Asianet Suvarna News Asianet Suvarna News

ಶಂಕರಾಚಾರ್ಯರ ಪುತ್ಥಳಿ ಅನಾವರಣ, ಕೊಹ್ಲಿಗೆ ಹುಟ್ಟುಹಬ್ಬ ಸಂಭ್ರಮ; ನ.5ರ ಟಾಪ್ 10 ಸುದ್ದಿ!

ಕೇದಾರನಾಥದಲ್ಲಿ ಪ್ರಧಾನಿ ಮೋದಿ ಆದಿ ಗುರು ಶಂಕರಾಚಾರ್ಯರ ಪುತ್ಥಳಿ ಅನಾವರಣ ಮಾಡಿದ್ದಾರೆ. ಇತ್ತ ದೀಪಾವಳಿ ಪಟಾಕಿಗೆ ದೆಹಲಿ ಮಾಲಿನ್ಯ ಕೈಮೀರಿ ಹೋಗಿದ್ದು ಹಲವರು ತೀವ್ರ ಅಸ್ವಸ್ಥಗೊಂಡಿದ್ದಾರೆ. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಹುಟ್ಟು ಹಬ್ಬದ ಸಂಭ್ರಮ. ಪುನೀತ್ ಸಮಾಧಿಗೆ ಭೇಟಿ ನೀಡಿದ ತಮಿಳು ನಟ ಸೂರ್ಯ, JioPhone Next ಖರೀದಿಗೆ ಮುನ್ನ ನೋಂದಣಿ ಕಡ್ಡಾಯ ಸೇರಿದಂತೆ ನವೆಂಬರ್ 5ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.
 
pm modi unveils shankaracharya statue to Virat Kohli Birthday top 10 News of November 5 ckm
Author
Bengaluru, First Published Nov 5, 2021, 4:45 PM IST
  • Facebook
  • Twitter
  • Whatsapp

ಹಿಸಾರ್‌ನಲ್ಲಿ ಬಿಜೆಪಿ ಸಂಸದನ ವಿರುದ್ಧ ರೈತರ ಪ್ರತಿಭಟನೆ, ಕಾರಿನ ಗಾಜು ಪುಡಿಪುಡಿ!

pm modi unveils shankaracharya statue to Virat Kohli Birthday top 10 News of November 5 ckm

ಬಿಜೆಪಿಯ ರಾಜ್ಯಸಭಾ ಸಂಸದ ರಾಮಚಂದ್ರ ಜಾಂಗ್ರಾ ಶುಕ್ರವಾರ ಹಿಸಾರ್‌ನಲ್ಲಿ ಭಾರೀ ಪ್ರತಿಭಟನೆ ಎದುರಿಸಿದ್ದಾರೆ. ವಿಶ್ವಕರ್ಮ ಸಮಾಜದ ಧರ್ಮಶಾಲೆಯೊಂದರ ಶಂಕುಸ್ಥಾಪನೆಗಾಗಿ ಅವರು ನಾರ್ನಾಂಡ್ ತಲುಪಿದ್ದರು. ಪ್ರತಿಭಟನೆಯಿಂದಾಗಿ ಜಾಂಗ್ರಾ ಅವರ ಕಾರಿನ ಮುಂಭಾಗದ ಗಾಜು ಒಡೆದಿದೆ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ರೈತರ ಮೇಲೆ ಲಾಠಿ ಪ್ರಹಾರ ನಡೆಸಿದರು. ಇದರಿಂದ ಹಲವು ರೈತರು ಗಾಯಗೊಂಡಿದ್ದು, ಹಲವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ

ಗಂಟಲು ಕಿರಿ ಕಿರಿ, ಕಣ್ಣು ಉರಿ: ದೀಪಾವಳಿಗೆ ಬಸವಳಿದ ದೆಹಲಿ!

pm modi unveils shankaracharya statue to Virat Kohli Birthday top 10 News of November 5 ckm

