ಮೋದಿ ಪ್ರಮಾಣವಚನ ಸ್ವೀಕಾರಕ್ಕೆ ಜೂನ್ 8ರ ಆಯ್ಕೆ ಹಿಂದಿದೆ ಕಾರಣ, ಜ್ಯೋತಿಷ್ಯ ಹೇಳುವುದೇನು?
ನರೇಂದ್ರ ಮೋದಿ ಎನ್‌ಡಿಎ ಮೈತ್ರಿ ಕೂಟದ ಪ್ರಧಾನಿ ಅಭ್ಯರ್ಥಿಯಾಗಿ ಈಗಾಗಲೇ ಆಯ್ಕೆ ಮಾಡಲಾಗಿದೆ. ಜೂನ್ 8ರಂದು ಪ್ರಧಾನಿ ಮೋದಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ. ಪ್ರಮಾಣ ವಚನ ಸ್ವೀಕಾರಕ್ಕೆ ಜೂನ್ 8ನೇ ದಿನಾಂಕ ಆಯ್ಕೆ ಮಾಡಿಕೊಂಡಿದ್ದೇಕೆ? ಜ್ಯೋತಿಷ್ಯ ಹೇಳುವುದೇನು?
ನವದೆಹಲಿ(ಜೂ.05) ಲೋಕಸಭಾ ಚುನಾವಣಾ ತೀರ್ಪಿನ ಬಳಿಕ ದೆಹಲಿಯಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದೆ. ಎನ್‌ಡಿಎ ಮೈತ್ರಿ ನಾಯಕರು ಈಗಾಗಲೇ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಮಹತ್ವದ ಸಭೆ ನಡೆದಿದೆ. ಎನ್‌ಡಿಎ ಮೈತ್ರಿ ಒಕ್ಕೂಟದ ಪ್ರಧಾನಿ ಅಭ್ಯರ್ಥಿಯಾಗಿ ಮೋದಿ ಆಯ್ಕೆ ಮಾಡಲಾಗಿದೆ. ಇಂದೇ ರಾಷ್ಟ್ರಪತಿಗಳ ಭೇಟಿಯಾಗಿ ಸರ್ಕಾರ ರಚನೆಗೆ ಹಕ್ಕು ಮಂಡಿಸುವ ಸಾಧ್ಯತೆ ಇದೆ. ಇತ್ತ ಪ್ರಧಾನಿ ನರೇಂದ್ರ ಮೋದಿ ಮೂರನೇ ಬಾರಿಗೆ ಪ್ರಧಾನಿಯಾಗಿ ಜೂನ್ 8 ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಅನ್ನೋ ಮಾಹಿತಿ ಬಹಿರಂಗವಾಗಿದೆ. ಜೂನ್ 8 ರಂದೇ ಪ್ರಮಾಣವಚನ ಸ್ವೀಕಾರಕ್ಕೆ ಕೆಲ ಮಹತ್ವದ ಕಾರಣಗಳಿವೆ.
ಜ್ಯೋತಿಷ್ಯದ ಪ್ರಕಾರ 8 ಸಂಖ್ಯೆ ರಾಜಯೋಗದ ಸಂಕೇತವಾಗಿದೆ. ವೈದಿಕ ಜ್ಯೋತಿಷ್ಯದಲ್ಲಿ ಮಂಗಳಕರ ಯೋಗವಾಗಿದೆ. ಅಂದರೆ ರಾಜಮನೆತನದ ಶುಭ ಕಾರ್ಯ, ರಾಜಮನೆತನದ ಅಧಿಕಾರ ಪದಗ್ರಹಣ ಸೇರಿದಂತೆ ಮಹತ್ವದ ಹಾಗೂ ಶುಭ ಕಾರ್ಯಗಳಿಗೆ ಉತ್ತಮ ದಿನವಾಗಿದೆ. ಜೊತೆಗೆ ಶುಭ ಶುಕ್ರವಾರವಾಗಿದೆ. ಇನ್ನು 8 ಸಂಖ್ಯೆ ಶನಿ ಗ್ರಹವನ್ನು ಸೂಚಿಸುತ್ತದೆ. ವಿಶೇಷ ಅಂದರೆ 8
ಶನಿ ಗ್ರಹವನ್ನು ಸೂಚಿಸುತ್ತದೆ. ಶನಿ ಉತ್ಕೃಷ್ಠತೆಯಲ್ಲಿದೆ. ಹೀಗಾಗಿ ಯಶಸ್ಸು ಅತ್ಯಂತ ಉನ್ನತ ಮಟ್ಟದಲ್ಲಿರುತ್ತದೆ. ಜೊತೆಗೆ ಎಲ್ಲಾ ಶತ್ರುಗಳನ್ನು ಸೋಲಿಸುವ ಸಾಮರ್ಥ್ಯವಿದೆ. ಸಂಖ್ಯಾಶಾಸ್ತ್ರದ ಪ್ರಕಾರ 8 ನ್ಯಾಯದ ಸಂಕೇತವಾಗಿದೆ.
