Asianet Suvarna News Asianet Suvarna News

ಚಿರತೆ ದಾಳಿಯಿಂದ ಮರಿಗಳನ್ನು ರಕ್ಷಿಸಿದ ಮುಳ್ಳುಹಂದಿ... ವಿಡಿಯೋ ಸಖತ್ ವೈರಲ್

ಮುಳ್ಳುಹಂದಿ ಜೋಡಿಯೊಂದು ಚಿರತೆಯ ದಾಳಿಯಿಂದ ತಮ್ಮ ಎರಡು ಮರಿಗಳನ್ನು ಬಹಳ ರೋಚಕವಾಗಿ ರಕ್ಷಿಸಿವೆ. ಮುಳ್ಳುಹಂದಿ ಪೋಷಕರ ಈ ಸಾಹಸ ನೋಡಿ ಚಿರತೆಯ ಬಂದ ದಾರಿಗೆ ಸುಂಕವಿಲ್ಲವೆಂದು ದೂರ ಓಡಿದೆ. 

Porcupine saved its babies from leopard attack, rare video of wildlife goes viral akb
Author
First Published Jan 23, 2023, 8:10 PM IST

ಮಕ್ಕಳ ರಕ್ಷಣೆಯ ವಿಚಾರ ಬಂದಾಗ ಮನುಷ್ಯರೇ ಇರಲಿ ಪ್ರಾಣಿಗಳೇ ಇರಲಿ ಒಂದು ಹೆಜ್ಜೆ ಮುಂದೆ ಇರುತ್ತವೆ.  ತಮ್ಮ ಕರುಳ ಕುಡಿಗಳ ರಕ್ಷಣೆಗೆ ತಮ್ಮ ಜೀವವನ್ನೇ ಪಣಕ್ಕಿಡುತ್ತವೆ. ಮನುಷ್ಯರಂತೆ ಪ್ರಾಣಿಗಳು ಕೂಡ ತಮ್ಮ ಮರಿಗಳನ್ನು ಮಾರಕ ದಾಳಿಗಳಿಂದ ರಕ್ಷಿಸುವ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ವೈರಲ್ ಆಗುತ್ತಿರುತ್ತವೆ. ಪ್ರಾಣಿಯೇ ಆಗಲಿ ಮನುಷ್ಯರೇ ಆಗಲಿ ಪೋಷಕರು ಎಂದಿಗೂ ಪೋಷಕರೇ ಎಂಬುದನ್ನು  ಇಂತಹ ವಿಡಿಯೋಗಳು ಆಗಾ ಸಾಬೀತುಪಡಿಸುತ್ತವೆ. ಅದೇ ರೀತಿಯ ಮತ್ತೊಂದು ವಿಡಿಯೋ ಈಗ ವೈರಲ್ ಆಗಿದೆ. ಮುಳ್ಳುಹಂದಿ ಜೋಡಿಯೊಂದು ಚಿರತೆಯ ದಾಳಿಯಿಂದ ತಮ್ಮ ಎರಡು ಮರಿಗಳನ್ನು ಬಹಳ ರೋಚಕವಾಗಿ ರಕ್ಷಿಸಿವೆ. ಮುಳ್ಳುಹಂದಿ ಪೋಷಕರ ಈ ಸಾಹಸ ನೋಡಿ ಚಿರತೆಯ ಬಂದ ದಾರಿಗೆ ಸುಂಕವಿಲ್ಲವೆಂದು ದೂರ ಓಡಿದೆ. 

ಈ ವಿಡಿಯೋವನ್ನು ಭಾರತೀಯ ಆಡಳಿತ ಸೇವೆಯ ಅಧಿಕಾರಿ ಸುಪ್ರಿಯಾ ಸಾಹು (Supriya Sahu) ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ವಿಡಿಯೋದಲ್ಲಿ ಕಾಣಿಸುವಂತೆ ಎರಡು ಮುಳ್ಳುಹಂದಿಗಳು ತಮ್ಮೆರಡು ಮರಿಗಳೊಂದಿಗೆ ರಸ್ತೆ ದಾಟುತ್ತಿರುತ್ತವೆ. ಈ ವೇಳೆ ಚಿರತೆಯೊಂದು ಇವುಗಳ ಮರಿಗಳ ಮೇಲೆ ದಾಳಿಗೆ ಮುಂದಾಗಿದೆ. ಕೂಡಲೇ ಜಾಗರೂಕರಾದ ಹಿರಿಯ ಮುಳ್ಳುಹಂದಿಗಳು (Porcupine) ತಮ್ಮೆರಡು ಮರಿಗಳನ್ನು ತಮ್ಮಿಬ್ಬರ ನಡುವೆ ನಿಲ್ಲಿಸಿಕೊಂಡು ಸುತ್ತಲೂ ತಿರುಗುವ ಮೂಲಕ ಚಿರತೆ ಬಾಯಿಗೆ ಸಿಗದಂತೆ ರಕ್ಷಣೆ ಮಾಡಿವೆ.  ಆದರೂ ಚಿರತೆ ಹಲವು ಬಾರಿ ಮರಿಗಳ ಮೇಲೆ ದಾಳಿ ಮಾಡುವ ತನ್ನ ಪ್ರಯತ್ನ ಮುಂದುವರೆಸಿದ್ದು, ಕೊನೆಗೆ ವಿಫಲವಾಗಿ ಆ ಸ್ಥಳದಿಂದ ಹೊರಟು ಹೋಗಿದೆ. 

