Asianet Suvarna News Asianet Suvarna News

ನಾಳೆ ಕಲಬುರಗಿಗೆ ಪ್ರಧಾನಿ ಮೋದಿ, ಮಿಸ್ಟರ್ ಬಾಂಡ್‌ಗೆ 6 ಪ್ರಶ್ನೆ ಎಂದ ಪ್ರಿಯಾಂಕ್ ಖರ್ಗೆ!

ಪ್ರಧಾನಿ ನರೇಂದ್ರ ಮೋದಿ ಮಾ.16ಕ್ಕೆ ಕಲಬುರಗಿಗೆ ಆಗಮಿಸುತ್ತಿದ್ದಾರೆ. ರೋಡ್ ಶೋ, ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿರುವ ಮೋದಿ  ಭಾಷಣ ಮಾಡಲಿದ್ದಾರೆ. ಆದರೆ ಮೋದಿ ಆಗಮನವನ್ನು ಸಚಿವ ಪ್ರಿಯಾಂಕ್ ಖರ್ಗೆ ಮಿಸ್ಟರ್ ಬಾಂಡ್‌ಗೆ ಸ್ವಾಗತ ಎಂದು ವ್ಯಂಗ್ಯವಾಡಿದ್ದಾರೆ. ಇಷ್ಟೇ ಅಲ್ಲ 6 ಪ್ರಶ್ನೆ ಕೇಳಿದ್ದಾರೆ.
 

PM Modi to visit kalaburagi on March 16 for address mega rally ahead of Lok sabha Election 2024 ckm
Author
First Published Mar 15, 2024, 10:09 PM IST

ಕಲಬುರಗಿ(ಮಾ.15) ಲೋಕಸಭಾ ಚುನಾವಣೆ ಕಣ ರಂಗೇರಿದೆ. ದಕ್ಷಿಣ ಭಾರತ ಪ್ರವಾಸ ಮಾಡಲಿರುವ ಪ್ರಧಾನಿ ನರೇಂದ್ರ ಮೋದಿ ನಾಳೆ(ಮಾ.16) ಕರ್ನಾಟಕದ ಕಲಬುರಗಿಗೆ ಆಗಮಿಸುತ್ತಿದ್ದಾರೆ. ಖರ್ಗೆ ಕ್ಷೇತ್ರವಾಗಿರುವ ಕಲಬುರಗಿಯಲ್ಲಿ ಸಾರ್ವಜನಿಕ ಕಾರ್ಯಕ್ರಮ, ರೋಡ್ ಶೋ ಸೇರಿ ಸಾರ್ವಜನಿಕರ ಭಾಷಣ ಮಾಡಲಿದ್ದಾರೆ. ಆದರೆ ಪ್ರಧಾನಿ ಆಗಮನವನ್ನು ಕಾಂಗ್ರೆಸ್ ಸಚಿವ ಪ್ರಿಯಾಂಕ್ ಖರ್ಗೆ ಟ್ವಿಟರ್ ಮೂಲಕ ಮಿಸ್ಟರ್ ಬಾಂಡ್‌ಗೆ ಸ್ವಾಗತ ಎಂದಿದ್ದಾರೆ.  ಇದೇ ವೇಳೆ ನರೇಗಾ ವೇತನ, ಬರಗಾಲ ಅನುದಾನ ಸೇರಿದಂತೆ ಪ್ರಮುಖ 6 ಪ್ರಶ್ನೆಗಳನ್ನು ಕೇಳಿದ್ದಾರೆ.

ಮಾರ್ಚ್ 16ರ ಮಧ್ಯಾಹ್ನ  2 ಗಂಟೆಗೆ ಕಲಬುರಗಿ ವಿಮಾನ ನಿಲ್ದಾಣಕ್ಕೆ ಆಗಮಿಸುವ ಮೋದಿ ಬಳಿಕ ನೇರವಾಗಿ ರೋಡ್ ಶೋ ನಡೆಸಲಿದ್ದಾರೆ. 25 ನಿಮಿಷಗಳ ರೋಡ್ ಶೋ ಬಳಿಕ ಮೋದಿ 2.35ರ ವೇಳೆಗೆ ಸಾರ್ವಜನಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ವೇಳೆ ಸಾರ್ವಜನಿಕರನ್ನುದ್ದೇಶಿ ಭಾಷಣ ಮಾಡಲಿದ್ದರೆ. ಪ್ರಧಾನಿ ಮೋದಿಯ 2024ರ ಲೋಕಸಭಾ ಚುನಾವಣೆಯ ಮೊದಲ  ಸಾರ್ವಜನಿಕ ಸಭೆ ಕಲುಬುರಗಿಯಿಂದ ಆರಂಭಗೊಳ್ಳುತ್ತಿದೆ.  

