ಮೀನುಗಾರನಿಗೆ ಎದುರಾದ  ಶಾರ್ಕ್‌ ಮೀನು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಅಮೆರಿಕಾದ ಉತ್ತರ ಕೆರೊಲಿನಾ ಕರಾವಳಿಯಲ್ಲಿ ಘಟನೆ

ಉತ್ತರ ಕೆರೊಲಿನಾ(ಡಿ. 1): ಬೃಹತ್‌ ದೇಹವನ್ನು ಹೊಂದಿರುವ ಶಾರ್ಕ್‌ ಮೀನುಗಳು ಮನುಷ್ಯರ ಮೇಲೆ ದಾಳಿ ಮಾಡುತ್ತವೆ ಹಾಗೂ ಅಪಾಯಕಾರಿ ಎಂದೇ ನಂಬಲಾಗಿದೆ. ಅದಾಗ್ಯೂ ಇಲ್ಲೊಂದು ಶಾರ್ಕ್‌ ಮೀನು, ಈಜಾಡುತ್ತಿದ್ದ ಮೀನುಗಾರರೊಬ್ಬರಿಗೆ ಧುತ್ತನೇ ಎದುರಾಗಿದ್ದು, ದಾಳಿ ನಡೆಸದೇ ಮುಂದೆ ಸಾಗಿದೆ. ಈ ಎದೆ ಝಲ್‌ ಎನಿಸುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಮೆರಿಕಾದ ಉತ್ತರ ಕೆರೊಲಿನಾ (North Carolina) ಕರಾವಳಿಯಲ್ಲಿ ಈ ಘಟನೆ ನಡೆದಿದೆ. 

ಡೇವಿಡ್ ಶೆರರ್ ಎಂಬಾತನೇ ಹೀಗೆ ಶಾರ್ಕ್‌ ಅನ್ನು ಎದುರಾಗಿ ಏನೂ ಅಪಾಯಕ್ಕೊಳಗಾಗದೇ ಎದ್ದು ಬಂದ ವ್ಯಕ್ತಿ. ಇವರು ಇತ್ತೀಚೆಗೆ ಉತ್ತರ ಕೆರೊಲಿನಾ ಕರಾವಳಿಯ ಬಳಿ ಸಮುದ್ರದಲ್ಲಿ ಈಜಾಡುತ್ತಿದ್ದ ವೇಳೆ ಇವರಿಗೆ ದೊಡ್ಡದಾದ ಬಿಳಿ ಶಾರ್ಕ್ ಎದುರಾಗಿದೆ. ನೀರೊಳಗೆಯೂ ಬಳಸುವ ಕ್ಯಾಮರಾವನ್ನು ಇವರು ಹಿಡಿದುಕೊಂಡಿದ್ದು. ಮೀನು ಬರುತ್ತಿರುವ ದೃಶ್ಯ ಈ ಕ್ಯಾಮರಾದಲ್ಲಿ ಸೆರೆಯಾಗಿದೆ. 

ಶಾರ್ಕ್ ಇವರತ್ತ ನಿಧಾನವಾಗಿ ಸಮೀಪಿಸಿದೆ. ಅದಾಗ್ಯೂ ಒಂದು ವೇಳೆ ಅದು ದಾಳಿ ಮಾಡಿದಲ್ಲಿ ತಮ್ಮನ್ನು ತಾವು ರಕ್ಷಿಸಿಕೊಳ್ಳಲು, ಡೇವಿಡ್ ಶೆರರ್ ಸಿದ್ಧತೆ ನಡೆಸಿದ್ದರು. ಆದರೆ ಅದೃಷ್ಟವಶಾತ್, ಶಾರ್ಕ್ ಇವರ ಮೇಲೆ ದಾಳಿ ನಡೆಸದೇ ಸಮೀಪದಲ್ಲೇ ಮುಂದೆ ಸಾಗಿದೆ. ಮೊದಲಿಗೆ, ಶಾರ್ಕ್ ಸಿಕ್ಕಿದ್ದು ಒಂದು ಅದ್ಭುತ ಅನುಭವ ಎಂದು ನಾನು ಭಾವಿಸಿದೆ. ಆದರೆ ಅದು ನನ್ನತ್ತಲೇ ಬರಲು ಆರಂಭಿಸಿದಾಗ ನನಗೆ ಭಯವಾಗಲು ಶುರುವಾಯಿತು ಎಂದು ಡೇವಿಡ್ ಶೆರರ್ ಹೇಳಿದರು. ಅವರು ತಮ್ಮ ಹೈ ಸ್ಕೂಲ್‌ ದಿನಗಳಿಂದಲೂ ಈಟಿ ಮೀನುಗಾರಿಕೆ( spearfishing) ನಡೆಸಲು ಶುರು ಮಾಡಿದ್ದರು. ನಂತರ ಈ ಹವ್ಯಾಸವನ್ನೇ ವೃತ್ತಿಯಾಗಿಸಿಕೊಂಡರು. 

ಬಲೆಗೆ ಬಿತ್ತು ಬೃಹತ್ ವೇಲ್ ಶಾರ್ಕ್, ಇದರ ವಿಶೇಷತೆ ಏನ್ಗೊತ್ತಾ..?