ಮುಳ್ಳುಹಂದಿಯನ್ನು ಬಿಡಿಸಿದಂತೆ ಸಹಿ ಹಾಕಿದ ಸರ್ಕಾರಿ ಅಧಿಕಾರಿ

ಮುಳ್ಳುಹಂದಿಗಳು ತಮ್ಮ ಮರಿಗಳಿಗೆ ಜೆಡ್ ಪ್ಲಸ್ ಭದ್ರತೆಯನ್ನು (Z class security) ನೀಡಿವೆ.   ಚಿರತೆಯ ಮುಂದೆ ತಮ್ಮ ಮರಿಗಳ ರಕ್ಷಣೆಗೆ ವೀರಾವೇಶದಿಂದ ಹೋರಾಡಿ ತಮ್ಮ ಮರಿಗಳ ಮುಟ್ಟಲು ಪ್ರಯತ್ನಿಸಿದ ಚಿರತೆಯ ಯತ್ನವನ್ನು ವಿಫಲಗೊಳಿಸಿವೆ. ಇದೊಂದು ವಿಸ್ಮಯಕಾರಿ ದೃಶ್ಯ. ವಿಡಿಯೋ ಸ್ಥಳ ತಿಳಿದಿಲ್ಲ, ಮುಳ್ಳುಹಂದಿ ಮರಿಗಳನ್ನು ಪೊರ್ಕ್ಯುಪೆಟ್ (porcupette) ಎಂದು ಕರೆಯುತ್ತಾರೆ ಎಂದು ಸುಪ್ರಿಯಾ ಸಾಹು ಅವರು ಬರೆದುಕೊಂಡಿದ್ದಾರೆ. ಈ ವಿಡಿಯೋವನ್ನು 4 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ.  ಅನೇಕರು ಮರಿಗಳ ರಕ್ಷಣೆಗಾಗಿ ಮುಳ್ಳುಹಂದಿಯ ಹೋರಾಟವನ್ನು ಶ್ಲಾಘಿಸಿದ್ದಾರೆ. 

ಮುಳ್ಳು ಹಂದಿಯ ಬೇಟೆಯಾಡಲು ಬಂದ ಚಿರತೆ, ಪ್ರತಿದಾಳಿಗೆ ಹೆದರಿ ಪರಾರಿ!

ಮತ್ತೆ ಕೆಲವರು ಚಿರತೆಯ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಏಕೆಂದರೆ ಮುಳ್ಳುಹಂದಿಗಳು ತಮ್ಮನ್ನು ರಕ್ಷಿಸಿಕೊಳ್ಳಲು ತಮ್ಮ ಮೈ ಮೇಲಿನ ಮುಳ್ಳುಗಳನ್ನು ಬಾಣಗಳಂತೆ ಶತ್ರುವಿನತ್ತೆ ಬಿಟ್ಟು ಬಿಡುತ್ತವೆ. ಇದರ ಮುಳ್ಳಿನ ಹರಿತಕ್ಕೆ  ಶತ್ರು ಪ್ರಾಣಿಯ ದೇಹ ತೂತಾಗುವುದು.  ಇತರ ಪ್ರಾಣಿಗಳ ಮುಖ ಪೂರ್ತಿ ಮುಳ್ಳುಗಳು ಅಂಟಿಕೊಳ್ಳುವವು.  ಆದರೆ ಇಲ್ಲಿ ಚಿರತೆಗೆ ಅಂತಹ ಹಾನಿ ಏನು ಆದಂತೆ ಕಾಣುತ್ತಿಲ್ಲ. ಇದೇ ಕಾರಣಕ್ಕೆ ಕೆಲವರು ಚಿರತೆಗೆ ಮುಳ್ಳು ಹಂದಿಯ ಮುಳ್ಳಿನ ಭಯದ ಬಗ್ಗೆ ಗೊತ್ತಿಲ್ಲವೇ ಎಂದು ಪ್ರಶ್ನಿಸಿದ್ದಾರೆ.  

 

Follow Us:
Download App:
  • android
  • ios