 ದೆಹಲಿಯಲ್ಲಿ (Delhi) ಪಟಾಕಿ ನಿಷೇಧವಿದ್ದರೂ ಜನತೆ ದೀಪಾವಳಿ (Deepawali) ಹಬ್ಬವನ್ನು ನಿಯಮ ಉಲ್ಲಂಘಿಸಿ ಪಟಾಕಿ ಸಿಡಿಸುವುದರ ಮೂಲಕ ಸಂಭ್ರಮದಿಂದ ಆಚರಿಸಿದ್ದಾರೆ. ಗುರುವಾರ ಇಡೀ ದಿನ ಸಿಡಿಸಿದ ಪಟಾಕಿಯ ಪರಿಣಾಮವಾಗಿ ಶುಕ್ರವಾರ ಬೆಳಿಗ್ಗೆ ದೆಹಲಿ ಜನತೆ ತೀವ್ರ ತೊಂದರೆ ಎದುರಿಸಿದ್ದಾರೆ. ಗಂಟಲು ತುರಿಕೆ, ನೀರು ತಂಬಿದ ಕಣ್ಣುಗಳೊಂದಿಗೆ ಜನರು ತಮ್ಮ ದಿನವನ್ನು ಆರಂಭಿಸಿದ್ದಾರೆ. ಹೌದು! ಹಿಂದಿನ ದಿನ ಪಟಾಕಿ ಸಿಡಿಸಿದ ಕಾರಣ ವಾತಾವರಣ ಸೇರಿದ್ದ ವಿಷಕಾರಿ ಹೊಗೆಯೂ ಬೆಳ್ಳಂ ಬೆಳಿಗ್ಗೆ ಜನರ ಮೇಲೆ ಪರಿಣಾಮ ಬೀರಿದೆ.

ಪಿಎಂ ಆದ ಬಳಿಕ 5ನೇ ಬಾರಿ ಬಾಬಾ Kedarnath ಸನ್ನಿಧಾನ ತಲುಪಿದ ಮೋದಿ, ಹೀಗಿದೆ ವಿಶೇಷತೆ!

pm modi unveils shankaracharya statue to Virat Kohli Birthday top 10 News of November 5 ckm

ಪ್ರಧಾನಿಯಾದ ಬಳಿಕ ನರೇಂದ್ರ ಮೋದಿ (Narendra Modi) ಅವರು ಇಂದು 5ನೇ ಬಾರಿಗೆ ಕೇದಾರನಾಥ ಧಾಮಕ್ಕೆ ಭೇಟಿ ನೀಡಿದ್ದಾರೆ. ಇದು ಅವರ ಎರಡನೇ ಅವಧಿಯ ಮೊದಲ ಭೇಟಿಯಾಗಿದೆ. ಮೊದಲ ಅವಧಿಯಲ್ಲಿ 4 ಬಾರಿ ಕೇದಾರನಾಥಕ್ಕೆ ಹೋಗಿದ್ದರು. ಇಂದು ಬೆಳಗ್ಗೆ ಬಾಬಾಗೆ ಪೂಜೆ ಸಲ್ಲಿಸಿ ಜಲಾಭಿಷೇಕ ನೆರವೇರಿಸಿದರು. ಕೇದಾರನಾಥದಲ್ಲಿ ಆದಿ ಶಂಕರಾಚಾರ್ಯರ (Adi Shankaracharya) ಪ್ರತಿಮೆಯನ್ನು ಪ್ರಧಾನಿ ಉದ್ಘಾಟಿಸಿದರು. ಬಾಬಾ ಕೇದಾರವನ್ನು (Kedarnath) ಭೇಟಿ ಮಾಡಲು ಪ್ರಧಾನಿಯೊಬ್ಬರು ತಮ್ಮ ಅಧಿಕಾರಾವಧಿಯಲ್ಲಿ ಐದನೇ ಬಾರಿಗೆ ಕೇದಾರನಾಥ ಧಾಮವನ್ನು ತಲುಪಿದ್ದು ಸ್ವತಂತ್ರ ಭಾರತದಲ್ಲಿ ಇದೇ ಮೊದಲು.

