Asianet Suvarna News Asianet Suvarna News

ಫೈಜರ್‌ ಲಸಿಕೆ ದಕ್ಷತೆಯ ಕುರಿತ ಪ್ರಶ್ನೆಗೆ ಉತ್ತರಿಸಲು ಸಿಇಒ ನಕಾರ, ಕಾಂಗ್ರೆಸ್‌ ನಾಯಕರ ವಿರುದ್ಧ ಬಿಜೆಪಿ ಪ್ರತೀಕಾರ!

ಕೋವಿಡ್‌ ಲಸಿಕೆಗೆ ಬೇಡಿಕೆ ಹೆಚ್ಚಿದ್ದ ಸಮಯದಲ್ಲಿ ಭಾರತದ ಮಾರುಕಟ್ಟೆ ಪ್ರವೇಶಿಸಲು ಅಮೆರಿಕದ ಫೈಜರ್‌ ಕಂಪನಿ ದೊಡ್ಡ ಮಟ್ಟದ ಹೋರಾಟ ನಡೆಸಿತ್ತು. ಆದರೆ, ಕೇಂದ್ರ ಸರ್ಕಾರದ ಕಟ್ಟುನಿಟ್ಟಿನ ನಿಯಮಗಳ ಕಾರಣ ಇದು ಸಾಧ್ಯವಾಗಲಿಲ್ಲ. ಈ ನಡುವೆ ದಾವೋಸ್‌ ಶೃಂಗದಲ್ಲಿ ಫೈಜರ್‌ ಲಸಿಕೆಯ ದಕ್ಷತೆಯ ಕುರಿತು ಎದುರಾದ ಪ್ರಶ್ನೆಗಳಿಗೆ ಉತ್ತರಿಸಲು ಸ್ವತಃ ಕಂಪನಿಯ ಸಿಇಒ ನಿರಾಕರಿಸಿದ ಘಟನೆ ನಡೆದಿದೆ.
 

Pfizer CEO evades questions on Covid vaccine efficacy BJP Leaders on Congress Push on vaccine to Indian Market san
Author
First Published Jan 23, 2023, 10:31 PM IST

