Asianet Suvarna News Asianet Suvarna News

ಆರೋಗ್ಯ ಸೇವೆ ಪಡೆಯಲು ಒಂದು ಕ್ಲಿಕ್ ಸಾಕು; ಸೆ.27ರಂದು ಡಿಜಿಟಲ್ ಆರೋಗ್ಯ ಮಿಷನ್‌ಗೆ ಮೋದಿ ಚಾಲನೆ!

  • ಆರೋಗ್ಯ ಕ್ಷೇತ್ರದಲ್ಲಿ ತಡೆ ರಹಿತ ಆನ್ ಲೈನ್ ವೇದಿಕೆ
  • ಆರೋಗ್ಯ ರಕ್ಷಣಾ ಸೌಕರ್ಯವನ್ನು ಪಡೆಯಲು ಕೇವಲ ಒಂದು ಕ್ಲಿಕ್ 
  • ಸೆ.27ರ ಬೆಳಗ್ಗೆ 11 ಗಂಟೆಗೆ  ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ
PM Modi to launch Ayushman Bharat Digital Mission on 27th September ckm
Author
Bengaluru, First Published Sep 26, 2021, 6:01 PM IST
  • Facebook
  • Twitter
  • Whatsapp

ನವದೆಹಲಿ(ಸೆ.26): ದೇಶದ ಆರೋಗ್ಯ ವ್ಯವಸ್ಥೆಯಲ್ಲಿ(Health Sector) ಮಹತ್ತರ ಬದಲಾವಣೆಗಳಾಗಿದೆ. ಕೊರೋನಾ(Coronavirus) ವಕ್ಕರಿಸಿದ ಬಳಿಕ ಮೂಲಭೂತ ಸೌಕರ್ಯಗಳ ಹೆಚ್ಚಳ, ವೈದ್ಯಕೀಯ ಸಲಕರಣೆಗಳ ಉತ್ಪಾದನೆ, ಸರ್ಕಾರಿ ಆಸ್ಪತ್ರೆಗಳು ಮೇಲ್ದರ್ಜೆಗೆ ಸೇರಿದಂತೆ ಹಲವು ಬದಲಾವಣೆ ಆಗಿದೆ. ಇದೀಗ ಜನ ಸಾಮಾನ್ಯರು ಆರೋಗ್ಯ ಸೇವೆ ಪಡೆಯಲು ಡಿಜಿಟಲ್ ಆರೋಗ್ಯ ಮಿಷನ್‌ಗೆ(PM DH M) ನಾಳೆ ಚಾಲನೆ ನೀಡಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ(Narendra Modi) ಸೆಪ್ಟೆಂಬರ್ 27ರ ಬೆಳಗ್ಗೆ 11 ಗಂಟೆಗೆ ವಿಡಿಯೋ ಕಾನ್ಫೆರೆನ್ಸ್ ಮೂಲಕ ಡಿಜಿಟಲ್ ಆರೋಗ್ಯ ಮಿಷನ್‌ಗೆ ಚಾಲನೆ ನೀಡಲಿದ್ದಾರೆ. 

 

3YearsofPMJAY:3 ವರ್ಷದ ಪೂರೈಸಿದ ವಿಶ್ವದ ಅತಿ ದೊಡ್ಡ ಹೆಲ್ತ್‌ ಸ್ಕೀಂ 'ಆಯುಷ್ಮಾನ್‌ ಭಾರತ್‌'!

202ರ ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯಂದು ಪ್ರಧಾನಿ ಮೋದಿ, ಕೆಂಪುಟ ಕೋಟೆಯಲ್ಲಿ ನಿಂತು ಮಾಡಿದ ಭಾಷಣದಲ್ಲಿ ಡಿಜಿಟಲ್ ಆರೋಗ್ಯ ಯೋಜನೆಯ(Ayushman Bharat Digital Mission) ಪ್ರಾಯೋಗಿಕ ಯೋಜನೆಯನ್ನು ಪ್ರಕಟಿಸಿದ್ದರು. ಇದೀಗ ಪ್ರಾಯೋಗಿಕವಾಗಿ  ಡಿಜಿಟಲ್ ಆರೋಗ್ಯ ಮಿಷನ್‌ 6 ಕೇಂದ್ರಾಡಳಿತ ಪ್ರದೇಶದಲ್ಲಿ ಜಾರಿಗೊಳಿಸಲಾಗುತ್ತಿದೆ. ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ (AV PM JAY)ಮೂರನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಡಿಜಿಟಲ್ ಆರೋಗ್ಯ ಮಿಷನ್‌ಗೆ ಚಾಲನೆ ನೀಡಲಾಗುತ್ತಿದೆ. 