ಕಟಾ ಕಟ್ 1 ಲಕ್ಷ ರೂ, ಯುಪಿ ಕಾಂಗ್ರೆಸ್ ಕಚೇರಿ ಮುಂದೆ ಗ್ಯಾರೆಂಟಿ ಆಗ್ರಹಿಸಿ ಜಮಾಯಿಸಿದ ಮಹಿಳೆಯರು!
8 ನೇ ತಾರೀಖು 8 ಗಂಟೆ
8ನೇ ದಿನಾಂಕ ಮೋದಿ ಜೀವನದಲ್ಲಿ ಹಲವು ಶುಭ ತಂದಿದೆ. 2014ರಲ್ಲಿ ಪ್ರಧಾನಿ ಮೋದಿ ಪ್ರಧಾನಿಯಾದ ಬಳಿಕ ನವೆಂಬರ್ 8ರಂದು ರಾತ್ರಿ 8 ಗಂಟೆಗೆ ಡಿಮಾನಿಟೈಸೇಶನ್ ನಿರ್ಧಾರ ಘೋಷಿಸಿದ್ದರು. ಇನ್ನು 2015ರಲ್ಲಿ ಡಿಜಿಟಲ್ ಇಂಡಿಯಾ ಘೋಷಣೆಯ ಸಂಖ್ಯಾಶಾಸ್ತ್ರ ಕೂಡ 8. ಸೆಪ್ಟೆಂಬರ್ 26, 2015 ರಂದು ಮೋದಿ ಡಿಜಿಟಲ್ ಇಂಡಿಯಾ ಘೋಷಣೆ ಮಾಡಿದ್ದರು. 2+6 ಸೇರಿದರೆ ಒಟ್ಟು ಸಂಖ್ಯೆ 8. ಇನ್ನು 2015ನ್ನೂ ಕೂಡಿಸಿದರೂ ಅಂದರೆ 2 + 0+1+5 ಸೇರಿಸಿದರೆ ಒಟ್ಟು 8. ಪ್ರದಾನಿ ನರೇಂದ್ರ ಮೋದಿ ಹುಟ್ಟು ಹಬ್ಬ ಸೆಪ್ಟೆಂಬರ್ 17. ಈ ಸಂಖ್ಯೆಯನ್ನು ಕೂಡಿಸಿದರೆ 1+7 = 8.
ಭಾರತದ ಪ್ರಮುಖ ಘಟ್ಟಗಳೂ 8ರ ಹಿಂದಿದೆ. ಗಣರಾಜ್ಯೋತ್ಸವ ದಿನಾಂಕ 26. ಇದನ್ನು ಕೂಡಿಸಿದರೆ 2+6 ಸಂಖ್ಯೆ 8. ಇನ್ನು ಸದ್ಯ 2024ನೇ ವರ್ಷ. ಈ ಸಂಖ್ಯೆಯನ್ನೂ ಕೂಡಿಸಿದರೂ ಬರುವ ಸಂಖ್ಯೆ 8.
Breaking: NDA ಪ್ರಧಾನಿ ಅಭ್ಯರ್ಥಿಯಾಗಿ ನರೇಂದ್ರ ಮೋದಿ ಆಯ್ಕೆ