Punjab Politics:ನಾನು ರಾಜಕೀಯದಿಂದ ನಿವೃತ್ತಿ ಪಡೆಯುತ್ತೇನೆ: ಸಿಧು ಟ್ವೀಟ್‌ ಹಿಂದಿದೆ ಈ ಕಾರಣ!

* ಚುನಾವಣಾ ಹೊಸ್ತಿಲಲ್ಲಿ ಪಂಜಾಬ್‌ನಲ್ಲಿ ಗರಿಗೆದ್ದ ರಾಜಕೀಯ

* ತಮ್ಮದೇ ಸರ್ಕಾರದ ವಿರುದ್ಧ ಒತ್ತಡ ಹೇರಲು ಮುಂದಾದ ಸಿಧು

* ನಾನು ರಾಜಕೀಯದಿಂದ ನಿವೃತ್ತಿ ಪಡೆಯುತ್ತೇನೆ: ಸಿಧು ಟ್ವೀಟ್‌ ಹಿಂದಿದೆ ಈ ಕಾರಣ

Navjot Sidhu dares Sukhbir to prove he met Punjab DGP against Majithia pod

ಚಂಡೀಗಢ(ನ.28): ಶಿರೋಮಣಿ ಅಕಾಲಿದಳ (SAD) ಮುಖ್ಯಸ್ಥ ಸುಖ್‌ಬೀರ್ ಸಿಂಗ್ ಬಾದಲ್ (Sukhbir Singh Badal) ಅವರ ಆರೋಪಕ್ಕೆ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು (Navjot Singh Sidhu) ಕಟು ಪ್ರತಿಕ್ರಿಯೆ ನೀಡಿದ್ದಾರೆ. ಸುಖಬೀರ್ ಬಾದಲ್ ತಮ್ಮ ನಿಲುವನ್ನು ಸಾಬೀತುಪಡಿಸಿದರೆ ನಾನು ಈಗಲೇ ರಾಜಕೀಯ ತೊರೆಯುತ್ತೇನೆ ಎಂದು ಗುಡುಗಿದ್ದಾರೆ. ಹೌದು ಶನಿವಾರ ಸಂಜೆ ಈ ಸಂಬಂಧ ಟ್ವೀಟ್ ಮಾಡಿದ ಸಿಧು ನವಜೋತ್ ಸಿಂಗ್ ಸಿಧು,  ಸುಖಬೀರ್ ಬಾದಲ್, ನಾನು ಯಾವುದಾದರೂ ವಿಚಾರದ ಬಗ್ಗೆ ಪಂಜಾಬ್‌ನ ಹೊಸ ಡಿಜಿಪಿ ಅವರನ್ನು ಭೇಟಿ ಮಾಡಿದ್ದೇನೆ ಎಂದು ಸಾಬೀತುಪಡಿಸಿ. 2015 ರಲ್ಲಿ ಅಮಾಯಕ ಸಿಖ್ ಹುಡುಗರನ್ನು ಅಕ್ರಮವಾಗಿ ಬಂಧಿಸಿದಾತ, ಬಾದಲ್‌ಗೆ ಕ್ಲೀನ್ ಚಿಟ್ ನೀಡಿ ಹೊಸ ಸರ್ಕಾರ ರಚನೆಯಾದಾಗಿನಿಂದ ಮಾಜಿ ಡಿಜಿಪಿ ಸೈನಿ ಅವರು ಮತ್ತಷ್ಟು ಹತ್ತಿರವಾಗಿದ್ದಾರೆ ಎಂದಿದ್ದಾರೆ.

ಏನಿದು ಪ್ರಕರಣ? 

