Asianet Suvarna News Asianet Suvarna News

ನಾಳೆಗೆ ಕೊನೆಯಾಗಲಿದೆ ಸರ್ಕಾರಿ ಅಧಿಕಾರಿಗೆ ಸಿಗೋ ಈ ಸೌಲಭ್ಯ, ಇಲ್ಲಿದೆ ಹೊಸ ಮಾರ್ಗಸೂಚಿ!

* ಕೊರೋನಾ ಕಾಲದಲ್ಲಿ ನೀಡಲಾಗಿದ್ದ ರಿಯಾಯಿತಿ ಹಿಂಪಡೆದ ಕೇಂದ್ರ ಸರ್ಕಾರ

 * ನವೆಂಬರ್ 8 ರಿಂದ ಮುಕ್ತಾಯಗೊಳ್ಳಲಿವೆ ಸೌಲಭ್ಯಗಳು

* ನೂತನ ಮಾರ್ಗಸೂಚಿ ಬಿಡುಗಡೆ ಮಾಡಿದ ಕೇಂದ್ರ

Govt to resume biometric attendance for employees of all level from November 8 pod
Author
Bangalore, First Published Nov 7, 2021, 12:41 PM IST

ನವದೆಹಲಿ(ನ.07): ಕೊರೋನಾ ಕಾಲದಲ್ಲಿ (Covid Crisis) ಸರ್ಕಾರಿ ನೌಕರರಿಗೆ (Govt Employees) ನೀಡಲಾಗುತ್ತಿದ್ದ ಸೌಲಭ್ಯಗಳನ್ನು ಈಗ ರದ್ದುಗೊಳಿಸಲಾಗುತ್ತಿದೆ. ಈ ರಿಯಾಯಿತಿ ನವೆಂಬರ್ 8 ರಿಂದ ಮುಕ್ತಾಯಗೊಳ್ಳಲಿವೆ. ಇನ್ಮುಂದೆ ಸರ್ಕಾರಿ ನೌಕರರು ಪೂರ್ಣಾವಧಿ ಹಾಜರಾತಿಯನ್ನು ಕಚೇರಿಯಲ್ಲಿ ನೋಂದಾಯಿಸಿಕೊಳ್ಳಬೇಕು. ಹಾಜರಾತಿ ದಾಖಲಿಸಲು ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆಯನ್ನು ನಾಳೆಯಿಂದ ಮರುಸ್ಥಾಪಿಸಲಾಗುತ್ತಿದೆ.

ಬಯೋಮೆಟ್ರಿಕ್ ಹಾಜರಾತಿ (Biometric Attendance) ಕುರಿತು ಎಲ್ಲಾ ಕೇಂದ್ರ ಕಚೇರಿಗಳಲ್ಲಿ ಅಧಿಸೂಚನೆ ಹೊರಡಿಸಲಾಗಿದೆ. ಭಾರತ ಸರ್ಕಾರದ ಉಪ ಕಾರ್ಯದರ್ಶಿ ಉಮೇಶ್ ಕುಮಾರ್ ಭಾಟಿಯಾ ಅವರ ಪ್ರಕಾರ, ಕೊರೋನಾ ಸೋಂಕಿನ ದೃಷ್ಟಿಯಿಂದ, ಕಚೇರಿಗಳಲ್ಲಿ ಕಡಿಮೆ ಸಂಖ್ಯೆಯ ಉದ್ಯೋಗಿಗಳನ್ನು ಕರೆಯುವುದು ಮತ್ತು ಕೆಲಸದ ಸಮಯವನ್ನು ಕಡಿಮೆ ಮಾಡುವುದು ಮುಂತಾದ ರಿಯಾಯಿತಿಗಳನ್ನು ಈಗಾಗಲೇ ರದ್ದುಗೊಳಿಸಲಾಗಿದೆ. ಈಗ ನವೆಂಬರ್ 8 ರಿಂದ, ಪ್ರತಿಯೊಬ್ಬ ಉದ್ಯೋಗಿ ಬಯೋಮೆಟ್ರಿಕ್ ಹಾಜರಾತಿಯನ್ನು ನೋಂದಾಯಿಸಬೇಕು ಎಂದಿದ್ದಾರೆ.

ಕೆನರಾ ಬ್ಯಾಂಕ್‌ ನಿವ್ವಳ ಲಾಭ ಶೇ. 200ರಷ್ಟು ಹೆಚ್ಚಳ

* ಈ ನಿಟ್ಟಿನಲ್ಲಿಕೇಂದ್ರ ಸರ್ಕಾರ (Union Govt) ನೂತನ ಮಾರ್ಗಸೂಚಿಯನ್ನು (Guidlines) ಹೊರಡಿಸಿದೆ. ಮಾರ್ಗಸೂಚಿಯ ಪ್ರಕಾರ, ಬಯೋಮೆಟ್ರಿಕ್ ಯಂತ್ರದ ಬಳಿ ಸ್ಯಾನಿಟೈಸರ್ (Sanitiser) ಇಡುವುದು ಅವಶ್ಯಕ. ಹಾಜರಾತಿಯನ್ನು ನೋಂದಾಯಿಸುವ ಮೊದಲು ಮತ್ತು ನಂತರ ಎಲ್ಲಾ ಉದ್ಯೋಗಿಗಳು ಸ್ಯಾನಿಟೈಜರ್‌ನಿಂದ ತಮ್ಮ ಕೈಗಳನ್ನು ಸ್ವಚ್ಛಗೊಳಿಸಬೇಕು.

