Asianet Suvarna News Asianet Suvarna News

'ಯೇ ಪವರ್ ಸ್ಟಾರ್' ಎಂದು ಕೂಗಿದ ಪುಟ್ಟ ಅಭಿಮಾನಿಗೆ ಪುನೀತ್ ಪ್ರತಿಕ್ರಿಯಿಸಿದ್ದು ಹೀಗೆ: ವೈರಲ್ ವಿಡಿಯೋ

ಅಪ್ಪು ತಿರುಗಿ ನೋಡುವಂತೆ ಅವಾಜ್ ಹಾಕಿದ ಪುಟ್ಟ ಹುಡುಗನ ಜೊತೆ ಪುನೀತ್ ಹೇಗೆ ಮಾತನಾಡಿದ್ದರು ನೋಡಿ.... 

Kannada actor Puneeth Rajkumar reaction to little fan video goes viral vcs
Author
Bangalore, First Published Nov 5, 2021, 12:54 PM IST
  • Facebook
  • Twitter
  • Whatsapp

ಇಡೀ ಕರ್ನಾಟಕವೇ (Karnataka) ಶೋಕದಲ್ಲಿದೆ, ಈಗಲೂ ಪುನೀತ್ ನಮ್ಮ ಜೊತೆಗಿಲ್ಲ ಎಂದು ಯಾರಿಗೂ ಒಪ್ಪಿಕೊಳ್ಳಲು ಆಗುತ್ತಿಲ್ಲ. ಇಲ್ಲೇ ಇದ್ದಾರೆ, ಯಾವುದೋ ಶೂಟಿಂಗ್‌ ಮಾಡುತ್ತಿದ್ದಾರೆ ಎಂದೆನಿಸುತ್ತದೆ, ಸೋಷಿಯಲ್ ಮೀಡಿಯಾ (Social Media) ತುಂಬಾ ಅವರ ನಗು ಮುಖದ ಫೋಟೋ ಹಾಗೂ ವಿಡಿಯೋಗಳು ಹರಿದಾಡುತ್ತಿದೆ. ಈ ನಡುವೆ ಪುಟ್ಟ ಬಾಲಕನ ವಿಡಿಯೋ ವೈರಲ್ ಆಗುತ್ತಿದೆ.

ಹೊಸ ಪ್ರತಿಭೆಗಳಿಗೆ (New Talents) ಪುನೀತ್ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದರು. ಯಾರೇ ಸಿನಿಮಾ ಲಾಂಚ್ (Film Launch) ಕಾರ್ಯಕ್ರಮಕ್ಕೆ ಕರೆದರೂ ಅಥವಾ ಸಣ್ಣ ಕಾರ್ಯಕ್ರಮವಿರಲಿ ಬಿಡುವು ಮಾಡಿಕೊಂಡು ಹೋಗಿ ಭಾಗಿಯಾಗುವವರು. ಹೀಗೆ ಒಂದು ಕಾರ್ಯಕ್ರಮದಲ್ಲಿ ಅಪ್ಪು ವೇದಿಕೆ ಹತ್ತುವಾಗ ಸಮೀಪವೇ ಕೂತಿದ್ದ ಪುಟ್ಟ ಹುಡುಗನೊಬ್ಬ 'ಯೇ ಪುನೀತ್ ರಾಜ್‌ಕುಮಾರ್ ಪವರ್ ಸ್ಟಾರ್' ಎಂದು ಕೂಗುತ್ತಾನೆ. ಹಿಂದೆ ತಿರುಗಿ ಪುನೀತ್ (Puneeth Rajkumar) ನೋಡಿ ಸ್ಮೈಲ್ ಮಾಡುತ್ತಾರೆ ಅಷ್ಟೇ. ಇಡೀ ಕಾರ್ಯಕ್ರಮ ಮುಗಿದು ಹೊರಡುವಾಗ 'ಪುನೀತ್ ರಾಜ್‌ಕುಮಾರ್ ಹಾಯ್' ಎಂದು ಅ ಪುಟ್ಟ ಹುಡುಗ ಮತ್ತೆ ಕೂಗುತ್ತಾರೆ. ಆಗ ಅಪ್ಪು ಅವರಿಗೆ ಹ್ಯಾಂಡ್‌ಶೇಖ್ ಮಾಡಿ 'ಹೇ! ನೀನೇನಾ ಮಾತನಾಡಿದ್ದು. ಚಿಕ್ಕ ವಯಸ್ಸಿಗೆ ಚೆನ್ನಾಗಿ ಮಾತನಾಡುತ್ತೀಯ. ಸೂಪರ್' ಎಂದು ಹೇಳಿದ್ದಾರೆ. 

Kannada actor Puneeth Rajkumar reaction to little fan video goes viral vcs

ಪುಟ್ಟ ಕಂದಮ್ಮ ನನ್ನನ್ನು ಹಾಗೆ ಕರೆಯಿತು ಎಂದು ಒಂದು ಚೂರು ಮುನಿಸಿಕೊಳ್ಳದೆ ಅಪ್ಪು ಪ್ರತಿಕ್ರಿಯಿ ಕೊಟ್ಟ ರೀತಿಗೆ ನೆಟ್ಟಿಗರು ಫಿದಾ ಆಗಿದ್ದಾರೆ. ಒಂದು ದಿನವೂ ಅಪ್ಪು ಕೋಪ (Anger) ಮಾಡಿಕೊಂಡವರಲ್ಲ ತುಂಬಾ ತಾಳ್ಮೆಯಿಂದ ವಿಚಾರವನ್ನು ಅಭಿಮಾನಿಗಳಿಗೆ ಅರ್ಥ ಮಾಡಿಸುತ್ತಾರೆ. ಅಪ್ಪು ಅಗಲಿದ ನಂತರ ಅದೆಷ್ಟೋ ಸತ್ಯಗಳು ಹೊರ ಬರುತ್ತಿದೆ. ತಮ್ಮ ಸ್ವಂತ ಸಹೋದರರಿಗೂ (Siblings) ಹೇಳದೆ ಮಾಡಿರುವ ಸಹಾಯಗಳ ಬಗ್ಗೆ ಈಗೀಗ ರಿವೀಲ್ ಆಗುತ್ತಿದೆ. 