ಮುಚ್ಚಿದ ಕೋಣೆಯಲ್ಲಿ ಸಿಧು ಮತ್ತು ಉಪ ಮುಖ್ಯಮಂತ್ರಿ ಸುಖಜೀಂದರ್ ಸಿಂಗ್ ರಾಂಧವಾ ಅವರನ್ನು ಭೇಟಿ ಮಾಡಿದ ಮುಖ್ಯಮಂತ್ರಿ ಚನ್ನಿ ಅವರು ಅಕಾಲಿದಳದ ನಾಯಕ ಬಿಕ್ರಮ್ ಸಿಂಗ್ ಮಜಿಥಿಯಾ ವಿರುದ್ಧ ಸುಳ್ಳು ಪ್ರಕರಣ ದಾಖಲಿಸುವಂತೆ ಡಿಜಿಪಿಗೆ ಆದೇಶಿಸಿದ್ದಾರೆ ಎಂದು ಸಿಧು ಹೇಳಿರುವುದಾಗಿ ಎಸ್‌ಎಡಿ ಮುಖ್ಯಸ್ಥ ಬಾದಲ್ ಆರೋಪಿಸಿದ್ದಾರೆ. ಈ ಮೂಲಕ ಪರಿಸ್ಥಿತಿ ಬದಲಾಯಿಸಿ ಅಕಾಲಿಗೆ ಸಿಗುವ ಯಶಸ್ಸನ್ನು ತಡೆಹಿಡಿಯುವ ಪ್ಲಾನಿಂಗ್ ಎನ್ನಲಾಗಿದೆ. ಅಷ್ಟೇ ಅಲ್ಲದೇ, ಈ ಬಗ್ಗೆ ಹೈಕೋರ್ಟ್‌ನಲ್ಲಿ ತನಿಖೆ ನಡೆಸುವಂತೆ ಸಿಎಂಗೆ ಸವಾಲು ಹಾಕುತ್ತೇನೆ, ಎಲ್ಲವೂ ಗೊತ್ತಾಗಲಿದೆ ಎಂದು ಬಾದಲ್ ಎಚ್ಚರಿಸಿದ್ದಾರೆ.

Navjot singh sidhu:ಇಮ್ರಾನ್ ಖಾನ್ ನನ್ನ ಅಣ್ಣ, ನಮಗೆ ಗಡಿ ಯಾಕಣ್ಣ; ಸಿಧು ಮತ್ತೊಂದು ವಿವಾದ!

ಅಷ್ಟಕ್ಕೂ ಬಿಕ್ರಮ್ ಸಿಂಗ್ ಮಜಿಥಿಯಾ ಯಾರು?

ಬಿಕ್ರಮ್ ಸಿಂಗ್ ಮಜಿಥಿಯಾ ಪಂಜಾಬ್ ಅಕಾಲಿದಳದ ಹಿರಿಯ ನಾಯಕ. ಅವರು ಮಾಜಿ ಕೇಂದ್ರ ಸಚಿವ ಸುಖಬೀರ್ ಸಿಂಗ್ ಬಾದಲ್ ಅವರ ಪತ್ನಿ ಹರ್ಸಿಮ್ರತ್ ಕೌರ್ ಬಾದಲ್ ಅವರ ಸಹೋದರ. ಹಿಂದಿನ ಅಕಾಲಿ ಸರ್ಕಾರದಲ್ಲಿ ಮಜಿಥಿಯಾ ಕೂಡ ಸಚಿವರಾಗಿದ್ದರು. ಇನ್ನು ಕೆಲವೇ ದಿನಗಳಲ್ಲಿ ಸಿಧು ಮಜಿಥಿಯಾ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಬಹುದು ಎಂದು ಬಾದಲ್ ಹೇಳಿದ್ದಾರೆ. ತಮ್ಮದೇ ಸರ್ಕಾರದ ವಿರುದ್ಧ ಭಾರೀ ಒತ್ತಡ ಹೇರಲು ಕಳೆದ ಅನೇಕ ದಿನಗಳಿಂದ ಸಿಧು ಪ್ರಯತ್ನಿಸುತ್ತಿದ್ದು, ಈ ಮೂಲಕ ಮಜಿಥಿಯಾ ವಿರುದ್ಧ ಹೇಗಾದರೂ ಮಾಡಿ ಕಾನೂನು ಬಾಹಿರ ಕ್ರಮ ಕೈಗೊಳ್ಳುವಂತೆ ಪ್ರಯತ್ನಿಸುತ್ತಿದ್ದಾರೆ.

