ಎಡನೀರು ಮಠಾಧೀಶರಾದ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ ನಿಧ​ನ​ಕ್ಕೆ ಪ್ರಧಾನಿ ನರೇಂದ್ರ ಮೋದಿ, ಉಪ ರಾಷ್ಟ್ರ​ಪತಿ ವೆಂಕಯ್ಯ ನಾಯ್ಡು, ಮುಖ್ಯ​ಮಂತ್ರಿ ಬಿ.ಎ​ಸ್‌.​ಯ​ಡಿ​ಯೂ​ರಪ್ಪ ಸೇರಿ ಹಲವು ಗಣ್ಯರು ಸಂತಾಪ ಸೂಚಿ​ಸಿ​ದ್ದಾ​ರೆ.

ಬೆಂಗ​ಳೂ​ರು (ಸೆ.07): ಕಾಸರಗೋಡು ಜಿಲ್ಲೆಯ ಎಡನೀರು ಮಠಾಧೀಶರಾದ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ ನಿಧ​ನ​ಕ್ಕೆ ಪ್ರಧಾನಿ ನರೇಂದ್ರ ಮೋದಿ, ಉಪ ರಾಷ್ಟ್ರ​ಪತಿ ವೆಂಕಯ್ಯ ನಾಯ್ಡು, ಮುಖ್ಯ​ಮಂತ್ರಿ ಬಿ.ಎ​ಸ್‌.​ಯ​ಡಿ​ಯೂ​ರಪ್ಪ ಸೇರಿ ಹಲವು ಗಣ್ಯರು ಸಂತಾಪ ಸೂಚಿ​ಸಿ​ದ್ದಾ​ರೆ.

ಶ್ರೀಗಳ ಸಾಮಾ​ಜಿಕ ಸೇವೆ​ಯನ್ನು ಸ್ಮರಿ​ಸಿ​ರುವ ಪ್ರಧಾ​ನಿ, ‘ಸಾಮುದಾಯಿಕ ಸೇವೆ ಹಾಗೂ ತುಳಿತಕ್ಕೊಳಪಟ್ಟಸಮುದಾಯಗಳ ಶ್ರೇಯೋಭಿವೃದ್ಧಿಗೆ ಶ್ರಮಿಸಿದ ಪೂಜ್ಯ ಕೇಶವಾನಂದ ಭಾರತೀ ಶ್ರೀಗಳ ಮಹತ್ಕಾರ್ಯಗಳು ಅಜರಾಮರ. ಅವರು ದೇಶದ ಶ್ರೀಮಂತ ಸಂಸ್ಕೃತಿ ಹಾಗೂ ಶ್ರೇಷ್ಠ ಸಂವಿಧಾನದ ಜೊತೆ ಅವಿನಾಭಾವ ಸಂಬಂಧ ಹೊಂದಿದ್ದರು. ಅಲ್ಲದೆ, ಅವರು ಮುಂದಿನ ಪೀಳಿಗೆಗೂ ಸ್ಫೂರ್ತಿಯ ಸೆಲೆಯಾಗಿದ್ದಾರೆ. ಓಂ ಶಾಂತಿ..’ಎಂದು ಟ್ವೀಟ್‌ ಮಾಡಿ​ದ್ದಾ​ರೆ.

ತಮ್ಮ ಉಳಿತಾಯದ 2.25 ಲಕ್ಷ ರೂ. ಪಿಎಂ ಕೇರ್ಸ್‌ ಫಂಡ್‌ಗೆ ದಾನ ಮಾಡಿದ ಮೋದಿ! ...

ಕೇಶವಾನಂದ ಭಾರತೀ ಶ್ರೀಗಳ ಅಗಲಿಕೆಯಿಂದ ನಾವು ಒಬ್ಬ ಆದ್ಯಾತ್ಮಿಕ ಗುರುವೊಬ್ಬರನ್ನು ಕಳೆದುಕೊಂಡಿದ್ದೇವೆ. ಮುಂದಿನ ಪೀಳಿಗೆಗೆ ಅವರ ಜೀವನವು ಮಾರ್ಗದರ್ಶನದ ಬೆಳಕು ಇದ್ದಂತೆ ಎಂದು ವೆಂಕಯ್ಯನಾಯ್ಡು ಅಭಿ​ಪ್ರಾ​ಯ​ಪ​ಟ್ಟಿ​ದ್ದಾ​ರೆ.

ಪ್ರಧಾನಿ ಮೋದಿ ವೈಯುಕ್ತಿಕ ಟ್ವಿಟರ್ ಖಾತೆ ಹ್ಯಾಕ್, ಬೇಕಾಬಿಟ್ಟಿ ಪೋಸ್ಟ್!

ಇನ್ನು ಶ್ರೀಗಳ ನಿಧ​ನಕ್ಕೆ ಸಂತಾ​ಪ ಸೂಚಿ​ಸಿ​ರುವ ಸಿಎಂ ​ಯ​ಡಿ​ಯೂ​ರಪ್ಪ, ಧಾರ್ಮಿಕ ಹಾಗೂ ಸಾಂಸ್ಕೃತಿಕವಾಗಿಯೂ ಸಕ್ರಿಯರಾಗಿದ್ದ ಶ್ರೀಗಳು ಗಡಿನಾಡಿನ ಸಂಸ್ಥಾನವನ್ನು ಯಕ್ಷಗಾನ, ಸಂಗೀತದ ಕೇಂದ್ರವನ್ನಾಗಿಸಿದ್ದರು. ಯಕ್ಷಗಾನದ ಮೇಲೆ ಅತೀವ ಪ್ರೇಮ ಹೊಂದಿದ್ದ ಸ್ವಾಮೀಜಿ ಸಮುದಾಯ ಸೇವೆಗಾಗಿ ಮತ್ತು ದೀನ ದಲಿತರನ್ನು ಸಬಲೀಕರಣಕ್ಕಾಗಿ ಸಾಕಷ್ಟುಸೇವೆ ಮಾಡಿದ್ದಾರೆ. ಅವರ ನಿಧನದಿಂದ ನಾವು ಆಧ್ಯಾತ್ಮಿಕ ನಾಯಕರೊಬ್ಬ​ರನ್ನು ಕಳೆದುಕೊಂಡಂತಾ​ಗಿ​ದೆ. ಭಗವಂತ ಮೃತರ ಆತ್ಮಕ್ಕೆ ಶಾಂತಿ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.

ಧರ್ಮ​ಸ್ಥಳ ಧರ್ಮಾ​ಧಿ​ಕಾರಿ ವೀರೇಂದ್ರ ಹೆಗ್ಗಡೆ, ಉಡುಪಿ ಪುತ್ತಿಗೆ ಮಠದ ಸುಗು​ಣೇಂದ್ರ ಶ್ರೀ, ಬಿಜೆಪಿ ರಾಜ್ಯಾ​ಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಸೇರಿ ಹಲವರು ಶ್ರೀಗಳ ನಿಧ​ನಕ್ಕೆ ​ಸಂತಾಪ ಸೂಚಿ​ಸಿ​ದ್ದಾ​ರೆ.