ಥಾರ್ ಕಾರಿನಲ್ಲಿ ಹೈವೇಯಲ್ಲಿ ಹೈಸ್ಪೀಡ್ ಜೊತೆಗೆ ಮಹಿಳೆಯರ ತಪಾಂಗುಚ್ಚಿ ಡ್ಯಾನ್ಸ್ ವೈರಲ್!
ಹೈವೇಯಲ್ಲಿ ಹೈ ಸ್ಪೀಡ್, ಜೊತೆಗೆ ಡ್ರೈವ್ ಮಾಡುತ್ತಿರುವ ಮಹಿಳೆ ಹಾಗೂ ಕೋ ಪ್ಯಾಸೆಂಜರ್ ಸೀಟಿನಲ್ಲಿರುವ ಮಹಿಳೆಯ ಡ್ಯಾನ್ಸ್ ವಿಡಿಯೋ ವೈರಲ್ ಆಗಿದೆ. ಇದೀಗ ಪೊಲೀಸರು ಈ ಇಬ್ಬರು ಮಹಿಳೆಯರಿಗಾಗಿ ಹುಡುಕಾಟ ಆರಂಭಿಸಿದ್ದಾರೆ.
ಲಖನೌ(ಜು.18) ಹಿಟ್ ಅಂಡ್ ರನ್ ಪ್ರಕರಣಗಳಿಂದ ಈಗಾಗಲೇ ಕೋಲಾಹಲ ಸೃಷ್ಟಿಯಾಗಿದೆ. ಹಲವು ಅಮಾಯಕ ಜೀವಗಳು ಬಲಿಯಾಗಿದೆ. ಬಹುತೇಕ ಪ್ರಕರಣಗಳು ಶ್ರೀಮಂತರು, ಉದ್ಯಮಿಗಳು, ರಾಜಕೀಯ ನಾಯಕರ ಮಕ್ಕಳೇ ಆರೋಪಿಗಳಾಗಿದ್ದಾರೆ. ಇದೀಗ ಮಹಿಳೆಯರಿಬ್ಬರು ಹೆದ್ದಾರಿಯಲ್ಲಿ ಅತೀವೇಗವಾಗಿ ಮಹೀಂದ್ರ ಥಾರ್ ಕಾರು ಚಲಾಯಿಸುತ್ತಾ, ಡ್ಯಾನ್ಸ್ ಮಾಡುತ್ತಾ ಸಾಗಿದ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋಗೆ ಸಾರ್ವಜಿಕ ವಲಯದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ. ಇದರ ಬೆನ್ನಲ್ಲೇ ಪೊಲೀಸರು ಮಹಿಳೆಯರಿಗೆ ದುಬಾರಿ ದಂಡ ವಿಧಿಸಲು ಹುಡುಕಾಟ ಆರಂಭಿಸಿದ್ದಾರೆ.
ಘಾಜಿಯಾಬಾದ್-ದೆಹಲಿ ರಾಷ್ಟ್ರೀಯ ಹೆದ್ದಾರಿ 9ರಲ್ಲಿ ಈ ಘಟನೆ ನಡೆದಿದೆ. ಮಹೀಂದ್ರ ಥಾರ್‌ನಲ್ಲಿ ಪ್ರಯಾಣಿಸುವ ವೇಳೆ ಈ ವಿಡಿಯೋ ರೆಕಾರ್ಡ್ ಮಾಡಲಾಗಿದೆ. ಹಿಂದಿನ ಸೀಟಿನಲ್ಲಿ ಕುಳಿತವರು ವಿಡಿಯೋ ರೆಕಾರ್ಡ್ ಮಾಡಿದ್ದಾರೆ. ಮುಂಭಾಗದಲ್ಲಿರುವ ಡ್ರೈವರ್ ಸೀಟಿನಲ್ಲಿ ಕುಳಿತ ಮಹಿಳೆ ಹಾಗೂ ಪಕ್ಕದಲ್ಲಿರುವ ಮಹಿಳೆ ಇಬ್ಬರು ವೇಗವಾಗಿ ಕಾರು ತೆರಳುತ್ತಿರುವ ವೇಳೆ ಡ್ಯಾನ್ಸ್ ಕೌಶಲ್ಯ ಪ್ರದರ್ಶಿಸುತ್ತಾ ಸಾಗಿದ್ದಾರೆ.
ರೈನ್ ಡ್ಯಾನ್ಸ್ ರೀಲ್ಸ್ ಮಾಡುತ್ತಿದ್ದ ವೇಳೆ ಬಡಿದ ಸಿಡಿಲು, ಕೊದಲೆಳೆ ಅಂತರದಲ್ಲಿ ಯವತಿ ಪಾರು!