ತನ್ನದೇ ಸರ್ಕಾರದ ವಿರುದ್ಧ ಸಿಧು ಉಪವಾಸ ಸತ್ಯಾಗ್ರಹ!

ಪಂಜಾಬ್ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ (PCC President) ನವಜೋತ್ ಸಿಂಗ್ ಸಿಧು (Navjot Singh Sidhu) ಮತ್ತು ಸಿಎಂ ಚರಣ್‌ಜಿತ್ ಸಿಂಗ್ ಚನ್ನಿ (Charanjit Singh Channi) ನಡುವೆ ಹೊಸ ಸಮರ ಆರಂಭವಾಗಿದೆ. ಈ ವೇಳೆ ಸಿದ್ದು ಡ್ರಗ್ಸ್ ವಿಚಾರವನ್ನೇ ಮುಂದಿಟ್ಟುಕೊಂಡಿದ್ದಾರೆ. ಡ್ರಗ್ಸ್ ವರದಿಯನ್ನು ಬಿಡುಗಡೆ ಮಾಡದಿದ್ದರೆ ತಮ್ಮದೇ ಸರ್ಕಾರದ ವಿರುದ್ಧ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಪಂಜಾಬ್‌ನಲ್ಲಿ ವಿಧಾನಸಭಾ ಚುನಾವಣೆಗೆ (Assembly Elections) ಮುನ್ನ, ಇದು ಸರ್ಕಾರಕ್ಕೆ ಹೊಸ ಸಮಸ್ಯೆಯಾಗಬಹುದು. ಗುರುವಾರ, Rallyಯಲ್ಲಿ ಮಾತನಾಡಿದ ಸಿಧು ಪಂಜಾಬ್‌ನ (Punjab) ಲಕ್ಷಾಂತರ ಯುವಕರು ಡ್ರಗ್ಸ್ ಸೇವನೆಯಿಂದ ಸತ್ತರು, ಲಕ್ಷಾಂತರ ಯುವಕರು ಡ್ರಗ್ಸ್ ಸೇವಿಸುತ್ತಿದ್ದಾರೆ ಎಂದಿದ್ದಾರೆ.

ಇದೇ ವೇಳೆ ಸಿಧು ನಶೆಯಲ್ಲಿ ನನ್ನ ಮೊಮ್ಮಗನ ಸ್ಥಿತಿಯನ್ನು ನೋಡಿ ನಾನು ಅಳುತ್ತೇನೆ ಎಂದಿದ್ದ ಪಟಿಯಾಲದ (Patiala) ಮುದುಕರೊಬ್ಬರ ಮಾತು ನೆನಪಿಸಿಕೊಂಡು ಭಾವುಕರಾಗಿದ್ದಾರೆ. ಡ್ರಗ್ಸ್ ನಿಂದಾಗಿ ಯುವ ಪೀಳಿಗೆ ಹಾಳಾಗುತ್ತಿದ್ದು, ಜನರು ರಾಜ್ಯ ತೊರೆಯುತ್ತಿದ್ದಾರೆ ಎಂದರು. ಇಂತಹ ಪರಿಸ್ಥಿತಿಯಲ್ಲಿ ಜನರು ಪಂಜಾಬ್ ತೊರೆದರೆ, ಖಜಾನೆಯಲ್ಲಿ ಹಣ ಎಲ್ಲಿಂದ ಬರುತ್ತದೆ ಮತ್ತು ಇಲ್ಲಿ ಹೆಣ್ಣುಮಕ್ಕಳಿಗೆ ದೊಡ್ಡ ಆಸ್ಪತ್ರೆಗಳು ಮತ್ತು ಕಾಲೇಜುಗಳು ಎಲ್ಲಿಂದ ಬರುತ್ತವೆ ಎಂದು ಪ್ರಶ್ನಿಸಿದ್ದಾರೆ.

Latest Videos
Follow Us:
Download App:
  • android
  • ios