ನವದೆಹಲಿ (ಜ.23): ಅದಿನ್ನೂ ಕೋವಿಡ್‌ ಉತ್ತುಂಗದಲ್ಲಿದ್ದ ಕಾಲ. ಕೋವಿಡ್‌ನ 2 ಹಾಗೂ ಮೂರನೇ ಅಲೆಗಳ ನಡುವೆ ಪ್ರತಿದಿನ ಸಾವಿರಕ್ಕಿಂತಲೂ ಅಧಿಕ ಜನರು ಸಾವಿಗೀಡಾಗುತ್ತಿದ್ದರು. ಈ ವೇಳೆ ಭಾರತೀಯ ಕಂಪನಿಗಳು ಉತ್ಪಾದನೆ ಮಾಡಿದ ಕೋವಿಶೀಲ್ಡ್‌, ಕೋವಾಕ್ಸಿನ್‌ ಜೊತೆಗೆ ರಷ್ಯಾದ ಸ್ಪುಟ್ನಿಕ್‌-ವಿ ಹಾಗೂ ಅಮೆರಿಕದ ಫೈಜರ್‌ ಲಸಿಕೆಗಳು ಪೈಪೋಟಿಯಲ್ಲಿದ್ದವು. ಸ್ವತಃ ರಾಹುಲ್‌ ಗಾಂಧಿ ದೇಶೀಯ ಕಂಪನಿಗಳಿಂತ ಹೆಚ್ಚಾಗಿ ವಿದೇಶಿ ಕಂಪನಿಯಾದ ಫೈಜರ್‌ ಲಸಿಕೆಯ ಬ್ರ್ಯಾಂಡ್ ಅಂಬಾಸಿಡರ್‌ ಎನ್ನುವ ರೀತಿಯಲ್ಲಿ ಟ್ವೀಟ್‌ ಮಾಡಿದ್ದರು. ಭಾರತ ಸರ್ಕಾರ ತುರ್ತಾಗಿ ಈ ಲಸಿಕೆಗೆ ಒಪ್ಪಿಗೆ ನೀಡಿ ಅದನ್ನು ಭಾರತದ ಮಾರುಕಟ್ಟೆ ಪ್ರವೇಶಿಸಲು ಅವಕಾಶ ನೀಡಬೇಕು. ಲಸಿಕೆ ಹಂಚುವ ನಿಯಮಾವಳಿಗಳ ಬಗ್ಗೆ ರೂಪುರೇಷೆ ತೀರ್ಮಾನ ಮಾಡಬೇಕು ಎಂದು ಟ್ವೀಟ್‌ ಮಾಡಿದ್ದರು. ಆದರೆ, ಸರ್ಕಾರ ಇದಾವುದಕ್ಕೂ ಬಗ್ಗಿರಲಿಲ್ಲ. ಕೋವಾಕ್ಸಿನ್‌, ಕೋವಿಶೀಲ್ಡ್‌ ಕೊನೆಗೆ ರಷ್ಯಾದ ಸ್ಪುಟ್ನಿಕ್‌ ಲಸಿಕೆಗಳು ಭಾರತಕ್ಕೆ ಬಂದರೂ, ಫೈಜರ್‌ ಮಾತ್ರ ಭಾರತಕ್ಕೆ ಬಂದಿರಲಿಲ್ಲ.  ಅದಕ್ಕೆ ಎರಡು ಕಾರಣವಿತ್ತು. ಒಂದು ಭಾರತ ಸರ್ಕಾರ, ಫೈಜರ್‌ ಅದೇನೇ ಪರೀಕ್ಷೆ ಮಾಡಿದ್ದರೂ, ಭಾರತಕ್ಕೆ ಈ ಲಸಿಕೆ ಬರಬೇಕಾದಲ್ಲಿ ಭಾರತದಲ್ಲೂ ಇದರ ಪರೀಕ್ಷೆ ನಡೆಯಬೇಕು ಎಂದು ಹೇಳಿತ್ತು.  ಆದರೆ, ಇದಕ್ಕೆ ಕಂಪನಿ ಸಂಪೂರ್ಣವಾಗಿ ನಿರಾಕರಿಸಿತ್ತು.


ಇನ್ನೊಂದು ಕಾರಣವೆಂದರೆ, ಫೈಜರ್‌ ಕಂಪನಿ ಕಾನೂನು ತೊಡಕುಗಳಿಂದ ವಿನಾಯಿತಿ ಬಯಸಿತ್ತು. ಆದರೆ, ಇದನ್ನು ಸರ್ಕಾರ ಸಂಪೂರ್ಣವಾಗಿ ನಿರಾಕರಣೆ ಮಾಡಿತ್ತು. ಭೋಪಾಲ್‌ ಅನಿಲ ದುರಂತದಿಂದ ಪಾಠ ಕಲಿತಿರುವ ಭಾರತ, ಫೈಜರ್‌ ಲಸಿಕೆಯಿಂದ ಭಾರತದಲ್ಲಿ ಏನಾದರೂ ಸಮಸ್ಯೆ ಆದಲ್ಲಿ ಅದರ ಸಂಪೂರ್ಣ ಕಾನೂನು ಬಾಧ್ಯತೆಗಳಿಗೆ ಕಂಪನಿ ಒಳಗೊಳ್ಳಬೇಕು ಎಂದಿತ್ತು. ಇದರಿಂದ ವಿನಾಯಿತಿ ಕೇಳಿದ್ದ ಕಂಪನಿಗೆ ಭಾರತ ಸುತಾರಾಂ ಆಗೋದಿಲ್ಲ ಎಂದಿತ್ತು. ಈ ಎಲ್ಲದರ ನಡುವೆ ಕಂಪನಿಯ ಸಿಇಎ ಈ ಲಸಿಕೆಯ ದಕ್ಷತೆಯ ಬಗ್ಗೆ ಸ್ಪಷ್ಟವಾಗಿ ಮಾತನಾಡಲು ನಿರಾಕರಿಸಿದ್ದಾರೆ.


