ಬಿಗ್‌ಬಾಸ್ ಬ್ಯೂಟಿಗೆ ಲವ್ ಬೈಟ್ಸ್ ಉರ್ಫಿ ಜಾವೇದ್ ಅವತಾರವೇನಿದು ?

ಬಿಗ್‌ಬಾಸ್ ಒಟಿಟಿ ಮೂಲಕ ಖ್ಯಾತಿ ಗಳಿಸಿದ ಕಿರುತೆರೆ ನಟಿ ಉರ್ಫಿ ಜಾವೇದ್ ತಮ್ಮ ಲವ್ ಬೈಟ್ಸ್ ತೋರಿಸಿದ್ದಾರೆ. ಲವ್ ಬೈಟ್ ತೋರಿಸ್ತಾರಾ ಅಂತ ಕೇಳ್ಬೇಡಿ, ನಟಿ ಉರ್ಫಿ ಬೂಮ್‌ರಂಗ್ ಮಾಡಿ ಸ್ಟೋರಿ ಶೇರ್ ಮಾಡಿದ್ದಾರೆ. ಚಿತ್ರವಿಚಿತ್ರ ಡ್ರೆಸ್‌ಗಳನ್ನು ಹಾಕಿ ಸುದ್ದಿಯಾಗೋ ಕಿರುತೆರೆಯ ನಟಿ ಈಗ ಲವ್ ಬೈಟ್ ಮೂಲಕ ಸುದ್ದಿಯಾಗಿದ್ದಾರೆ. ಫೋಟೋ ಸಮೇತ ವಿಚಾರ ಹಂಚಿಕೊಂಡಿರೋದ್ರಿಂದ ಅವರ ಅಭಿಮಾನಿಗಳು ಅಚ್ಚರಿಗೊಂಡಿದ್ದಾರೆ.

ತಮ್ಮ ವಿಚಿತ್ರ ಫ್ಯಾಷನ್ ಸೆನ್ಸ್ ಮೂಲಕ ಸುದ್ದಿಯಾಗಿರುವ ನಟಿ ಯಾವಾಗಲೂ ಚಿತ್ರ ವಿಚಿತ್ರ ಉಡುಪುಗಳಿಂದ ಚರ್ಚೆಯಾಗುತ್ತಲೇ ಇರುತ್ತಾರೆ. ಯಾವುದೇ ತುಂಡು ಬಟ್ಟೆಯನ್ನೂ ಫ್ಯಾಷನ್ ಆಗಿ ಧರಿಸುವಂತಹ ನಟಿ ಟ್ರೋಲ್‌ಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಡಿಫರೆಂಟಾಗಿರುವ ಡ್ರೆಸ್ ಚೂಸ್ ಮಾಡಿಕೊಳ್ಳುವುದರಲ್ಲಿ ಉರ್ಫೀಗೆ ಉರ್ಫಿಯೇ ಸಾಟಿ.

ಫ್ಯಾಷನ್ ಡ್ರೆಸ್ ಚೆಲುವೆಗೂ ಕಾಸ್ಟಿಂಗ್ ಕೌಚ್ ಕಿರಿಕಿರಿ

ಆದರೆ ಇತ್ತೀಚಿನ ಪೋಸ್ಟ್‌ನಲ್ಲಿ, ನಟಿ ತನ್ನ ಲವ್ ಬೈಟ್‌ಗಳನ್ನು ತೋರಿಸಿದ್ದಾರೆ. ಇದಕ್ಕೂ ಮೊದಲು, ಉರ್ಫಿ ಕೆಲವು ವೈಯಕ್ತಿಕ ಅನುಭವಗಳ ಬಗ್ಗೆ ಮಾತನಾಡಿದ್ದರು. ರೂಪಾಲಿ ಗಂಗೂಲಿಯವರ ಅನುಪಮಾ ಚಿತ್ರದಲ್ಲಿ ನಟಿಸುವ ಅವಕಾಶವನ್ನು ತನ್ನ ಮಾಜಿ ಗೆಳೆಯ ಪರಸ್ ಕಲ್ನಾವತ್ ಕಿತ್ತುಕೊಂಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಈ ಹಿಂದೆಯೂ ನಟಿ ತಮ್ಮ ಕಾಸ್ಟಿಂಗ್ ಕೌಚ್ ಅನುಭವಗಳನ್ನು ಹಂಚಿಕೊಂಡಿದ್ದರು.

