2.5 ಮಿಲಿಯನ್ ಅನುಯಾಯಿಗಳನ್ನು ಹೊಂದಿರುವ ಪ್ರಧಾನಿ ನರೇಂದ್ರ ಮೋದಿಯವರ ಟ್ವೀಟರ್ ಖಾತೆ| ಪ್ರಧಾನಿ ಮೋದಿ ವೈಯುಕ್ತಿಕ ಟ್ವಿಟರ್ ಖಾತೆ ಹ್ಯಾಕ್, ಬೇಕಾಬಿಟ್ಟಿ ಪೋಸ್ಟ್!

ನವದೆಹಲಿ(ಸೆ. 03): ಪ್ರಧಾನಿ ನರೇಂದ್ರ ಮೋದಿಯವರ ವೈಯಯಕ್ತಿಕ ವೆಬ್ ಸೈಟ್ ಹಾಗೂ ಟ್ವೀಟರ್ ಖಾತೆಯನ್ನು ಹ್ಯಾಕ್ ಮಾಡಲಾಗಿದೆ ಎಂದು ವರದಿಯಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

2.5 ಮಿಲಿಯನ್ ಅನುಯಾಯಿಗಳನ್ನು ಹೊಂದಿರುವ ಪ್ರಧಾನಿ ನರೇಂದ್ರ ಮೋದಿಯವರ ಟ್ವೀಟರ್ ಖಾತೆಯನ್ನು ಇಂದು ಮುಂಜಾನೆ 3.15 ರ ಸುಮಾರಿಗೆ ಹ್ಯಾಕ್ ಮಾಡಲಾಗಿದೆ ಎಂದು ವರದಿಯಾಗಿದೆ.

ಮೋದಿ ಅವರ ಖಾತೆ ಹ್ಯಾಕ್ ಮಾಡಿ, ಕ್ರಿಪ್ಟೋಕರೆನ್ಸಿ ಮೂಲಕ ಪಿಎಂ ನ್ಯಾಷನಲ್ ರಿಲೀಫ್ ಫಂಡ್​ಗೆ ದೇಣಿಗೆ ನೀಡಬೇಕೆಂದು ಕೇಳಿ ಸರಣಿ ಟ್ವೀಟ್​ಗಳನ್ನ ಮಾಡಿದ್ದರು. ಇದಾದ ಬಳಿಕ ಅವರ ಖಾತೆ ಹ್ಯಾಕ್ ಆಗಿರುವುದು ಗಮನಕ್ಕೆ ಬಂದಿದೆ. ಈಗ ಖಾತೆಯನ್ನು ಮರಳಿ ಪಡೆಯಲಾಗುತ್ತಿದ್ದು ಆ ಸರಣಿ ಟ್ವೀಟ್​ಗಳನ್ನ ಡಿಲೀಟ್ ಮಾಡಲಾಗಿದೆ.

ಈ ಕುರಿತು ಮಾಹಿತಿ ನೀಡಿರುವ ಟ್ವೀಟರ್, ಗುರುವಾರ ಪ್ರಧಾನಿ ನರೇಂದ್ರ ಮೋದಿಯವರ ಟ್ವೀಟರ್ ಖಾತೆಯನ್ನು ಹ್ಯಾಕ್ ಮಾಡಲಾಗಿದೆ ಎಂದು ತಿಳಿಸಿದೆ.*