Iraq ಪ್ರಧಾನಿ ನಿವಾಸದ ಮೇಲೆ ಡ್ರೋನ್‌ ದಾಳಿ!

*ಇರಾಕ್‌ ಪ್ರಧಾನಿ ನಿವಾಸದ ಮೇಲೆ ಡ್ರೋನ್‌ ದಾಳಿ
*ಮುಸ್ತಫಾ ಅಲ್-ಕಧಿಮಿ  ಅಪಾಯದಿಂದ ಪಾರು
*ಆರು ಭದ್ರತಾ ಸಿಬ್ಬಂದಿಗಳಿಗೆ ಗಾಯ : ಹತ್ಯೆಯ ಯತ್ನ ಎಂದ ಸೇನೆ

Explosives-Laden Drone Targets Iraq PM Mustafa al-Kadhimi House in Bgdad

ಇರಾಕ್‌ (ನ. 7 ): ಬಾಗ್ದಾದ್‌ನಲ್ಲಿರುವ ಇರಾಕಿನ ಪ್ರಧಾನ ಮಂತ್ರಿ ಮುಸ್ತಫಾ ಅಲ್-ಕಧಿಮಿ (Mustafa al-Kadhimi) ಅವರ ನಿವಾಸಕ್ಕೆ ಸ್ಫೋಟಕಗಳಿಂದ ತುಂಬಿದ್ದ ಡ್ರೋನ್ (Drone) ಭಾನುವಾರ ಮುಂಜಾನೆ  ದಾಳಿ ಮಾಡಿದೆ. ಇರಾಕಿ ಮಿಲಿಟರಿ ಇದನ್ನು ಹತ್ಯೆಯ ಯತ್ನ ಎಂದು ಕರೆದಿದ್ದು ಪ್ರಧಾನಿ ಕದಿಮಿ ಅವರಿಗೆ ಯಾವುದೇ ಗಾಯಗಳಾಗಿಲ್ಲ ಎಂದು ಸೇನೆ ತಿಳಿಸಿದೆ. 

ಕಳೆದ ತಿಂಗಳು ನಡೆದ ಸಾರ್ವತ್ರಿಕ ಚುನಾವಣೆಯ ಫಲಿತಾಂಶದ ಕುರಿತು ಇರಾಕಿನ ರಾಜಧಾನಿಯಲ್ಲಿ ನಡೆದ ಪ್ರತಿಭಟನೆಗಳು (Protest) ಹಿಂಸಾಚಾರಕ್ಕೆ ತಿರುಗಿದ್ದವು. ಇದೇ ಹಿನ್ನೆಲೆಯಲ್ಲಿ ದಾಳಿ ಮಾಡಲಾಗಿದ್ದು ಕಧಿಮಿ ಅವರ ವೈಯಕ್ತಿಕ ರಕ್ಷಣೆಗೆ ನಿಯೋಜಿಸಿದ್ದ ಹಲವಾರು ಸೇನೆಯ ಸದಸ್ಯರು ಗಾಯಗೊಂಡಿದ್ದಾರೆ ಎಂದು ಭದ್ರತಾ ಮೂಲಗಳು (Security sources) ತಿಳಿಸಿವೆ.

ಸಾವು ಬದುಕಿನ ಹೋರಾಟದಲ್ಲಿ ಚೀನಾ ಪತ್ರಕರ್ತೆ; ವುಹಾನ್ ಸತ್ಯ ಹೇಳಿ ಅರೆಸ್ಟ್ ಆಗಿದ್ದ ಝಾಂಗ್!

ಚುನಾವಣೆಯಲ್ಲಿ ಅಕ್ರಮದ ಆರೋಪ!

ಅಕ್ಟೋಬರ್ ಮತದಾನದ ಫಲಿತಾಂಶದ ಬಗ್ಗೆ ಇರಾನ್-ಬೆಂಬಲಿತ  ಗುಂಪುಗಳು ((Iran Iran-backed militias) ಮತದಾನ ಮತ್ತು ಮತ ಎಣಿಕೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿದ್ದವು. ಈ  ಗುಂಪುಗಳ ಬಳಿ ಭಾರೀ-ಶಸ್ತ್ರಾಸ್ತ್ರಗಳ ಸಂಗ್ರಹವಿದೆ ಎಂದು ಹೇಳಲಾಗಿದೆ. ಇವರು  ಚುನಾವಣೆಯಲ್ಲಿ ತಮ್ಮ ಸಂಸದೀಯ ಅಧಿಕಾರವನ್ನು ಕಳೆದುಕೊಂಡಿದ್ದರು. ಆದರೆ ಸರ್ಕಾರಿ ಕಟ್ಟಡಗಳು ಮತ್ತು ವಿದೇಶಿ ರಾಯಭಾರ ಕಚೇರಿಗಳನ್ನು ಹೊಂದಿರುವ ಬಾಗ್ದಾದ್‌ನ  ಹಸಿರು ವಲಯದಲ್ಲಿರುವ (Green Zone) ಕಧಿಮಿ ಅವರ ನಿವಾಸದ ಮೇಲಿನ ದಾಳಿಯ ಹೊಣೆಯನ್ನು ಈವರೆಗೂ ಯಾವುದೇ ಗುಂಪು ವಹಿಸಿಕೊಂಡಿಲ್ಲ.

ವಿಶ್ವದ ಅತ್ಯಂತ ಪುರಾತನ ಮದ್ಯ ಫ್ಯಾಕ್ಟರಿಯಲ್ಲಿ ಸಿಕ್ತು 1,400 ವರ್ಷ ಹಳೆಯ ಉಂಗುರ!

