ಹೊಸ ವರ್ಷದ ದಿನವೇ ಮೋದಿ ಪಿಎಂ-ಕಿಸಾನ್‌ನ 10 ನೇ ಕಂತನ್ನು ಬಿಡುಗಡೆ ಮಾಡಲಿದ್ದಾರೆ. ಕರ್ನಾಟಕದಲ್ಲಿ ನೈಟ್ ಕರ್ಫ್ಯೂ ಇದ್ದರೂ ಹೊಸ ವರ್ಷದ ದಿನ ₹975 ಕೋಟಿ ಮದ್ಯ ಮಾರಾಟವಾಗಿದೆ. ಬಾಕ್ಸಿಂಗ್ ಡೇ ಟೆಸ್ಟ್ ಗೆಲುವಿನ ಬಳಿಕ ಕುಣಿದು ಸಂಭ್ರಮಿಸಿದ ಕೊಹ್ಲಿ, ದ್ರಾವಿಡ್. ಲವ್ ಬೈಟ್ಸ್ ತೋರಿಸಿದ ಉರ್ಫಿ, ಮೀನುಗಾರನಿಗೆ ಎದುರಾದ ಶಾರ್ಕ್ ಸೇರಿದಂತೆ ಜನವರಿ 1ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.
New Year 2022: ಪ್ರತಿ ನಿಮಿಷಕ್ಕೆ 17,000 ಆನಲೈನ್ ಫುಡ್ ಆರ್ಡರ್ಸ್‌ಗಳೊಂದಿಗೆ ಹೊಸ ವರ್ಷ ಆಚರಿಸಿದ ಭಾರತ!

2021ರ ಕೊನೆಯ ದಿನದಂದು ಫುಡ್ ಡೆಲಿವರಿ ಅಪ್ಲಿಕೇಶನ್ 20 ಲಕ್ಷ ಆರ್ಡರ್‌ಗಳನ್ನು ಪಡೆದುಕೊಂಡಿವೆ ಎಂದು ಸ್ವಿಗ್ಗಿ ಮತ್ತು ಜೊಮಾಟೊ ಟ್ವಿಟರ್‌ನಲ್ಲಿ ಹಂಚಿಕೊಂಡಿವೆ.
ಮೀನುಗಾರನಿಗೆ ಎದುರಾದ ಶಾರ್ಕ್... ಎದೆ ಝಲ್ ಎನಿಸುವ ವಿಡಿಯೋ

ಬೃಹತ್ ದೇಹವನ್ನು ಹೊಂದಿರುವ ಶಾರ್ಕ್ ಮೀನುಗಳು ಮನುಷ್ಯರ ಮೇಲೆ ದಾಳಿ ಮಾಡುತ್ತವೆ ಹಾಗೂ ಅಪಾಯಕಾರಿ ಎಂದೇ ನಂಬಲಾಗಿದೆ. ಅದಾಗ್ಯೂ ಇಲ್ಲೊಂದು ಶಾರ್ಕ್ ಮೀನು, ಈಜಾಡುತ್ತಿದ್ದ ಮೀನುಗಾರರೊಬ್ಬರಿಗೆ ಧುತ್ತನೇ ಎದುರಾಗಿದ್ದು, ದಾಳಿ ನಡೆಸದೇ ಮುಂದೆ ಸಾಗಿದೆ. ಈ ಎದೆ ಝಲ್ ಎನಿಸುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಮೆರಿಕಾದ ಉತ್ತರ ಕೆರೊಲಿನಾ (North Carolina) ಕರಾವಳಿಯಲ್ಲಿ ಈ ಘಟನೆ ನಡೆದಿದೆ.
PM Kisan Yojana: ಹೊಸ ವರ್ಷದಂದು ರೈತರಿಗೆ ಗುಡ್‌ನ್ಯೂಸ್ ಕೊಟ್ಟ ಪ್ರಧಾನಿ ಮೋದಿ!

