Asianet Suvarna News Asianet Suvarna News

ಮೋದಿ ಸೇನಾ ಸಮವಸ್ತ್ರಕ್ಕೆ ಕಾಂಗ್ರೆಸ್ ಕಿಡಿ, 10 ಸಿನಿಮಾ ಒಪ್ಪಿಕೊಂಡಿದ್ದ ಅಪ್ಪು; ನ.07ರ ಟಾಪ್ 10 ಸುದ್ದಿ!

ಸೇನಾ ಸಮವಸ್ತ್ರದಲ್ಲಿ ಕಾಣಿಸಿಕೊಂಡ ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್ ಕಿಡಿ ಕಾರಿದೆ.  ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಜೇಮ್ಸ್‌ ಚಿತ್ರದ ನಂತರ 10 ಬಿಗ್ ಬಜೆಟ್ ಸಿನಿಮಾಗಳಿಗೆ ಸಹಿ ಮಾಡಿದ್ದರು. ಇತರ ಎಲ್ಲಾ ರಾಜ್ಯಕ್ಕಿಂತ ಕರ್ನಾಟಕದಲ್ಲಿ ಇಂಧನ ಅಗ್ಗವಾಗಿದೆ. ಬಿಗ್‌ಬಾಸ್ ಶೋ ಹೆಸರು ಬದಲಾವಣೆ, ಮೆಸೇಜ್: ಚಾಟಿಂಗ್, ಮೀಟಿಂಗ್‌ನಿಂದ 5 ಲಕ್ಷ ಕಳೆದುಕೊಂಡ ಭೂಪ ಸೇರಿದಂತೆ ನವೆಂಬರ್ 7ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

PM Modi Military uniform to Puneeth Rajkumar death top 10 News Of November 7 ckm
Author
Bengaluru, First Published Nov 7, 2021, 5:35 PM IST
  • Facebook
  • Twitter
  • Whatsapp

Petrol Diesel price: ಇತರ ಎಲ್ಲಾ ರಾಜ್ಯಕ್ಕಿಂತ ಕರ್ನಾಟಕದಲ್ಲಿ ಇಂಧನ ಅಗ್ಗ!

PM Modi Military uniform to Puneeth Rajkumar death top 10 News Of November 7 ckm

 ಸತತ ಏರಿಕೆ ಕಾಣುತ್ತಿದ್ದ ಪೆಟ್ರೋಲ್ ಹಾಗೂ ಡೀಸೆಲ್(Petrol Diesel Price0 ಬೆಲೆ ಅಬಕಾರಿ ಸುಂಕ(VAT) ಕಡಿತದ ಬಳಿಕ ತಟಸ್ಥಗೊಂಡಿದೆ. ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಜನತೆಗೆ ಸುಂಕ ಕಡಿತಗೊಳಿಸುವ ಮೂಲಕ ಕೇಂದ್ರ ಸರ್ಕಾರ ಕೊಂಚ ರಿಲೀಫ್ ನೀಡಿತ್ತು. ಇದರ ಬೆನ್ನಲ್ಲೇ ಬಿಜೆಪಿ(BJP) ಆಡಳಿತ ರಾಜ್ಯಗಳು ರಾಜ್ಯ ಸರ್ಕಾರ ಹಾಕಿದ್ದ ಸುಂಕ ಕಡಿತಗೊಳಿಸಿದೆ. ಪರಿಣಾಮ ದೇಶದಲ್ಲಿ ಇದೀಗ ಕರ್ನಾಟಕದಲ್ಲಿ(Karnataka) ಪೆಟ್ರೋಲ್ ಡೀಸೆಲ್ ಅಗ್ಗವಾಗಿದೆ.

ಸೇನಾ ಸಮವಸ್ತ್ರದಲ್ಲಿ ಮೋದಿ, ಕಾಂಗ್ರೆಸ್ ಕಿಡಿ: ಸಾಮಾನ್ಯ ನಾಗರಿಕರು ಆರ್ಮಿ ಯೂನಿಫಾರ್ಮ್ ಧರಿಸ್ಬಹುದಾ?

PM Modi Military uniform to Puneeth Rajkumar death top 10 News Of November 7 ckm

ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ದೀಪಾವಳಿಯಂದು ನೌಶೇರಾಗೆ (Nowshera, Jammu and Kashmir) ತೆರಳಿ ಅಲ್ಲಿ ಸೈನಿಕರೊಂದಿಗೆ ಹಬ್ಬ ಆಚರಿಸಿ, ಅವರನ್ನು ಹುರುದುಂಬಿಸಿದ್ದಾರೆ. 

