ಸಿಧು ಮೂಸೆವಾಲಾ ಕೊಲೆ ಬಳಿಕ ಎಚ್ಚೆತ್ತ ಪಂಜಾಬ್ ಸರ್ಕಾರ, 424 ವಿವಿಐಪಿಗಳಿಗೆ ಭದ್ರತೆ ಮರುನಿಯೋಜಿಸಲು ನಿರ್ಧಾರ!
ಪಂಜಾಬ್ ನ ಖ್ಯಾತ ಗಾಯಕ ಸಿಧು ಮೂಸೆವಾಲಾ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದ ಬಳಿಕ ಪಂಜಾಬ್ ಸರ್ಕಾರ ಎಚ್ಚೆತ್ತುಕೊಂಡಿದ್ದು, ರಾಜ್ಯದಲ್ಲಿರುವ 424 ವಿವಿಐಪಿಗಳಿಗೆ ಭದ್ರತೆಯನ್ನು ಜೂನ್ 7 ರಿಂದ ಮರು ನಿಯೋಜನೆ ಮಾಡುವುದಾಗಿ ಘೋಷಣೆ ಮಾಡಿದೆ.
ಚಂಡೀಗಢ (ಜೂನ್ 2): ಪಂಜಾಬ್ ನಲ್ಲಿ (Punjab) ವಿವಿಐಪಿಗಳ ಭದ್ರತೆಯನ್ನು(VIP security cover) ತೆಗೆದು ಹಾಕಿದ್ದರ ಪರಿಣಾಮವಾಗಿ ಖ್ಯಾತ ಗಾಯಕ ಸಿಧು ಮೂಸೆವಾಲಾರನ್ನು (Sidhu Moose Wala ) ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಇದರ ಬೆನ್ನಲ್ಲಿಯೇ ಎಚ್ಚೆತ್ತುಗೊಂಡಿರುವ ಪಂಜಾಬ್ ಸರ್ಕಾರ, ರಾಜ್ಯದ 424 ವಿವಿಐಪಿಗಳ ಭದ್ರತೆಯನ್ನು ಮರುನಿಯೋಜನೆ ಮಾಡುವುದಾಗಿ ಘೋಷಿಸಿದೆ.
ಸಿಧು ಮೂಸೆವಾಲಾ ಹತ್ಯೆಗೆ ಅವರ ಭದ್ರತೆಯನ್ನು ತೆಗೆದುಹಾಕಿದ್ದೇ ಪ್ರಮುಖ ಕಾರಣವಾಗಿತ್ತು. ಮೂಸೆವಾಲಾ ಹತ್ಯೆಯಾದ ಐದು ದಿನಗಳ ಬಳಿಕ, ಎಲ್ಲಾ ವಿವಿಐಪಿಗಳ ಭದ್ರತೆಯನ್ನು ಮರುನಿಯೋಜನೆ ಮಾಡುವುದಾಗು ಗುರುವಾರ ಘೋಷಿಸಿದೆ.
ಪಂಜಾಬ್ ಹಾಗೂ ಹರ್ಯಾಣ ಹೈಕೋರ್ಟ್ ನಲ್ಲಿ (Punjab Nad Haryana High Court) ಪಂಜಾಬ್ ನಲ್ಲಿ ಆಡಳಿತದಲ್ಲಿರುವ ಆಮ್ ಆದ್ಮಿ ಪಾರ್ಟಿ ಈ ವಿಚಾರ ತಿಳಿಸಿದೆ. ಮಾಜಿ ಸಚಿವ ಒಪಿ ಸೋನಿ ಅವರ ಭದ್ರತೆಯನ್ನೂ ಆಪ್ ಸರ್ಕಾರ ತೆಗೆದುಹಾಕಿತ್ತು. ಮೂಸೆವಾಲಾ ಹತ್ಯೆಯ ಬಳಿಕ ಪಂಜಾಬ್ ಸರ್ಕಾರದ ನಿರ್ಧಾರದ ವಿರುದ್ಧ ಒಪಿ ಸೋನಿ ಕೋರ್ಟ್ ಮೆಟ್ಟಿಲೇರಿದ್ದರು.
