Asianet Suvarna News Asianet Suvarna News

ಬೆಂಗಳೂರಿನಲ್ಲಿ ಹಳಿ ದಾಟುವಾಗ ಜಾರಿ ಬಿದ್ದ ವ್ಯಕ್ತಿಯ ಜೀವ ಕಾಪಾಡಿದ ಪೊಲೀಸ್, ವಿಡಿಯೋ ವೈರಲ್!

  • ಬೆಂಗಳೂರಿನ ಕೆಆರ್ ಪುರಂ ರೈಲು ನಿಲ್ದಾಣದಲ್ಲಿ ನಡೆದ ಘಟನೆ
  • ರೈಲು ಆಗಮಿಸುತ್ತಿದ್ದಂತೆ ಹಳಿ ದಾಟುವಾಗ ಜಾರಿ ಬಿದ್ದ ವ್ಯಕ್ತಿ
  • ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸ್, ಅಪಾಯದಿಂದ ಪಾರು
Police save passenger life who try to cross railway track and fell down before train reach platform in KR Puram Bengaluru ckm
Author
Bengaluru, First Published Jul 16, 2022, 12:16 PM IST

ಬೆಂಗಳೂರು(ಜು.16): ರೈಲು ಹತ್ತುವಾಗ ಹಾಗೂ ಇಳಿಯುವಾಗ ಅಂತರದ ಬಗ್ಗೆ ಗಮನವಿರಲಿ, ರೈಲು ಹಳಿ ದಾಟುವಾಗ ಸ್ಕೈವಾಕ್, ಪಾದಾಚರಿ ಮಾರ್ಗಗಳನ್ನೇ ಬಳಸಿ. ಈ ಮಾತುಗಳನ್ನು ರೈಲು ನಿಲ್ದಾಣ, ಮೆಟ್ರೋ ನಿಲ್ದಾಣದಲ್ಲಿ ಪದೇ ಪದೇ ಕೇಳುತ್ತಲೇ ಇರುತ್ತೇವೆ. ಆದರೆ ನಿರ್ಲಕ್ಷ್ಯವಹಿಸದಾಗ ಅದೆಷ್ಟೋ ದುರ್ಘಟನೆಗಳು ಸಂಭವಿಸಿದೆ. ಇದೀಗ ಬೆಂಗಳೂರಿನ ಕೆಆರ್ ಪುರಂ ರೈಲ್ವೇ ನಿಲ್ದಾಣದಲ್ಲಿ ಪೊಲೀಸರ ಧೈರ್ಯ ಹಾಗೂ ಸಾಹಸಕ್ಕೆ ಪ್ರಯಾಣಿಕ ಅಪಾಯದಿಂದ ಪಾರಾದ ಘಟನೆ ನಡೆದಿದೆ.  ಕೆಆರ್ ಪುರಂ ರೈಲು ನಿಲ್ದಾಣದ ಫ್ಲಾಟ್‌ ಮೇಲಿದ್ದ ವ್ಯಕ್ತಿ ನೇರವಾಗಿ ರೈಲು ಹಳಿ ದಾಟಲು ಮುಂದಾಗಿದ್ದಾನೆ. ಪ್ಲಾಟ್‌ಫಾರ್ಮ್‌ನಿಂದ ಕೆಳಗಿಳಿದ ವ್ಯಕ್ತಿ ಆಯ ತಪ್ಪಿ ಬಿದ್ದಿದ್ದಾನೆ. ಇದನ್ನು ಗಮನಿಸಿದ ಪೊಲೀಸ್ ತಕ್ಷಣ ಓಡೋಡಿ ಬಂದಿದ್ದಾರೆ. ಇತ್ತ ರೈಲು ಆಗಮಿಸುತ್ತಿದ್ದಂತೆ ವ್ಯಕ್ತಿಯನ್ನು ಹಳಿಯಿಂದ ಮೇಲತ್ತಿ ಜೀವ ಕಾಪಾಡಿದ್ದಾರೆ. ಈ ಭಯಾನಕ ವಿಡಿಯೋ ವೈರಲ್ ಆಗಿದೆ.

