Virat Kohli Birthday: 10 ತಿಂಗಳ ಮಗಳ ಜತೆ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ ವಿರಾಟ್ ಕೊಹ್ಲಿ..!
ಬೆಂಗಳೂರು: ಟೀಂ ಇಂಡಿಯಾ (Team India) ನಾಯಕ ವಿರಾಟ್ ಕೊಹ್ಲಿ (Virat Kohli), ನವೆಂಬರ್ 05ರಂದು 33ನೇ ವಸಂತಕ್ಕೆ ಕಾಲಿರಿಸಿದ್ದಾರೆ. ಪ್ರತಿ ಬಾರಿಗಿಂತ ಈ ಬಾರಿಯ ಹುಟ್ಟುಹಬ್ಬ ಕೊಹ್ಲಿ ಪಾಲಿಗೆ ಅತ್ಯಂತ ಮಹತ್ವದ ಹುಟ್ಟುಹಬ್ಬವಾಗಿದೆ. ಏಕೆಂದರೆ ಈ ಬಾರಿ ತಮ್ಮ ಮಗಳು ವಮಿಕಾ (Vamika) ಜತೆ ಕೊಹ್ಲಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಸದ್ಯ ವಿರಾಟ್ ಕೊಹ್ಲಿ ಯುಎಇನಲ್ಲಿದ್ದು, ಐಸಿಸಿ ಟಿ20 ವಿಶ್ವಕಪ್ (ICC T20 World Cup) ಟೂರ್ನಿಯಲ್ಲಿ ಟೀಂ ಇಂಡಿಯಾವನ್ನು ಮುನ್ನಡೆಸುತ್ತಿದ್ದಾರೆ. ಕಳೆದ 10 ತಿಂಗಳಲ್ಲಿ ವಮಿಕಾ ಕೆಲವೊಮ್ಮೆ ತಂದೆ-ತಾಯಿ ಜತೆ ಇಂಗ್ಲೆಂಡ್‌ನಲ್ಲಿದ್ದಳು, ಮತ್ತೆ ಕೆಲವೊಮ್ಮೆ ದುಬೈಗೂ ತೆರಳಿದ್ದಳು. ಇವೆಲ್ಲದರ ನಡುವೆ ಅನುಷ್ಕಾ ಶರ್ಮಾ (Anushka Sharma) ಜತೆ ವಮಿಕಾ ಮುಂಬೈನಲ್ಲೂ ಕೆಲಕಾಲ ಕಳೆದಿದ್ದಳು. ಕೊಹ್ಲಿ ಹುಟ್ಟುಹಬ್ಬದ ಸಂದರ್ಭದಲ್ಲಿ ವಿರಾಟ್ ಹಾಗೂ ವಮಿಕಾ ನಡುವಿನ ಸುಂದರ ಕ್ಷಣಗಳು ಹೇಗಿದ್ದವು ಎನ್ನುವುದನ್ನು ನೋಡೋಣ ಬನ್ನಿ
ವಿರಾಟ್ ಕೊಹ್ಲಿ 1988ರ ನವೆಂಬರ್ 05ರಂದು ಓರ್ವ ಪಂಜಾಬಿ ಕುಟುಂಬದಲ್ಲಿ ಜನಿಸಿದರು. ಕೊಹ್ಲಿಯ ನಿಕ್ ನೇಮ್ ಚೀಕೂ. ವಿರಾಟ್ 9 ವರ್ಷದವರಿದ್ದಾಗಲೇ ಕ್ರಿಕೆಟ್ ಆಡಲು ಆರಂಭಿಸಿದರು. ಇದೀಗ ಕಿಂಗ್ ಕೊಹ್ಲಿ 33ನೇ ವಸಂತಕ್ಕೆ ಕಾಲಿರಿಸಿದ್ದಾರೆ.