ಆಯುಷ್ಮಾನ್‌ ಭಾರತದಲ್ಲಿ ಕರ್ನಾಟಕ ದೇಶಕ್ಕೇ ನಂ.1!

ಡಿಜಿಟಲ್ ಆರೋಗ್ಯ ಮಿಷನ್:
ಜನ ಧನ್, ಆಧಾರ್ ಮತ್ತು ಮೊಬೈಲ್  ಮತ್ತು ಸರ್ಕಾರದ ಇತರೆ ಡಿಜಿಟಲ್ ಉಪಕ್ರಮಗಳ ಅಡಿಪಾಯದ ಆಧಾರದ ಮೇಲೆ, ಡಿಜಿಟಲ್ ಆರೋಗ್ಯ ಮಿಷನ್ ವ್ಯಾಪಕ ಶ್ರೇಣಿಯ ದತ್ತಾಂಶ ಮತ್ತು ಮಾಹಿತಿ ಒದಗಿಸುವ ಮೂಲಕ ತಡೆರಹಿತ ಆನ್ ಲೈನ್ ವೇದಿಕೆಯನ್ನು ಒದಗಿಸಲಿದೆ. ಜೊತೆಗೆ ಮಾಹಿತಿ ಹಾಗೂ ಮೂಲಸೌಕರ್ಯ ಸೇವೆಗಳು, ಆರೋಗ್ಯಕ್ಕೆ ಸಂಬಂಧಿಸಿದ ವೈಯಕ್ತಿಕ ಮಾಹಿತಿಯ ರಕ್ಷಣೆ, ಗೋಪ್ಯತೆ ಮತ್ತು ಗೋಪ್ಯತೆಯನ್ನು ಖಾತ್ರಿಪಡಿಸುವ ಮೂಲಕ ಮುಕ್ತ, ಪರಸ್ಪರ ಕಾರ್ಯನಿರ್ವಹಿಸುವ ಮಾನದಂಡ ಆಧಾರಿತ ಡಿಜಿಟಲ್ ವ್ಯವಸ್ಥೆಗಳನ್ನು ಸರಿಯಾಗಿ ಬಳಸಿಕೊಳ್ಳಲು ಸಾಧ್ಯವಾಗಲಿದೆ. ಈ ಮಿಷನ್ ನಾಗರಿಕ ಒಪ್ಪಿಗೆಯೊಂದಿಗೆ ಆರೋಗ್ಯದ ದಾಖಲೆಗಳನ್ನು ಹೊಂದಲು ಮತ್ತು ವಿನಿಮಯವನ್ನು ಸಕ್ರಿಯಗೊಳಿಸಲಿದೆ.

ಜಮ್ಮು ಕಾಶ್ಮೀರ ನಿವಾಸಿಗಳಿಗೆ ಆಯುಷ್ಮಾನ್ ಭಾರತ್ ಜಯ್ ಸೆಹತ್ ಸ್ಕೀಮ್; 

