ಕುಟುಂಬದಲ್ಲಿ ಮೊದಲ ಹೆಣ್ಣು ಮಗು ಜನನ 1 ಲಕ್ಷ ರೂ ಖರ್ಚು ಮಾಡಿ ಹೆಲಿಕಾಪ್ಟರ್ ಮೂಲಕ ಸ್ವಾಗತ ಕುಟುಂಬದ ಸಂಭ್ರಮಕ್ಕೆ ಪಾರವೇ ಇಲ್ಲ
ಪುಣೆ(ಏ.06): ಪೋಷಕರಾಗುವುದು, ಮುದ್ದು ಕಂದನನ್ನು ಕುಟುಂಬಕ್ಕೆ ಬರಮಾಡಿಕೊಳ್ಳುವುದು ಅತೀವ ಸಂಭ್ರಮದ ಕ್ಷಣ. ಇಲ್ಲೊಂದು ಕುಟುಂಬದ ಸಂತಸಕ್ಕೆ ಪಾರವೇ ಇಲ್ಲ. ಕಾರಣ ಆ ಕುಟುಂಬದಲ್ಲಿ ಇದೇ ಮೊದಲ ಬಾರಿಗೆ ಹೆಣ್ಣ ಮಗುವಿನ ಜನನವಾಗಿದೆ. ಈ ಮುದ್ದು ಕಂದನನ್ನು ಅದ್ಧೂರಿಯಾಗಿ ಸ್ವಾಗತಿಸಲು ಕುಟುಂಬ 1 ಲಕ್ಷ ರೂಪಾಯಿ ಖರ್ಚು ಮಾಡಿ ಹೆಲಿಕಾಪ್ಟರ್ ಮೂಲಕ ಸ್ವಾಗತಿಸಿದ ಘಟನೆ ಪುಣೆಯಲ್ಲಿ ನಡೆದಿದೆ.
ಪುಣೆಯೆ ಶೆಲ್ಗಾಂವ್‌ನಲ್ಲಿನ ಕುಟುಂಬದಲ್ಲಿ ಇದೀಗ ಸಂಭ್ರಮವೋ ಸಂಭ್ರಮ. ಇಡೀ ಕುಟುಂಬದಲ್ಲಿ ಮೊದಲ ಹೆಣ್ಣು ಮಗು. ಈ ಕುಟುಂಬದಲ್ಲಿ ಮದುವೆಯಾದ ಎಲ್ಲರಿಗೂ ಗಂಡು ಮಕ್ಕಳಾಗಿದೆ.ಹೆಣ್ಣು ಮಗು ಬೇಕು ಎಂದು ಹಲವು ದೇವರಲ್ಲಿ ಪಾರ್ಥನೆ ಮಾಡಿದ್ದಾರೆ. ಇವರ ಪ್ರಾರ್ಥನೆ ಫಲಿಸಿದೆ. ದೇವರು ಹೆಣ್ಣು ಮಗುವನ್ನು ಕರುಣಿಸಿದ್ದಾನೆ. ರಾಜಲಕ್ಷ್ಮಿ ಎಂಬ ಮಗು ಜ.22ರಂದು ತಾಯಿಯ ತವರು ಮನೆಯಾದ ಭೋಸಾರಿಯಲ್ಲಿ ಜನಿಸಿತ್ತು. ಮಗುವನ್ನು ತಂದೆಯ ಮನೆಗೆ ಹೆಲಿಕಾಪ್ಟರ್ ಮೂಲಕ ಕರೆತರಲಾಗಿದೆ. ‘ಬಹಳ ಸಮಯದ ನಂತರ ಕುಟುಂಬದಲ್ಲಿ ಹೆಣ್ಣುಮಗು ಜನಿಸಿರುವುದು ಬಹಳ ಸಂತೋಷ ನೀಡಿದೆ. ಹಾಗಾಗಿ ನನ್ನ ಪತ್ನಿ ರಾಜಲಕ್ಷ್ಮಿಯನ್ನು ಹೆಲಿಕಾಪ್ಟರ್‌ನಲ್ಲಿ ನನ್ನ ಮನೆಗೆ ಕರೆತಂದಿದ್ದಾರೆ. ದೇವರ ಆಶೀರ್ವಾದ ಪಡೆದುಕೊಳ್ಳಲು ನಾವು ಮೊದಲು ಜೆಜೂರಿಗೆ ಹೋಗಿದ್ದೆವು. ಅಲ್ಲಿ ನಮಗೆ ಲ್ಯಾಂಡ್ ಆಗಲು ಅನುಮತಿ ಸಿಗಲಿಲ್ಲ. ಆಕಾಶದಿಂದಲೇ ದೇವರಿಗೆ ನಮಸ್ಕರಿಸಿದೆವು ಎಂದು ಮಗುವಿನ ತಂದೆ, ವಕೀಲ ವಿಶಾಲ್ ಜಾರೇಕರ್ ಹೇಳಿದ್ದಾರೆ. ಹೆಲಿಕಾಪ್ಟರ್‌ನ್ನು ಲ್ಯಾಂಡ್ ಮಾಡಲು ಅವರ ತೋಟದಲ್ಲೇ ತಾತ್ಕಾಲಿಕ ಹೆಲಿಪಾಡ್‌ನ್ನು ನಿರ್ಮಾಣ ಮಾಡಲಾಗಿತ್ತು.
