 22 ರೈತ ಸಂಘಟನೆಗಳು ಜೊತೆಯಾಗಿ ಹೊಸ ಪಕ್ಷ ಸ್ಥಾಪನೆ
- ರಂಗೇರಿದ ಪಂಜಾಬ್ ಚುನಾವಣಾ ಅಖಾಡ
ಚಂಡಿಘಡ(ಡಿ.25): ದೇಶದಲ್ಲಿ ಭಾರಿ ಸದ್ದು ಮಾಡಿದ ರೈತ ಸಂಘಟನೆಗಳ( farmers unions) ಹೋರಾಟ ಸದ್ಯ ಅಂತ್ಯಗೊಂಡಿದೆ. ಕೇಂದ್ರ ಸರ್ಕಾರ ಕೃಷಿ ಕಾಯ್ದೆ(Farm law) ಹಿಂಪಡೆಯುವ ಮೂಲಕ ರೈತರ ಹೋರಾಟಕ್ಕೆ ಬ್ರೇಕ್ ಹಾಕಿದೆ. ಆದರೆ ರೈತರ ಸಂಘಟನೆಗಳ ಕಿಚ್ಚು ಇನ್ನೂ ಆರಿಲ್ಲ. ಇದೀಗ ಪಂಜಾಬ್ ವಿಧಾನಸಭಾ ಚುನಾವಣಾ(Punjab Elections) ಅಖಾಡಕ್ಕೆ ರೈತ ಸಂಘಟನೆಗಳು ಜಂಟಿಯಾಗಿ ಧುಮುಕಿದೆ. ಹೌದು, ಕೇಂದ್ರದ ವಿರುದ್ದ ದೆಹಲಿ(Delhi) ಗಡಿಯಲ್ಲಿ ಪ್ರತಿಭಟನೆ ಮಾಡಿದ 40ಕ್ಕೂ ಹೆಚ್ಚು ಸಂಘಟನೆಗಳ ಪೈಕಿ 22 ಸಂಘಟನೆಗಳು ಜೊತೆಯಾಗಿ ಹೊಸ ರಾಜಕೀಯ ಪಕ್ಷ ಸ್ಥಾಪಿಸಿದೆ. ಸಂಯುಕ್ತ ಕಿಸಾನ್ ಮೋರ್ಚಾ ಪಕ್ಷ ಪಂಜಾಬ್ ವಿಧಾನಸಭಾ ಚುನಾವಗೆ ಸ್ಪರ್ಧಿಸುತ್ತಿದೆ.
2022ರ ಪಂಜಾಬ್ ವಿಧಾನಸಭಾ ಚುನಾವಣೆ ನಿರೀಕ್ಷೆಗೂ ಮೀರಿ ರಂಗೇರುತ್ತಿದೆ. ಕಾರಣ ಕಾಂಗ್ರೆಸ್‌ನಿಂದ(Congress) ಹೊರ ಬಂದ ಕ್ಯಾಪ್ಟನ್ ಅಮರಿಂದರ್ ಸಿಂಗ್(amarinder singh) ಪಂಜಾಬ್ ಲೋಕ ಕಾಂಗ್ರೆಸ್ ಪಕ್ಷ ಸ್ಥಾಪಿಸಿದೆ. ಇದೀಗ ರೈತ ಸಂಘಟನೆಗಳು ಸಂಯುಕ್ತ ಕಿಸಾನ್ ಮೋರ್ಚಾ ಪಕ್ಷ(Sanyukt Samaj Morcha) ಸ್ಥಾಪಿಸಿ, ಚುನಾವಣೆಗೆ ಧುಮುಕಿದೆ. ಹೀಗಾಗಿ ಪಂಜಾಬ್ ಚುನಾವಣಾ ಅಖಾಡದ ಫಲಿತಾಂಶ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
Farmers Call Off Protest: ರೈತರ ಎಲ್ಲಾ ಬೇಡಿಕೆ ಈಡೇರಿಸಲು ಒಪ್ಪಿದ ಸರ್ಕಾರ, ಸುದೀರ್ಘ ಪ್ರತಿಭಟನೆ ಕೊನೆಗೂ ಅಂತ್ಯ!
ರೈತ ಮುಖಂಡ ಬಲ್ಬೀರ್ ಸಿಂಗ್ ರಜೇವಾಲಾ ನೇತೃತ್ವದಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ ಪಕ್ಷ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿದೆ ಎಂದಿದೆ. ಹೊಸ ಪಕ್ಷದ ಉದಯ ಕುರಿತು ಸುದ್ದಿಗೋಷ್ಠಿ ನಡೆಸಿದ ಬಲ್ಬೀರ್ ಸಿಂಗ್ ರಜೇವಾಲಾ(Balbir Singh Rajewal), 22 ರೈತ ಸಂಘಟನಗಳು ಜೊತೆಯಾಗಿ ಹೊಸ ಪಕ್ಷ ಸ್ಥಾಪಿಸಿದೆ. ರೈತರ ಹಿತ ಕಾಪಾಡಲು ತಮ್ಮದೆ ಪಕ್ಷದ ಅವಶ್ಯಕತೆ ಇದೆ. ರೈತರ ಸಮಸ್ಯೆಗಳನ್ನು ಸಂಪೂರ್ಣವಾಗಿ ಅರಿಯಲು ರೈತರಿಗೆ ಮಾತ್ರ ಸಾಧ್ಯ. ಹೀಗಾಗಿ ರೈತ ಪ್ರತಿನಿಧಿಗಳೇ ಈ ಪಕ್ಷದ ನಾಯಕರು ಎಂದು ಬಲ್ಬೀರ್ ಸಿಂಗ್ ರಜೇವಾಲ ಹೇಳಿದ್ದಾರೆ.
ಪಕ್ಷದ ಉದಯವಾಗುತ್ತಿದ್ದಂತೆ ಭಾರಿ ಸದ್ದು ಮಾಡಿತು. ಇದರ ಬೆನ್ನಲ್ಲೇ ಸಂಯುಕ್ತ ಕಿಸಾನ್ ಮೋರ್ಚಾ ಪಕ್ಷ ಸ್ಪಷ್ಟೀಕರಣ ನೀಡಿದೆ. ಹೊಸ ಪಕ್ಷ ಸಂಯುಕ್ತ ಕಿಸಾನ್ ಮೋರ್ಚಾ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿದೆ. ಆದರೆ ಮುಂಬರುವ ಅಂದರೆ 2022ರ ಪಂಜಾಬ್ ಚುನಾವಣೆಗೆ ಸ್ಪರ್ಧಿಸುತ್ತಿಲ್ಲ ಎಂದು ಸ್ಪಷ್ಟನೆ ನೀಡಿದೆ. ಸದ್ಯ ಸಂಯುಕ್ತ ಕಿಸಾನ್ ಮೋರ್ಚಾ ಪಕ್ಷ ಸರ್ಕಾರದಿಂದ ರೈತರಿಗೆ ಸಿಗುವ ಸವಲತ್ತುಗಳನ್ನು ಸುಲಭವಾಗಿ ಸಿಗುವಂತೆ ಮಾಡಲು ಪ್ರಯತ್ನಿಸಲಿದೆ ಎಂದಿದೆ.
Punjab Politics:ನಾನು ರಾಜಕೀಯದಿಂದ ನಿವೃತ್ತಿ ಪಡೆಯುತ್ತೇನೆ: ಸಿಧು ಟ್ವೀಟ್ ಹಿಂದಿದೆ ಈ ಕಾರಣ!
2022ರ ಚುನಾವಣೆಗೆ ಸಂಯುಕ್ತ ಕಿಸಾನ್ ಮೋರ್ಚಾ ಪಕ್ಷ ಸ್ಪರ್ಧಿಸುತ್ತಿಲ್ಲ. ಜೊತೆಗೆ ಇತರ ಪಕ್ಷಗಳ ಜೊತೆ ಯಾವುದೇ ಹೊಂದಾಣಿಕೆ ಮಾಡುತ್ತಿಲ್ಲ ಎಂದಿದೆ. ಸಂಯುಕ್ತ ಕಿಸಾನ್ ಪಕ್ಷ ಜನವರಿ 15, 2022ರಂದು ಸಭೆ ಸೇರಲಿದೆ. ಈ ಸಭೆಯಲ್ಲಿ ರೈತರ ಬೇಡಿಕೆ, ಕೇಂದ್ರ ಸರ್ಕಾರದ ನಡೆ ಕುರಿತು ಚರ್ಚೆ ನಡೆಸಲಿದೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ ಹೇಳಿದೆ.
