ಅಮೆರಿಕ ಪ್ರವಾಸದ 65 ಗಂಟೆಯಲ್ಲಿ 20 ಸಭೆ, ಮೋದಿ ದಣಿವರಿಯದ ಸೀಕ್ರೆಟ್ ಬಹಿರಂಗ!
- ಪ್ರಧಾನಿ ಮೋದಿ 3 ದಿನ ಅಮರಿಕ ಪ್ರವಾಸ ಮುಗಿಸಿ ಭಾರತಕ್ಕೆ ವಾಪಸ್
- ಅಮೆರಿಕದಲ್ಲಿ 65 ಗಂಟೆಯಲ್ಲಿ 20 ಪ್ರಮುಖ ಸಭೆ ನಡೆಸಿದ ಮೋದಿ
- ಮೋದಿಯ ದಣಿವರಿಯದ ಸೀಕ್ರೆಟ್ ಬಹಿರಂಗ
ನವದೆಹಲಿ(ಸೆ.26): ಪ್ರಧಾನಿ ನರೇಂದ್ರ ಮೋದಿ(Narendra Modi) ಮೂರು ದಿನಗಳ ಅಮೇರಿಕ (America) ಪ್ರವಾಸ ಮುಗಿಸಿ ಭಾರತಕ್ಕೆ ಮರಳಿದ್ದಾರೆ. ಪ್ರದಾನಿ ಮೋದಿ 65 ಗಂಟೆ ಅಮೆರಿಕದಲ್ಲಿ ಪ್ರವಾಸ ಮಾಡಿದ್ದಾರೆ. ಈ 65 ಗಂಟೆಯಲ್ಲಿ 20 ಪ್ರಮುಖ ಸಭೆ ನಡೆಸಿದ್ದಾರೆ. ಬಳಿಕ ಭಾರತಕ್ಕೆ(India) ಮರಳಿ ಇಲ್ಲಿ ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದಾರೆ. ಪ್ರತಿ ಸಭೆ, ಮಾತುಕತೆಯಲ್ಲಿ ಮೋದಿ ಅಷ್ಟೇ ಉತ್ಸಾಹ, ಚೈತನ್ಯ, ಲವಲವಿಕೆಯಿಂದ ಪಾಲ್ಗೊಂಡಿದ್ದಾರೆ. ಬಿಡುವಿಲ್ಲದೆ, ಪ್ರಯಾಣದ ಆಯಾಸವಿಲ್ಲದೆ ಸತತ ಸಭೆ, ಪ್ರಯಾಣ, ಮಾತುಕತೆ ಹೇಗೆ ಸಾಧ್ಯ ಅನ್ನೋ ಪ್ರಶ್ನೆ ಬಾರಿ ಚರ್ಚೆಯಾಗುತ್ತಿದೆ. ಇದಕ್ಕೆ ಸಿಂಪಲ್ ಉತ್ತರ, ಮೋದಿ ವೈದ್ಯರ ಸೂಚನೆಯಂತೆ ಹೆಚ್ಚು ನೀರು ಕುಡಿಯುತ್ತಾರೆ.