ಎಷ್ಟು ಜಾಣೆ ನೋಡಿ ಈ ಕಂದ: ಅತ್ತೇನಾ ಅಪ್ಪಿಕೊಳ್ಳೋಕೆ ಸೆಕ್ಯುರಿಟಿಯಲ್ಲಿ ಪರ್ಮಿಷನ್ ಕೇಳಿ ಹೋದ ಬಾಲೆ
ಆಸ್ಪತ್ಪೆಯಿಂದ ಮಾಹಿತಿ ತಿಳಿದ ಕುಟುಂಬಸ್ಥರು ಈ ಸಂಭ್ರವನ್ನು ಆಚರಿಸಲೇಬೇಕು ಎಂದು ನಿರ್ಧರಿಸಿದ್ದಾರೆ. ಬಳಿಕ ಆಸ್ಪತ್ರೆಯಿಂದ ಡಿಸ್‌ಚಾರ್ಜ್ ದಿನ ಕುಟುಂಬಸ್ಖರು 1 ಲಕ್ಷ ರೂಪಾಯಿ ಬಾಡಿಗೆ ನೀಡಿ ಹೆಲಿಕಾಪ್ಟರ್ ಕಳುಹಿಸಿದ್ದಾರೆ. ನಮ್ಮ ಕುಟುಂಬದ ಮೊದಲ ಹೆಣ್ಣು ಮಗುವಿನ ಸ್ವಾಗತ ಅದ್ಧೂರಿಯಾಗಿರಬೇಕು ಎಂದು ಈ ನಿರ್ಧಾರ ಮಾಡಿದ್ದಾರೆ. ಈ ಹೆಲಿಕಾಪ್ಟರ್ ಮೂಲಕ ಮುದ್ದಾದ ಹೆಣ್ಣು ಮಗು,ಮಗುವಿನ ಪೋಷಕರು ಹಾಗೂ ಕುಟಂಬಸ್ಥರು ಪುಣೆಯ ಮನೆಗೆ ಆಗಮಿಸಿದ್ದಾರೆ.
ಹೆಲಿಕಾಪ್ಟರ್ ಲ್ಯಾಂಡ್ ಆಗಲು ಮನೆಯಿಂದ ಕೆಲ ದೂರದಲ್ಲಿ ಹೊಸ ಹೆಲಿಪ್ಯಾಡ್ ವ್ಯವಸ್ಥೆ ಮಾಡಿದ್ದಾರೆ. ಹೆಲಿಕಾಪ್ಟರ್ ಮೂಲಕ ಬಂದಿಳಿದ ಮಗುವನ್ನು ಆತ್ಮೀಯವಾಗಿ ಬರಮಾಡಿಕೊಂಡು ಕಾರಿನ ಮೂಲಕ ಮನಗೆ ಕರೆದುಕೊಂಡು ಹೋಗಿದ್ದಾರೆ. ಇದಕ್ಕಿಂತ ಸಂಭ್ರಮ ಇನ್ನೇನಿದೆ. ನಮ್ಮ ಕುಟುಂಬದ ಮೊದಲ ಹೆಣ್ಣು ಮಗುವಿಗಾಗಿ ಈ ಅದ್ಧೂರಿ ಸ್ವಾಗತ ನೀಡಿದ್ದೇವೆ ಎಂದು ಮಗುವಿನ ತಂದೆ ವಿಶಾಲ್ ಜರೆಕಾರ್ ಹೇಳಿದ್ದಾರೆ.