ಕೆಆರ್ ಪುರಂ ರೈಲು ನಿಲ್ದಾಣದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಪ್ರದೀಪ್ ಕುಮಾರ್ ಹಾಗೂ ಎಎಸ್ಐ ರವಿ ಜಿಡಿ ರೈಲು ಪ್ಲಾಟ್‌ಫಾರ್ಮ್‌ಗೆ ಆಗಮಿಸುತ್ತಿದ್ದಂತೆ ಒಂದು ಬಾರಿ ಹಳಿಯ ಸುತ್ತ ಕಣ್ಣಾಡಿಸಿದ್ದಾರೆ. ಈ ವೇಳೆ ವ್ಯಕ್ತಿಯೋರ್ವ ಹಳಿ ದಾಟಲು ಯತ್ನಿಸಿರುವುದು ಗಮನಕ್ಕೆ ಬಂದಿದೆ. ಇನ್ನೇನು ರೈಲು ಆಗಮಿಸುತ್ತಿದೆ ಅನ್ನುವಷ್ಟರಲ್ಲಿ ಗಾಬರಿಯಾದ ವ್ಯಕ್ತಿ ರೈಲು ಹಳಿಯಲ್ಲೇ ಜಾರಿ ಬಿದ್ದಿದ್ದಾನೆ.  ಇದನ್ನು ಗಮನಿಸಿದ ಪೊಲೀಸ್ ಓಡೋಡಿ ಬಂದಿದ್ದಾರೆ. ವ್ಯಕ್ತಿಯ ಹಿಡಿದು ಮೇಲಕ್ಕಿತ್ತಿ ಅಪಾಯದಿಂದ ಪಾರು ಮಾಡಿದ್ದಾರೆ.

 

ಅಪಘಾತದಲ್ಲಿ ಪೋಷಕರು ನಿಧನ, ದೇಶದಲ್ಲೇ ಮೊದಲ ಬಾರಿಗೆ 10 ತಿಂಗಳ ಮಗುವಿಗೆ ನೌಕರಿ

ರೈಲ್ವೇ ನಿಲ್ದಾಣದಲ್ಲಿ ಅತ್ಯಂತ ಜಾಗರೂಕತೆಯಿಂದ ತೆರಳಬೇಕು. ಇದಕ್ಕಾಗಿಯೇ ಸೂಚನಾ ಫಲಕಗಳನ್ನು ಅಳವಡಿಸಿರುತ್ತಾರೆ. ಇಷ್ಟೇ ಅಲ್ಲ ಸೂಚನೆಗಳನ್ನು ಪದೇ ಪದೆ ನೀಡುತ್ತಲೇ ಇರುತ್ತಾರೆ. ಆದರೆ ಇವೆಲ್ಲವನ್ನು ನಿರ್ಲಕ್ಷಿಸಿ ತೆರಳಿದರೆ ಅಪಾಯ ಕಟ್ಟಿಟ್ಟ ಬುತ್ತಿ. ರೈಲು ಹಳಿಯ ಮೇಲೆ ಇಳಿಯದಂತೆ ಕಟ್ಟು ನಿಟ್ಟಿನ ಸೂಚನೆ ಇದೆ. ಮತ್ತೊಂದು ಬದಿಗೆ ತೆರಳಲು ಸ್ಕೈ ವಾಕ್ ಅಥಾವ ಸುರಕ್ಷಿತ ಮಾರ್ಗಗಳನ್ನು ಮಾಡಲಾಗಿರುತ್ತದೆ. ಆದರೆ ಹಲವರು ಸಮಯದ ಉಳಿತಾಯಕ್ಕಾಗಿ ನೇರವಾಗಿ ಹಳಿಯಿಂದಲೇ ಮತ್ತೊಂದು ಪ್ಲಾಟ್‌ಫಾರ್ಮ್ ತೆರಳುತ್ತಾರೆ. ಇದು ಅಪಾಯತಂದೊಡ್ಡಲಿದೆ.  ಈ ರೀತಿ ಹಲವು ಘಟನೆಗಳು ಸಂಭವಿಸಿದೆ. ಹಲವು ಬಾರಿ ಪೊಲೀಸರ ಸಾಹಸಕ್ಕೆ, ಧೈರ್ಯಕ್ಕೆ ಹಾಗೂ ಸಮಯಪ್ರಜ್ಞೆಗೆ ಪ್ರಯಾಣಿಕರ ಪ್ರಾಣ ಉಳಿದಿದೆ. ಆದರೆ ಒಂದು ಕ್ಷಣ ತಡವಾದರೆ ಅಪಘಾತವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

 

 