ಅಪ್ಪು ಅಭಿಮಾನಿಗಳು ಆತ್ಮಹತ್ಯೆ ಮಾಡಿಕೊಳ್ಳಬೇಡಿ: ಪುನೀತ್ ಕುಟುಂಬದವರ ಮನವಿ

ಹೀಗೆ ಖಾಸಗಿ ವಾಹಿನಿಯೊಂದರ ಜೊತೆ ಅಪ್ಪು ಒಂದು ಸಣ್ಣ ಹಳ್ಳಿಗೆ (Village) ಭೇಟಿ ನೀಡುತ್ತಾರೆ ಅಲ್ಲಿನ ಜನರು ತಮ್ಮ ಕಷ್ಟಗಳನ್ನು ಹೇಳಿಕೊಳ್ಳುವುದಕ್ಕೆ ಮುಂದಾಗುತ್ತಾರೆ ಆಗ ಪುನೀತ್‌ ಪಕ್ಕದಲ್ಲಿದ್ದ ಕ್ಯಾಮೆರಾ (Camera) ಹಾಗೂ ಮೈಕ್‌ನ ಆಫ್ ಮಾಡಲು ಹೇಳುತ್ತಾರೆ. ಆನಂತರ ಅಲ್ಲಿದ್ದ ಜನರ ಜೊತೆ ಚರ್ಚಿಸಿ ಸಹಾಯ ಮಾಡಲು ಮುಂದಾಗುತ್ತಾರೆ. ಇದು ಪವರ್ ಸ್ಟಾರ್ ಗುಣ.  

ಪುನೀತ್ ಜೊತೆಗೆ ಕೊನೆಯ ಸೆಲ್ಫಿ, ಮಾತು ಹಂಚಿಕೊಂಡ ರಾಘವೇಂದ್ರ ರಾಜ್‌ಕುಮಾರ್!

ಅಪ್ಪುಗೆ ಹೃದಯಘಾತ (Heatattack) ಆಗಿದೆ ಎಂದು ತಿಳಿಯುತ್ತಿದ್ದಂತೆ ಅಭಿಮಾನಿಯೊಬ್ಬ ಪ್ರತಿಯೊಂದ ವಾಹಿನಿಗೂ ಕರೆ ಮಾಡಿ ತನ್ನ ಹೃದಯವನ್ನು ಅಪ್ಪುಗೆ ನೀಡುವುದಾಗಿ ಹೇಳಿಕೊಂಡಿದ್ದಾರೆ. ಅಪ್ಪು ಬದುಕಿ ಬರಲು ಏನು ಬೇಕಿದ್ದರೂ ಮಾಡಲು ಸಿದ್ಧರಾಗಿದ್ದಾರೆ. ಅಪ್ಪು ಅಗಲಿಕೆ ವಿಚಾರ ಕೇಳಿ 12 ಮಂದಿ ಅಭಿಮಾನಿಗಳು ಸಾವಿಗೀಡಾಗಿದ್ದಾರೆ. 'ಅಪ್ಪಾಜಿ ದಯವಿಟ್ಟು ನಿಮ್ಮ ಕುಟುಂಬದ ಬಗ್ಗೆ ಚಿಂತೆ ಮಾಡಿ. ಈ ರೀತಿ ಮಾಡುವುದು ಪುನೀತ್‌ಗೂ ಇಷ್ಟವಿಲ್ಲ ಯಾರೂ ಈ ನಿರ್ಧಾರ ತೆಗೆದುಕೊಳ್ಳಬೇಡಿ. ಪುನೀತ್ ಅವರ ಪತ್ನಿ ಅಶ್ವಿನಿ ಅವರಿಗೆ ಮೊದಲೇ ನೋವಾಗಿದೆ ಇದರಿಂದ ಇನ್ನೂ ನೋವಾಗುತ್ತಿದೆ' ಎಂದು ರಾಘವೇಂದ್ರ ರಾಜ್‌ಕುಮಾರ್ ಮಾಧ್ಯಮಗಳಲ್ಲಿ ಮಾತನಾಡಿದ್ದಾರೆ. 

ಪುನೀತ್‌ಗೆ ಅಭಿಮಾನಿಗಳೇ ದೇವರು ಹೀಗಾಗಿ ಬೆಂಗಳೂರು ಅರಮನೆ ಮೈದಾನದಲ್ಲಿ ಕುಟುಂಬಸ್ಥರು ಹಮ್ಮಿಕೊಂಡಿರುವ ಪುಣ್ಯತಿಥಿಯಲ್ಲಿ ಅಭಿಮಾನಿಗಳಿಗೆ ಅನ್ನ ಸಂತರ್ಪಣೆ ನಡೆಯಲಿದೆ.

 

Follow Us:
Download App:
  • android
  • ios