ಸಂಯುಕ್ತ ಕಿಸಾನ್ ಮೋರ್ಚಾ ಪಕ್ಷ ದೇಶದಲ 400ಕ್ಕೂ ಹೆಚ್ಚು ರೈತ ಸಂಘಟನೆಗಳನ್ನು ಪ್ರತಿನಿಧಿಸಲಿದೆ. ಹೀಗಾಗಿ 400ಕ್ಕೂ ಹೆಚ್ಚು ವಿಚಾರಧಾರೆಗಳನ್ನು ಹೊಂದಿದೆ. ಆದರೆ ರೈತರ ಸಮಸ್ಯೆ ಬಗೆಹರಿಸಲು ಒಂದಾಗಿ ಹೋರಾಟ ಮಾಡಲಿದೆ ಎಂದು ಬಲ್ಬೀರ್ ಸಿಂಗ್ ರಜೇವಾಲ ಹೇಳಿದ್ದಾರೆ.
Farm Bills’ repeal| ಕ್ಯಾ. ಸಿಂಗ್ ಜತೆ ಬಿಜೆಪಿ ಮೈತ್ರಿಗೆ ಹಾದಿ ಸುಗಮ: ಕಾಯ್ದೆ ರದ್ದಿಗೆ ಕಾರಣಗಳೇನು?
ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ರೈತ ಸಂಘಟನೆಗಳು ಕೇಂದ್ರದ ಮೂರು ಕೃಷಿ ಕಾಯ್ದೆ ವಿರುದ್ಧ ಪ್ರತಿಭಟನೆ ಆರಂಭಿಸಿತು. ಸರಿ ಸುಮಾರು ಒಂದು ವರ್ಷಗಳ ಕಾಲ ರೈತ ಸಂಘಟನೆಗಳು ಹೋರಾಟ ನಡೆಸಿದೆ. 11ಕ್ಕೂ ಹೆಚ್ಚು ಮಾತುಕತೆಗಳು ವಿಫಲಗೊಂಡಿದೆ. ಟ್ರಾಕ್ಟರ್ ರ್ಯಾಲಿ, ಸಂಸತ್ ಚಲೋ ಸೇರಿದಂತೆ ಹಲವು ಪ್ರತಿಭಟನೆಗಳು ರೈತ ಸಂಘಟನೆಗಳ ಮೇಲೆ ಕಪ್ಪು ಚುಕ್ಕೆ ತಂದಿತ್ತು. ಸತತ ಹೋರಾಟಕ್ಕೆ ಮಣಿದ ಕೇಂದ್ರ ಸರ್ಕಾರ 3 ಕೃಷಿ ಕಾಯ್ದೆಗಳನ್ನು ಹಿಂಪಡೆಯಿತು. ಈ ಹೋರಾಟದ ಬಳಿಕ ಹೊಸ 6 ಬೇಡಿಕೆ ಮುಂದಿಟ್ಟು ಪ್ರತಿಭಟನೆ ಮುಂದವರಿಸಿದ ರೈತ ಸಂಘಟನೆಗಳಿಗೆ ಕೇಂದ್ರ ಸರ್ಕಾರ ಭರವಸೆ ನೀಡಿತ್ತು. ಬಳಿಕ ರೈತ ಸಂಘಟನೆಗಳು ಪ್ರತಿಭಟನೆ ಅಂತ್ಯಗೊಳಿಸಿದೆ. ಇದರ ಬೆನ್ನಲ್ಲೇ ಇದೀಗ ಹೊಸ ಪಕ್ಷ ಸ್ಥಾಪಿಸಿ ಮತ್ತೆ ಕೇಂದ್ರಕ್ಕೆ ಶಾಕ್ ನೀಡಿದೆ.