* ಪುಟ್ಟ ಕಂದನ ನೋಡಲು ದೂರದೂರುಗಳಿಂದ ಬರುತ್ತಿದ್ದಾರೆ ಜನ* ವಿಚಿತ್ರ ಮಗುವಿಗೆ ಜನ್ಮ ಕೊಟ್ಟ ಮಧ್ಯಪ್ರದೇಶದ ದಂಪತಿ* ಕೋಟಿಯಲ್ಲಿ ಒಂದು ಮಗು ಹೀಗೆ ಜನಿಸುತತ್ತದೆ ಎಂದ ವೈದ್ಯರು

ಭೋಪಾಲ್(ಮಾ.30): ಮನೆಯಲ್ಲಿ ಮಗು ಜನಿಸಿದಾಗ, ಪುಟ್ಟ ಅತಿಥಿಯನ್ನು ನೋಡಲು ಮತ್ತು ದಂಪತಿಯನ್ನು ಅಭಿನಂದಿಸಲು ಜನರು ಆಗಮಿಸುತ್ತಾರೆ. ಆದರೆ ಮಧ್ಯಪ್ರದೇಶದ ರತ್ಲಾಂನಲ್ಲಿ ಮಹಿಳೆಯೊಬ್ಬರು ವಿಚಿತ್ರ ಮಗುವಿಗೆ ಜನ್ಮ ನೀಡಿದ್ದು, ಆ ಪುಟ್ಟ ಕಂದನ ನೋಡಲು ಜನರು ಆಸ್ಪತ್ರೆಯತ್ತ ಧಾವಿಸುತ್ತಿದ್ದಾರೆ. ಹೌದು ಈ ಪುಟ್ಟ ಎಲ್ಲಾ ಮಕ್ಕಳಿಗಿಂತ ವಿಭಿನ್ನವಾಗಿದೆ. ಈ ಕಂದನಿಗೆ ಎರಡು ತಲೆ ಮತ್ತು ಮೂರು ಕೈಗಳಿವೆ, ಹೀಗಾಗಿಯೇ ಈ ಮಗುವನ್ನು ನೋಡಲು ಅನೇಕ ಮಂದಿ ಆಸ್ಪತ್ರೆಗೆ ಬಂದಿದ್ದಾರೆ.

ಇದನ್ನು ವಿಜ್ಞಾನದ ಪವಾಡ ಎಂದು ಕರೆದ ವೈದ್ಯರು 

ವಾಸ್ತವವಾಗಿ, ರತ್ಲಾಮ್‌ನ ಎಂಸಿಎಚ್ ಆಸ್ಪತ್ರೆಯ ಜವ್ರಾ ನಿವಾಸಿ ಶಹೀನ್ ಎಂಬ ಮಹಿಳೆ ಈ ವಿಶಿಷ್ಟ ಮಗುವಿಗೆ ಜನ್ಮ ನೀಡಿದ್ದಾರೆ. ಆದರೆ ವೈದ್ಯರು ಅವರ ಎರಡು ತಲೆ ಮತ್ತು ಮೂರು ಕೈಗಳನ್ನು ನೋಡಿ ಅಚ್ಚರಿಗೊಂಡಿದ್ದಾರೆ. ಜನನದ ಕೆಲವು ಗಂಟೆಗಳವರೆಗೆ, ನವಜಾತ ಶಿಶುವಿನ ಸ್ಥಿತಿಯನ್ನು ನೋಡಿ, ಅವರನ್ನು ಇಂದೋರ್‌ನ ಎಂವೈ ಆಸ್ಪತ್ರೆಯ ಐಸಿಯುಗೆ ದಾಖಲಿಸಿದ್ದಾರೆ. ಮಗುವನ್ನು ಹಿರಿಯ ವೈದ್ಯರ ನಿಗಾದಲ್ಲಿ ಇರಿಸಲಾಗಿದೆ. ಪ್ರಸ್ತುತ ಹೆರಿಗೆಯಾದ ಮಹಿಳೆಯನ್ನು ರತ್ಲಾಮ್ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಅದೇ ಸಮಯದಲ್ಲಿ, ಅಂತಹ ಪ್ರಕರಣಗಳು ಕೋಟಿಗಳಲ್ಲಿ ಒಂದಾಗಿದೆ ಎಂದು ವೈದ್ಯರು ಹೇಳುತ್ತಾರೆ, ಅಲ್ಲದೇ ಇದು ವಿಜ್ಞಾನದ ಪವಾಡ ಎಂದೂ ಕರೆಯುತ್ತಾರೆ. ವಿಜ್ಞಾನದ ಭಾಷೆಯಲ್ಲಿ, ಅಂತಹ ಸ್ಥಿತಿಯನ್ನು ಪಾಲಿಸೆಫಾಲಿ ಸ್ಥಿತಿ ಎಂದು ಕರೆಯಲಾಗುತ್ತದೆ.