ನಾಳೆಗೆ ಕೊನೆಯಾಗಲಿದೆ ಸರ್ಕಾರಿ ಅಧಿಕಾರಿಗೆ ಸಿಗೋ ಈ ಸೌಲಭ್ಯ, ಇಲ್ಲಿದೆ ಹೊಸ ಮಾರ್ಗಸೂಚಿ!

PM Modi Military uniform to Puneeth Rajkumar death top 10 News Of November 7 ckm

ಕೊರೋನಾ ಕಾಲದಲ್ಲಿ (Covid Crisis) ಸರ್ಕಾರಿ ನೌಕರರಿಗೆ (Govt Employees) ನೀಡಲಾಗುತ್ತಿದ್ದ ಸೌಲಭ್ಯಗಳನ್ನು ಈಗ ರದ್ದುಗೊಳಿಸಲಾಗುತ್ತಿದೆ. ಈ ರಿಯಾಯಿತಿ ನವೆಂಬರ್ 8 ರಿಂದ ಮುಕ್ತಾಯಗೊಳ್ಳಲಿವೆ. ಇನ್ಮುಂದೆ ಸರ್ಕಾರಿ ನೌಕರರು ಪೂರ್ಣಾವಧಿ ಹಾಜರಾತಿಯನ್ನು ಕಚೇರಿಯಲ್ಲಿ ನೋಂದಾಯಿಸಿಕೊಳ್ಳಬೇಕು. ಹಾಜರಾತಿ ದಾಖಲಿಸಲು ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆಯನ್ನು ನಾಳೆಯಿಂದ ಮರುಸ್ಥಾಪಿಸಲಾಗುತ್ತಿದೆ.

Syed Mushtaq Ali Trophy: ಕರ್ನಾಟಕಕ್ಕೆ ಹ್ಯಾಟ್ರಿಕ್‌ ಗೆಲುವು!

PM Modi Military uniform to Puneeth Rajkumar death top 10 News Of November 7 ckm

ನಾಯಕ ಮನೀಶ್‌ ಪಾಂಡೆ ಆಕರ್ಷಕ ಅರ್ಧಶತಕ ಹಾಗೂ ಬೌಲರ್‌ಗಳ ಶಿಸ್ತುಬದ್ಧ ದಾಳಿಯ ನೆರವಿನಿಂದ ಸಯ್ಯದ್‌ ಮುಷ್ತಾಕ್‌ ಅಲಿ ಟಿ20 ಟೂರ್ನಿಯಲ್ಲಿ ಕರ್ನಾಟಕ ತಂಡ ಸರ್ವಿಸಸ್‌ ವಿರುದ್ಧ 33 ರನ್‌ಗಳಿಂದ ಗೆಲುವು ಸಾಧಿಸಿದೆ. ಇದರೊಂದಿಗೆ ರಾಜ್ಯ ತಂಡ ಹ್ಯಾಟ್ರಿಕ್‌ ಜಯ ಸಾಧಿಸಿ, ಎಲೈಟ್‌ ‘ಬಿ’ ಗುಂಪಿನಲ್ಲಿ ಅಗ್ರಸ್ಥಾನಕ್ಕೇರಿದೆ. ಮುಂಬೈ ತಂಡದ ಎದುರು ಕರ್ನಾಟಕ ಕ್ರಿಕೆಟ್ ತಂಡವು 9 ರನ್‌ಗಳ ರೋಚಕ ಜಯ ಸಾಧಿಸಿತ್ತು ಹಾಗೂ ಛತ್ತಿಸ್‌ಗಢ ವಿರುದ್ಧ 4 ವಿಕೆಟ್‌ಗಳ ಜಯ ಸಾಧಿಸಿತ್ತು. 

ಪುನೀತ್ ಮೇಲೆ 200 ಕೋಟಿ ಬಂಡವಾಳ; 10 ಸಿನಿಮಾಗಳನ್ನು ಒಪ್ಪಿಕೊಂಡಿದ್ದ ಅಪ್ಪು!

PM Modi Military uniform to Puneeth Rajkumar death top 10 News Of November 7 ckm

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಜೇಮ್ಸ್‌ ಚಿತ್ರದ ನಂತರ 10 ಬಿಗ್ ಬಜೆಟ್ ಸಿನಿಮಾಗಳಿಗೆ ಸಹಿ ಮಾಡಿದ್ದರು. ಈಗಾಗಲೇ ನಿರ್ಮಾಪಕರು 200 ಕೋಟಿ ಬಜೆಟ್ ಪ್ಲಾನ್ ಕೂಡ ಮಾಡಿಕೊಂಡಿದ್ದಾರೆ. ಈ 10 ಸಿನಿಮಾಗಳ ಲಿಸ್ಟ್‌ನಲ್ಲಿ ಒಂದು ಚಿತ್ರದಲ್ಲಿ ಅಪ್ಪು 80 ವರ್ಷದ ವೃದ್ಧನ ಪಾತ್ರವೂ ಮಾಡಬೇಕಿತ್ತಂತೆ.