* ಬಯೋಮೆಟ್ರಿಕ್ ಹಾಜರಾತಿಯನ್ನು ನೋಂದಾಯಿಸುವಾಗ ನೌಕರರು ತಮ್ಮ ನಡುವೆ ಆರು ಅಡಿ ಅಂತರವನ್ನು ಕಾಯ್ದುಕೊಳ್ಳಬೇಕು.

* ಎಲ್ಲಾ ಉದ್ಯೋಗಿಗಳು ತಪ್ಪದೇ ಇಡೀ ದಿನ ಮಾಸ್ಕ್ ಧರಿಸಬೇಕು ಅಥವಾ ಮುಖವನ್ನು ಮುಚ್ಚಿಕೊಳ್ಳಬೇಕು.

* ಬಯೋಮೆಟ್ರಿಕ್ ಯಂತ್ರದ ಟಚ್‌ಪ್ಯಾಡ್ ಅನ್ನು ಆಗಾಗ್ಗೆ ಸ್ವಚ್ಛಗೊಳಿಸಲು ಗೊತ್ತುಪಡಿಸಿದ ಸಿಬ್ಬಂದಿಯನ್ನು ನಿಯೋಜಿಸಬೇಕು. ಈ ಉದ್ಯೋಗಿಗಳು ತಮ್ಮ ಹಾಜರಾತಿಯನ್ನು ನೋಂದಾಯಿಸಲು ಬರುವ ಉದ್ಯೋಗಿಗಳಿಗೆ ಕೋವಿಡ್ ಸ್ನೇಹಿ ನಡವಳಿಕೆಯನ್ನು ಕಾಪಾಡಿಕೊಳ್ಳಲು ಮಾರ್ಗದರ್ಶನ ನೀಡುತ್ತಾರೆ.

* ಬಯೋಮೆಟ್ರಿಕ್ ಯಂತ್ರವನ್ನು ತೆರೆದ ವಾತಾವರಣದಲ್ಲಿ ಇಡಬೇಕು. ಯಂತ್ರವು ಒಳಗಿದ್ದರೆ, ಸಾಕಷ್ಟು ನೈಸರ್ಗಿಕ ವಾತಾಯನ ಇರಬೇಕು.

ಕೇಂದ್ರ ಉದ್ಯೋಗಿಗಳಿಗೆ ದೀಪಾವಳಿ ಬೋನಸ್

2021ರ ಜುಲೈ 1ರಿಂದಲೇ ಪೂರ್ವಾನ್ವಯವಾಗುವಂತೆ ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆಯನ್ನು ಶೇ.28 ರಿಂದ ಶೇ.31ಕ್ಕೆ ಹೆಚ್ಚಿಸಲಾಗಿದೆ ಎಂದು ಕೇಂದ್ರ ವಿತ್ತ ಸಚಿವಾಲಯ (Ministry of Finance) ಹೇಳಿದೆ. ಕೇಂದ್ರ ಸರ್ಕಾರಿ ನೌಕರರ ಮೂಲದ ವೇತನದ ಶೇ.28ರಷ್ಟು ಇದ್ದ ತುಟ್ಟಿಭತ್ಯೆಯನ್ನು ಶೇ.31ಕ್ಕೆ ಹೆಚ್ಚಿಸುವ ಮತ್ತು ತುಟ್ಟಿಭತ್ಯೆ ಪರಿಹಾರ ಹೆಚ್ಚಿಸುವ ನಿರ್ಧಾರವನ್ನು ಕಳೆದ ವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಕೈಗೊಳ್ಳಲಾಗಿತ್ತು. 