ಅಮೆರಿಕಾದಲ್ಲಿ ಮೋದಿ ಮೋಡಿ, ಭಾರತ - ಅಮೆರಿಕಾ ಸ್ನೇಹ ನೋಡಿ ಪಾಕ್-ಚೀನಾಗೆ ಉರಿ
ಮೋದಿ ಭಾರತದಲ್ಲಿ ಹಾಗೂ ವಿದೇಶಿ ಪ್ರವಾಸದಲ್ಲಿ ಇದೇ ರೀತಿಯ ಬಿಡುವಿಲ್ಲದ ವೇಳಾಪಟ್ಟಿಯಲ್ಲೇ(busy schedule) ಕಾರ್ಯನಿರ್ವಹಿಸುತ್ತಾರೆ. ಮೋದಿ ಒಂದರ ಬೆನ್ನ ಒಂದ ಸಭೆಯಲ್ಲಿ ಪಾಲ್ಗೊಳ್ಳುತ್ತಾರೆ. ಮನಸ್ಸು ಆಯಾಸದ ಕುರಿತು ಚಿಂತಿಸುವುದಕ್ಕಿಂತ ಮೊದಲೇ ಮತ್ತೊಂದು ಕಾರ್ಯಕ್ರಮದಲ್ಲಿ ಮೋದಿ ಪಾಲ್ಗೊಂಡು ಭಾಷಣ ಮಾಡಿರುತ್ತಾರೆ. ಹೀಗಾಗಿ ಆಯಾಸ ಅನ್ನೋದೇ ಮೋದಿ ಡಿಕ್ಷನರಿಯಲ್ಲಿ ಇಲ್ಲದಾಗಿದೆ.
ಕ್ವಾಡ್ ಒಗ್ಗಟ್ಟು: ಚೀನಾಗೆ ಎಚ್ಚರಿಕೆಯ ಸಂದೇಶ!
ಅಮೆರಿಕ ಪ್ರವಾಸ ಮುಗಿಸಿ ಸುದೀರ್ಘ ವಿಮಾನ(Flight) ಪ್ರಯಾಣದ ವೇಳೆ ಕೂಡ ಪ್ರಧಾನಿ ಮೋದಿ ಹಲವು ಅಧಿಕಾರಿಗಳ ಜೊತೆ ಮಹತ್ವದ ಸಭೆ ನಡೆಸಿದ್ದಾರೆ. ಇನ್ನು ಅಮೆರಿಕ ಪ್ರಯಾಣದ ವೇಳೆ ವಿಮಾನದಲ್ಲಿ 2 ಸಭೆ ಹಾಗೂ ವಾಶಿಂಗ್ಟನ್‌ನಲ್ಲಿ ಇಳಿದು ಹೊಟೆಲ್‌ಗೆ ತೆರಳಿದ ಬೆನ್ನಲ್ಲೇ 3 ಸಭೆ ನಡೆಸಿದ್ದಾರೆ.
ಸೆಪ್ಟೆಂಬರ್ 23 ರಂದು 5 ಸಭೆ ನಡೆಸಿದ್ದಾರೆ. ಹಲವು ಸಿಇಓ, ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್(Kamala Harris) ಹಾಗೂ ಜಪಾನ್, ಆಸ್ಟ್ರೇಲಿಯಾ ಅಧ್ಯಕ್ಷರ ಜೊತೆ ಸಭೆ ನಡೆಸಿದ್ದಾರೆ. ಸೆಪ್ಟೆಂಬರ್ 24 ರಂದು ಪ್ರಧಾನಿ ಮೋದಿ, ಅಮೆರಿಕ ಅಧ್ಯಕ್ಷ ಜೋ ಬೈಡನ್(Joe Biden) ಜೊತೆ ಸಭೆ, ಕ್ವಾಡ್ ಸಭೆ ನಡೆಸಿದ್ದಾರೆ. ಇದರ ಜೊತೆಗೆ ಕೆಲ ಆತಂರಿಕ ಸಭೆ ಕೂಡ ನಡೆಸಿದ್ದಾರೆ. ಈ ಮೂಲಕ ಒಟ್ಟು 20 ಪ್ರಮುಖ ಸಭೆ ನಡೆಸಿ ದಣಿವರಿಯದ ನಾಯಕ ಅನ್ನೋದನ್ನು ಮತ್ತೆ ಸಾಬೀತುಪಡಿಸಿದ್ದಾರೆ.
ವಿಶ್ವಸಂಸ್ಥೆ ಭಾಷಣದಲ್ಲಿ ಚಹಾ ಮಾರಿದ ದಿನ ನೆನೆದ ಮೋದಿ!