ಹಳಿಗೆ ಬಿದ್ದ ವೃದ್ಧನ ಕ್ಷಣದಲ್ಲಿ ರಕ್ಷಿಸಿ ಸಾಹಸ ಮೆರೆದ ವ್ಯಕ್ತಿ

ವೃದ್ಧೆ ಕಾಪಾಡಿದ ಪೊಲೀಸ್
ಬೆಂಗಳೂರಿನಿಂದ ಮೀರಜ್‌ಗೆ ಹೊರಟಿದ್ದ ರೈಲಿನಿಂದ ಆಕಸ್ಮಿಕವಾಗಿ ಜಾರಿಬಿದ್ದು ರೈಲಿನ ಚಕ್ರಕ್ಕೆ ಸಿಲುಕುತ್ತಿದ್ದ 60ರ ಹರೆಯದ ವೃದ್ಧೆಯನ್ನು ಸ್ಥಳದಲ್ಲೇ ನಿಂತಿದ್ದ ರೈಲ್ವೆ ಪೊಲೀಸರಿಬ್ಬರು ತಕ್ಷಣ ಸಮಯಪ್ರಜ್ಞೆ ಮೆರೆದು ರಕ್ಷಿಸಿದ ಘಟನೆ ದಾವಣಗೆರೆ ರೈಲ್ವೆ ನಿಲ್ದಾಣದಲ್ಲಿ ನಡೆದಿತ್ತು. ವಿಶ್ವ ಮಾನವ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಬೆಂಗಳೂರಿನಿಂದ ಮೀರಜ್‌ಗೆ 60 ವರ್ಷದ ವೃದ್ಧೆ ಪ್ರಯಾಣ ಮಾಡುತ್ತಿದ್ದರು. ದಾವಣಗೆರೆ ರೈಲ್ವೆ ನಿಲ್ದಾಣದಲ್ಲಿ ನೀರು ಕುಡಿಯಲೆಂದು ವೃದ್ಧೆ ಇಳಿದಿದ್ದಾರೆ. ಅದೇ ಹೊತ್ತಿಗೆ ರೈಲು ಹೊರಟಿದೆ. ಓಡಿ ಬಂದು ರೈಲು ಹತ್ತುವ ಪ್ರಯತ್ನ ಮಾಡಿದ್ದಾರೆ. ಆದರೆ, ಬೋಗಿಯ ಪ್ರವೇಶ ದ್ವಾರದ ಬಳಿ ಕೈ ಹಿಡಿತ ತಪ್ಪಿ, ಕಾಲು ಜಾರಿ ಕೆಳಗೆ ಬಿದ್ದಿದ್ದಾರೆ . ವೃದ್ಧೆಯು ಆಯತಪ್ಪಿ ರೈಲಿನಡಿ ಸಿಲುಕುವುದನ್ನು ರೈಲ್ವೆ ಪೊಲೀಸ್‌ ಕಾನ್‌ಸ್ಟೇಬಲ್‌ಗಳಾದ ಚೇತನ್‌, ಹಾಲೇಶ್‌ ಅವರ ಸಮಯಪ್ರಜ್ಞೆಯಿಂದ ವೃದ್ಧೆಯನ್ನು ಅಪಾಯದಿಂದ ಪಾರುಮಾಡಲ್ಲಿ ಯಶಸ್ವಿಯಾಗಿದ್ದಾರೆ.  ನಿಲ್ದಾಣದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ವೃದ್ಧೆಯ ಪ್ರಾಣ ರಕ್ಷಿಸಿದ ಪೊಲೀಸರಿಬ್ಬರೂ ಧೈರ್ಯ ಹೇಳಿ, ಸಮಾಧಾನಪಡಿಸಿದರು. ಅಷ್ಟರಲ್ಲೇ ವಿಶ್ವಮಾನವ ಎಕ್ಸಪ್ರೆಸ್‌ ರೈಲು ಕ್ಷಣಕ್ಷಣಕ್ಕೂ ತನ್ನ ವೇಗ ಹೆಚ್ಚಿಸಿಕೊಂಡು, ಹರಿಹರದ ಕಡೆಗೆ ಗಾಳಿ ಸೀಳಿಕೊಂಡು ಹೊರಟು ನಿಂತಾಗಿತ್ತು. ಘಟನೆ ಕಂಡ ಜನರು ಪೊಲೀಸರ ಸಮಯಪ್ರಜ್ಞೆಗೆ ಮೆಚ್ಚುಗೆ ಸೂಚಿಸಿದರು. 

Follow Us:
Download App:
  • android
  • ios