ಉತ್ತರಪ್ರದೇಶದ ಹರ್ದೊಯಿಯಲ್ಲಿ ವಿಚಿತ್ರ ಮಗುವೊಂದರ ಜನನವಾಗಿದೆ. ನಾಲ್ಕು ಕಾಲು ಹಾಗೂ ನಾಲ್ಕು ತೋಳುಗಳನ್ನು ಮಗು ಹೊಂದಿದೆ. ಈ ಸುದ್ದಿ ಎಲ್ಲೆಡೆ ಹಬ್ಬುತ್ತಿದ್ದಂತೆ ಮಗು ದೇವಿಯ ಪ್ರತಿರೂಪ ಎಂದು ಭಾವಿಸಿ ಮಗುವನ್ನು ನೋಡಲು ಸುತ್ತಮುತ್ತಲಿನ ಜನ ಆಗಮಿಸಿದ್ದಾರೆ.

ಉತ್ತರಪ್ರದೇಶ: ಉತ್ತರಪ್ರದೇಶದ ಹರ್ದೊಯಿಯಲ್ಲಿ ವಿಚಿತ್ರ ಮಗುವೊಂದರ ಜನನವಾಗಿದೆ. ನಾಲ್ಕು ಕಾಲು ಹಾಗೂ ನಾಲ್ಕು ತೋಳುಗಳನ್ನು ಮಗು ಹೊಂದಿದೆ. ಈ ಸುದ್ದಿ ಎಲ್ಲೆಡೆ ಹಬ್ಬುತ್ತಿದ್ದಂತೆ ಮಗು ದೇವಿಯ ಪ್ರತಿರೂಪ ಎಂದು ಭಾವಿಸಿ ಮಗುವನ್ನು ನೋಡಲು ಸುತ್ತಮುತ್ತಲಿನ ಜನ ಆಗಮಿಸಿದ್ದಾರೆ. ಪುಟ್ಟದಾದ ಹೆಣ್ಣು ಮಗು ಇದಾಗಿದ್ದು, ಅರೋಗ್ಯವಾಗಿದೆ ಎಂದು ತಿಳಿದು ಬಂದಿದೆ. 

ಉತ್ತರ ಪ್ರದೇಶ (Uttar Pradesh) ರಾಜ್ಯದ ಹರ್ದೋಯಿ (Hardoyi) ಜಿಲ್ಲೆಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕರೀನಾ (Kareena) ಹಾಗೂ ಸಂಜಯ್(Sanjay) ಎಂಬ ದಂಪತಿಗೆ ಈ ಮಗು ಜನಿಸಿದೆ. ಕರೀನಾ ಅವರಿಗೆ ಶನಿವಾರ ಹೆರಿಗೆ ನೋವು ಕಾಣಿಸಿಕೊಂಡಿದ್ದು, ನಂತರ ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದಾಗಿ ಸ್ವಲ್ಪ ಹೊತ್ತಿನಲ್ಲಿ ಅವರು ಈ ವಿಚಿತ್ರ ಮಗುವಿಗೆ ಜನ್ಮ ನೀಡಿದ್ದಾರೆ. 

ವಿಚಿತ್ರ ಮಗುವಿಗೆ ಜನ್ಮ ಕೊಟ್ಟ ಮಹಿಳೆ, ನೋಡುಗರಿಗೆ ಶಾಕ್!

ಮಗು 6.53 ಪೌಂಡ್ (2.961958 ಕೆಜಿ) ತೂಗುತ್ತಿದೆ. ನಾಲ್ಕು ಕಾಲು ಹಾಗೂ ಕೈಗಳನ್ನು ಹೊಂದಿದೆ. ಈ ವಿಚಿತ್ರ ಮಗುವಿನ ಜನನದ ನಂತರ ಕುಟುಂಬ ಸದಸ್ಯರು ಅಸಮಾಧಾನ ಹೊಂದಿದ್ದಾರೆ ಎಂದು ತಿಳಿದು ಬಂದಿದೆ. ಮತ್ತೊಂದೆಡೆ ಮಗುವಿನ ಜನನದ ಸುದ್ದಿಯೂ ಕಾಡ್ಗಿಚ್ಚಿನಂತೆ ಊರಲ್ಲಿ ಹಬ್ಬಿದ್ದು, ಅನೇಕರು ಮಗುವನ್ನು ನೋಡಲು ಆಗಮಿಸಿದ್ದಾರೆ. ಅಲ್ಲದೇ ಈ ಮಗು ದೇವರ ಅವತಾರ ಎಂದು ಕೆಲವರು ಹೇಳುತ್ತಿದ್ದಾರೆ.

