Asianet Suvarna News Asianet Suvarna News

ಹಳಿಗೆ ಬಿದ್ದ ವೃದ್ಧನ ಕ್ಷಣದಲ್ಲಿ ರಕ್ಷಿಸಿ ಸಾಹಸ ಮೆರೆದ ವ್ಯಕ್ತಿ

ರೈಲ್ವೆ ಸಿಬ್ಬಂದಿ ಎಷ್ಟು ಎಚ್ಚರಿಕೆ ನೀಡಿದರೂ, ರೈಲು ಬರುತ್ತಿರುವುದನ್ನು ಗಮನಿಸದೇ ಹಳಿ ದಾಟುವುದು, ಚಲಿಸುತ್ತಿರುವ ರೈಲಿನಿಂದ ಕೆಳಗಿಳಿಯುವುದು ಮುಂತಾದವುಗಳನ್ನು ಮಾಡಲು ಹೋಗಿ ಜನರು ಆಗಾಗ ತಮ್ಮನ್ನು ತಾವೇ ಅಪಾಯಕ್ಕೀಡು ಮಾಡಿಕೊಳ್ಳುತ್ತಾರೆ.

ರೈಲ್ವೆ ಸಿಬ್ಬಂದಿ ಎಷ್ಟು ಎಚ್ಚರಿಕೆ ನೀಡಿದರೂ, ರೈಲು ಬರುತ್ತಿರುವುದನ್ನು ಗಮನಿಸದೇ ಹಳಿ ದಾಟುವುದು, ಚಲಿಸುತ್ತಿರುವ ರೈಲಿನಿಂದ ಕೆಳಗಿಳಿಯುವುದು ಮುಂತಾದವುಗಳನ್ನು ಮಾಡಲು ಹೋಗಿ ಜನರು ಆಗಾಗ ತಮ್ಮನ್ನು ತಾವೇ ಅಪಾಯಕ್ಕೀಡು ಮಾಡಿಕೊಳ್ಳುತ್ತಾರೆ. ರೈಲು ಹಳ್ಳಿಗಳ ಮೇಲೆ, ರೈಲು ನಿಲ್ದಾಣಗಳಲ್ಲಿ ಸಾವಿನ ದವಡೆಯಿಂದ ಪಾರಾದ, ಕೆಲವು ಮಹಾನುಭವರು ಅಪಾಯಕ್ಕೊಳಗಾದವರನ್ನು ಪಾರು ಮಾಡಿದ ಅನೇಕ ವಿಡಿಯೋಗಳನ್ನು ನಾವು ನೋಡಿದ್ದೇವೆ. ಅದೇ ರೀತಿ ಇಲ್ಲೊಬ್ಬರು ವೃದ್ಧರು ರೈಲು ಬರುವುದನ್ನು ಗಮನಿಸದೆ ಹಳಿಗೆ ಇಳಿದಿದ್ದು, ಇದನ್ನು ಗಮನಿಸಿದ ರೈಲು ನಿಲ್ದಾಣದಲ್ಲಿದ್ದ ವ್ಯಕ್ತಿಯೊಬ್ಬ ಹಳಿಗೆ ಇಳಿದು ವೃದ್ಧನನ್ನು ಎತ್ತಿಕೊಂಡು ಬೇರೆಡೆ ಸಾಗಿಸಿ ರಕ್ಷಿಸಿದ್ದಾನೆ. ಇದರ ವಿಡಿಯೋ ಈಗ ವೈರಲ್ ಆಗಿದೆ. 

Video Top Stories