ಕೇವಲ ಕ್ರಿಕೆಟ್ ಆಟದಿಂದ ಮಾತ್ರವಲ್ಲ, ಒಮ್ಮೊಮ್ಮೆ ತಮ್ಮ ವೈಯುಕ್ತಿಕ ಜೀವನದ ವಿಚಾರದಲ್ಲೂ ವಿರಾಟ್ ಸುದ್ದಿಯಲ್ಲಿ ಇರುತ್ತಾರೆ. ಈ ವರ್ಷವಂತೂ ವಿರಾಟ್ ಪಾಲಿಗೆ ಅತ್ಯಂತ ಸುಂದರ ಕ್ಷಣಗಳಿಗೆ ಸಾಕ್ಷಿಯಾದ ವರ್ಷ. ಯಾಕೆಂದರೆ ಈ ವರ್ಷಾರಂಭದಲ್ಲಿ ಅಂದರೆ ಜನವರಿ 11ರಂದು ವಿರಾಟ್ ಕೊಹ್ಲಿ ಹೆಣ್ಣು ಮಗುವಿಗೆ ತಂದೆಯಾಗಿದ್ದಾರೆ.
बेटी- वामिका
2021ರಲ್ಲಿ ವಿರಾಟ್ ಕೊಹ್ಲಿ ಮೊದಲ ಬಾರಿಗೆ ತಮ್ಮ ಮಗಳ ಜತೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಸದ್ಯ ವಿರಾಟ್ ಕೊಹ್ಲಿಗೆ ದುಬೈನಲ್ಲಿ ಪತ್ನಿ ಅನುಷ್ಕಾ ಶರ್ಮಾ ಹಾಗೂ ಮಗಳು ವಮಿಕಾ ಸಾಥ್ ನೀಡಿದ್ದಾರೆ. ಕೊಹ್ಲಿ ಜನ್ಮದಿನದಂದೇ ಭಾರತ ತಂಡವು ಸ್ಕಾಟ್ಲೆಂಡ್ ತಂಡವನ್ನು ಎದುರಿಸಲಿದೆ.
ಇದಕ್ಕೂ ಮೊದಲು ಕಳೆದ ವರ್ಷ ಇದೇ ಸಂದರ್ಭದಲ್ಲಿ ಅನುಷ್ಕಾ ಶರ್ಮಾ ಗರ್ಭಿಣಿಯಾಗಿದ್ದರು. ಆ ಸಂದರ್ಭದಲ್ಲಿ ಸಹಾ ಅನುಷ್ಕಾ ತಮ್ಮ ಪತಿ ವಿರಾಟ್ ಜತೆ ಯುಎಇನಲ್ಲಿದ್ದರು. 2020ರ ಐಪಿಎಲ್ ಯುಎಇನಲ್ಲಿ ನಡೆದಿತ್ತು. ಆಗ ಆರ್‌ಸಿಬಿ ಆಟಗಾರರ ಜತೆ ಭರ್ಜರಿಯಾಗಿಯೇ ವಿರಾಟ್ ಕೊಹ್ಲಿ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು.
ದುಬೈನಲ್ಲಿರುವ ಅನುಷ್ಕಾ ಶರ್ಮಾ ತಮ್ಮ ಮಗಳು ವಮಿಕಾಗೆ ಹೆಲೋವಿನ್‌ಗಾಗಿ ಸುಂದರ ಉಡುಗೆ ತೊಡಿಸಿ ಸಿಂಗರಿಸಿದ್ದರು. ಈ ಫೋಟೋಗಳನ್ನು ಅನುಷ್ಕಾ ಇನ್‌ಸ್ಟಾಗ್ರಾಂನಲ್ಲೂ ಹಂಚಿಕೊಂಡಿದ್ದರು.
ಸಮಯ ಸಿಕ್ಕಾಗಲೆಲ್ಲಾ ವಿರಾಟ್ ಕೊಹ್ಲಿ ತಮ್ಮ ಹಾಗೂ ಮಗಳ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡುತ್ತಾ ಇರುತ್ತಾರೆ. ಆದರೆ ಇದುವರೆಗೂ ವಿರಾಟ್ ತಮ್ಮ ಪುತ್ರಿಯ ಮುಖ ಕಾಣುವಂತಹ ಫೋಟೋವನ್ನು ಹಂಚಿಕೊಂಡಿಲ್ಲ
ವಿರಾಟ್ ಕೊಹ್ಲಿ ತಮ್ಮ ಹುಟ್ಟುಹಬ್ಬದಂದು ಸ್ಕಾಟ್ಲೆಂಡ್ ಎದುರು ಅಬ್ಬರಿಸುವ ಮೂಲಕ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತಕ್ಕೆ ಎರಡನೇ ಗೆಲುವು ತಂದುಕೊಡುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.