ನಾಗರಿಕ ಸೇವೆಗಳಿಗಾಗಿ ಭದ್ರತಾ ಸೇವೆಗಳ ಇಲಾಖೆಯಿಂದ ಪಾವತಿಸಲಾಗುವ ನಾಗರಿಕ ಸಿಬ್ಬಂದಿಗೂ ಇದು ಅನ್ವಯವಾಗಲಿದೆ. ಅಲ್ಲದೆ ರೈಲ್ವೆ ಸಿಬ್ಬಂದಿ, ಸೇನಾ ಪಡೆಗಳ ಸಿಬ್ಬಂದಿಯ ಡಿಎ ಕುರಿತಾಗಿ ರಕ್ಷಣಾ ಸಚಿವಾಲಯ ಮತ್ತು ರೈಲ್ವೆ ಇಲಾಖೆ ಪ್ರತ್ಯೇಕ ಆದೇಶಗಳನ್ನು ಹೊರಡಿಸಲಿವೆ. ಸರ್ಕಾರದ ಈ ಕ್ರಮದಿಂದ 47.14 ಲಕ್ಷ ಮಂದಿ ಸರ್ಕಾರಿ ನೌಕರರು ಮತ್ತು 68.62 ಲಕ್ಷ ಮಂದಿ ಪಿಂಚಣಿದಾರರಿಗೆ ನೆರವಾಗಲಿದೆ. "... ಕೇಂದ್ರ ಸರ್ಕಾರಿ ನೌಕರರಿಗೆ ಪಾವತಿಸಬೇಕಾದ ತುಟ್ಟಿಭತ್ಯೆಯನ್ನು ಪ್ರಸ್ತುತ ಇರುವ ಶೇಕಡಾ 28 ರಿಂದ ಶೇಕಡಾ 31 ಕ್ಕೆ ಹೆಚ್ಚಿಸಿ, ಜುಲೈ 1, 2021 ರಿಂದ ಜಾರಿಗೆ ತರಲಾಗುವುದು  "ಎಂದು ವಿತ್ತ ಸಚಿವಾಲಾಯ  ತಿಳಿಸಿದೆ.

ಕೇಂದ್ರ ಸರ್ಕಾರಿ ನೌಕರರಿಗೆ ಗುಡ್‌ ನ್ಯೂಸ್‌ ನೀಡಿದ್ದ ಅನುರಾಗ್‌ ಠಾಕೂರ್‌!

ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರ ಶೇ. 3ರಷ್ಟು  ತುಟ್ಟಿ ಭತ್ಯೆ (Dearness allowance) ಹೆಚ್ಚಳಕ್ಕೆ ಕೇಂದ್ರ ಸಂಪುಟ ಗ್ರೀನ್‌ ಸಿಗ್ನಲ್ ನೀಡಿತ್ತು. ಈ ಹೆಚ್ಚಳದ ನಂತರ ಒಟ್ಟು ತುಟ್ಟಿ ಭತ್ಯೆ 31% ಆಗಲಿದೆ. ತುಟ್ಟಿ ಭತ್ಯೆ ಮತ್ತು ತುಟ್ಟಿ ಭತ್ಯೆ ಪರಿಹಾರದ ಹೆಚ್ಚಳದಿಂದ 47.14 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು  68.62 ಲಕ್ಷ ಪಿಂಚಣಿದಾರರು ಲಾಭ ಪಡೆಯಲಿದ್ದಾರೆ. ಇದರಿಂದ ಕೇಂದ್ರದ ಖಜಾನೆ ಮೇಲೆ ಪ್ರತಿ ವರ್ಷ 34,400 ಕೋಟಿ ಹೊರೆಯಾಗಲಿದೆ. ಜುಲೈ 1, 2021 ರಿಂದ ಈ ಭತ್ಯೆ ಅನ್ವಯಿಸುತ್ತದೆ ಎಂದು ಕೇಂದ್ರ ಮಂತ್ರಿ ಅನುರಾಗ್‌ ಠಾಕೂರ್‌ (Anuragh Thakur) ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದ್ದರು. 

ದೀಪಾವಳಿ ಪ್ರಯುಕ್ತ ಸರ್ಕಾರಿ ನೌಕರರಿಗೆ ಕೇಂದ್ರದಿಂದ ಗುಡ್‌ ನ್ಯೂಸ್‌ !

ಕೊರೋನಾ ವೈರಸ್‌ (Coronavirus) ಕಾರಣದಿಂದಾಗಿ ಕೇಂದ್ರ ಸರ್ಕಾರಿ ನೌಕರರು (Central govt employees) ಮತ್ತು ಪಿಂಚಣಿದಾರರು  ಜನವರಿ 1 2020, ಜುಲೈ 1 2020 ಮತ್ತು ಜನವರಿ 1 2021 ಒಟ್ಟು ಮೂರು ಕಂತಿನ ತುಟ್ಟಿಭತ್ಯೆ (ಡಿಎ) ಹಾಗೂ ತುಟ್ಟಿ ಭತ್ಯೆ ಪರಿಹಾರ (ಡಿಆರ್‌) ಮೊತ್ತವನ್ನು ತಡೆಹಿಡಿಯಲಾಗಿತ್ತು. ಒಂದು ವರ್ಷದ ನಂತರ ಜುಲೈ ತಿಂಗಳನಲ್ಲಿ  ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ನೀಡಲಾಗುವ ಡಿಯರ್ನೆಸ್ ಅಲಾವೆನ್ಸ (DA) ಮತ್ತು ಡಿಯರ್ನೆಸ್ ರಿಲೀಫ್ (DR) ಅನ್ನು ಶೇ .17 ರಿಂದ 28 ಕ್ಕೆ ಹೆಚ್ಚಿಸಲು ಕೇಂದ್ರವು ಅನುಮೋದನೆ ನೀಡಿತ್ತು.  

Follow Us:
Download App:
  • android
  • ios