ನವದೆಹಲಿ(ಸೆ.03): ಪ್ರಧಾನ ಮಂತ್ರಿ ನರೇಂದ್ರ ಮೋದಿ, ಪಿಎಂ ಕೇರ್ಸ್‌ ಫಂಡ್‌ಗೆ 2.25 ಲಕ್ಷ ರೂ. ದಾನ ಮಾಡಿದ್ದಾರೆ. ಪ್ರಧಾನ ಮಂತ್ರಿ ಕಾರ್ಯಾಲಯದ ಅಧಿಕಾರಿಯೊಬ್ಬರು ಈ ಮಾಹಿತಿ ನೀಡಿರುವುದಾಗಿ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. 

PM ಕೇರ್ಸ್ ಫಂಡ್‌ನಿಂದ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಗೆ ಹಣ ವರ್ಗಾವಣೆ ಅರ್ಜಿ ವಜಾಗೊಳಿಸಿದ ಸುಪ್ರೀಂ!

ಹೌದು ಕೊರೋನಾತಂಕವನ್ನು ಗಮನದಲ್ಲಿಟ್ಟುಕೊಂಡು ಮೋದಿ ಈ ಫಂಡ್ ಆರಂಭಿಸಿದ್ದರು. ಹೀಗಿರುವಾಗ ಆರಂಭದಲ್ಲಿ ಅವರು 2.25 ಲಕ್ಷ ರೂ. ಈ ಫಂಡ್‌ಗೆ ನೀಡಿದ್ದರು ಎಂದು ಅಧಿಕಾರಿ ತಿಳಿಸಿದ್ದಾರೆ. ಪಿಎಂ ಮೋದಿ ಕೇರ್ಸ್‌ ಪಂಡ್ ಸಂಬಂಧ ವಪಕ್ಷಗಳು ಸರ್ಕಾರದ ವಿರುದ್ಧ ಧ್ವನಿ ಎತ್ತಿವೆ. ಕಾಂಗ್ರೆಸ್ ಇದರ ಸ್ಥಾಪನೆ ಸಂಬಂಧ ಸವಾಲೆಸೆದಿತ್ತು. Prime Minister's National Relief Fund (PMNRF) ಫಂಡ್ ಈ ಹಿಂದಿನಿಂದಲೂ ಕಾರ್ಯ ನಿರ್ವಹಿಸುತ್ತಿದೆ. ಹೀಗಿರುವಾಗ ಪಿಎಂ ಕೇರ್ಸ್‌ ಫಂಡ್ ಸ್ಥಾಪನೆ ಸಂಬಂಧ ಅಸಮಾಧಾನ ವ್ಯಕ್ತಪಡಿಸಿತ್ತು.

'ಪಿಎಂ ಕೇರ್‌ ಫಂಡ್‌ಗೆ ಚೀನಾ ಕಂಪನಿಯಿಂದ ಕೋಟಿ ಕೋಟಿ ಹಣ'

ಪಿಎಂ ಮೋದಿ ಮಕ್ಕಳ ಶಿಕ್ಷಣ ಹಾಗೂ ಕ್ಲೀನ್‌ ಗಂಗಾ ಮಿಷನ್‌ನಂತಹ ಅನೇಕ ಯೋಜನೆಗಳಿಗೆ ದಾನ ಮಾಡಿದ್ದರು. ಅಲ್ಲದೇ ದಾನ ಮಾಡಲು ತಮ್ಮ ವಸ್ತಗಳನ್ನು ಹರಾಜು ಹಾಕಿ ಅದರಿಂದ ಬಂದ ಹಣ ಹೀಗೆ ಎಲ್ಲವೂ ಸೇರಿ  ಈವರೆಗೆ ಅವರು ಒಟ್ಟು 103 ಕೋಟಿ ರೂ. ದಾನ ಮಾಡಿದ್ದಾರೆ. 

2019ರಲ್ಲಿ ಕುಂಭಮೇಳದ ಭದ್ರದಾ ಸಿಬ್ಬಂದಿಗಾಗಿ ಮಾಡಲಾದ ಫಂಡ್‌ಗೆ ಅವರು ತಾವು ಉಳಿತಾಯ ಮಾಡಿದ್ದ 21 ಕ್ಷ ರೂ. ದಾನ ಮಾಡಿದ್ದರು.