ಸಂಚಾರಿ ನಿಯಮ ಉಲ್ಲಂಘಿಸಿದ ಕಾರಣಕ್ಕೆ 20 ವರ್ಷದ ಸ್ಪೈಡರ್‌ಮ್ಯಾನ್‌ನನ್ನು ಪೊಲೀಸರು ಬಂಧಿಸಿದ್ದಾರೆ.  

ನವದೆಹಲಿ: ಸಂಚಾರಿ ನಿಯಮ ಉಲ್ಲಂಘಿಸಿದ ಕಾರಣಕ್ಕೆ 20 ವರ್ಷದ ಸ್ಪೈಡರ್‌ಮ್ಯಾನ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಸ್ಪೈಡರ್‌ಮ್ಯಾನ್‌ ವೇಷ ಧರಿಸಿ ಹವಾಯ್ ಚಪ್ಪಲ್ ಹಾಕೊಂಡು 20 ವರ್ಷದ ಯುವಕನೋರ್ವ ಸ್ಕಾರ್ಪಿಯೋ ಗಾಡಿಯ ಬೊನೆಟ್‌ ಮೇಲೆ ಕುಳಿತು ಪ್ರಯಾಣಿಸುತ್ತಿದ್ದ, ಈ ಹಿನ್ನೆಲೆಯಲ್ಲಿ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಬಂಧಿತ ಯುವಕನನ್ನು ದೆಹಲಿ ನಜಫ್‌ಗರ್‌ ನಿವಾಸಿ ಆದಿತ್ಯ ಎಂದು ಗುರುತಿಸಲಾಗಿದೆ. ಈತ ದ್ವಾರಕ ರಸ್ತೆಯಲ್ಲಿ ಕಾರಿನ ಬೊನೆಟ್ ಮೇಲೆ ಪ್ರಯಾಣಿಸುತ್ತಿದ್ದ. ಈ ಕಾರಿನ ಬಗ್ಗೆ ಹಾಗೂ ಬೊನೆಟ್‌ ಮೇಲೆ ರೈಡ್ ಮಾಡುತ್ತಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ದೂರುಗಳು ಬಂದ ಹಿನ್ನೆಲೆಯಲ್ಲಿ ಪೊಲೀಸರು ಆತನನ್ನು ಬಂಧಿಸಿದ್ದಾರೆ. 

ಈತ ಬೊನೆಟ್ ಮೇಲೆ ಪ್ರಯಾಣಿಸುತ್ತಿದ್ದರೆ, 19 ವರ್ಷದ ಮತ್ತೊಬ್ಬ ಯುವಕ ಮಹಾವೀರ್ ಎನ್‌ಕ್ಲೇವ್‌ ನಿವಾಸಿ ಗೌರವ್ ಸಿಂಗ್ ಕಾರು ಚಾಲನೆ ಮಾಡ್ತಿದ್ದ. ಇವರಿಬ್ಬರ ವಿರುದ್ಧವೂ ಸಂಚಾರ ನಿಯಮ ಉಲ್ಲಂಘನೆ ಪ್ರಕರಣ ದಾಖಲಾಗಿದೆ. ಅಪಾಯಕಾರಿ ವಾಹನ ಚಾಲನೆ, ಮಾಲಿನ್ಯ ಪ್ರಮಾಣಪತ್ರವಿಲ್ಲದೇ ವಾಹನ ಚಾಲನೆ ಹಾಗೂ ಸೀಟು ಬೆಲ್ಟ್ ಧರಿಸದೇ ವಾಹನ ಚಾಲನೆಯ ಪ್ರಕರಣ ದಾಖಲಾಗಿದೆ. ಇವೆಲ್ಲವೂ ಸೇರಿ ಅಂದಾಜು 26 ಸಾವಿರ ರೂ ದಂಡ ಹಾಕಲಾಗಿದೆ. 

ಥಾರ್ ಕಾರಿನಲ್ಲಿ ಹೈವೇಯಲ್ಲಿ ಹೈಸ್ಪೀಡ್ ಜೊತೆಗೆ ಮಹಿಳೆಯರ ತಪಾಂಗುಚ್ಚಿ ಡ್ಯಾನ್ಸ್ ವೈರಲ್!

Scroll to load tweet…

ರೀಲ್ಸ್‌ಗಾಗಿ ರಸ್ತೆಯಲ್ಲಿ ಶಾಲಾ ಬಾಲಕಿಯರ ಸ್ಟಂಟ್, ಮುಂದೇನಾಯ್ತು ನೋಡಿ!