ಕಾರು ಅತೀ ವೇಗವಾಗಿ ಸಾಗುತ್ತಿದೆ. ಕಾರಿನ ಮುಂಭಾಗದಲ್ಲಿ ಕುಳಿತ ಡ್ರೈವರ್ ಹಾಗೂ ಪ್ಯಾಸೆಂಜರ್ ಇಬ್ಬರೂ ಸೀಟ್ ಬೆಲ್ಟ್ ಧರಿಸಿಲ್ಲ. ಇಷ್ಟೇ ಅಲ್ಲ ಡ್ರೈವರ್ ಸ್ಟೀರಿಂಗ್ ವೀಲ್‌ನಿಂದ ಕೈಗಳನ್ನು ತೆಗೆದು ಡ್ಯಾನ್ಸ್ ಮಾಡಿದ್ದಾಳೆ. ಇತ್ತ ಪ್ಯಾಸೆಂಜರ್ ಸೀಟಿನಲ್ಲಿ ಕುಳಿತ ಮಹಿಳೆ ತಾಳಕ್ಕೆ ತಕ್ಕಂತೆ ಕುಣಿದಿದ್ದಾರೆ. ಇವರಿಬ್ಬರ ಜುಗುಲ್ ಬಂಧಿ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.
@ghaziabadpolice - Kindly look into it. @uptrafficpolice
— UP POLICE (@Uppolice) July 17, 2024
ಈ ಮಹಿಳೆಯರಿಬ್ಬರ ಡ್ಯಾನ್ಸ್ ಸಮಾಜಿಕ ಜಾಲತಾಣಧಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ರೀಲ್ಸ್ ಹುಚ್ಚಿನಿಂದ ಈ ರೀತಿ ವಿಡಿಯೋ ರೆಕಾರ್ಡ್ ಮಾಡಲಾಗುತ್ತಿದೆ. ಬಳಿಕ ಯಾವುದೇ ಅಳುಕಿಲ್ಲದೆ, ಕಾನೂನಿನ ಗೌರವ, ಭಯ ಇಲ್ಲದೆ ಪೋಸ್ಟ್ ಮಾಡುತ್ತಾರೆ. ಇಂತಹ ಪ್ರಕರಣಗಳೇ ಅಪಘಾತಕ್ಕೆ ಕಾರಣವಾಗುತ್ತಿದೆ. ಇದರಿಂದ ಸರಿಯಾಗಿ ವಾಹನ ಚಲಾಯಿಸುತ್ತಿರುವ ಅಮಾಯಕರು ಬಲಿಯಾಗುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಹಲವು ಬಾರಿ ಈ ರೀತಿಯ ಪ್ರಕರಣಗಳಲ್ಲಿ ಪೊಲೀಸರು ಬಂಧಿಸಿದ ಬಳಿಕ ತಮಗೆ ಈ ಕುರಿತು ಅರಿವು ಇರಲಿಲ್ಲ, ಮುಂದೆ ಈ ರೀತಿ ಮಾಡುವುದಿಲ್ಲ ಎಂದು ಕ್ಷಮೆಯಾಚಿಸುತ್ತಾರೆ. ದಂಡ ಪಾವತಿಸಿ ಪ್ರಕರಣ ಅಂತ್ಯಗೊಳಿಸುತ್ತಾರೆ. ಆದರೆ ಲೈಸೆನ್ಸ್ ನೀಡುವಾಗ ರಸ್ತೆ ನಿಯಮದ ಬಗ್ಗೆ ಅರಿವು ಇರಲೇಬೇಕು. ಹೀಗಾಗಿ ಈ ವಾದವನ್ನು ಒಪ್ಪುವುದೇಕೆ? ಇಂತಹ ಪ್ರಕರಣಗಳಿಗೆ ಅಂತ್ಯಹಾಡಬೇಕಿದೆ ಎಂದು ಸಾರ್ವಜನಿಕ ವಲಯದಲ್ಲಿ ಆಕ್ರೋಶಗಳು ಹೆಚ್ಚಾಗುತ್ತಿದೆ.
ಗೂಳಿ ಮುಂದೆ ಶಕ್ತಿ ಪ್ರದರ್ಶನಕ್ಕೆ ಹೋದ ಯುವಕ, ಕರ್ಮ ಬಿಡುವುದೇ?
ಇತ್ತ ಈ ವಿಡಿಯೋ ಕುರಿತು ಉತ್ತರ ಪ್ರದೇಶ ಪೊಲೀಸರು ಪ್ರತಿಕ್ರಿಯಿಸಿದ್ದಾರೆ. ಘಾಜಿಯಾದಾಬ್ ಪೊಲೀಸರು ಈ ಪ್ರಕರಣ ಬಗ್ಗೆ ಗಮನ ನೀಡಲು ಸೂಚಿಸಲಾಗಿದೆ.