ಚಿಕ್ಕ ವಯಸ್ಸಿಗೆ ಮಗು ದತ್ತು ತೆಗೆದುಕೊಳ್ಳಬೇಕೆಂದು ಪ್ಲ್ಯಾನ್ ಮಾಡಿದ್ದರಂತೆ ಪ್ರಿಯಾಂಕಾ. ತಾಯಿ ಬೇಡ ಅಂದಿದ್ಯಾಕೆ?
ಏಷ್ಯಾ ರಿಚ್ ಮಹಿಳೆ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿರುವ ನಟಿ ಪ್ರಿಯಾಂಕಾ ಚೋಪ್ರಾ ಸದ್ಯ ಸಿನಿಮಾಗಳಿಂದ ಬ್ರೇಕ್ ತೆಗೆದುಕೊಂಡು ಲೈಫ್ ಎಂಜಾಯ್ ಮಾಡುತ್ತಿದ್ದಾರೆ. ಜನವರಿ ತಿಂಗಳಿನಲ್ಲಿ ಸರೋಗಸಿ ಮೂಲಕ ಮಗು ಪಡೆದುಕೊಂಡಿರುವ ಪಿಗ್ಗಿ ಮತ್ತು ನಿಕ್ ಜೋನಾಸ್ ಮಗಳಿಗೆ ಮಲ್ತಿ ಮೇರಿ ಚೋಪ್ರಾ ಜೋನಾಸ್ (Malti marie chopra johnas) ಎಂದು ನಾಮಕರಣ ಮಾಡಿದ್ದಾರೆ. ಈ ನಡುವೆ ಪ್ರಿಯಾಂಕಾ ತಮ್ಮ ಆತ್ಮಚರಿತ್ರೆಯನ್ನು ಬರೆದಿದ್ದಾರೆ ಅದರಲ್ಲಿ ಇಂಟ್ರೆಸ್ಟಿಂಗ್ ವಿಚಾರವೊಂದನ್ನು ರಿವೀಲ್ ಮಾಡಿದ್ದಾರೆ.
ಪ್ರಿಯಾಂಕಾ (Priyanka Chopra) ತಾಯಿ ತಮ್ಮ ಮನೆಗೆ ಅನಾಥ ಮಗುವೊಂದನ್ನು ಕರೆದುಕೊಂಡು ಬಂದಾಗ ಸಾಕೋಣ ಎಂದು ಪಿಗ್ಗಿ ಹಠ ಮಾಡಿದ್ದರಂತೆ. 'ನನ್ನ ಸಹೋದರ ಸಿದ್ಧ ಹುಟ್ಟಿದಾಗ ನನ್ನ ಅಜ್ಜಿ ನಮ್ಮ ಜೊತೆ ವಾಸವಿದ್ದರು. ಕೆಲಸ ಮುಗಿಸಿಕೊಂಡು ಗಾಬರಿಯಿಂದ ಅಮ್ಮ ಡಾ. ಮಧು ಚೋಪ್ರಾ (Dr Madhu Chopra) ಮನೆಗೆ ಬಂದು ಅಜ್ಜಿ ಜೊತೆ ಗುಸು ಗುಸು ಎಂದು ಮಾತನಾಡುತ್ತಿದ್ದರು. ಅರ್ಧಂಬರ್ಧ ನಿದ್ದೆಯಿಂದ ಎದ್ದು ಏನಾಗಿದೆ ಎಂದು ನೋಡಲು ಹೋಗಿದೆ ಆಗ ಅಮ್ಮ ಅಡುಗೆ ಮನೆಯಲ್ಲಿ ಪುಟ್ಟ ಕಂದಮ್ಮನ ಜೊತೆಗಿದ್ದರು. ಆಸ್ಪತ್ರೆಯಲ್ಲಿ ಡೆಲಿವರಿ ಮಾಡಿಸಿದ ನಂತರ ಕಾರ್ ಪಾರ್ಕಿಂಗ್ ಸ್ಥಳಕ್ಕೆ ಅಮ್ಮ ಬಂದಾಗ ಮಗು ಅಳುತ್ತಿದ್ದ ಧ್ವನಿ ಕೇಳಿಸಿದೆ. ರಸ್ತೆ ಮೇಲೆ ಯಾರೂ ಮಗು ಬಿಟ್ಟು ಹೋಗಿದ್ದರು, ಆ ಮಗುವನ್ನು ಅಮ್ಮ ಎತ್ತುಕೊಂಡು ಮನೆ ಬಂದಿದ್ದರು. ಆ ಸಮಯದಲ್ಲಿ ಜೋರಾಗಿ ಮಳೆ ಬರುತ್ತಿತ್ತು ಎಳೆಮಗುವನ್ನು ಆ ಪರಿಸ್ಥಿತಿಯಲ್ಲಿ ನೋಡಿ ಶಾಕ್ ಆಗಿದ್ದಾರೆ. ಆ ರಾತ್ರಿ ನನಗೆ ಆ ಮಗುವನ್ನು ನಾವೇ ಸಾಕಬೇಕು ಎಂದು ಹಠ ಮಾಡಿದೆ, ನನ್ನ ತಮ್ಮನ ಬಟ್ಟೆಗಳನ್ನು ಧರಿಸಿ ಮುದ್ದಾಗಿ ಕಾಣಿಸುತ್ತಿತ್ತು. ನನಗೆ ಅರ್ಥ ಆಗುವ ರೀತಿಯಲ್ಲಿ ಸಾಕುವುದು ಬೇಡ ಎಂದು ಅಮ್ಮ ಹೇಳಿದ್ದರು' ಎಂದು ಪ್ರಿಯಾಂಕಾ ಬರೆದುಕೊಂಡಿದ್ದಾರೆ.
ಮಕ್ಕಳಿಲ್ಲದ ಪೋಷಕರಿಗೆ ಮಗುವನ್ನು ಕೊಡಬೇಕು ಎಂದು ನನ್ನ ತಾಯಿ ನಿರ್ಧರಿಸಿದ್ದರು. 'ಮಗುವನ್ನು ದತ್ತು ಪಡೆದುಕೊಳ್ಳುವ ಸಮಯದಲ್ಲಿ ತುಂಬಾ ಲೀಗಲ್ ಪೇಪರ್ ಕೆಲಸಗಳು ಇರುತ್ತದೆ ನನಗೆ ಆ ವಿಚಾರ ಗೊತ್ತಿರಲಿಲ್ಲ. ಜೋರಾಗಿ ಮಳೆ ಬರುತ್ತಿತ್ತು ನಾನು ಆ ಮಗುವನ್ನು ಎತ್ತಿಕೊಂಡು ಹಾಡು ಹೇಳುತ್ತಿದ್ದೆ, ನಮ್ಮ ಮನೆಯಿಂದ ದತ್ತು ತೆಗೆದುಕೊಳ್ಳುವವರ ಮನೆಗೆ ಕರೆದುಕೊಂಡು ಹೋದೆವು. ಆ ಮಗು ಮುಖವನ್ನು ನಾನು ಎಂದೂ ಮರೆಯುವುದಿಲ್ಲ ನಾವು ಮಗು ಅವರ ಕೈಗೆ ಕೊಟ್ಟಾಗ ಅವರು ಭಾವುಕರಾದರು ಆ ಕ್ಷಣವನ್ನು ಮರೆಯುವುದಿಲ್ಲ. ಕೃಷ್ಣ ಜನ್ಮಾಷ್ಠಮಿ ಸಮಯವಾಗಿತ್ತು ಅವರಿಬ್ಬರು ಮಗು ತಬ್ಬಿಕೊಂಡು ಕಣ್ಣೀರಿಟ್ಟರು' ಎಂದು ಪಿಗ್ಗಿ ಬರೆದುಕೊಂಡಿದ್ದಾರೆ.
