Breaking: NDA ಪ್ರಧಾನಿ ಅಭ್ಯರ್ಥಿಯಾಗಿ ನರೇಂದ್ರ ಮೋದಿ ಆಯ್ಕೆ
ಬುಧವಾರ ಎನ್‌ಡಿಎ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸಂಸದೀಯ ನಾಯಕರನ್ನಾಗಿ ನಿರ್ಣಯ ಮಾಡಲಾಗಿದೆ. ಅದರೊಂದಿಗೆ ಜೂನ್ 7 ಅಥವಾ 8 ರಂದು ಮೋದಿ ಪ್ರಧಾನಿಯಾಗಿ ಅಧಿಕಾರ ಸ್ವೀಕಾರ ಮಾಡಬಹುದು ಎನ್ನಲಾಗಿದೆ.
ನವದೆಹಲಿ (ಜೂ.5): ಕೇರ್‌ಟೇಕರ್ ಪ್ರಧಾನಿ ನರೇಂದ್ರ ಮೋದಿ ಅವರನ್ನು ಎನ್‌ಡಿಎ ಸಭೆಯಲ್ಲಿ ಸಂಸದೀಯ ನಾಯಕರನ್ನಾಗಿ ನಿರ್ಣಯ ಮಾಡಲಾಗಿದೆ. ಅದರೊಂದಿಗೆ ಅವರೇ ಪ್ರಧಾನಿಯಾಗಿ ಅಧಿಕಾರ ಸ್ವೀಕಾರ ಮಾಡೋದು ಖಚಿತವಾಗಿದೆ. ಜೂನ್ 7 ಅಥವಾ 8 ರಂದು ಸಂಜೆ 5 ಗಂಟೆಗೆ ಮೋದಿ ಪ್ರಧಾನಿಯಾಗಿ ಅಧಿಕಾರ ಸ್ವೀಕಾರ ಮಾಡಲಿದ್ದಾರೆ. NDA ಮೈತ್ರಿಕೂಟದ ಸರ್ಕಾರ ರಚನೆಗೆ ಸರ್ವಾನುಮತದಿಂದ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ. ಬುಧವಾರ ನಡೆದ ಎನ್ ಡಿ ಎ ಮೈತ್ರಿಕೂಟದ ಮಹತ್ವದ ಸಭೆಯಲ್ಲಿ ಈ ನಿರ್ಧಾರ ಮಾಡಲಾಗಿದೆ. ಒಂದೇ ಲೈನ್ ರೆಸಲ್ಯೂಷನ್ ಗೆ ಎಲ್ಲಾ ನಾಯಕರು ಒಪ್ಪಿಗೆ ನೀಡಿದ್ದಾರೆ. ಈ ಮೂಲಕ ಎಲ್ಲಾ ನಾಯಕರಿಂದ ಪತ್ರಕ್ಕೆ ಸಹಿ ಹಾಕಿ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ. ಇದೆ ಬೆಂಬಲ ಪತ್ರದ ಜೊತೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿಯಾಗುವ ಸಾಧ್ಯತೆ ಇದೆ. ಸಂಜೆ 7.30 ಕ್ಕೆ ನರೇಂದ್ರ ಮೋದಿ ನೇತೃತ್ವದಲ್ಲಿ ಎನ್ ಡಿ ಎ ಮೈತ್ರಿಕೂಟದ ನಾಯಕರು ಮುರ್ಮು ಭೇಟಿಯಾಗಬಹುದು ಎನ್ನಲಾಗಿದೆ.
ಇಂದಿನ ಎನ್ ಡಿ ಎ ಸಭೆಯಲ್ಲಿ ಮೋದಿಯನ್ನ ಎನ್ ಡಿ ಎ ಮೈತ್ರಿಕೂಟದನಾಯಕರಾಗಿ ಆಯ್ಕೆ. ಆಯ್ಕೆ ಮಾಡಿ ಸಭೆಯಿಂದ ಪತ್ರವನ್ನೂ ಹೊರಡಿಸಲಾಗಿದೆ. ಎಲ್ಲಾ ಎನ್ ಡಿಎ ನಾಯಕರಿಂದ ಸರ್ವಾನು ಮತದಿಂದ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ. ಎನ್ ಡಿ ಎ ಮೈತ್ರಿಕೂಟಕ್ಕೆ ದೇಶದ ಜನ ಚುನಾಯಿಸಿದ್ದಾರೆ ಎಂದು ಸಭೆಯಲ್ಲಿ ಮೋದಿ ತಿಳಿಸಿದ್ದಾರೆ.
ಮೂರನೇ ಅವಧಿಗೆ ಪ್ರಧಾನಿಯಾಗುವ ಮುನ್ನ..... ಅಂದುಕೊಂಡಷ್ಟು ಸುಗಮ ಹಾದಿಯಲ್ಲಿದ್ದಾರಾ ಮೋದಿ?
ಸಭೆಯಲ್ಲಿ 4-5 ನಿಮಿಷಗಳ ಕಾಲ ಮಾತನಾಡಿದ ಪ್ರಧಾನಿ ಮೋದಿ, ದೇಶದ ಅತ್ಯಂತ ಹಳೆಯ ಹಾಗೂ ಸುಭದ್ರ ಮೈತ್ರಿ ನಮ್ಮದಾಗಿದೆ. ಈಗ ಮತ್ತೊಮ್ಮೆ ಎನ್‌ಡಿಎ ಅಧಿಕಾರಕ್ಕೆ ಏರಿದೆ ಎಂದು ಹೇಳಿದ್ದಾರೆ. ಸಭೆಯಲ್ಲಿ ಎಲ್ಲಾ ನಾಯಕರಿಗೆ 2 ನಿಮಿಷಗಳ ಕಾಲ ಮಾತನಾಡುವ ಅವಕಾಶ ನೀಡಲಾಗಿತ್ತು. ಈ ವೇಳೆ ನಿತೀಶ್ ಕುಮಾರ್ ಮಾತನಾಡಿ, ತಡ ಮಾಡೋದು ಬೇಡ, ಆದಷ್ಟು ಬೇಗ ಸರ್ಕಾರ ರಚನೆ ಮಾಡೋಣ ಎಂದು ಸಲಹೆ ನೀಡಿದ್ದಾರೆ. ಎನ್‌ಡಿಎ ಸಭೆಯಲ್ಲಿ ಒಟ್ಟು 21 ಮಂದಿ ಹಾಜರಿದ್ದರು. ಬಿಜೆಪಿ ನೇತೃತ್ವದ ಸರ್ಕಾರಕ್ಕೆ 15 ಪಕ್ಷಗಳ ನಾಯಕರಿಂದ ಒಲವು ವ್ಯಕ್ತವಾಗಿದೆ. ಬಿಜೆಪಿಯಿಂದ ಮೋದಿ ಸೇರಿ ನಾಲ್ವರು, ಜೆಡಿಯುನಿಂದ ಮೂವರು ಹಾಗೂ ಎನ್‌ಸಿಪಿಯಿಂದ ಇಬ್ಬರು ಹಾಜರಿದ್ದರು.
ಬಹುಮತ ಪಡೆಯದ ಬಿಜೆಪಿ, ಎಡವಟ್ಟಾಗಿದ್ದೆಲ್ಲಿ..? ಕಮಲಾಧಿಪತಿಗಳ ಕಣ್ಣಿಗೆ ಕಾಣಲಿಲ್ವಾ ಆ ವಿಚಿತ್ರ ಲೆಕ್ಕಾಚಾರ..?