Asianet Suvarna News Asianet Suvarna News

ಭಾರತ ಬಯಸುತ್ತಿದೆ ಮೋದಿ 3.O ಸರ್ಕಾರ, ಮ್ಯಾಟ್ರಿಜ್ ಎನ್‌ಸಿ ಸರ್ವೆ ವರದಿ ತಂದ ಸಂಚಲನ!

ಲೋಕಸಭಾ ಚುನಾವಣೆಗೆ ಕೆಲವೇ ತಿಂಗಳು ಮಾತ್ರ ಬಾಕಿ. ಇದೀಗ ದೇಶದ ಜನರ ಅಭಿಪ್ರಾಯವೇನು? ಯಾರ ಪರ ಜರನ ಒಲವು? ಈ ಕುರಿತು ಸಮೀಕ್ಷೆಗಳು ಬಹಿರಂಗವಾಗುತ್ತಿದೆ. ಇದೀಗ ಮ್ಯಾಟ್ರಿಜ್ ಎನ್‌ಸಿ ಸಮೀಕ್ಷೆ ಬಹಿರಂಗವಾಗಿದೆ. ಬಿಜೆಪಿ ನೇತೃತ್ವದ ಎನ್‌ಡಿಎ 3ನೇ ಅವಧಿಗೆ ಸರ್ಕಾರ ರಚಿಸಲಿದೆ. ಮೋದಿ 3ನೇ ಬಾರಿ ಪ್ರಧಾನಿಯಾಗಲಿದ್ದಾರೆ ಎಂದು ಸರ್ವೆ ಹೇಳುತ್ತಿದೆ. ಇಷ್ಟೇ ಅಲ್ಲ ಎನ್‌ಡಿಎ ಎಷ್ಟು ಸ್ಥಾನ ಗೆಲ್ಲಲಿದೆ ಅನ್ನೋ ಭವಿಷ್ಯ ನುಡಿದಿದೆ.

Lok sabha Election 2024 India wants PM Modi 3 o Govt says Matrize NC Survey ckm
Author
First Published Feb 8, 2024, 8:49 PM IST

ನವದೆಹಲಿ(ಫೆ.08) ಲೋಕಸಭಾ ಚುನಾವಣೆ ಸನಿಹದಲ್ಲಿ ರಾಜಕೀಯ ಮೇಲಾಟ ಜೋರಾಗುತ್ತಿದೆ. ಬಿಜೆಪಿ ನೇತೃತ್ವದ ಎನ್‌ಡಿಎ ಅಭಿವೃದ್ಧಿ ವಿಚಾರ, 10 ವರ್ಷದ ಸಾಧನೆ ಮುಂದಿಟ್ಟು ಮತ ಕೇಳಲು ಸಜ್ಜಾಗಿದೆ. ಇತ್ತ ಮೋದಿ ಸರ್ಕಾರ ಮಣಿಸಿ ಅಧಿಕಾರಕ್ಕೇರಲು ಕಾಂಗ್ರೆಸ್ ಒಳಗೊಂಡ ಇಂಡಿಯಾ ಮೈತ್ರಿ ಕೂಟ ಭರ್ಜರಿ ತಯಾರಿ ನಡೆಸುತ್ತಿದೆ. ಇದರ ನಡುವೆ ದೇಶದ ಜನರ ಅಭಿಪ್ರಾಯ ಹೇಗಿದೆ ಅನ್ನೋದನ್ನು ಮ್ಯಾಟ್ರಿಜ್ ಎನ್‌ಸಿ ಸರ್ವೇ ಬಹಿರಂಗಪಡಿಸಿದೆ. ಭಾರತ ಮೂರನೇ ಅವಧಿಗೆ ನರೇಂದ್ರ ಮೋದಿಯನ್ನು ಪ್ರಧಾನಿಯಾಗಿ ನೋಡಲು ಬಯಸುತ್ತಿದ್ದಾರೆ ಎಂದು ಮ್ಯಾಟ್ರಿಜ್ ಸರ್ವೇ ಹೇಳುತ್ತಿದೆ.

ಬಿಜೆಪಿ ನೇತೃತ್ವದ ಎನ್‌ಡಿಎ 2024ರ ಲೋಕಸಭಾ ಚುನಾವಣೆಯಲ್ಲಿ 366 ಸ್ಥಾನ ಗೆಲ್ಲಲಿದೆ ಎಂದು ಮ್ಯಾಟ್ರಿಜ್ ಎನ್‌ಸಿ ಸರ್ವೇ ವರದಿ ನೀಡಿದೆ. ಅಬ್ ಕಿ ಬಾರ್ 400 ಪಾರ್ ಅನ್ನೋ ಬಿಜೆಪಿ ಘೋಷಣಾ ವಾಕ್ಯದ ಪ್ರಕಾರ ಎನ್‌ಡಿಎ 400ಕ್ಕಿಂತ ಹೆಚ್ಚು ಸ್ಥಾನ ಗೆಲ್ಲಲಿದೆ ಅನ್ನೋ ವಿಶ್ವಾಸ. ಆದರೆ ಸರ್ವೆ ವರದಿ 366 ಸ್ಥಾನ ಗೆಲ್ಲಲಿದೆ ಎಂದಿದೆ. ಪ್ರಧಾನಿ ಮೋದಿ ಬಜೆಟ್ ಭಾಷಣದ ವೇಳೆ ಬಿಜೆಪಿ ಏಕಾಂಗಿಯಾಗಿ 370 ಸ್ಥಾನ, ಎನ್‌ಡಿಎ ಒಟ್ಟಾಗಿ 400ಕ್ಕಿಂತ ಹೆಚ್ಚು ಸ್ಥಾನ ಗೆಲ್ಲಲಿದೆ ಎಂದು ಮೋದಿ ಹೇಳಿದ್ದರು.