ಹೆಣ್ಣು ಮಗುವಿಗೆ ತಂದೆಯಾದ ಉದಿತ್ಯ ನಾರಾಯಣ್ ಪುತ್ರ ಅದಿತ್ಯ!
ವಿಶಾಲ್ ಜರೇಕಾರ್ ಇದೀಗ ಇಡೀ ಗ್ರಾಮಕ್ಕೆ ಸಿಹಿ ಹಂಚಲು ನಿರ್ಧರಿಸಿದ್ದಾರೆ. ಇನ್ನು ಮಗುವಿನ ನಾಮಕರಣವನ್ನು ಮತ್ತಷ್ಟು ಅದ್ಧೂರಿ ಮಾಡಲು ನಿರ್ಧರಿಸಿದ್ದಾರೆ. ಆಕೆ ನಮ್ಮ ಮಹಾರಾಣಿ. ಆಕೆಯ ಪ್ರತಿ ಹಂತ, ಪ್ರತಿ ಹೆಜ್ಜೆಯೂ ನಮಗೆ ಅಮೂಲ್ಯ. ಹೀಗಾಗಿ ಈ ಎಲ್ಲಾ ಕ್ಷಣಗಳನ್ನು ಮತ್ತಷ್ಟು ಸ್ಮರಣೀಯವಾಗಿಸಲು ನಾವು ಪ್ರಯತ್ನಿಸುತ್ತೇವೆ ಎಂದು ವಿಶಾಲ್ ಹೇಳಿದ್ದಾರೆ.
ಹೆಲಿಕಾಪ್ಟರ್ ಮೂಲಕ ಹೆಣ್ಣು ಮಗುವನ್ನು ಬರಮಾಡಿಕೊಳ್ಳುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹಲವರು ಪೋಷಕರು ಹಾಗೂ ಕುಟುಂಬಸ್ಥರ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.
ಹೆಣ್ಣುಶಿಶುಗಳ ಜನನ ಪ್ರಮಾಣ ಹೆಚ್ಚಳ ಉತ್ತಮ ಬೆಳವಣಿಗೆ
ಮೊಟ್ಟಮೊದಲ ಬಾರಿಗೆ ಈ ವರ್ಷ ಪ್ರತಿ 1000 ಗಂಡು ಮಕ್ಕಳ ಜನನಕ್ಕೆ, ಹೆಣ್ಣು ಶಿಶುಗಳ ಸಂಖ್ಯೆ ಜನನ 1063 ಆಗಿದ್ದು, ಸಮಾಜದಲ್ಲಿ ಇದೊಂದು ಅತ್ಯುತ್ತಮ ಬೆಳವಣಿಗೆಯಾಗಿದೆ ಎಂದು ನಗರದ ಸಂಜೀವಿನಿ ಆಸ್ಪತ್ರೆಯ ತಜ್ಞ ವೈದ್ಯೆ ಲತಾ ರಾಮಚಂದ್ರಪ್ಪ ಹೇಳಿದರು.
ನಗರದ ತಾಲೂಕು ಒಕ್ಕಲಿಗರ ಸಂಘದ ಹಾಸ್ಟೆಲ… ಆವರಣದಲ್ಲಿ ಒಕ್ಕಲಿಗರ ಮಹಿಳಾ ಘಟಕದ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಕೊರೋನಾ ಸಂಕಷ್ಟದ ಪರಿಸ್ಥಿತಿಯಲ್ಲಿ ಕರ್ತವ್ಯ ನಿರ್ವಹಿಸಿದ ಮಹಿಳಾ ಸಾಧಕಿಯರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