ಎನ್‌ಡಿಎ ಮೈತ್ರಿಕೂಟದ ಭಾಗವಾಗ್ತಾರಾ ಜನಾರ್ದನ ರೆಡ್ಡಿ..? ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಸುತ್ತಾರಾ ?

ಮೋದಿ ಆಗಮನ ಕುರಿತು ಕಾಂಗ್ರೆಸ್ ಸಚಿವ ಪ್ರಿಯಾಂಕ್ ಖರ್ಗೆ ಟ್ವಿಟರ್ ಮೂಲಕ ವ್ಯಂಗ್ಯವಾಡಿದ್ದಾರೆ. ಕಲುಬುರಗಿಗೆ ಆಗಮಿಸತ್ತಿರುವ ಮಿಸ್ಟರ್ ಬಾಂಡ್ ಪ್ರಧಾನಿ ನರೇಂದ್ರ ಮೋದಿಗೆ ಕೆಲ ಪ್ರಶ್ನೆಗಳು. ಕಲಬುರಗಿ ಜನತೆ ಮಾ.16ರ ಕಾರ್ಯಕ್ರಮದಲ್ಲಿ ನಿಮ್ಮಿಂದ ಉತ್ತರ ಬಯಸುತ್ತಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ 6 ಪ್ರಶ್ನೆಗಳನ್ನೂ ಟ್ವೀಟ್ ಮಾಡಿದ್ದಾರೆ. ಪ್ರಶ್ನೆಗಳ ಬಳಿಕ ಪ್ರಿಯಾಂಕ್ ಖರ್ಗೆ ಮೋದಿ ಮೋಸಾ ಎಂದು ಹ್ಯಾಶ್‌ಟ್ಯಾಗ್ ಬಳಸಿದ್ದಾರೆ.  

 1) ನರೇಗಾ ಯೋಜನಡೆಯಡಿ ಕೆಲಸ ಮಾಡಿದ ಕಾರ್ಮಿಕರಿಗೆ ಕೇಂದ್ರ ಸರ್ಕಾರ ಯಾಕೆ ವೇತನ ಬಿಡುಗಡೆ ಮಾಡುತ್ತಿಲ್ಲ, ದಿವಾಳಿಯಾಗಿದೆಯಾ?

2) ಕರ್ನಾಟಕ ತೀವ್ರ ಬರಗಾಲ ಎದುರಿಸುತ್ತಿದ್ದರೂ ಕೂಡಾ ಮೋದಿ ಸರ್ಕಾರ ಎನ್ ಡಿ ಆರ್ ಎಫ್ ಅಡಿಯಲ್ಲಿ ಯಾಕೆ ಅನುದಾನ ಬಿಡುಗಡೆ ಮಾಡುತ್ತಿಲ್ಲ ?

3) ಕಳೆದ ಚುನಾವಣೆಯಲ್ಲಿ ಬಿಜೆಪಿ ಭರವಸೆ ನೀಡಿರುವಂತೆ, ಕೋಲಿ ಮತ್ತು ಗೊಂಡ ಕುರುಬ ಯಾವಾಗ ಪರಿಶಿಷ್ಟ ಪಂಗಡ ( ಎಸ್ ಟಿ) ಗೆ ಸೇರಿಸುತ್ತೀರಿ ?

ಹಲವು ರಾಜ್ಯಗಳಲ್ಲಿ ಕ್ಲೀನ್ ಸ್ವೀಪ್ ಮಾಡುತ್ತಾ ಎನ್‌ಡಿಎ..? ಹಿಂದಿ ರಾಜ್ಯಗಳಲ್ಲಿ ಮತ್ತೊಮ್ಮೆ ಮೋದಿ ಮೋಡಿ ಮಾಡ್ತಾರಾ..?

4) ಮಲ್ಲಿಕಾರ್ಜುನ ಖರ್ಗೆ ಅವರ ಅವಧಿಯಲ್ಲಿ ಮಂಜೂರಾಗಿದ್ದ ಕಲಬುರಗಿ ರೇಲ್ವೆ ವಲಯವನ್ನು ನಿಮ್ಮ ಸರ್ಕಾರ ಯಾಕೆ ಸ್ಥಾಪಿಸಲಿಲ್ಲ ?

5) ಕಲಬುರಗಿ ಗೆ ಬರಬೇಕಿದ್ದ ನಿಮ್ಝ್ ಯೋಜನೆಯನ್ನು ಯಾಕೆ ಸ್ಥಾಪಿಸಲಿಲ್ಲ ?

6) ಕಲಬುರಗಿ ಹೊರ ವರ್ತುಲ ರಸ್ತೆಗೆ ಯಾಕೆ ಅನುದಾನ ಬಿಡುಗಡೆ ಮಾಡಲಿಲ್ಲ ?


 

Follow Us:
Download App:
  • android
  • ios