ಭದ್ರತೆಯನ್ನು ತೆಗೆದುಹಾಕಿದ ಕಾರಣಕ್ಕಾಗಿ ಸಿಧು ಮೂಸೆವಾಲಾ ಅವರನ್ನು ಶೂಟ್ ಮಾಡಿ ಕೊಲೆ ಮಾಡಲಾಗತ್ತು. ಈ ಕುರಿತಂತೆ ಮುಖ್ಯಮಂತ್ರಿ ಭಗವಂತ್ ಸಿಂಗ್ ಮಾನ್ ನೇತೃತ್ವದ ಪಂಜಾಬ್ ಸರ್ಕಾರದ ವಿರುದ್ಧ ಟೀಕಾಪ್ರಹಾರ ಮಾಡಲಾಗಿತ್ತು.
ಭದ್ರತೆಯನ್ನು ಮೊಟಕುಗೊಳಿಸಲು ಕಾರಣವೇನು ಎಂಬ ಹೈಕೋರ್ಟ್‌ನ ಪ್ರಶ್ನೆಗೆ, ಜೂನ್ 6 ರಂದು ನಡೆಯಲಿರುವ ಆಪರೇಷನ್ ಬ್ಲೂಸ್ಟಾರ್‌ನ ವಾರ್ಷಿಕೋತ್ಸವಕ್ಕೆ ಭದ್ರತಾ ಸಿಬ್ಬಂದಿ ಅಗತ್ಯವಿದೆ ಎಂದು ಪಂಜಾಬ್ ಸರ್ಕಾರ ಹೇಳಿದೆ, ಜೂನ್ 1984 ರಲ್ಲಿ ಗೋಲ್ಡನ್ ಟೆಂಪಲ್‌ನಲ್ಲಿದ್ದ ಭಯೋತ್ಪಾದಕರನ್ನು ನಾಶಮಾಡಲು ಮಿಲಿಟರಿ ದಾಳಿಯನ್ನು ನಡೆಸಲಾಗಿತ್ತು. ಇದನ್ನು ಕೋರ್ಟ್ ನಲ್ಲಿ ರಾಜ್ಯ ಸರ್ಕಾರ ಪ್ರಸ್ತಾಪಿಸಿದೆ.
ಛೀಮಾರಿ ಹಾಕಿದ ಕೋರ್ಟ್: ಪಂಜಾಬ್ ಸರ್ಕಾರ ಮಾಡಿದ ನಿರ್ಧಾರಕ್ಕೆ ಹೈಕೋರ್ಟ್ ಛೀಮಾರಿ ಹಾಕಿದೆ. ಯಾರೆಲ್ಲಾ ಭದ್ರತೆಗಳನ್ನು ತೆಗೆದುಹಾಕಲಾಗಿದೆ ಎನ್ನುವ ಲಿಸ್ಟ್ ಲೀಕ್ ಆಗಿದ್ದರ ಬಗ್ಗೆಯೂ ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.
ಸದ್ಯಕ್ಕೆ 424 ಜನರ ಭದ್ರತೆಯನ್ನು ಮರುಸ್ಥಾಪಿಸಲು ನ್ಯಾಯಾಲಯ ನಿರ್ಧರಿಸಿದೆ. ಜೂನ್ 7 ರಿಂದ ಅವರೆಲ್ಲರ ಭದ್ರತೆಯನ್ನು ಮತ್ತೆ ಪುನಃಸ್ಥಾಪಿಸಲಾಗುತ್ತದೆ. ಆ ವಿಐಪಿಗಳ ಭದ್ರತೆಯನ್ನು ಅವರ ಕಡೆಯಿಂದ ಸೀಮಿತ ಅವಧಿಗೆ ಮಾತ್ರ ತೆಗೆದುಹಾಕಲಾಗಿದೆ ಎಂದು ಸರ್ಕಾರ ಒತ್ತಿ ಹೇಳಿದೆ. ಆದರೆ ಯಾರೊಬ್ಬರ ಭದ್ರತೆಯನ್ನು ತೆಗೆದುಹಾಕುವುದಾದರೂ, ಸಂದರ್ಭಗಳನ್ನು ಸರಿಯಾಗಿ ಅವಲೋಕಿಸಬೇಕು, ಎಲ್ಲಾ ಅಂಶಗಳನ್ನು ಮಂಥನ ಮಾಡಬೇಕು, ಆಗ ಮಾತ್ರ ಅಂತಹ ನಿರ್ಧಾರ ತೆಗೆದುಕೊಳ್ಳಬೇಕು ಎಂದು ನ್ಯಾಯಾಲಯ ಎಚ್ಚರಿಸಿದೆ.
