Asianet Suvarna News Asianet Suvarna News

#PeoplesPadma ಪ್ರಶಸ್ತಿಗೆ ಹೆಸರು ಸೂಚಿಸುವಂತೆ ಜನತೆಗೆ ಮೋದಿ ಆಹ್ವಾನ

  • #PeoplesPadma ಪ್ರಶಸ್ತಿಗೆ ಹೆಸರು ಸೂಚಿಸಿ ಎಂದ ಪ್ರಧಾನಿ ಮೋದಿ
  • ಸೆಪ್ಟೆಂಬರ್ 15ರ ತನಕ ಅವಕಾಶ
  • ನಿಮ್ಮ ಸುತ್ತ ಮುತ್ತ ಇದ್ದಾರಾ ವಿಶೇಷ ಪ್ರತಿಭೆಯಿಂದ ತಳಮಟ್ಟದಲ್ಲಿ ಶ್ರಮಿಸುತ್ತಿರುವ ಅಪರೂಪದ ಮಂದಿ, ಹೆಸರು ಸೂಚಿಸಿ
Suggest names of inspiring people for Padma awards PM Modi to citizens dpl
Author
Bangalore, First Published Jul 11, 2021, 11:44 AM IST

ನವದೆಹಲಿ(ಜು.11): ತಳಹಂತದಲ್ಲಿ, ತೆರೆ ಮರೆಯಲ್ಲಿ ಅತ್ಯಂತ ಶ್ರಮದಿಂದ ಕೆಲಸ ಮಾಡುತ್ತಿರೋ ಅದ್ಭುತ ಪ್ರತಿಭೆಗಳ ಹೆಸರನ್ನು ಪದ್ಮ ಪ್ರಶಸ್ತಿಗೆ ಸೂಚಿಸುವಂತೆ ಪ್ರಧಾನಿ ನರೇಂದ್ರ ಮೋದಿ ಕೇಳಿಕೊಂಡಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿದ ಪ್ರಧಾನಿ, ಭಾರತದಲ್ಲಿ ಬಹಳಷ್ಟು ಪ್ರತಿಭಾವಂತರಿದ್ದಾರೆ. ತಳಮಟ್ಟದಲ್ಲಿ ಅತ್ಯಂತ ಅಪರೂಪದ ಕೆಲಸ ಮಾಡುತ್ತಾರೆ. ಅಂತವರು ಬಹಳಷ್ಟು ಸಲ ನಮ್ಮ ಗಮನಕ್ಕೆ ಬರದೇ ಇರಬಹುದು. ಅಂತಹ ಮಾದರಿ ಜನರು ನಿಮಗೆ ಗೊತ್ತಿದ್ದಾರಾ ? ಅವರನ್ನು ನೀವು ಪದ್ಮ ಪ್ರಶಸ್ತಿಗೆ ನಾಮಿನೇಟ್ ಮಾಡಬಹುದು. ನಾಮಿನೇಷನ್ ಈಗ ಓಪನ್ ಇದ್ದು ಹೆಸರುಗಳನ್ನು ಸೂಚಿಸಲು ಸೆ.15ರ ತನಕ ಅವಕಾಶ ಇದೆ ಎಂದಿದ್ದಾರೆ.

ಜನಸಂಖ್ಯೆ ಹೆಚ್ಚಳದಿಂದ ಅನೇಕ ಸಮಸ್ಯೆ: ನಿಯಂತ್ರಣ ಅಗತ್ಯ

ಪದ್ಮ ಪ್ರಶಸ್ತಿ ಭಾರತದಲ್ಲಿ ನೀಡಲಾಗುವ ಅತ್ಯಂತ ದೊಡ್ಡ ನಾಗರಿಕ ಪ್ರಶಸ್ತಿಯಾಗಿದ್ದು ಇದನ್ನು ಪ್ರಜಾಪ್ರಭುತ್ವದ ದಿನ ಘೋಷಿಸಲಾಗುತ್ತದೆ. ಪ್ರಶಸ್ತಿಗಳನ್ನು ಮೂರು ವಿಭಾಗಗಳಲ್ಲಿ ನೀಡಲಾಗುತ್ತದೆ.

ಪದ್ಮ ವಿಭೂಷಣ(ಅಸಾಧಾರಣ ಮತ್ತು ವಿಶಿಷ್ಟ ಸೇವೆಗಾಗಿ), ಪದ್ಮ ಭೂಷಣ(ಉನ್ನತ ಶ್ರೇಣಿಯ ವಿಶಿಷ್ಟ ಸೇವೆ), ಪದ್ಮಶ್ರೀ(ವಿಶಿಷ್ಟ ಸೇವೆ
). ಈ ಪ್ರಶಸ್ತಿ ಮೂಲಕ ಎಲ್ಲಾ ಕ್ಷೇತ್ರಗಳಲ್ಲಿನ ಸಾಧನೆಗಳನ್ನು ಗುರುತಿಸಿ ಗೌರವಿಸಲಾಗುತ್ತದೆ. #PeoplesPadma ಪ್ರಶಸ್ತಿಗೆ ಹೆಸರು ಸೂಚಿಸಲು ಇಲ್ಲಿ ಕ್ಲಿಕ್ಕಿಸಿ.

Follow Us:
Download App:
  • android
  • ios