ಪ್ರಧಾನಿ ನರೇಂದ್ರ ಮೋದಿ ಆಯುಷ್ಮಾನ್ ಭಾರತ್ ಜಯ್ ಸೆಹೆತ್ ವಿಮೆ ಯೋಜನೆಯನ್ನು ಜಮ್ಮು ಮತ್ತು ಕಾಶ್ಮೀರದ ಎಲ್ಲಾ ನಿವಾಸಿಗಳಿಗೆ ವಿಸ್ತರಿಸುತ್ತಿದ್ದಾರೆ. ಪಿಎಂ ಜಯ್ ಸೆಹೆತ್ ವಿಮೆ ಯೋಜನೆಯನ್ನು ಡಿ.26ರಂದು ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ. ಈ ಕುರಿತ ಮಾಹಿತಿ ಇಲ್ಲಿದೆ.
ನವದೆಹಲಿ(ಡಿ.24): ಜಮ್ಮು ಮತ್ತು ಕಾಶ್ಮೀರದ ಎಲ್ಲಾ ನಿವಾಸಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಪಿಎಂ ಜಯ್ ಸೆಹೆತ್ ವಿಮೆ ಯೋಜನೆ ವಿಸ್ತರಿಸಿದ್ದಾರೆ. ಆಯುಷ್ಮಾನ್ ಭಾರತ್ ವಿಮೆ ಯೋಜನೆ ವಂಚಿತರಾದ ಕಣಿವೆ ರಾಜ್ಯದ ನಿವಾಸಿಗಳಿಗೆ ಇದೀಗ ಪಿಎಂ ಜಯ್ ಸೆಹೆತ್ ಯೋಜನೆ ನೀಡಲು ಮೋದಿ ನಿರ್ಧರಿಸಿದ್ದಾರೆ. ಡಿಸೆಂಬರ್ 26 ರಂದು ಮೋದಿ ಜಯ್ ಸೆಹತ್ ವಿಮೆ ಯೋಜನೆ ಉದ್ಘಾಟಿಸಲಿದ್ದಾರೆ.
ಆಯುಷ್ಮಾನ್ ಭಾರತ ಅಡಿ ಉಚಿತ ಕೊರೋನಾ ಚಿಕಿತ್ಸೆ!.
ಡಿಸೆಂಬರ್ 26ರ ಮಧ್ಯಾಹ್ನ 12 ಗಂಚೆಗೆ ವಿಡಿಯೋ ಕಾನ್ಫೆರನ್ಸ್ ಮೂಲಕ ಮೋದಿ ವಿಮೆ ಯೋಜನೆ ಉದ್ಘಾಟನೆ ಮಾಡಲಿದ್ದಾರೆ. ಆರೋಗ್ಯ ವಿಮೆ, ಹಣಕಾಸು ಸಮಸ್ಯೆಗೆ ಪರಿಹಾರ ಸೇರಿದಂತೆ ಗುಣಮಟ್ಟದ ಹಾಗೂ ಕೈಗೆಟುಕುವ ಆರೋಗ್ಯ ಸೇವೆಗಳನ್ನು ಪಡೆಯಬಲ್ಲ ಯೋಜನೆ ಇದಾಗಿದೆ.
ಆಯುಷ್ಮಾನ್ ಭಾರತ್ ಯೋಜನೆ ವ್ಯಾಪ್ತಿಗೆ ಕೊರೋನಾ ಚಿಕಿತ್ಸೆ ಸೇರ್ಪಡೆ!.
ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರದ ಎಲ್ಲಾ ನಿವಾಸಿಗಳಿಗೆ ಉಚಿತವಾಗಿ ವಿಮೆ ರಕ್ಷಣೆ ಒದಗಿಸಲಿದೆ. ಪ್ರತಿ ಕುಟುಂಬಕ್ಕೆ 5 ಲಕ್ಷ ರೂಪಾಯಿ ಕ್ಯಾಶ್‌ಲೆಸ್ ಹೆಲ್ತ್ ಕವರ್ ನೀಡಲಿದೆ. ಪಿಎಂ ಜಯ್ ಸೆಹೆತ್ ಯೋಜನೆ 15 ಲಕ್ಷ ಕಣಿವೆ ರಾಜ್ಯದ ನಿವಾಸಿಗಳಿಗೆ ನೆರವಾಗಲಿದೆ. ಪಿಎಂ-ಜಯ್ ಜಂಟಿ ವಿಮಾ ಕ್ರಮದಲ್ಲಿ ಕಾರ್ಯನಿರ್ವಹಸಲಿದೆ.
ಕೇಂದ್ರದ ಸರ್ಕಾರ PM-JAY ವಿಮೆಗಾಗಿ ಹಲವು ಆಸ್ಪತ್ರೆಗಳ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದ್ದು, ಈ ಆಸ್ಪ್ರೆಗಳಲ್ಲಿ ಸೇವೆ ಪಡೆಯಬಹುದಾಗಿದೆ. ಚಿಕಿತ್ಸೆ, ಆರೈಕೆ, ಗುಣಮಟ್ಟದ ಆರೋಗ್ಯ ಸೇವೆಗಳ ಸಂಪೂರ್ಣ ನೆರವು ಸಿಗಲಿದೆ. ನೂತನ ಆರೋಗ್ಯ ಸೇವೆಯಿಂದ ಜನರನ್ನು ಆರ್ಥಿಕ ಸಂಕಷ್ಟಕ್ಕೆ ತಳ್ಳುವ ಅಪಾಯವನ್ನು ತಪ್ಪಿಸುತ್ತದೆ ಎಂದು ಪ್ರಧಾನ ಮಂತ್ರಿ ಕಾರ್ಯಾಲಯ ಪ್ರಕಟಣೆಯಲ್ಲಿ ಹೇಳಿದೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Dec 24, 2020, 7:39 PM IST