Asianet Suvarna News Asianet Suvarna News

ಕಟಾ ಕಟ್ 1 ಲಕ್ಷ ರೂ, ಯುಪಿ ಕಾಂಗ್ರೆಸ್ ಕಚೇರಿ ಮುಂದೆ ಗ್ಯಾರೆಂಟಿ ಆಗ್ರಹಿಸಿ ಜಮಾಯಿಸಿದ ಮಹಿಳೆಯರು!

ಲೋಕಸಭಾ ಚುನಾವಣೆ ಗೆಲ್ಲಲು ಕಾಂಗ್ರೆಸ್ ಮತದಾರರಿಗೆ ಹಲವು ಭರವಸೆ ನೀಡಿದೆ. ಈ ಪೈಕಿ ಮತ್ತೊಂದು ಹೆಜ್ಜೆ ಮುಂದೆ ಹೋಗಿ ಉತ್ತರ ಪ್ರದೇಶದಲ್ಲಿ ಎಲ್ಲರಿಗೂ 1 ಲಕ್ಷ ರೂಪಾಯಿ ಗ್ಯಾರೆಂಟಿ ಕಾರ್ಡ್ ಹಂಚಲಾಗಿತ್ತು. ಇದೀಗ ಕಾಂಗ್ರೆಸ್ ಹಾಗೂ ಇಂಡಿಯಾ ಒಕ್ಕೂಟಕ್ಕೆ ಹೆಚ್ಚಿನ ಸ್ಥಾನ ನೀಡಿರುವ ಯುಪಿ ಮಹಿಳೆ ಕಾಂಗ್ರೆಸ್ ಕಚೇರಿ ಮುಂದೆ ಗ್ಯಾರೆಂಟಿ ಕಾರ್ಡ್ ಹಿಡಿದು ಜಮಾಯಿಸಿದ್ದಾರೆ. 1 ಲಕ್ಷ ರೂಪಾಯಿ ನೀಡುವಂತೆ ಪಟ್ಟು ಹಿಡಿದ್ದಾರೆ.
 

UP Womans reach Congress office demanding rs 1 lakh guarantee card promised by Party during campaign ckm
Author
First Published Jun 5, 2024, 5:59 PM IST

ಲಖನೌ(ಜೂ.05)  ಕಾಂಗ್ರೆಸ್ ಸರ್ಕಾರ ರಚಿಸಿದರೆ ಕಟಾ ಕಟ್ ಕಟಾ ಕಟ್ ಆಗಿ 1 ಲಕ್ಷ ರೂಪಾಯಿ ಜಮೆ ಆಗಲಿದೆ ಎಂದು ರಾಹುಲ್ ಗಾಂಧಿ ಭಾಷಣ ಜೊತೆಗೆ ಗ್ಯಾರೆಂಟಿ ಕಾರ್ಡ್ ಕೂಡ ಹಂಚಲಾಗಿತ್ತು. ಇದರ ಬೆನ್ನಲ್ಲೇ ದೇಶಾದ್ಯಂತ ಮಹಿಳೆಯರು ಅಂಚೆ ಕಚೇರಿಯಲ್ಲಿ ಖಾತೆ ತೆರೆಯಲು ಕ್ಯೂ ನಿಂತಿದ್ದು ಭಾರಿ ವೈರಲ್ ಆಗಿತ್ತು. ಇದೀಗ ಕಾಂಗ್ರೆಸ್ ಹೇಳಿದಂತೆ ಬಿಜೆಪಿ ಬದಲು ಕಾಂಗ್ರೆಸ್ ಹಾಗೂ ಇಂಡಿಯಾ ಒಕ್ಕೂಟಕ್ಕೆ ಮತ ಹಾಕಿದ್ದೇವೆ. ನಮಗೆ 1 ಲಕ್ಷ ರೂಪಾಯಿ ಕೊಡುವುದಾಗಿ ಗ್ಯಾರೆಂಟಿ ಕಾರ್ಡ್ ನೀಡಿದ್ದಾರೆ. ಕೊಟ್ಟ ಮಾತಿನಂತೆ ನಡೆದುಕೊಳ್ಳಿ ಎಂದು ಮಹಿಳೆಯರು ಉತ್ತರ ಪ್ರದೇಶ ಕಾಂಗ್ರೆಸ್ ಕಚೇರಿ ಮುಂದೆ ಜಮಾಯಿಸಿದ್ದಾರೆ.

ಕಾಂಗ್ರೆಸ್ ಲೋಕಸಭಾ ಚುನಾವಣಾ ಪ್ರಚಾರದ ವೇಳೆ ತನ್ನ ಭರವಸೆಗಳನ್ನು ಘಂಟಾಘೋಷವಾಗಿ ಹೇಳಿಕೊಂಡಿತ್ತು. ಪ್ರಣಾಳಿಕೆಯಲ್ಲಿ ಉಲ್ಲೇಖಿಸಿರುವ ಪ್ರತಿ ಬಡ ಕುಟುಂಬದ ಮಹಿಳೆಯರಿಗೆ ವರ್ಷಕ್ಕೆ 1 ಲಕ್ಷ ರೂಪಾಯಿ ಖಾತೆಗೆ ಜಮೆ ಮಾಡುವುದಾಗಿ ಕಾಂಗ್ರೆಸ್ ಭರವಸೆ ನೀಡಿತ್ತು. ಇಷ್ಟಕ್ಕೇ ಕಾಂಗ್ರೆಸ್ ಕಾರ್ಯತಂತ್ರ ಮುಗಿದಿರಲಿಲ್ಲ. 1 ಲಕ್ಷ ರೂಪಾಯಿ ಗ್ಯಾರೆಂಟಿ ಕಾರ್ಡನ್ನು ಪ್ರತಿ ಮನೆ ಮನೆಗೂ ತಲುಪಿಸಲಾಗಿತ್ತು. 

