Asianet Suvarna News Asianet Suvarna News

ಮೋದಿ ಆದಾಯ 1.6 ಲಕ್ಷ , ಹಾಕೋ ಬಟ್ಟೆ 3 ಕೋಟಿ: ರಾಹುಲ್‌ ಆರೋಪ

ಪ್ರಧಾನಿ ನರೇಂದ್ರ ಮೋದಿ ಅವರ ಮಾಸಿಕ ವೇತನ 1.6 ಲಕ್ಷ ರು. ಆದರೆ ಅವರು ಧರಿಸುವ ಪ್ರತಿಯೊಂದು ಬಟ್ಟೆಯ ದರವೂ 2 -3 ಲಕ್ಷ ರು.ನಷ್ಟಿದೆ. ಇಷ್ಟೊಂದು ದುಡ್ಡು ಎಲ್ಲಿಂದ ಬರುತ್ತದೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಪ್ರಶ್ನಿಸಿದ್ದಾರೆ.

Prime Minister Narendra Modis monthly salary is Rs 1.6 lakh but his cloths costes in crore Rahul Gandhi accusing PM Modi akb
Author
First Published Feb 13, 2024, 11:17 AM IST

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಮಾಸಿಕ ವೇತನ 1.6 ಲಕ್ಷ ರು. ಆದರೆ ಅವರು ಬೆಳಗ್ಗೆ ಒಂದು, ಸಂಜೆ ಒಂದು ಹೊಸ ಡ್ರೆಸ್‌ ಹಾಕ್ತಾರೆ. ಪ್ರತಿಯೊಂದರ ದರವೂ 2 -3 ಲಕ್ಷ ರು.ನಷ್ಟಿದೆ. ಅಂದರೆ ಮಾಸಿಕ ಅವರು ತೊಡುವ ಉಡುಗೆ ಬೆಲೆಯೇ 3 ಕೋಟಿ ರು. ಆಗುತ್ತದೆ. ಅವರಿಗೆ ಇಷ್ಟೊಂದು ದುಡ್ಡು ಎಲ್ಲಿಂದ ಬರುತ್ತದೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಪ್ರಶ್ನಿಸಿದ್ದಾರೆ. ಪ್ರಸಕ್ತ ಛತ್ತೀಸ್‌ಗಢದಲ್ಲಿ ಭಾರತ್‌ ಜೋಡೋ ನ್ಯಾಯ್‌ ಯಾತ್ರೆ ಕೈಗೊಂಡಿರುವ ರಾಹುಲ್‌ ಅಲ್ಲಿ ಈ ಪ್ರಶ್ನೆ ಎತ್ತಿದ್ದಾರೆ.

ರೇಷನ್‌ ಅಂಗಡೀಲಿ ಮೋದಿ ಫೋಟೋ, ಸೆಲ್ಫಿ ಪಾಯಿಂಟ್‌ ಹಾಕಲು ಕೇರಳ ನಕಾರ

ತಿರುವನಂತಪುರ: ಕೇರಳದ ಯಾವುದೇ ನ್ಯಾಯಬೆಲೆ ಅಂಗಡಿಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಫೋಟೋ ಅಳವಡಿಸುವುದಿಲ್ಲ ಎಂದು ಕೇರಳ ಸರ್ಕಾರ ಸಡ್ಡು ಹೊಡೆದಿದೆ. ಕೇಂದ್ರದ ಯೋಜನೆಯಡಿ ಅಕ್ಕಿ ನೀಡುತ್ತಿರುವ ಕಾರಣ ರಾಜ್ಯದ ಎಲ್ಲ 14000 ಪಡಿತರ ಅಂಗಡಿಗಳಲ್ಲಿ ಮೋದಿ ಫೋಟೋ ಅಳವಡಿಕೆಗೆ ಮತ್ತು 550 ಅಂಗಡಿಗಳಲ್ಲಿ ಸೆಲ್ಫಿ ಪಾಯಿಂಟ್‌ ನಿರ್ಮಿಸುವಂತೆ ಕೇಂದ್ರ ಸರ್ಕಾರ ಸೂಚಿಸಿತ್ತು.

News Hour: 3ನೇ ಬಾರಿ ಮಹಾ ದಿಗ್ವಜಯ ಸಾಧಿಸ್ತಾರಾ ಪ್ರಧಾನಿ ಮೋದಿ?

ಆದರೆ ಲೋಕಸಭಾ ಚುನಾವಣೆಗೆ ಕ್ಷಣಗಣನೆ ಆರಂಭವಾಗಿರುವ ಹೊತ್ತಿನಲ್ಲೇ ಕೇಂದ್ರ ಸರ್ಕಾರ ರೂಪಿಸಿರುವ ಈ ಯೋಜನೆ ಚುನಾವಣಾ ಪ್ರಚಾರದ ಭಾಗವಾಗಿದೆ ಎಂದು ದೂರಿರುವ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಇದಕ್ಕೆ ಅವಕಾಶ ನೀಡುವುದಿಲ್ಲ ಎಂದು ವಿಧಾನಸಭೆಯಲ್ಲಿ ಘೋಷಿಸಿದ್ದಾರೆ. ಕೇಂದ್ರ ಸರ್ಕಾರ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡುತ್ತಿದೆ ಎಂದು ಕಳೆದ ವಾರ ಕೇರಳ ಸಚಿವ ಸಂಪುಟದ ಸದಸ್ಯರು ದೆಹಲಿಯಲ್ಲಿ ಪ್ರತಿಭಟನೆ ನಡೆಸಿದ್ದರು.