ಮಾಲೀಕನ ಸಾವಿನಿಂದ ಆಘಾತಕ್ಕೀಡಾದ ಶ್ವಾನ: ಆಹಾರ ತಿನ್ನದ ಸಿಧು ಮೂಸೆವಾಲಾ ನಾಯಿ
ಪಂಜಾಬ್ ಸರ್ಕಾರವು ಕಳೆದ ತಿಂಗಳು 424 ವಿಐಪಿಗಳ ಭದ್ರತೆಯನ್ನು ಹಿಂತೆಗೆದುಕೊಳ್ಳುವ ನಿರ್ಧಾರ ಮಾಡಿತ್ತು. ದೇರಮುಖಿ ಸೇರಿದಂತೆ ಹಲವು ನಿವೃತ್ತ ಅಧಿಕಾರಿಗಳ ಹೆಸರು ಇದರಲ್ಲಿತ್ತು. ಹಿರಿಯ ಎಸ್‌ಎಡಿ ನಾಯಕರಾದ ಚರಣ್ ಜೀತ್ ಸಿಂಗ್ ಧಿಲ್ಲೋನ್, ಬಾಬಾ ಲಖಾ ಸಿಂಗ್, ಸದ್ಗುರು ಉದಯ್ ಸಿಂಗ್, ಸಂತ ತರ್ಮಿಂದರ್ ಸಿಂಗ್ ಅವರ ಭದ್ರತೆಯನ್ನೂ ಹಿಂಪಡೆಯಲಾಗಿದೆ. ಸಿಧು ಮೂಸೆವಾಲಾ ಅವರ ಭದ್ರತೆಯನ್ನೂ ಈ ವೇಳೆ ಹಿಂಪಡೆಯಲಾಗಿತ್ತ. ಆಗ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಹೆಚ್ಚುವರಿ ಸಿಬ್ಬಂದಿಯ ಅಗತ್ಯವಿದ್ದು, ಪರಿಶೀಲನಾ ಸಭೆಯ ನಂತರ 424 ಜನರ ಭದ್ರತೆಯನ್ನು ಹಿಂಪಡೆಯಲಾಗಿದೆ ಎಂಬುದು ಸರ್ಕಾರದ ವಾದವಾಗಿತ್ತು.
ಗಾಯಕ ಸಿದು ಹತ್ಯೆ ಮತ್ತು ಮುನ್ನಲೆಗೆ ಬಂದ ಪಂಜಾಬ್ ಗ್ಯಾಂಗ್‌ಸ್ಟರ್‌ಗಳ ರಕ್ತಸಿಕ್ತ ಇತಿಹಾಸ
ಕಳೆದ ಏಪ್ರಿಲ್ ತಿಂಗಳಲ್ಲೂ ಭಗವಂತ್ ಮಾನ್ ಸರ್ಕಾರ 184 ವಿಐಪಿಗಳ ಭದ್ರತೆಯನ್ನು ಹಿಂಪಡೆಯಲು ನಿರ್ಧರಿಸಿತ್ತು. ಆಗ ಮಾಜಿ ಮುಖ್ಯಮಂತ್ರಿ, ಮಾಜಿ ಸಚಿವರು ಸೇರಿದಂತೆ ಹಲವು ಶಾಸಕರ ಭದ್ರತೆಯನ್ನು ತೆಗೆದುಹಾಕಲು ನಿರ್ಧಾರ ಮಾಡಲಾಗಿತ್ತು. ಆದರೆ ಅವರ ಆ ಒಂದು ನಿರ್ಧಾರವು ಪಂಜಾಬ್ ರಾಜಕೀಯದಲ್ಲಿ ದೊಡ್ಡ ಸಂಚಲವನ್ನು ತಂದಿದೆ ಮತ್ತು ಕೆಲವು ತಿಂಗಳ ಹಿಂದೆ ಅಧಿಕಾರಕ್ಕೆ ಬಂದ ಭಗವಂತ್ ಸರ್ಕಾರದ ಮುಂದೆ ಸಾಕಷ್ಟು ಸವಾಲುಗಳು ಉದ್ಭವಿಸಿವೆ.