ಸರ್ಕಾರ ರಚನೆಗೆ ಮೋದಿ ನೇತೃತ್ವದಲ್ಲಿ NDA ಸಭೆ,ಚಂದ್ರಬಾಬು-ನಿತೀಶ್ ಭಾಗಿ!

ಪ್ರತಿ ತಿಂಗಳು ಸರಿಸುಮಾರು 8,500 ರೂಪಾಯಿ ಖಾತೆಗೆ ಜಮೆ ಆಗಲಿದೆ. ಎಂದು ಕಾಂಗ್ರೆಸ್ ಕಾರ್ಯಕರ್ತರು, ನಾಯಕರ ಉತ್ತರ ಪ್ರದೇಶದ ಬಹುತೇಕ ಮನೆ ಮನೆಗೆ ಒಟ್ಟು 1 ಲಕ್ಷ ರೂಪಾಯಿ ಗ್ಯಾರೆಂಟಿ ಕಾರ್ಡ್ ತಲುಪಿಸಿದ್ದಾರೆ. ಇದೀಗ ಕಾಂಗ್ರೆಸ್ ನಾಯಕರ ಮಾತಿನಂತೆ ಬಿಜೆಪಿ ಸೋಲಿಸಿದ್ದೇವೆ. ನಮಗೆ 1 ಲಕ್ಷ ರೂಪಾಯಿ ಗ್ಯಾರೆಂಟಿ ನೀಡಿ ಎಂದು ಉತ್ತರ ಪ್ರದೇಶದ ಕಾಂಗ್ರೆಸ್ ಕಚೇರಿ ಮುಂದೆ ಮಹಿಳೆಯರು ಒತ್ತಾಯಿಸಿದ್ದಾರೆ.

ಮನೆಯ ಗೃಹಿಣಿಯರಿಗೆ ಕಾಂಗ್ರೆಸ್ 1 ಲಕ್ಷ ರೂಪಾಯಿ ಗ್ಯಾರೆಂಟಿ ಕಾರ್ಡ್ ತಲುಪಿಸಿದ್ದು ಮಾತ್ರವಲ್ಲ, ಗೆದ್ದರೆ ಪ್ರತಿ ತಿಂಗಳು 8,500 ರೂಪಾಯಿಯಂತೆ ವಾರ್ಷಿಕವಾಗಿ 1 ಲಕ್ಷ ರೂಪಾಯಿ ಜಮೆ ಆಗಲಿದೆ ಎಂದು ವಿವರಿಸಿದ್ದಾರೆ. ಇದೇ ವೇಳೆ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಪ್ರತಿ ತಿಂಗಳು ಮಹಿಳೆಯರಿಗೆ 2,500 ರೂಪಾಯಿ ಗೃಹ ಲಕ್ಷ್ಮಿ ಯೋಜನೆ ಮೂಲಕ ನೀಡುತ್ತಿದೆ ಎಂದು ವಿವರಿಸಲಾಗಿದೆ ಎಂದು ಯುಪಿ ಕಾಂಗ್ರೆಸ್ ಕಚೇರಿ ಮುಂದೆ ಜಮಾಯಿಸಿದ ಮಹಿಳೆಯರು ಹೇಳಿದ್ದಾರೆ.  

ಪ್ರಮುಖ ಹುದ್ದೆಗಳಿಗೆ ನಿತೀಶ್, ನಾಯ್ಡು ಭಾರಿ ಚೌಕಾಸಿ? ಸ್ಪೀಕರ್ ಹುದ ...

ಕಾಂಗ್ರೆಸ್‌ಗೆ ಮತ ನೀಡಿದ್ದೇವೆ. ಕಾಂಗ್ರೆಸ್ ಇಂಡಿಯಾ ಒಕ್ಕೂಟಕ್ಕೆ ಹೆಚ್ಚಿನ ಸ್ಥಾನ ಗೆಲ್ಲಿಸಿಕೊಟ್ಟಿದ್ದೇವೆ.ನೀವು ಹೇಳಿದಂತೆ ಗ್ಯಾರೆಂಟಿ ಹಣ ನೀಡಿ ಎಂದು ಉತ್ತರ ಪ್ರದೇಶ ಕಾಂಗ್ರೆಸ್ ಕಚೇರಿ ಮುಂದೆ ಜಮಾಯಿಸಿದ ಮಹಿಳೆಯರು ಪಟ್ಟು ಹಿಡಿದ್ದಾರೆ. 

 

 

Latest Videos
Follow Us:
Download App:
  • android
  • ios