ಹೊಸ ವರ್ಷ ರೈತರಿಗೆ ಸಂತಸದ ಸುದ್ದಿ ತಂದಿದೆ. ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಪಿಎಂ-ಕಿಸಾನ್‌ನ 10 ನೇ ಕಂತನ್ನು ಬಿಡುಗಡೆ ಮಾಡಲಿದ್ದಾರೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಡಿಯಲ್ಲಿ, 10 ಕೋಟಿಗೂ ಹೆಚ್ಚು ಫಲಾನುಭವಿ ರೈತ ಕುಟುಂಬಗಳಿಗೆ 20,000 ಕೋಟಿ ರೂ.ಗಿಂತ ಹೆಚ್ಚಿನ ಮೊತ್ತವನ್ನು ನೀಡಲಾಗುತ್ತದೆ. ರೈತ ಕುಟುಂಬಗಳಿಗೆ ಇದುವರೆಗೆ 1.6 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಗೌರವ ಧನ ನೀಡಲಾಗಿದೆ. ಈ ಸಂದರ್ಭದಲ್ಲಿ ಕೇಂದ್ರ ಕೃಷಿ ಸಚಿವರು ಸಾಥ್ ನೀಡಲಿದ್ದಾರೆ.
Price Hike: ಹೊಸ ವರ್ಷಕ್ಕೆ ಜನರಿಗೆ ಶಾಕ್: ದಿನಬಳಕೆ, ಇಲೆಕ್ಟ್ರಾನಿಕ್ಸ್, ಆಟೋಮೊಬೈಲ್ ವಸ್ತುಗಳ ಬೆಲೆ ಏರಿಕೆ!

ಹೊಸ ವರ್ಷದ ಸಂಭ್ರಮದ ಜೊತೆಗೆ (New Year 2022) ಈ ವರ್ಷದ ಆರಂಭದಲ್ಲಿಯೇ ವಿಷಾದದ ಸಂಗತಿಯೂ ಇದೆ. ಕೊರೋನಾ, ಆರ್ಥಿಕ ಹೊಡೆತದ ನಡುವೆ ಕಂಗೆಟ್ಟಿರುವ ಜನಸಾಮಾನ್ಯರಿಗೆ ಈ ವರ್ಷದ ಆರಂಭದ ದಿನವೇ ಮತ್ತೆ ಬೆಲೆ ಏರಿಕೆ ಬಿಸಿ (Price Hike) ತಟ್ಟಲಿದೆ. ದಿನಬಳಕೆ ವಸ್ತುಗಳಿಂದ ಹಿಡಿದು ಆಟೋಮೊಬೈಲ್ ವರೆಗೆ ಇಂದಿನಿಂದಲೇ ಬೆಲೆ ಹೆಚ್ಚಳವಾಗಲಿದೆ. ಏನೇನು ಬದಲಾವಣೆ ಆಗಲಿದೆ ಎಂಬ ಕಿರು ಮಾಹಿತಿ ಇಲ್ಲದೆ.
Alcohol Sale in Karnataka: ನೈಟ್ ಕರ್ಫ್ಯೂ ಇದ್ದರೂ ₹975 ಕೋಟಿ ಮದ್ಯ ಮಾರಾಟ!

ರಾಜ್ಯದಲ್ಲಿ ಕೋವಿಡ್ ಸೋಂಕಿನ ಹೆಚ್ಚಳ (Covid 19) ಮತ್ತು ನೈಟ್ ಕರ್ಫ್ಯೂ ನಡುವೆಯೇ ಮದ್ಯ ಮಾರಾಟ (Alcohol Sale) ಕಳೆದೆರಡು ವರ್ಷಗಳಿಗೆ ಹೋಲಿಕೆ ಮಾಡಿದರೆ ಶೇ.13ರಷ್ಟು ಹೆಚ್ಚಳವಾಗಿದ್ದು, ಕೇವಲ ಎಂಟು ದಿನಗಳಲ್ಲಿ ಬರೋಬ್ಬರಿ 974.58 ಕೋಟಿ ರು.ಗಳಷ್ಟುವಹಿವಾಟು ನಡೆದಿದೆ. ಇದರಿಂದ ರಾಜ್ಯದ ಬೊಕ್ಕಸಕ್ಕೆ 573.75 ಕೋಟಿ ರು. ಆದಾಯ ಹರಿದು (Revenue) ಬಂದಿದೆ. ಕೋವಿಡ್ ಪೂರ್ವದಲ್ಲಿ (2019) ವರ್ಷದ ಕೊನೆಯ ಎಂಟು ದಿನಗಳಲ್ಲಿ 878.25 ಕೋಟಿ ರು.ಗಳಷ್ಟುವಹಿವಾಟು ನಡೆದಿತ್ತು.
Ind vs SA: ಬಾಕ್ಸಿಂಗ್ ಡೇ ಟೆಸ್ಟ್ ಗೆಲುವಿನ ಬಳಿಕ ಕುಣಿದು ಸಂಭ್ರಮಿಸಿದ ಕೊಹ್ಲಿ, ದ್ರಾವಿಡ್

ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಟೆಸ್ಟ್‌ನಲ್ಲಿ ಭರ್ಜರಿ ಗೆಲುವು ಸಾಧಿಸಿದ ಬಳಿಕ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ (Virat Kohli) ಹಾಗೂ ಕೋಚ್ ರಾಹುಲ್ ದ್ರಾವಿಡ್ (Rahul Dravid) ಕುಣಿದು ಸಂಭ್ರಮಿಸಿದ್ದಾರೆ. ತಂಡ ಉಳಿದುಕೊಂಡಿರುವ ರೆಸಾರ್ಟ್‌ಗೆ ವಾಪಸಾಗುತ್ತಿದ್ದಂತೆ ಅಲ್ಲಿನ ಸಿಬ್ಬಂದಿ ಸ್ಥಳೀಯ ನೃತ್ಯದ ಮೂಲಕ ಆಟಗಾರರನ್ನು ಸ್ವಾಗತಿಸಿದರು. ಈ ವೇಳೆ ಕೊಹ್ಲಿ, ದ್ರಾವಿಡ್, ರವಿಚಂದ್ರನ್ ಅಶ್ವಿನ್, ಮೊಹಮ್ಮದ್ ಸಿರಾಜ್, ಚೇತೇಶ್ವರ್ ಪೂಜಾರ ಸಹ ಹೆಜ್ಜೆ ಹಾಕಿ ಖುಷಿಪಟ್ಟರು. ಕೊಹ್ಲಿ ಹಾಗೂ ದ್ರಾವಿಡ್ ಡ್ಯಾನ್ಸ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.
Love Bites: ಲವ್ ಬೈಟ್ಸ್ ತೋರಿಸಿದ ಉರ್ಫಿ, ಕಾರಣ ಯಾರು ?

ಬಿಗ್‌ಬಾಸ್ ಒಟಿಟಿ ಮೂಲಕ ಖ್ಯಾತಿ ಗಳಿಸಿದ ಕಿರುತೆರೆ ನಟಿ ಉರ್ಫಿ ಜಾವೇದ್ ತಮ್ಮ ಲವ್ ಬೈಟ್ಸ್ ತೋರಿಸಿದ್ದಾರೆ. ಲವ್ ಬೈಟ್ ತೋರಿಸ್ತಾರಾ ಅಂತ ಕೇಳ್ಬೇಡಿ, ನಟಿ ಉರ್ಫಿ ಬೂಮ್‌ರಂಗ್ ಮಾಡಿ ಸ್ಟೋರಿ ಶೇರ್ ಮಾಡಿದ್ದಾರೆ. ಚಿತ್ರವಿಚಿತ್ರ ಡ್ರೆಸ್‌ಗಳನ್ನು ಹಾಕಿ ಸುದ್ದಿಯಾಗೋ ಕಿರುತೆರೆಯ ನಟಿ ಈಗ ಲವ್ ಬೈಟ್ ಮೂಲಕ ಸುದ್ದಿಯಾಗಿದ್ದಾರೆ. ಫೋಟೋ ಸಮೇತ ವಿಚಾರ ಹಂಚಿಕೊಂಡಿರೋದ್ರಿಂದ ಅವರ ಅಭಿಮಾನಿಗಳು ಅಚ್ಚರಿಗೊಂಡಿದ್ದಾರೆ.
Stock Market: 13 ವರ್ಷದಲ್ಲಿ ಕೋಟ್ಯಾಧಿಪತಿಯಾಗಿಸಿದ ಬ್ಯಾಂಕಿಂಗ್ ಷೇರು 5 ರೂ. ನಿಂದ 1,500 ರೂ!

ಮಾರ್ಕೆಟ್ ಮ್ಯಾಗ್ನೇಟ್ ವಾರೆನ್ ಬಫೆಟ್ (Warren Buffett) ಒಮ್ಮೆ ಹೂಡಿಕೆ ಮಾಡಲು ಉತ್ತಮ ಸಮಯವೆಂದರೆ ಉತ್ತಮ ಷೇರುಗಳನ್ನು ಆಯ್ಕೆ ಮಾಡಿಕೊಳ್ಳುವುದು ಮತ್ತು ಅವು ಉತ್ತಮ ಕಂಪನಿಯಾಗುವವರೆಗೆ ಅವರೊಂದಿಗೆ ಉಳಿದುಕೊಳ್ಳುವುದು ಎಂದು ಹೇಳಿದ್ದರು.