ತನ್ನ ಇತ್ತೀಚಿನ ಸ್ಟೋರಿಯಲ್ಲಿ, ಉರ್ಫಿ ಜಾವೇದ್ ತನ್ನ ಬೆನ್ನಿನ ಚಿತ್ರವನ್ನು ಹಂಚಿಕೊಂಡಿದ್ದಾರೆ. ಕಲರ್‌ಫುಲ್ ಬಾಟಮ್‌ನೊಂದಿಗೆ ಕಿತ್ತಳೆ ಬಣ್ಣದ ಟಾಪ್ ಅನ್ನು ಧರಿಸಿರುವ ನಟಿಯನ್ನು ಕಾಣಬಹುದು. ಆಕೆಯ ಬೆನ್ನಿನ ಮೇಲೆ ಬಹಳಷ್ಟು ಕೆಂಪು ಗುರುತುಗಳನ್ನು ನೋಡಬಹುದು, ಇದು ಅನೇಕರಿಗೆ ಗೊಂದಲದ ದೃಶ್ಯವಾಗಿತ್ತು. ಕುರ್ಚಿಗಳಿಂದ ಸಿಕ್ಕಿದ ಲವ್‌ಬೈಟ್‌ಗಳು. ಅದನ್ನು ನೀವು ನಂಬುತ್ತೀರಾ? ಎಂದು ಉರ್ಫಿ ಜಾವೇದ್ ತಮ್ಮ ಪೋಸ್ಟ್‌ಗೆ ಶೀರ್ಷಿಕೆ ನೀಡಿದ್ದಾರೆ. ಸಸ್ಪೆನ್ಸ್‌ಗಾಗಿ ಕಾಯುತ್ತಿದ್ದ ಅಭಿಮಾನಿಗಳು ನಟಿಯ ಉತ್ತರ ಕೇಳಿ ನಿರಾಶೆಗೊಂಡಿದ್ದಾರೆ.

ಕಾಸ್ಟಿಂಗ್ ಕೌಚ್:

ಅನೇಕ ಬಾಲಿವುಡ್ ಮತ್ತು ಕಿರುತೆರೆ ನಟಿಯರು ಉದ್ಯಮದಲ್ಲಿ ಕಾಸ್ಟಿಂಗ್ ಕೌಚ್ ಎದುರಿಸಿದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ತನ್ನ ಬಟ್ಟೆಗಾಗಿ ಸುದ್ದಿಯಲ್ಲಿರುವ ಉರ್ಫಿ ಜಾವೇದ್ ಕೂಡ ಕಾಸ್ಟಿಂಗ್ ಕೌಚ್ ಅನ್ನು ಎದುರಿಸಿದ್ದಾರೆ. ಇತ್ತೀಚೆಗಿನ ಸಂದರ್ಶನವೊಂದರಲ್ಲಿ ನಟಿ ಈ ಬಗ್ಗೆ ಮುಕ್ತವಾಗಿ ಮಾತನಾಡಿದ್ದು ತಮಗಾದ ಅನುಭವವನ್ನು ಶೇರ್ ಮಾಡಿದ್ದಾರೆ. ಯಾರೋ ತನ್ನನ್ನು ಬಲವಂತಪಡಿಸಿದ್ದಾರೆ ಎಂದು ಅವರು ಬಹಿರಂಗಪಡಿಸಿದ್ದಾರೆ. ಆದರೆ ಅವಳು ಅದರಿಂದ ಹೊರಬಂದಿರುವುದಾಗಿ ಹೇಳಿದ್ದಾರೆ.

