Asianet Suvarna News Asianet Suvarna News

ಜೆಪಿ ನಡ್ಡಾ, ಬಿಎಲ್ ಸಂತೋಷ್ ಭೇಟಿಯಾದ ಪ್ರಧಾನಿ ಮೋದಿ; ಮಹತ್ವದ ಚರ್ಚೆ!

  • BJP ರಾಷ್ಟ್ರೀಯ ಅಧ್ಯಕ್ಷ, ರಾಷ್ಟ್ರೀಯ ಕಾರ್ಯದರ್ಶಿ ಜೊತೆ ಮೋದಿ ಸಭೆ
  • ಜೆಪಿ ನಡ್ಡಾ ಅಧೀಕೃತ ನಿವಾಸದಲ್ಲಿ ಮಹತ್ವದ ಸಭೆ
  • ಸಭೆಯಲ್ಲಿ ಬಿಜೆಪಿ ಹಿರಿಯ ನಾಯಕರು ಭಾಗಿ
PM Modi met BJP president J P Nadda party secretaries for review upcoming Assembly polls ckm
Author
Bengaluru, First Published Jul 11, 2021, 9:14 PM IST

ನವದೆಹಲಿ(ಜು.11):  ಪ್ರಧಾನಿ ನರೇಂದ್ರ ಮೋದಿ ಇಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಬಿಎಲ್ ಸಂತೋಷ್ ಭೇಟಿಯಾಗಿ ಮಹತ್ವದ ಮಾತುಕತೆ ನಡೆಸಿದ್ದಾರೆ. ನಡ್ಡಾ ಅಧೀಕೃತ ನಿವಾಸದಲ್ಲಿ ಈ ಸಭೆ ನೆಡಸಲಾಗಿದ್ದು, ಮುಂಬರುವ ಪಂಚ ರಾಜ್ಯಗಳ ವಿಧಾನ ಸಭಾ ಚುನಾವಣೆಗೆ ಬಿಜೆಪಿ ತಯಾರಿ ಹಾಗೂ ಸಿದ್ದತೆಗಳ ಕುರಿತು ಮಾತುಕತೆ ನಡೆಸಲಾಗಿದೆ.

#PeoplesPadma ಪ್ರಶಸ್ತಿಗೆ ಹೆಸರು ಸೂಚಿಸುವಂತೆ ಜನತೆಗೆ ಮೋದಿ ಆಹ್ವಾನ

ಬಿಜೆಪಿ ಮೂಲಗಳ ಪ್ರಕಾರ ಮಹಾರಾಷ್ಟ್ರದ ಮಾಜಿ ಮಂತ್ರಿ ವಿನೋದ್ ತಾವ್ಡೆ ಮತ್ತು ಪಂಕಜಾ ಮುಂಡೆ, ಉತ್ತರ ಪ್ರದೇಶದ ಸಂಸದರಾದ ಹರೀಶ್ ದ್ವಿವೇದಿ, ವಿನೋದ್ ಸೋಂಕರ್, ಅನುಪಮ್ ಹಜ್ರಾ ಮತ್ತು ಸತ್ಯ ಕುಮಾರ್ ಈ ಸಭೆಯಲ್ಲಿ ಉಪಸ್ಥಿತರಿದ್ದರು. 

ಮುಂದಿನ ವರ್ಷದ ಆರಂಭದಲ್ಲಿ ಉತ್ತರ ಪ್ರದೇಶ, ಹಿಮಾಚಲ ಪ್ರದೇಶ ಹಾಗೂ ಗೋವಾ ವಿಧಾನ ಸಭಾ ಚುನಾವಣೆ ಎದುರಾಗಲಿದೆ. ಹೀಗಾಗಿ ಈ ಚುನಾವಣೆಗೆ ತಯಾರಿ ಕುರಿತು ಮಹತ್ವದ ಸಭೆ ನಡೆಸಲಾಗಿದೆ. ಕೇಂದ್ರ ಸಂಪುಟ ಪುನಾರಚನೆಯಾದ ಬೆನ್ನಲ್ಲೇ ಈ ಸಭೆ ಮತ್ತಷ್ಟು ಮಹತ್ವ ಪಡೆದುಕೊಂಡಿದೆ.

ಉ.ಪ್ರ: ಮಂಡಲ ಪಂಚಾಯತ್‌ನಲ್ಲೂ ಕೇಸರಿ ಪತಾಕೆ, ಯೋಗಿಗೆ ಮೋದಿ ಹಾರೈಕೆ

ಸತತ 1 ಗಂಟೆಗೂ ಹೆಚ್ಚು ಕಾಲ ನಡೆದ ಈ ಸಭೆಯಲ್ಲಿ ಕೊರೋನಾ ಲಸಿಕಾ ಅಭಿಯಾನ, ಲಸಿಕೆ ಪೂರೈಕೆ ಕುರಿತು ಜೆಪಿ ನಡ್ಡಾ ಮಾತುಕತೆ ನಡೆಸಿದ್ದಾರೆ. ಯಾವುದೇ ರಾಜ್ಯದಲ್ಲಿ ಲಸಿಕೆ ಕೊರತೆಯಾಗದಂತೆ ಕೈಗೊಂಡಿರುವ ಕ್ರಮಗಳ ಕುರಿತು ಮಾತುಕತೆ ನಡೆಸಲಾಗಿದೆ.

Follow Us:
Download App:
  • android
  • ios