ಮಧ್ಯಪ್ರದೇಶದಲ್ಲಿ ವಿಚಿತ್ರ ಮಗುವಿನ ಜನನ, ವೈದ್ಯರಿಗೆ ಅಚ್ಚರಿ: ಆಸ್ಪತ್ರೆ ಹೊರಗೆ ಜನವೋ ಜನ!

ವೈದ್ಯಕೀಯ ಅಪರೂಪದ ಹೊರತಾಗಿಯೂ ಈ ಮಗು ಮತ್ತು ತಾಯಿ ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಭಾರತದಲ್ಲಿ ಈ ರೀತಿ ಮಗು ಜನಿಸಿದ್ದು ಇದೇ ಮೊದಲಲ್ಲ, ಈ ವರ್ಷದ ಆರಂಭದಲ್ಲಿ, ನಾಲ್ಕು ಕೈಗಳು ಮತ್ತು ಕಾಲುಗಳೊಂದಿಗೆ ಜನಿಸಿದ ಮತ್ತೊಂದು ಪುಟ್ಟ ಮಗುವನ್ನು ದೇವರ ಅವತಾರವೆಂದು ಭಾವಿಸಿ ಸ್ಥಳೀಯರು ಆರಾಧಿಸಲು ಆರಂಭಿಸಿದ್ದರು. ಜನವರಿ 17 ರಂದು ಮಹಿಳೆಯೊಬ್ಬರು ವಿಚಿತ್ರ ಮಗುವಿಗೆ ಜನ್ಮ ನೀಡಿದ್ದರು. ಹಾಗೆಯೇ 2019ರಲ್ಲಿ ಮತ್ತೊಬ್ಬ ಮಹಿಳೆ ನಾಲ್ಕು ಕಾಲುಗಳು ಹಾಗೂ ಮೂರು ಕೈಗಳಿರುವ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. 

2018ರಲ್ಲಿ ಒಂದು ಕಾಲು ಮತ್ತು ಬಾಲ ಇರುವ ವಿಚಿತ್ರ ಮಗುವೊಂದು ಹಾಸನ (Hasana) ಜಿಲ್ಲೆ ಸಕಲೇಶಪುರ (Sakaleshpura) ತಾಲೂಕಿನಲ್ಲಿ ಜನಿಸಿತ್ತು. ಆದರೆ ಜನಿಸಿದ ಕೆಲ ನಿಮಿಷಗಳಲ್ಲಿಯೇ ಮಗುವು (Baby) ಮೃತಪಟ್ಟಿತ್ತು. ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನಲ್ಲಿ ಈ ಘಟನೆ ನಡೆದಿತ್ತು. ತಾಲೂಕಿನ ಚಂಗಡಿಹಳ್ಳಿ (Changadihalli) ಸಮೀಪದ ಗೋನಳ್ಳಿ (Gonahalli) ಗ್ರಾಮದ ಚಿನ್ನಮ್ಮ (Chinnamma)ಹಾಗೂ ಮೂರ್ತಿ (Murthy) ದಂಪತಿಗೆ ಇಂತಹ ವಿಚಿತ್ರ ಮಗು ಜನಿಸಿತ್ತು. ಚಿನ್ನಮ್ಮ ಗರ್ಭಿರ್ಣಿಯಾದ ವೇಳೆ ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ತಪಾಸಣೆ ನಡೆಸಿದ್ದ ವೇಳೆ ಮಗು ಆರೋಗ್ಯವಾಗಿದೆ ಎಂದು ವೈದ್ಯರು ದೃಢಪಡಿಸಿದ್ದರು. ಆದರೆ ಹೆರಿಗೆಯಾದ ವೇಳೆ ಮಗು ಈ ರೀತಿ ಜನಿಸಿದೆ. ಏಳು ತಿಂಗಳ ಗರ್ಭಿಣಿಯಾಗಿದ್ದ (Pragnent) ಚಿನ್ನಮ್ಮಗೆ ಹೊಟ್ಟೆನೋವು ಕಾಣಿಸಿಕೊಂಡಿದ್ದು ಕೊಡಗಿನ ಶನಿವಾರಸಂತೆ ಸರ್ಕಾರಿ ಆಸ್ಪತ್ರೆಗೆ (Govt Hospital) ದಾಖಲಿಸಲಾಗಿತ್ತು. ಮಧ್ಯರಾತ್ರಿ ಅವರು ಮಗುವಿಗೆ ಜನ್ಮ ನೀಡಿದ್ದರು. ಇದಾಗಿ ಸ್ವಲ್ಪ ಹೊತ್ತಿನಲ್ಲೇ ಮಗು ಸಾವನ್ನಪ್ಪಿದೆ ಎಂದು ಹೆರಿಗೆ ಮಾಡಿಸಿದ ಶುಶ್ರೂಷಕಿ ಗೀತಾ (Geeta) ತಿಳಿಸಿದ್ದಾರೆ.