ಉದ್ಯಮದಲ್ಲಿರುವ ಪುರುಷರು ತುಂಬಾ ಶಕ್ತಿಶಾಲಿ ಎಂದು ಉರ್ಫಿ ಹೇಳಿದ್ದಾರೆ. ಕಾಸ್ಟಿಂಗ್ ಕೌಚ್ ಬಗ್ಗೆ ಮಾತ್ರವಲ್ಲ, ಸಂದರ್ಶನದಲ್ಲಿ ನಟಿ ನಿರಾಕರಣೆಗಳು, ಟ್ರೋಲ್‌ಗಳು ಮತ್ತು ಇನ್ನೂ ಹೆಚ್ಚಿನವುಗಳ ಬಗ್ಗೆ ಮಾತನಾಡಿದ್ದಾರೆ. ತನ್ನ ಕಾಸ್ಟಿಂಗ್ ಕೌಚ್ ಅನುಭವದ ಬಗ್ಗೆ ಮಾತನಾಡಿ, ಪ್ರತಿಯೊಬ್ಬ ಹುಡುಗಿಯಂತೆ ನಾನು ಕೂಡ ಕಾಸ್ಟಿಂಗ್ ಕೌಚ್ ಅನ್ನು ಅನುಭವಿಸಿದ್ದೇನೆ. ಒಮ್ಮೆ ಒಬ್ಬರು ನನ್ನನ್ನು ಬಲವಂತಪಡಿಸಿದಾಗ ಅದು ಸಂಭವಿಸಿತು. ಆದರೆ ನಾನು ಹೊರಬಂದೆ, ಹಾಗಾಗಿ ನಾನು ತುಂಬಾ ಅದೃಷ್ಟಶಾಲಿ ಎಂದು ಭಾವಿಸುತ್ತೇನೆ ಎಂದಿದ್ದಾರೆ.

ಮದುವೆ ಕುರಿತ ಹೇಳಿಕೆ

ನಾನು ಮುಸ್ಲಿಂ ಹುಡುಗಿ. ನಾನು ಸ್ವೀಕರಿಸುವ ಹೆಚ್ಚಿನ ದ್ವೇಷದ ಕಾಮೆಂಟ್‌ಗಳು ಮುಸ್ಲಿಂ ಜನರಿಂದ. ನಾನು ಇಸ್ಲಾಮಿನ ಪ್ರತಿಷ್ಠೆಯನ್ನು ಹಾಳು ಮಾಡುತ್ತಿದ್ದೇನೆ ಎಂದು ಅವರು ಹೇಳುತ್ತಾರೆ. ಅವರು ನನ್ನನ್ನು ದ್ವೇಷಿಸುತ್ತಾರೆ ಏಕೆಂದರೆ ಮುಸ್ಲಿಂ ಪುರುಷರು ತಮ್ಮ ಮಹಿಳೆಯರು ಒಂದು ನಿರ್ದಿಷ್ಟ ರೀತಿಯಲ್ಲಿ ವರ್ತಿಸಬೇಕೆಂದು ಬಯಸುತ್ತಾರೆ. ಅವರು ಸಮುದಾಯದ ಎಲ್ಲಾ ಮಹಿಳೆಯರನ್ನು ನಿಯಂತ್ರಿಸಲು ಬಯಸುತ್ತಾರೆ. ಈ ಕಾರಣದಿಂದ ನಾನು ಇಸ್ಲಾಂ ಧರ್ಮವನ್ನು ನಂಬುವುದಿಲ್ಲ. ಅವರು ನನ್ನನ್ನು ಟ್ರೋಲ್ ಮಾಡಲು ಕಾರಣವೆಂದರೆ ಅವರ ಧರ್ಮದ ಪ್ರಕಾರ ಅವರು ನಿರೀಕ್ಷಿಸುವ ರೀತಿಯಲ್ಲಿ ನಾನು ನಡೆದುಕೊಳ್ಳುವುದಿಲ್ಲ ಎಂದು ಉರ್ಫಿ ಜಾವೇದ್ ಇಂಡಿಯಾ ಟುಡೇ.ಇನ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.