Asianet Suvarna News Asianet Suvarna News

ಉ.ಪ್ರ: ಮಂಡಲ ಪಂಚಾಯತ್‌ನಲ್ಲೂ ಕೇಸರಿ ಪತಾಕೆ, ಯೋಗಿಗೆ ಮೋದಿ ಹಾರೈಕೆ

  • ಉತ್ತರ ಪ್ರದೇಶದ 875 ಸ್ಥಾನಗಳಿಗೆ ನಡೆದ ಚುನಾವಣೆ
  • 349 ಸ್ಥಾನಗಳಿಗೆ ಅವಿರೋಧ ಆಯ್ಕೆ, 476ರಲ್ಲಿ ಪೈಪೋಟಿ
  • ಬಿಜೆಪಿಗೆ ಭಾರೀ ಜಯ, ಪ್ರಧಾನಿ ಮೋದಿ ಅಭಿನಂದನೆ

 

Massive Victory For BJP in UP Block Panchayat Chief Elections Sai
Author
Bengaluru, First Published Jul 10, 2021, 9:35 PM IST

ಲಕ್ನೋ (ಜು.03): ಉತ್ತರ ಪ್ರದೇಶದಲ್ಲಿ ಇಂದು ನಡೆದ ಮಂಡಲ ಪಂಚಾಯತ್‌ ಅಧ್ಯಕ್ಷರ ಚುನಾವಣೆಯಲ್ಲೂ ಬಿಜೆಪಿ ಜಯಭೇರಿ ಬಾರಿಸಿದೆ.

ರಾಜ್ಯದ 875 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ, 1710 ಅಭ್ಯರ್ಥಿಗಳು ಕಣದಲ್ಲಿದ್ದರು.  875 ಸ್ಥಾನಗಳ ಪೈಕಿ 349 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದ್ದು ಉಳಿದ 476 ಸ್ಥಾನಗಳಿಗೆ ಇಂದು (ಜು.10) ಚುನಾವಣೆ ನಡೆದಿದೆ.

ಈಗ ಲಭ್ಯವಿರುವ ಮಾಹಿತಿ ಪ್ರಕಾರ ಆಡಳಿತರೂಢ ಬಿಜೆಪಿಯ 635 (ಶೇ.85) ಅಭ್ಯರ್ಥಿಗಳು ಜಯಗಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ, ಉತ್ತರ ಪ್ರದೇಶ ಬಿಜೆಪಿ ಹಾಗೂ ಯೋಗಿ ಆದಿತ್ಯನಾಥ್‌ಗೆ  ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಶುಭಾಶಯಗಳನ್ನು ಕೋರಿದ್ದಾರೆ.

ಇದನ್ನೂ ಓದಿ: ಜನಸಂಖ್ಯಾ ನಿಯಂತ್ರಣಕ್ಕೆ ಯೋಗಿ ಹೊಸ ನೀತಿ: ಗರ್ಭಪಾತಕ್ಕೆ ಸುರಕ್ಷಿತ ವ್ಯವಸ್ಥೆ!

ಮಂಡಲ ಪಂಚಾಯತ್‌ ಚುನಾವಣೆಯಲ್ಲಿ ಬಿಜೆಪಿ ವಿಜಯ ಪತಾಕೆ ಹಾರಿಸಿದೆ. ಈ ಗೆಲುವು ಯೋಗಿ ಆದಿತ್ಯನಾಥ್ ಸರ್ಕಾರದ ಜನಪರ ಯೋಜನೆಗಳು ತಳಮಟ್ಟದಲ್ಲಿ ಜನರಿಗೆ ತಲುಪಿರುವುದರ ಸಂಕೇತವಾಗಿದೆ, ಎಲ್ಲಾ ಕಾರ್ಯಕರ್ತರಿಗೂ ಶುಭಾಶಯಗಳು ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ. 

ಕಳೆದ ವಾರ, ಮುಂಬರುವ ವಿಧನಾಸಭಾ ಚುನಾವಣೆಗೆ ದಿಕ್ಸೂಚಿ ಎಂದೇ ಬಿಂಬಿತವಾಗಿದ್ದ ಉತ್ತರ ಪ್ರದೇಶ ಜಿಲ್ಲಾ ಪಂಚಾಯತ್ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲೂ ಬಿಜೆಪಿ ಭರ್ಜರಿ ಗೆಲುವು ದಾಖಲಿಸಿದ್ದನ್ನು ಇಲ್ಲಿ ಸ್ಮರಿಸಬಹುದು. 

ಜಿಲ್ಲಾ ಪಂಚಾಯತ್ ಚುನಾವಣೆಯ 75 ಸ್ಥಾನಗಳ ಪೈಕಿ 67 ಸ್ಥಾನಗಳಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು.  22 ಜಿಲ್ಲಾ ಪಂಚಾಯತ್ ಅಧ್ಯಕ್ಷರು ಅವಿರೋಧವಾಗಿ ಆಯ್ಕೆಯಾಗಿದ್ದರೆ, ಅವುಗಳಲ್ಲಿ 21 ಸ್ಥಾನ ಬಿಜೆಪಿ ಪಾಲಾಗಿತ್ತು. 

Follow Us:
Download App:
  • android
  • ios