Shankaracharya Statue:ಕೇದಾರನಾಥದಲ್ಲಿನ ಶಂಕರಾಚಾರ್ಯ ಪ್ರತಿಮೆ ಕೆತ್ತಿದ್ದು ಮೈಸೂರು ಶಿಲ್ಪಿ!

pm modi unveils shankaracharya statue to Virat Kohli Birthday top 10 News of November 5 ckm

ಉತ್ತರಾಖಂಡದ ಕೇದಾರನಾಥದಲ್ಲಿ(Kedarnath) ಪ್ರಧಾನಿ ನರೇಂದ್ರ ಮೋದಿ(Narnedra Modi) ಅವರು ನ.5ರ ಶುಕ್ರವಾರ ಉದ್ಘಾಟಿಸಲಿರುವ ಆದಿಗುರು ಶಂಕರಾಚಾರ್ಯರ(Adi Shankaracharya) ಸುಂದರ ಪುತ್ಥಳಿಯನ್ನು ಕೆತ್ತಿದ್ದು ಮೈಸೂರಿನ ಶಿಲ್ಪಿ ಅರುಣ್‌ ಯೋಗಿರಾಜ್‌. ಸ್ವತಃ ಪ್ರಧಾನಿ ಕಾರ್ಯಾಲಯವೇ ದೇಶದೆಲ್ಲೆಡೆ ಶಿಲ್ಪಿಗಾಗಿ ಹುಡುಕಾಡಿ, ಕೊನೆಗೆ ಮೈಸೂರಿನ(Mysuru, Karnataka) ಕಲಾವಿದನಿಂದ ಈ ಪುತ್ಥಳಿಯನ್ನು ಕೆತ್ತಿಸಿದೆ. 

Virat Kohli Birthday: 10 ತಿಂಗಳ ಮಗಳ ಜತೆ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ ವಿರಾಟ್ ಕೊಹ್ಲಿ..!

pm modi unveils shankaracharya statue to Virat Kohli Birthday top 10 News of November 5 ckm

ಬೆಂಗಳೂರು: ಟೀಂ ಇಂಡಿಯಾ (Team India) ನಾಯಕ ವಿರಾಟ್ ಕೊಹ್ಲಿ (Virat Kohli), ನವೆಂಬರ್ 05ರಂದು 33ನೇ ವಸಂತಕ್ಕೆ ಕಾಲಿರಿಸಿದ್ದಾರೆ. ಪ್ರತಿ ಬಾರಿಗಿಂತ ಈ ಬಾರಿಯ ಹುಟ್ಟುಹಬ್ಬ ಕೊಹ್ಲಿ ಪಾಲಿಗೆ ಅತ್ಯಂತ ಮಹತ್ವದ ಹುಟ್ಟುಹಬ್ಬವಾಗಿದೆ. ಏಕೆಂದರೆ ಈ ಬಾರಿ ತಮ್ಮ ಮಗಳು ವಮಿಕಾ (Vamika) ಜತೆ ಕೊಹ್ಲಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. 

ಪುನೀತ್ ಸಮಾಧಿ ಬಳಿ ನಿಂತು ಪುನೀತ್ ಬಗ್ಗೆ ಮಾತನಾಡುತ್ತಾ ಭಾವುಕರಾಗ ತಮಿಳು ನಟ ಸೂರ್ಯ!

pm modi unveils shankaracharya statue to Virat Kohli Birthday top 10 News of November 5 ckm

ತಮಿಳು ಚಿತ್ರರಂಗದ ಅದ್ಭುತ ನಟ ಸೂರ್ಯ ಇಂದು ಬೆಂಗಳೂರಿಗೆ ಆಗಮಿಸಿ ಪುನೀತ್ ಸಮಾಧಿಗೆ ಭೇಟಿ ನೀಡಿ ಆನಂತರ ಅವರ ನಿವಾಸಕ್ಕೆ ತೆರಳಿ ಕುಟುಂಬಸ್ಥರಿಗೆ ಧೈರ್ಯ ನೀಡಿದ್ದಾರೆ. ಮಾಧ್ಯಮಗಳಲ್ಲಿ ಮಾತನಾಡಿದ ಸೂರ್ಯ ಭಾವುಕರಾಗಿ ಅಪ್ಪು ಜೊತೆ ಕಳೆದ ಕ್ಷಣಗಳನ್ನು ಮೆಲುಕು ಹಾಕಿದ್ದಾರೆ.