ಟ್ವೀಟರ್‌ ಮೂಲಕ ಪ್ರಧಾನಿ ಸ್ಪಷ್ಟನೆ!

ಕಧಿಮಿ ಅವರ ನಿವಾಸವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದ್ದು, ಅವರಿಗೆ ಯಾವುದೇ ತೊಂದರೆಯಾಗಿಲ್ಲ ಎಂದು ಇರಾಕ್ ಮಿಲಿಟರಿಯ (Military) ಹೇಳಿಕೆ ತಿಳಿಸಿದೆ. ಈ ಬಗ್ಗೆ ಯಾವುದೇ ಹೆಚ್ಚಿನ ವಿವರಗಳನ್ನು ಸೇನೆ ನೀಡಿಲ್ಲ. ಕಧಿಮಿ ಅವರ ಅಧಿಕೃತ ಟ್ವಿಟ್ಟರ್ (Twitter) ಖಾತೆಯಲ್ಲಿ ಪ್ರಧಾನಿ ಸುರಕ್ಷಿತವಾಗಿದ್ದಾರೆ ಎಂದು ಮಾಹಿತಿ ನೀಡಿದ್ದೂ ಜನರು ಶಾಂತವಾಗಿರಲು ಕರೆ ನೀಡಲಾಗಿದೆ. ಪ್ರಧಾನಿ ನಿವಾಸ  ಹೊರಗಿದ್ದ ಕಾವಲು ಪಡೆಯ ಆರು ಸದಸ್ಯರು ಗಾಯಗೊಂಡಿದ್ದಾರೆ ಎಂದು ಭದ್ರತಾ ಮೂಲಗಳು ತಿಳಿಸಿವೆ.

 

 

ಇತ್ತೀಚಿನ ವರ್ಷಗಳಲ್ಲಿ ಸಂಸತ್ತು (parliament) ಮತ್ತು ಸರ್ಕಾರದಲ್ಲಿ (Government) ತಮ್ಮ ಶಕ್ತಿಯನ್ನು ಹೆಚ್ಚಿಸಿಕೊಂಡಿರುವ ಇರಾನ್-ಸಂಯೋಜಿತ ಸೇನಾ ಗುಂಪುಗಳ ಬೆಂಬಲಿಗರು ಅಕ್ಟೋಬರ್ 10 ರ ಚುನಾವಣೆಯ ಫಲಿತಾಂಶಗಳ (Election Reslut) ಮತ ಎಣಿಕೆಯಲ್ಲಿ ವಂಚನೆ ಮತ್ತು ಅಕ್ರಮವಾಗಿದೆ ಎಂದು ಆರೋಪಿಸಿದ್ದಾರೆ. ಮತದಾನದ ಫಲಿತಾಂಶಗಳನ್ನು ವಿರೋಧಿಸಿದ್ದ ಗುಂಪುಗಳ ಬೆಂಬಲಿಗರ ಪ್ರತಿಭಟನೆಯು ಹಿಂಸಾಚಾರಕ್ಕೆ ತಿರುಗಿತ್ತು. ಪ್ರತಿಭಟನಾಕಾರರು  ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ ಪರಿಣಾಮ ಹಲವಾರು ಅಧಿಕಾರಿಗಳು ಗಾಯಗೊಂಡಿದ್ದರು.

600 ಪ್ರತಿಭಟನಾಕಾರರ ಹತ್ಯೆಯ ಆರೋಪ!

ಬಾಗ್ದಾದ್‌ನ ಭದ್ರತಾ ಮತ್ತು ಆಸ್ಪತ್ರೆಯ ಮೂಲಗಳ ಪ್ರಕಾರ, ಪ್ರತಿಭಟನಾಕಾರರ ಮೇಲೆ ಪೊಲೀಸರು ಅಶ್ರುವಾಯು ಮತ್ತು ನೇರ ಗುಂಡೇಟಿನಿಂದ ಪ್ರತಿಕ್ರಿಯಿಸಿದ್ದರು, ಈ ವೇಳೆ ಕನಿಷ್ಠ ಒಬ್ಬ ಪ್ರತಿಭಟನಾಕಾರನನ್ನು ಕೊಲ್ಲಲಾಗಿತ್ತು ಎಂದು ವರದಿಗಳು ತಿಳಿಸಿವೆ. 2019 ರಲ್ಲಿ  ಇರಾಕ್‌ ಸರ್ಕಾರದ ವಿರುದ್ದ ಜನರು ಬೀದಿಗಿಳಿದು ಪ್ರತಿಭಟನೆ ನಡೆಸಿದಾಗ  ಸುಮಾರು 600 ಪ್ರತಿಭಟನಾಕಾರರ ಹತ್ಯೆಯಲ್ಲಿ ಇರಾನ್‌ ಬೆಂಬಲಿತ ಗುಂಪುಗಳು ಭಾಗಿಯಾಗಿದ್ದವು ಎಂದು ಆರೋಪಿಸಲಾಗಿದೆ. ಈ ಬೆನ್ನಲ್ಲೇ ಚುನಾವಣೆಯಲ್ಲಿ ಇರಾನ್ ಬೆಂಬಲಿತ ಸಶಸ್ತ್ರ ಗುಂಪುಗಳ ವಿರುದ್ಧ ಮತನಾಡ ಮಾಡಲಾಗಿದೆ ಎಂದು ರಾಜಕೀಯ ವಿಶ್ಲೇಷಕರು (Political Analyst) ತಿಳಿಸಿದ್ದಾರೆ.

Latest Videos
Follow Us:
Download App:
  • android
  • ios