ಮೋದಿ ಪ್ರಧಾನಿಯಾಗುವ ಮುನ್ನವೇ ಇದೇ ರೀತಿಯ ವೇಳಾಪಟ್ಟಿಯಲ್ಲಿ ಕೆಲಸ ಮಾಡುತ್ತಿದ್ದರು. ಗುಜರಾತ್(Gujarat) ಮುಖ್ಯಮಂತ್ರಿಯಾಗಿ ಇದೀಗ ಪ್ರಧಾನಿಯಾಗಿ ತನ್ನ ಬಿಡುವಿಲ್ಲದ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಮಾಡಿಕೊಂಡಿಲ್ಲ. 1990ರ ದಶಕದಲ್ಲಿ ಮೋದಿ ಅಮೆರಿಕ ಪ್ರಯಾಣ ಮಾಡುತ್ತಿದ್ದ ವೇಳೆ ಕೆಲ ವಿಮಾನ ಸಂಸ್ಥೆಗಳು ರಾತ್ರಿ ಪ್ರಯಾಣದಲ್ಲಿ ಭಾರಿ ರಿಯಾಯಿತಿ ನೀಡುತ್ತಿತ್ತು. ಹೀಗಾಗಿ ಮೋದಿ ರಾತ್ರಿ ಪ್ರಯಾಣ ಮಾಡಿ ಬೆಳಗ್ಗೆ ಕಾರ್ಯಕ್ರಮ ಹಾಗೂ ಮಹತ್ವದ ಸ್ಥಳಗಳಿಗೆ ಭೇಟಿ ನೀಡಿ ಮತ್ತೆ ಭಾರತಕ್ಕೆ ಮರಳುತ್ತಿದ್ದ ಸಂದರ್ಭಗಳೂ ಇವೆ. ಈಗ ಪರಿಸ್ಥಿ ಭಿನ್ನವಾಗಿದ್ದರೂ, ಬಿಡುವಿಲ್ಲದ ವೇಳಾಪಟ್ಟಿಯಲ್ಲಿ ಬದಲಾವಣೆ ಇಲ್ಲ. ಆಯಾಸವೂ ಇಲ್ಲ.
ಕಳುವಾಗಿ ಅಮೆರಿಕ ಸೇರಿದ್ದ ಭಾರತದ 157 ಕಲಾಕೃತಿ, ಪುರಾತನ ವಸ್ತು ಮೋದಿಗೆ ಹಸ್ತಾಂತರಿಸಿದ US!
ಭಾರತದಿಂದ ಅಮರಿಕ ಪ್ರಯಾಣ ಸುದೀರ್ಘ. ಜೊತೆಗೆ ಇಲ್ಲಿ ಸಮಯದಲ್ಲೂ ಅಜಗಜಾಂತರ ವ್ಯತ್ಯಾಸವಿದೆ. ಇಲ್ಲಿ ಬೆಳಗ್ಗೆ ಪ್ರಯಾಣ ಮಾಡಿ ಅಮೆರಿಕಗ ಬೆಳಗ್ಗೆ ಆಗಮಿಸಿದರೆ ಮೋದಿಗೆ ನಿದ್ದೆಯ ಮಾತಿಲ್ಲ. ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ಳುವುದು ರೂಢಿಯಾಗಿದೆ. ಮೋದಿ ಆಯಾಸವಿಲ್ಲದೆ ಇರಲು ಹೆಚ್ಚು ನೀರು ಸೇವಿಸುತ್ತಾರೆ. ಪ್ರಧಾನಿ ಮೋದಿಯ ಬಿಡುವಿಲ್ಲದ ವೇಳಾಪಟ್ಟಿಗೆ ಅಮೆರಿಕ ಸೇರಿದಂತೆ ಹಲವು ರಾಷ್ಟ್ರಗಳು ಅಚ್ಚರಿ ವ್ಯಕ್ತಪಡಿಸಿದೆ.