Asianet Suvarna News Asianet Suvarna News

2ನೇ ಬಾರಿ ಹಸೆಮಣೆ ಏರಲು ಸಜ್ಜಾದ ಪಂಜಾಬ್ ಸಿಎಂ, ನಾಳೆಯೇ ಮದುವೆ!

* ಪಂಜಾಬ್ ಮುಖ್ಯಮಂತ್ರಿ ಮನ್‌ಗೆ ಮದುವೆ

* ಮೊದಲನೇ ಪತ್ನಿಗೆ ರಾಜಕೀಯಕ್ಕಾಗಿ ವಿಚ್ಛೇದನ ನಿಡಿದ್ದ ಮನ್

* ಎರಡನೇ ಮದುವೆಗೆ ಸಜ್ಜಾದ ಪಂಜಾಬ್ ಸಿಎಂ

Punjab CM Bhagwant Mann Set To Tie The Knot For Second Time In Chandigarh pod
Author
Bangalore, First Published Jul 6, 2022, 2:26 PM IST

ಚಂಡೀಗಢ(ಜು.06): ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮನ್ ಮತ್ತೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಗುರುವಾರ ಚಂಡೀಗಢದಲ್ಲಿ ಭಗವಂತ್ ಮನ್‌ರವರ ಅಧ್ಧೂರಿ ಮದುವೆ ಕಾರ್ಯಕ್ರಮ ನಡೆಯಲಿದೆ. ಭಗವಂತ್ ಮನ್ ಡಾ ಗುರುಪ್ರೀತ್ ಕೌರ್ ಅವರನ್ನು ಮದುವೆಯಾಗಲಿದ್ದಾರೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕೂಡ ಭಗವಂತ್ ಮನ್ ಅವರ ಮದುವೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಭಗವಂತ್ ಮನ್ ಅವರಿಗೆ 48 ವರ್ಷ. ಅವರು ಎರಡನೇ ಬಾರಿಗೆ ಮದುವೆಯಾಗಲಿದ್ದಾರೆ. ಮನ್ ತನ್ನ ಮೊದಲ ಪತ್ನಿ ಇಂದರ್‌ಪ್ರೀತ್ ಕೌರ್‌ನಿಂದ ವಿಚ್ಛೇದನ ಪಡೆದಿದ್ದಾರೆ. ಅವರಿಗೆ ಇಬ್ಬರು ಮಕ್ಕಳಿದ್ದಾರೆ, ಮಕ್ಕಳು ಭಗವಂತ್ ಮನ್ ಅವರ ಮೊದಲ ಹೆಂಡತಿಯೊಂದಿಗೆ ಅಮೇರಿಕಾದಲ್ಲಿ ವಾಸಿಸುತ್ತಿದ್ದಾರೆ. ಚಂಡೀಗಢದಲ್ಲಿ ಭಗವಂತ್ ಮನ್ ವಿವಾಹವನ್ನು ಆಯೋಜಿಸಲಾಗಿದೆ ಎಂದು ಹೇಳಲಾಗುತ್ತಿದೆ. ಅರವಿಂದ್ ಕೇಜ್ರಿವಾಲ್ ಸೇರಿದಂತೆ ಆಪ್ತ ವ್ಯಕ್ತಿಗಳು ಮಾತ್ರ ಇದರಲ್ಲಿ ಭಾಗಿಯಾಗಲಿದ್ದಾರೆ.

ಇದನ್ನೂ ಓದಿ: ಸಿಧು ಮೂಸೆವಾಲಾ ಕೊಲೆ ಬಳಿಕ ಎಚ್ಚೆತ್ತ ಪಂಜಾಬ್ ಸರ್ಕಾರ, 424 ವಿವಿಐಪಿಗಳಿಗೆ ಭದ್ರತೆ ಮರುನಿಯೋಜಿಸಲು ನಿರ್ಧಾರ!

2015 ರಲ್ಲಿ ವಿಚ್ಛೇದನ

ಹಾಸ್ಯನಟ-ರಾಜಕಾರಣಿ ಭಗವಂತ್ ಮನ್ 2014 ರಲ್ಲಿ ಮೊದಲ ಬಾರಿಗೆ ಸಂಗ್ರೂರ್ ನಿಂದ ಸಂಸದರಾದರು. ನಂತರ ಅವರ ಪತ್ನಿ ಇಂದರ್‌ಜಿತ್ ಕೌರ್ ಅವರ ಪ್ರಚಾರದಲ್ಲಿ ಕಾಣಿಸಿಕೊಂಡರು. ಆದರೆ, 2015ರಲ್ಲಿ ಇಬ್ಬರೂ ವಿಚ್ಛೇದನ ಪಡೆದಿದ್ದರು. ಭಗವಂತ್ ಮನ್ 2019 ರ ಚುನಾವಣೆಯಲ್ಲಿ ಸಂಗ್ರೂರ್ ನಿಂದ ಗೆದ್ದಿದ್ದರು. ಆದರೆ 2022ರಲ್ಲಿ ಪಂಜಾಬ್‌ನಲ್ಲಿ ಆಪ್‌ನಿಂದ ಸಿಎಂ ಅಭ್ಯರ್ಥಿಯಾದರು. ಅವರ ನೇತೃತ್ವದಲ್ಲಿ ಪಕ್ಷಕ್ಕೆ ಭರ್ಜರಿ ಬಹುಮತ ಸಿಕ್ಕಿದೆ. ಭಗವಂತ್ ಮನ್ 16 ಮಾರ್ಚ್ 2022 ರಂದು ಪಂಜಾಬ್ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದರು.

ಇದನ್ನೂ ಓದಿ: Sidhu Moose Wala ಭದ್ರತೆ ವಾಪಸ್ ಪಡೆದು ಆಮ್ ಆದ್ಮಿ ದುಸ್ಸಾಹಸ, ಸಿಧು ಹತ್ಯೆಗೆ ಸಿಎಂ ಹೊಣೆ ಎಂದ ಬಿಜೆಪಿ!

ರಾಜಕೀಯದ ಕಾರಣದಿಂದ ಕುಟುಂಬಕ್ಕೆ ಸಮಯ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಭಗವಂತ್ ಮನ್ ಹೇಳಿದ್ದರು. ಹಾಗಾಗಿ ಪತ್ನಿಯಿಂದ ದೂರವಾದರು. ಅಷ್ಟೇ ಅಲ್ಲ, ವಿಚ್ಛೇದನದ ನಂತರ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಪೋಸ್ಟ್ ಕೂಡ ಬರೆದಿದ್ದಾರೆ. ಇದರಲ್ಲಿ ಅವರು ತಮ್ಮ ಕುಟುಂಬಕ್ಕಿಂತ ಪಂಜಾಬ್ ಅನ್ನು ಆಯ್ಕೆ ಮಾಡಿಕೊಂಡಿದ್ದೇನೆ ಎಂದು ಹೇಳಿದ್ದರು. ರಾಜಕೀಯಕ್ಕಾಗಿ ಪತ್ನಿಯಿಂದ ಬೇರ್ಪಡುತ್ತಿರುವುದಾಗಿಯೂ ತಿಳಿಸಿದ್ದರು. 

Follow Us:
Download App:
  • android
  • ios