ಮಂದಿರ ಉದ್ಘಾಟನೆ ವೇಳೆ ಬಡವರಿರಲಿಲ್ಲ: ರಾಹುಲ್

ಕೋರ್ಬಾ: ರಾಮ ಮಂದಿರದ ಬಗ್ಗೆ ಮತ್ತೆ ಕ್ಯಾತೆ ತೆಗೆದಿರುವ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ, 'ರಾಮ ಮಂದಿರ ಉದ್ಘಾಟನೆ ವೇಳೆ ಅಮಿತಾಬ್ ಬಚ್ಚನ್, ಐಶ್ವರ್ಯ ರೈ, ಅಂಬಾನಿ, ಅದಾನಿ ಇದ್ದರು, ಆದರೆ ನಿರುದ್ಯೋಗಿಗಳು, ಕಾರ್ಮಿಕರು, ಸಣ್ಣ ಅಂಗಡಿಯವರು, ಬಡವರು ಇರಲಿಲ್ಲ ಎಂದು ಹೇಳಿದ್ದಾರೆ. ಛತ್ತೀಸ್‌ಗಡದಲ್ಲಿ ಮಾತನಾಡಿದ ಅವರು, 'ರಾಮ ಮಂದಿರಕ್ಕೆ ಬಡವರಿಗೆ ಆಹ್ವಾನ ನೀಡಿರಲಿಲ್ಲ, ರೈತರು, ನಿರುದ್ಯೋಗಿಗಳು, ಸಣ್ಣ ಗೂಡಂಗಡಿಯವರು, ಬಡವರು ಪ್ರಾಣ ಪ್ರತಿಷ್ಠಾಪನೆ ವೇಳೆ ಇರಲಿಲ್ಲ. ಅಲ್ಲಿ ದೊಡ್ಡ ದೊಡ್ಡ ಕೋಟ್ಯಾಧಿಪತಿಗಳು ದೊಡ್ಡ ದೊಡ್ಡ ಭಾಷಣಗಳನ್ನು ನೀಡುತ್ತಿದ್ದರು' ಎಂದು ರಾಹುಲ್ ಹೇಳಿದರು.

ಭಾರತ ಬಯಸುತ್ತಿದೆ ಮೋದಿ 3.O ಸರ್ಕಾರ, ಮ್ಯಾಟ್ರಿಜ್ ಎನ್‌ಸಿ ಸರ್ವೆ ವರದಿ ತಂದ ಸಂಚಲನ!

ಪೇಟಿಎಂ ವಿರುದ್ಧದ ಕ್ರಮ ಮರು ಪರಿಶೀಲನೆಯ ಸಾಧ್ಯತೆ ಇಲ್ಲ: ಆರ್‌ಬಿಐ

ನವದೆಹಲಿ: ಪೇಟಿಎಂ ಬ್ಯಾಂಕ್‌ ವಿರುದ್ಧ ಕೈಗೊಂಡ ಕ್ರಮಗಳನ್ನು ಮರುಪರಿಶೀಲಿಸುವ ಯಾವುದೇ ಸಾಧ್ಯತೆ ಇಲ್ಲ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ ಗವರ್ನರ್‌ ಶಕ್ತಿಕಾಂತ್‌ ದಾಸ್‌ ಹೇಳಿದ್ದಾರೆ. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ದಾಸ್‌,‘ನಾವು ಯಾವುದೇ ಕ್ರಮ ತೆಗೆದುಕೊಂಡರೂ ಅದರ ಪೂರ್ವಭಾವಿಯಾಗಿ ಸರಿಯಾದ ಅಧ್ಯಯನ ಹಾಗೂ ತಯಾರಿ ನಡೆಸಿಯೇ ತೀರ್ಮಾನ ತೆಗೆದುಕೊಂಡಿರುತ್ತೇವೆ. ಹಾಗಾಗಿ ಪೇಟಿಎಂ ಬ್ಯಾಂಕ್‌ ವಿರುದ್ಧ ತೆಗೆದುಕೊಂಡಿರುವ ಕ್ರಮ ಸರಿ ಇದೆ. ಇದನ್ನು ಪರಿಶೀಲಿಸುವ ಆಸ್ಪದವಿಲ್ಲ’ ಎಂದು ಹೇಳಿದರು. ಜೊತೆಗೆ ಆರ್‌ಬಿಐ ಫಿನ್‌ಟೆಕ್‌ ಕ್ಷೇತ್ರದ ಅಭಿವೃದ್ಧಿಗೆ ಸದಾ ಸಿದ್ಧವಾಗಿದೆ ಎಂದು ಹೇಳಿದರು. ಕೆವೈಸಿ ನಿಯಮ ಉಲ್ಲಂಘನೆ ಹಿನ್ನೆಲೆಯಲ್ಲಿ ಫೆ.29ರ ಬಳಿಕ ಬ್ಯಾಂಕ್‌ನ ಹಲವು ಸೇವೆಗಳಿಗೆ ಆರ್‌ಬಿಐ ನಿರ್ಭಂಧ ಹೇರಿದೆ.

Follow Us:
Download App:
  • android
  • ios