Biggboss ರಿಯಾಲಿಟಿ ಶೋ ಹೆಸರು ಬದಲಾವಣೆ ?

PM Modi Military uniform to Puneeth Rajkumar death top 10 News Of November 7 ckm

ಬಿಗ್ ಬಾಸ್ 15 ಟಿಆರ್‌ಪಿಯೊಂದಿಗೆ ಎತ್ತರಕ್ಕೆ ಏರುತ್ತಿದೆ. ಎಲ್ಲಾ ವಿವಾದಗಳು ಮತ್ತು ಮನೆಯೊಳಗಿನ ಜಗಳ, ಲವ್, ಫ್ರೆಂಡ್‌ಶಿಪ್‌ಗೆ ನೆಟ್ಟಿಗರು ಸಾಕ್ಷಿಯಾಗುತ್ತಿರುವಂತೆ ಕಾರ್ಯಕ್ರಮವು ಭಾರೀ ವೀಕ್ಷಣೆ ಪಡೆಯುತ್ತಿದೆ.

WhatsAppನಲ್ಲಿ Good Morning ಮೆಸೇಜ್: ಚಾಟಿಂಗ್, ಮೀಟಿಂಗ್‌ನಿಂದ 5 ಲಕ್ಷ ಕಳೆದುಕೊಂಡ ಭೂಪ!

PM Modi Military uniform to Puneeth Rajkumar death top 10 News Of November 7 ckm

 ವಾಟ್ಸಾಪ್‌ನಲ್ಲಿ (WhatsApp) 'ಶುಭೋದಯ' ಸಂದೇಶಗಳನ್ನು ಕಳುಹಿಸುತ್ತಿದ್ದ ಅಪರಿಚಿತರನ್ನು ಭೇಟಿಯಾಗಲು ಹೋದ 50 ವರ್ಷದ ವ್ಯಕ್ತಿಯ ಖಾತೆಯಿಂದ 5 ಲಕ್ಷ ರೂ ವರ್ಗಾಯಿಸಿ (Transfer) ವಂಚಿಸಿರುವ ಘಟನೆ ಬೆಂಗಳೂರಿನಲ್ಲಿ (Bengaluru) ನಡೆದಿದೆ.

ಪಿಎಂ ಆದರೆ ಕೊಡುವ ಮೊದಲ ಸರ್ಕಾರಿ ಆದೇಶವೇನು? ಕೈ ನಾಯಕ ರಾಹುಲ್ ಕೊಟ್ಟ ಉತ್ತರವಿದು!

PM Modi Military uniform to Puneeth Rajkumar death top 10 News Of November 7 ckm

ಕಾಂಗ್ರೆಸ್ ನಾಯಕ ಹಾಗೂ ಪಕ್ಷದ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ (Rahul gandhi) ಬಳಿ ನೀವು ಪ್ರಧಾನಿಯಾದರೆ ಮಾಡುವ ಮೊದಲ ಕೆಲಸವೇನು ಎಂದು ಪ್ರಶ್ನಿಸಲಾಗಿದ್ದು, ಅವರು ನೀಡಿರುವ ಉತ್ತರ ಸದ್ಯ ಭಾರೀ ವೈರಲ್ ಆಗಿದೆ. 

Iraq ಪ್ರಧಾನಿ ನಿವಾಸದ ಮೇಲೆ ಡ್ರೋನ್‌ ದಾಳಿ! 

PM Modi Military uniform to Puneeth Rajkumar death top 10 News Of November 7 ckm

 ಬಾಗ್ದಾದ್‌ನಲ್ಲಿರುವ ಇರಾಕಿನ ಪ್ರಧಾನ ಮಂತ್ರಿ ಮುಸ್ತಫಾ ಅಲ್-ಕಧಿಮಿ (Mustafa al-Kadhimi) ಅವರ ನಿವಾಸಕ್ಕೆ ಸ್ಫೋಟಕಗಳಿಂದ ತುಂಬಿದ್ದ ಡ್ರೋನ್ (Drone) ಭಾನುವಾರ ಮುಂಜಾನೆ  ದಾಳಿ ಮಾಡಿದೆ. ಇರಾಕಿ ಮಿಲಿಟರಿ ಇದನ್ನು ಹತ್ಯೆಯ ಯತ್ನ ಎಂದು ಕರೆದಿದ್ದು ಪ್ರಧಾನಿ ಕದಿಮಿ ಅವರಿಗೆ ಯಾವುದೇ ಗಾಯಗಳಾಗಿಲ್ಲ ಎಂದು ಸೇನೆ ತಿಳಿಸಿದೆ. 

Follow Us:
Download App:
  • android
  • ios