ಕರ್ನಾಟಕದಲ್ಲಿ ಬಿಜೆಪಿ ಮೈತ್ರಿಗೆ 24 ಸ್ಥಾನ, ಇಂಡಿಯಾ ಒಕ್ಕೂಟ 4; MOTN ಚುನಾವಣಾ ಸಮೀಕ್ಷೆ ಬಹಿರಂಗ!

ಇಂಡಿಯಾ ಮೈತ್ರಿ ಒಕ್ಕೂಟ ಒಟ್ಟು 104 ಸ್ಥಾನ ಗೆಲ್ಲಲಿದೆ ಎಂದು ಮ್ಯಾಟ್ರಿಜ್ ಎನ್‌ಸಿ ಭವಿಷ್ಯ ನುಡಿದಿದೆ. ಇಂಡಿಯಾ ಒಕ್ಕೂಟ ಶೇಕಾಡ 26.8 ರಷ್ಟು ವೋಟ್ ಶೇರ್ ಪಡೆದರೆ, ಎನ್‌ಡಿಎ ಶೇಕಡಾ 41.8 ರಷ್ಟು ವೋಟ್ ಶೇರ್ ಪಡೆಯಲಿದೆ ಎಂದು ಸಮೀಕ್ಷೆ ಹೇಳುತ್ತಿದೆ. ಮೂರನೇ ಬಾರಿಗೆ ಬಿಜೆಪಿ ಸರ್ಕಾರದಲ್ಲಿ ಮತ್ತೆ ಉತ್ತರ ಪ್ರದೇಶ ಪ್ರಮುಖ ಪಾತ್ರ ನಿರ್ವಹಿಸಲಿದೆ ಎಂದು ಸಮೀಕ್ಷೆ ಹೇಳುತ್ತಿದೆ. ಉತ್ತರ ಪ್ರದೇಶದ 80 ಲೋಕಸಭಾ ಸ್ಥಾನಗಳ ಪೈಕಿ 70 ಸ್ಥಾನಗಳನ್ನು ಬಿಜೆಪಿ ಗೆಲ್ಲಲಿದೆ ಎಂದು ಸಮೀಕ್ಷಾ ವರದಿ ಹೇಳಿದೆ.

ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ತೃಣಮೂಲ ಕಾಂಗ್ರೆಸ್ 42 ಸ್ಥಾನಗಳ ಪೈಕಿ 26 ಸ್ಥಾನ ಗೆಲ್ಲಲಿದೆ ಎಂದು ಸಮೀಕ್ಷೆ ಹೇಳಲಿದೆ. ಈ ಸಂಖ್ಯೆ ಇಂಡಿಯಾ ಮೈತ್ರಿ ಕೂಟದ ಬಿರುಕು ಮತ್ತಷ್ಟು ಹೆಚ್ಚಿಸುವ ಸಾಧ್ಯತೆ ಇದೆ. ಬಿಹಾರದಲ್ಲಿ ಎನ್‌ಡಿಎ 40 ಸ್ಥಾನಗಳ ಪೈಕಿ 35 ಸ್ಥಾನ ಗೆಲ್ಲಲಿದೆ ಎಂದು  ಮ್ಯಾಟ್ರಿಜ್ ಸಮೀಕ್ಷೆ ವರದಿ ನೀಡಿದೆ. ದಕ್ಷಿಣ ಭಾರತದಲ್ಲಿ ಕರ್ನಾಟಕದ ಹೊರತುಪಡಿಸಿದರೆ, ತೆಲಂಗಾಣದಲ್ಲಿ ಎನ್‌ಡಿಎ ಪ್ರಯತ್ನ  ಫಲಿಸಲಿದೆ. ಆದರೆ ಆಂಧ್ರ ಪ್ರದೇಶ, ತಮಿಳುನಾಡು ಹಾಗೂ ಕೇರಳದಲ್ಲಿ ಇಂಡಿಯಾ ಒಕ್ಕೂಟವೇ ಪ್ರಾಬಲ್ಯ ಸಾಧಿಸಲಿದೆ ಎಂದು ವರದಿಗಳು ಹೇಳುತ್ತಿದೆ.

ಮೈತ್ರಿ ನೆರವು ನಿರೀಕ್ಷಿಸುತ್ತಾ ಲೋಕಸಭೆಗೆ 3 ಅಭ್ಯರ್ಥಿಗಳ ಹೆಸರು ಘೋಷಿಸಿದ ಆಪ್, ಗೊಂದಲ ಡಬಲ್!

Follow Us:
Download App:
  • android
  • ios