ಒಂದು ದೇಹ, ಎರಡು ತಲೆ, ಮೂರು ಕೈಗಳು

ಈ ಮುಗ್ಧ ಕಂದನ ದೇಹಕ್ಕೆ ಎರಡು ತಲೆಗಳಿವೆ ಎಂಬುವುದು ಉಲ್ಲೇಖನೀಯ. ಮೂರು ಕೈಗಳಲ್ಲಿ ಎರಡು ಸಾಮಾನ್ಯವಾಗಿದ್ದರ ಮೂರನೇ ಕೈ ಎರಡು ತಲೆಗಳ ನಡುವೆ ಹಿಂಭಾಗದಲ್ಲಿದೆ. ಇಂತಹ ಸಂದರ್ಭದಲ್ಲಿ ಹಲವು ಮಕ್ಕಳು ಒಂದೋ ಗರ್ಭದಲ್ಲಿ ಸಾಯುತ್ತವೆ ಮತ್ತು ಮಗು ಹುಟ್ಟಿದರೂ ಹೆಚ್ಚು ದಿನ ಬದುಕಲು ಸಾಧ್ಯವಾಗುವುದಿಲ್ಲ ಎಂದು ನವಜಾತ ಶಿಶುವಿಗೆ ಚಿಕಿತ್ಸೆ ನೀಡಿದ ವೈದ್ಯ ನಾವೇದ್ ಖುರೇಷಿ ಹೇಳಿದ್ದಾರೆ. ಅಂತಹ ಸಂದರ್ಭಗಳಲ್ಲಿ ಶಸ್ತ್ರಚಿಕಿತ್ಸೆಯು ಒಂದು ಆಯ್ಕೆಯಾಗಿದ್ದರೂ, ಅವರು ಬದುಕುಳಿಯುವ ಸಾಧ್ಯತೆಗಳು ತುಂಬಾ ಕಡಿಮೆ ಎಂದಿದ್ದಾರೆ.

ಮೊದಲ ಮಗುವಿನ ಆರೋಗ್ಯಕ್ಕಾಘಿ ಗಂಡ ಹೆಂಡತಿ ಪ್ರಾರ್ಥನೆ

ರತ್ಲಾಮ್ ಜಾವ್ರಾದ ಆಟೋ ಚಾಲಕ ಸೊಹೈಲ್ ಅವರ ಪತ್ನಿ ಶಾಹೀನ್ ಈ ವಿಶಿಷ್ಟ ಮಗುವಿಗೆ ಜನ್ಮ ನೀಡಿದ್ದಾರೆ. ಇದು ತನ್ನ ಮೊದಲ ಮಗು, ಕಂದನ ನೋಡಿ ಸಂಭ್ರಮಿಸಬೇಕಿದ್ದ ಹೆತ್ತವರು ಮಗುವಿನ ಸ್ಥಿತಿ ನೋಡಿ ಬೆಚ್ಚಿ ಬಿದ್ದಿದ್ದಾರೆ. ಆಪರೇಷನ್‌ನಿಂದ ಮಗು ಚೇತರಿಸಿಕೊಳ್ಳಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ. ಗರ್ಭಾವಸ್ಥೆಯಲ್ಲಿ, ಮಗುವಿನ ಸ್ಥಿತಿಯನ್ನು ಪರೀಕ್ಷಿಸಲು ವೈದ್ಯರು ಸೋನೋಗ್ರಫಿ ಮಾಡಿದಾಗ, ಅವಳಿಗಳ ಜನನದ ಬಗ್ಗೆ ಹೇಳಿದ್ದರು ಎಂದು ಸೊಹೈಲ್ ಖಾನ್ ಹೇಳಿದರು. ಹೀಗಾದರೆ ಅವಳಿ ಮಕ್ಕಳು ಹುಟ್ಟಬಹುದು ಎಂದು ವೈದ್ಯರೇ ಹೇಳಿದ್ದಾರೆ.