ಡಿಜಿಟಲ್ ಆರೋಗ್ಯ ಮಿಷನ್ ಯೋಜನೆಯ ಒಂದು ಪ್ರಮುಖ ಅಂಶವೆಂದರೆ, ಪ್ರತಿಯೊಬ್ಬ ನಾಗರಿಕನಿಗೂ ಒಂದು ಆರೋಗ್ಯ ಐಡಿಯನ್ನು ಒಳಗೊಂಡಿರುತ್ತದೆ. ಅದು ಅವರ ಆರೋಗ್ಯ ಖಾತೆಯಾಗಿಯೂ ಕಾರ್ಯನಿರ್ವಹಿಸಲಿದೆ. ಇದಕ್ಕೆ ವೈಯಕ್ತಿಕ ಆರೋಗ್ಯ ದಾಖಲೆಗಳನ್ನು ಸಂಯೋಜಿಸಬಹುದು ಮತ್ತು ಮೊಬೈಲ್ ಅಪ್ಲಿಕೇಷನ್ ಸಹಾಯದಿಂದ ನೋಡಬಹುದು. ಹೆಲ್ತ್ ಕೇರ್ ಪ್ರೊಫೆಷನಲ್ ರಿಜಿಸ್ಟ್ರಿ (ಎಚ್ ಪಿಆರ್) ಮತ್ತು  ಹೆಲ್ತ್ ಕೇರ್ ಫೆಸಿಲಿಟಿಸ್ ರಿಜಿಸ್ಟ್ರಿ (ಎಚ್ ಎಫ್ ಆರ್ ) ಆಧುನಿಕ ಮತ್ತು ಸಾಂಪ್ರದಾಯಿಕ ಔಷಧಿಗಳೆರಡರಲ್ಲೂ ಎಲ್ಲ ಆರೋಗ್ಯ ಸೇವಾ ಪೂರೈಕೆದಾರರ ಭಂಡಾರವಾಗಿ ಕಾರ್ಯನಿರ್ವಹಿಸಲಿದೆ. ಇದು ವೈದ್ಯರು/ಆಸ್ಪತ್ರೆಗಳು ಮತ್ತು ಆರೋಗ್ಯ ಸೇವಾ ಪೂರೈಕೆದಾರರಿಗೆ ಸುಲಭವಾಗಿ ವ್ಯವಹಾರವನ್ನು ಖಚಿತಪಡಿಸುತ್ತದೆ.

ಮಿಷನ್ ನ ಒಂದು ಭಾಗವಾಗಿ ರಚಿಸಲಾಗಿರುವ ಪಿಎಂ-ಡಿಎಚ್ ಎಂ ಸ್ಯಾಂಡ್ ಬಾಕ್ಸ್, ತಂತ್ರಜ್ಞಾನ ಮತ್ತು ಉತ್ಪನ್ನ ಪರೀಕ್ಷೆಯ ಚೌಕಟ್ಟಾಗಿ ಕಾರ್ಯನಿರ್ವಹಿಸಲಿದೆ. ಇದು ಖಾಸಗಿ ಪಾಲುದಾರರು ಸೇರಿದಂತೆ ಎಲ್ಲ ಸಂಸ್ಥೆಗಳಿಗೂ ಸಹಾಯ ಮಾಡಲಿದೆ. ರಾಷ್ಟ್ರೀಯ ಡಿಜಿಟಲ್ ಆರೋಗ್ಯ ವ್ಯವಸ್ಥೆಯ ಭಾಗವಾಗಲು ಉದ್ದೇಶಿಸಿರುವ ಇದು ಆರೋಗ್ಯ ಮಾಹಿತಿ ಪೂರೈಕೆದಾರರು ಅಥವಾ ಆರೋಗ್ಯ ಮಾಹಿತಿ ಬಳಕೆದಾರರು ಅಥವಾ ಪಿಎಂ-ಡಿಎಚ್ ಎಂನ ಕಟ್ಟಡಗಳ ಸಮುಚ್ಛಯದೊಂದಿಗೆ ಪರಿಣಾಕಾರಿಯಾಗಿ ಲಿಂಕ್ ಮಾಡಲಾಗುವುದು.

ಈ  ಮಿಷನ್ ಪಾವತಿ ವ್ಯವಸ್ಥೆಯಲ್ಲಿ ಕ್ರಾಂತಿಯನ್ನುಂಟು ಮಾಡಿದ ಯೂನಿಫೈಡ್ ಪೇಮೆಂಟ್ ಇಂಟರ್ಫೇಸ್ ನಿರ್ವಹಿಸಿದ್ದ ಪಾತ್ರದಲ್ಲಿ ಇದು ಡಿಜಿಟಲ್ ಆರೋಗ್ಯ ಪೂರಕ ವ್ಯವಸ್ಥೆಯಲ್ಲಿ ಪರಸ್ಪರ ಕಾರ್ಯಸಾಧ್ಯತೆಯನ್ನು ಸೃಷ್ಟಿಸುತ್ತದೆ. ನಾಗಿರಕರು ಆರೋಗ್ಯ ರಕ್ಷಣಾ ಸೌಕರ್ಯವನ್ನು ಪಡೆಯಲು ಕೇವಲ ಒಂದು ಕ್ಲಿಕ್ ಮಾಡುವಷ್ಟು ದೂರದಲ್ಲಿರುತ್ತಾರೆ.

Follow Us:
Download App:
  • android
  • ios