'ಯೇ ಪವರ್ ಸ್ಟಾರ್' ಎಂದು ಕೂಗಿದ ಪುಟ್ಟ ಅಭಿಮಾನಿಗೆ ಪುನೀತ್ ಪ್ರತಿಕ್ರಿಯಿಸಿದ್ದು ಹೀಗೆ: ವೈರಲ್ ವಿಡಿಯೋ

pm modi unveils shankaracharya statue to Virat Kohli Birthday top 10 News of November 5 ckm

ಇಡೀ ಕರ್ನಾಟಕವೇ (Karnataka) ಶೋಕದಲ್ಲಿದೆ, ಈಗಲೂ ಪುನೀತ್ ನಮ್ಮ ಜೊತೆಗಿಲ್ಲ ಎಂದು ಯಾರಿಗೂ ಒಪ್ಪಿಕೊಳ್ಳಲು ಆಗುತ್ತಿಲ್ಲ. ಇಲ್ಲೇ ಇದ್ದಾರೆ, ಯಾವುದೋ ಶೂಟಿಂಗ್‌ ಮಾಡುತ್ತಿದ್ದಾರೆ ಎಂದೆನಿಸುತ್ತದೆ, ಸೋಷಿಯಲ್ ಮೀಡಿಯಾ (Social Media) ತುಂಬಾ ಅವರ ನಗು ಮುಖದ ಫೋಟೋ ಹಾಗೂ ವಿಡಿಯೋಗಳು ಹರಿದಾಡುತ್ತಿದೆ. ಈ ನಡುವೆ ಪುಟ್ಟ ಬಾಲಕನ ವಿಡಿಯೋ ವೈರಲ್ ಆಗುತ್ತಿದೆ.

JioPhone Next ಖರೀದಿಗೆ ಮುನ್ನ ನೋಂದಣಿ ಕಡ್ಡಾಯ!

pm modi unveils shankaracharya statue to Virat Kohli Birthday top 10 News of November 5 ckm

: ರಿಲಯನ್ಸ್‌ ಒಡೆತನದ ಜಿಯೋ ಕಂಪನಿ (Jio) ಮತ್ತು ಗೂಗಲ್‌ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಲಾದ ಅಗ್ಗದ ದರದ ಜಿಯೋಫೋನ್‌ ನೆಕ್ಸ್ಟ್‌(JioPhone Next) ಹೆಸರಿನ ಸ್ಮಾರ್ಟ್‌ಫೋನ್‌ ದೇಶದ್ಯಾಂತ ಮಾರಾಟಕ್ಕೆ ಲಭ್ಯವಾಗಿದೆ. 6499 ರು. ಬೆಲೆ ಬಾಳುವ ಈ ಮೊಬೈಲ್‌ ಅನ್ನು ರಿಲಯನ್ಸ್‌ ಡಿಜಿಟಲ್‌ (Reliance Digital) ಮಳಿಗೆಗಳಲ್ಲಿ ಲಭ್ಯವಿದ್ದು, ಗ್ರಾಹಕರು ಖರೀದಿಸಬಹುದಾಗಿದೆ. ಅಲ್ಲದೆ ಗ್ರಾಹಕರು ಕೇವಲ 1999 ರು. ಹಾಗೂ 500 ರು. ಪ್ರೊಸೆಸಿಂಗ್‌ ಶುಲ್ಕದೊಂದಿಗೆ (Processing Fee) ಬಾಕಿ ಹಣವನ್ನು ಪ್ರತೀ ತಿಂಗಳ ಕಂತು (EMI)ಗಳಲ್ಲಿ ಪಾವತಿಸುವ ರೀತಿಯಲ್ಲೂ ಈ ಮೊಬೈಲ್‌ ಖರೀದಿಸಲು ಅವಕಾಶವಿದೆ

Fuel Price| ಬಿಜೆಪಿಯ 8 ಸೇರಿ ಸೇರಿ 18 ರಾಜ್ಯಗಳಲ್ಲಿ ತೈಲ ಸುಂಕ ಇಳಿಕೆ!

pm modi unveils shankaracharya statue to Virat Kohli Birthday top 10 News of November 5 ckm

 ಕೇಂದ್ರ ಸರ್ಕಾರ ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ಅಬಕಾರಿ ಸುಂಕ ಇಳಿಸಿದ ಬೆನ್ನಲ್ಲೇ, 8 ಬಿಜೆಪಿ ಆಡಳಿತಾರೂಢ ರಾಜ್ಯಗಳಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ಮೌಲ್ಯ ವರ್ಧಿತ ತೆರಿಗೆಗಳನ್ನು ಇಳಿಕೆ ಮಾಡಲಾಗಿದೆ.

Follow Us:
Download App:
  • android
  • ios