ಡೇವಿಡ್ ಶೆರರ್, ವರ್ಜೀನಿಯಾ ಬೀಚ್ (Virginia Beach) ಸೀಫುಡ್ ಕಂಪನಿ (Seafood Company)ಗೆ ಡೈವರ್ ಆಗಿ ಕೆಲಸ ಮಾಡುತ್ತಿದ್ದಾರೆ. ಸೀಫುಡ್ ಕಂಪನಿ, ಇದು ವರ್ಜೀನಿಯಾ ಬೀಚ್ ಓಷನ್‌ಫ್ರಂಟ್ ಸಮುದಾಯಕ್ಕೆ ತಾಜಾ ಮೀನುಗಳನ್ನು ಹಿಡಿದು ತಲುಪಿಸುವ ಸ್ಥಳೀಯ ವ್ಯಾಪಾರವಾಗಿದೆ. 
ಶಾರ್ಕ್‌ಗಳು ಡೈವರ್‌ಗಳತ್ತ ಬರುವುದು ಸಾಮಾನ್ಯ ವಿಚಾರವಲ್ಲ ಮತ್ತು ಈ ಘಟನೆ ಶಾಂತವಾಗಿ ತೋರುತ್ತದೆಯಾದರೂ, ಕೆಲವು ಜಾತಿ ಮೀನುಗಳು ಸಾಕಷ್ಟು ಆಕ್ರಮಣಕಾರಿಯಾಗಿರುತ್ತವೆ ಎಂದು ಹೇಳಿದರು. 

ಈ ಶಾರ್ಕ್‌ ಮೀನು ನನ್ನತ್ತ ಬಂದಾಗ ಎರಡು ವಿಷಯಗಳು ನನ್ನ ಮನಸ್ಸಿಗೆ ಬಂದವು. ಒಂದು ಹೆದರದಿರಿ ಹಾಗೂ ನಿಮ್ಮ ಜಾಗವನ್ನು ಭದ್ರಪಡಿಸಿಕೊಳ್ಳಿ ಎಂಬುದು ಹಾಗೂ ಎರಡನೇಯದು ನಾನು ಇದಕ್ಕೆ ಎಲ್ಲಿ ಇರಿಯಲಿ ಎಂಬುದು ಎಂದು ಡೇವಿಡ್ ಶೆರರ್ ಫೇಸ್‌ಬುಕ್‌ನಲ್ಲಿ ಬರೆದಿದ್ದಾರೆ. ಈ ವಿಡಿಯೋದಲ್ಲಿ ಡೇವಿಡ್ ಶೆರರ್ ಹೆದರಿಕೊಂಡಿಲ್ಲವೆನಿಸಿದರೂ, ನೀರಿನಲ್ಲಿ ಹೊಡೆದಾಡಿ ಉಸಿರಾಡುತ್ತ ನೀರಿನಿಂದ ದೊಡ್ಡ ನಿಟ್ಟುಸಿರಿನೊಂದಿಗೆ ಹೊರ ಬರುವುದು ಕಾಣಿಸುತ್ತಿದೆ. 

ಪ್ರವಾಸದ ಖುಷಿಯಲ್ಲಿದ್ದ ವ್ಯಕ್ತಿಯ ಹೊತ್ತೊಯ್ದ ಶಾರ್ಕ್

ದಿ ನ್ಯಾಷನಲ್ ಜಿಯಾಗ್ರಾಫಿಕ್ (National Geographic) ಪ್ರಕಾರ, ಜಾಸ್‌ನಲ್ಲಿರುವ ಶಾರ್ಕ್ ನ್ಯೂಜೆರ್ಸಿ (New Jersey)ಯ ದೊಡ್ಡ ಬಿಳಿ ಶಾರ್ಕ್‌ನಿಂದ ಸ್ಫೂರ್ತಿ ಪಡೆದಿದ್ದರೂ, ಈ ಮೀನುಗಳು ವಾಸ್ತವದಲ್ಲಿ ಅಂತಹ ಅಪಾಯಕಾರಿಗಳಲ್ಲವಂತೆ. ಹೆಚ್ಚಿನ ಶಾರ್ಕ್ ದಾಳಿಗಳು ಅಪಾಯಕಾರಿಯಾಗಿರುವುದಿಲ್ಲ ಹಾಗೂ ಭೂಮಿಯ ಮೇಲಿನ ಅತಿ ದೊಡ್ಡ ಪರಭಕ್ಷಕ ಮೀನುಗಳಾದ ಶಾರ್ಕ್‌ಗಳು ಸ್ವಾಭಾವಿಕವಾಗಿ ಕುತೂಹಲವನ್ನು ಹೊಂದಿರುತ್ತವೆ. ಹಾಗೂ ಕುತೂಹಲದಿಂದಲೇ ಆಗಾಗ್ಗೆ ಕಚ್ಚುವ ಅವುಗಳು ನಂತರ ತಮ್ಮಗುರಿಯನ್ನು ಬಿಟ್ಟು ಬಿಡುತ್ತವೆ. ಅಲ್ಲದೇ ಮನುಷ್ಯರು ಈ ಬಿಳಿ ಶಾರ್ಕ್‌ನ ಗುರಿಯಲ್ಲ ಎಂದು ಜಿಯಾಗ್ರಾಫಿಕ್ ಚಾನೆಲ್ ಹೇಳಿದೆ. ಪ್ರಸ್ತುತ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್‌ ಆಗಿದೆ.