ಬಾಲ್ಯದ ಫೋಟೋ ಶೇರ್ ಮಾಡಿ ಪ್ರೀತಿಯ ಅಜ್ಜಿಗೆ ಪ್ರಿಯಾಂಕಾ ಚೋಪ್ರಾ ಬರ್ತಡೇ ವಿಶ್
ಪ್ರಿಯಾಂಕಾ ಮಗಳು:
ನಿಕ್ (Nick Johnas) ಮತ್ತು ಪ್ರಿಯಾಂಕಾ ಮಗಳಿಗೆ ಮಾಲ್ತಿ ಮೇರಿ ಚೋಪ್ರಾ (Malti marie chopra) ಎಂದು ಹೆಸರಿಟ್ಟಿದ್ದಾರೆ. ಹೆಸರು ತುಂಬಾನೇ ಡಿಫರೆಂಟ್ ಆಗಿದ್ದು ಸಂಸ್ಕೃತದ ಪದ (Sanskrit Name) ಎನ್ನಲಾಗಿದೆ. ಪ್ರಿಯಾಂಕಾ ಪತಿ ಜೊತೆ ವಿದೇಶದಲ್ಲಿ ನೆಲೆಸಿದ್ದರೂ ತಮ್ಮ ನಾಡು ನುಡಿ ಮತ್ತು ಸಂಸ್ಕೃತಿ ಬಗ್ಗೆ ಅಪಾರ ಗೌರವ ಹೊಂದಿದ್ದಾರೆ, ಅದಕ್ಕೆ ಸಾಕ್ಷಿ ಆಯ್ತು ಮಗಳ ಹೆಸರು.
'ಮಾಲ್ತಿ ಮೇರಿ ರಾತ್ರಿ 8 ಗಂಟೆಗೆ ಜನಿಸಿದ್ದಾಳೆ. ಮಾಲ್ತಿ ಸಂಸ್ಕೃತ ಮೂಲಕ ಪದವಾಗಿದ್ದು ಹೂವಿನ ಸುವಾಸನೆ, ಬೆಳದಿಂಗಳು ಎಂಬ ಅರ್ಥ ಕೊಡುತ್ತದೆ. ಮೇರಿ ಎಂದರೆ ಲ್ಯಾಟಿಲ್ ಸ್ಟೆಲಾ ಮೇರಿಸ್ ಎಂದು ಇದರ ಅರ್ಥ ಸಮದ್ರದ ತಾರೆ ಎಂದು. ಫ್ರೆಂಚ್‌ನಲ್ಲಿ ಜೀಸ್‌ಸ್ ತಾಯಿ ಎಂಬರ್ಥ ಕೂಡ' ಎಂದು ಹಾಲಿವುಡ್ ಖಾಸಗಿ ಮಾಧ್ಯಮ ವರದಿ ಮಾಡಿದೆ.
ತನ್ನ ಗರ್ಲ್ ಗ್ಯಾಂಗ್ ಮತ್ತು ಮುದ್ದಿನ ನಾಯಿಗಳ ಜತೆ Priyanka Chopra ಔಟಿಂಗ್
ಪ್ರಿಯಾಂಕಾ ಮಾತು:
'ನನ್ನ ಆಸೆಗಳು, ಭಯಗಳನ್ನು ಮಗಳ ಮೇಲೆ ಹೇರಲು ನನಗೆ ಇಷ್ಟವಿಲ್ಲ ನಾನು ಬಯಸುವುದಿಲ್ಲ. ಇದು ನನ್ನ ಮಗು ನಾನು ಶೇಪ್ ಕೊಡುವೆ ಎಂದು ನಾನು ಅಂದುಕೊಳ್ಳುವುದಿಲ್ಲ. ಮಕ್ಕಳು ಅವರ ಜೀವನನ್ನು ಅವರೇ ರೂಪಿಸಿಕೊಳ್ಳಬೇಕು ಸಮಯಕ್ಕೆ ತಕ್ಕಂತೆ ಅವರೇ ಜೀವನ ಕಂಡುಕೊಂಡು ಕಟ್ಟಿಕೊಳ್ಳಬೇಕು. ನನ್ನ ಪೋಷಕರು ಕೂಡ ಇದೇ ಹಾದಿಯಲ್ಲಿ ನಡೆದುಕೊಂಡು ಬಂದವರು' ಎಂದು ಪ್ರಿಯಾಂಕಾ ಮಗಳ ಬಗ್ಗೆ ಈ ಹಿಂದೆ ಸಂದರ್ಶನದಲ್ಲಿ ಮಾತನಾಡಿದ್ದರು.