ಯುಎಸ್ ಮೂಲದ ಫಾರ್ಮಾಸ್ಯುಟಿಕಲ್ ದೈತ್ಯ ಫಿಜರ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆಲ್ಬರ್ಟ್ ಬೌರ್ಲಾ, ಸ್ವಿಜರ್ಲೆಂಡ್‌ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ವೇದಿಕೆಯ ಸಭೆಯ ಬದಿಯಲ್ಲಿ ಅದರ ಕೋವಿಡ್ ಲಸಿಕೆ ದಕ್ಷತೆಯ ಬಗ್ಗೆ ಕಠಿಣ ಪ್ರಶ್ನೆಗಳನ್ನು ಎದುರಿಸಿದರು. ಆದರೆ ಈ ಎಲ್ಲಾ ಪ್ರಶ್ನೆಗಳಿಗೆ ಹಾರಿಕೆಯ ಅಥವಾ ನಿರ್ಲಕ್ಷ್ಯದ ಉತ್ತರ ನೀಡಿರುವ ಅವರ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ರೆಬೆಲ್ ನ್ಯೂಸ್ ಪತ್ರಕರ್ತರೊಬ್ಬರು ಫಿಜರ್ ಸಿಇಒಗೆ ಸಾಕಷ್ಟು ಕಠಿಣ ಪ್ರಶ್ನೆಗಳನ್ನು ಕೇಳುತ್ತಿರುವುದು ವಿಡಿಯೋದಲ್ಲಿದೆ. ವೈರಸ್‌ ಹರಡುವುದನ್ನು ಲಸಿಕೆ ನಿಲ್ಲಿಸೋದಿಲ್ಲ ಎನ್ನುವ ಅಂಶವನ್ನು ಕಂಪನಿ ಯಾಕೆ ರಹಸ್ಯವಾಗಿಟ್ಟಿತ್ತು? ಎನ್ನುವ ಪ್ರಶ್ನೆಯನ್ನು ಆಲ್ಬರ್ಟ್‌ ಬೌರ್ಲಾ ಅವರಿಗೆ ಕೇಳಿತ್ತು. ಆದರೆ, ಈ ಪ್ರಶ್ನೆಯನ್ನು ಪದೇ ಪದೇ ತಳ್ಳಿ ಹಾಕಿದ ಅವರು, 'ತುಂಬಾ ಧನ್ಯವಾದಗಳು' ಮತ್ತು 'ಶುಭ ದಿನ ನಿಮದಾಗಲಿ' ಎಂದು ಹೇಳುತ್ತಿದ್ದರು.

Covid in India: ಭಾರತಕ್ಕೂ ಬಂತು ಕೋವಿಡ್ ಗುಳಿಗೆ, ತುರ್ತು ಬಳಕೆಗೆ ಶಿಫಾರಸು!

ವೀಡಿಯೊದಲ್ಲಿ, ಪತ್ರಕರ್ತರೊಬ್ಬರು "ನೀವು (ಫೈಜರ್) ಇದು 100 ಪ್ರತಿಶತ ಪರಿಣಾಮಕಾರಿಯಾಗಿದೆ, ನಂತರ ಶೇಕಡಾ 90, ನಂತರ ಶೇಕಡಾ 80, ನಂತರ ಶೇಕಡಾ 70 ಎಂದು ಹೇಳಿದ್ದೀರಿ, ಆದರೆ ಲಸಿಕೆಗಳು ಪ್ರಸರಣವನ್ನು ನಿಲ್ಲಿಸುವುದಿಲ್ಲ ಎಂದು ನಮಗೆ ಈಗ ತಿಳಿದಿದೆ. ಈ ವಿಚಾರ ರಹಸ್ಯವಾಗಿಟ್ಟಿದ್ದೇಕೆ? ಎಂದು ಪ್ರಶ್ನೆ ಮಾಡಿದ್ದಾರೆ. ಫಿಜರ್ ಮುಖ್ಯಸ್ಥರು ಪ್ರತಿಕ್ರಿಯೆ ನೀಡದೇ ಇದ್ದರೂ, ಪತ್ರಕರ್ತರು ಅವರನ್ನು ಹಿಂಬಾಲಿಸುತ್ತಲೇಇದ್ದರು. ಮತ್ತೊಂದು ಪ್ರಶ್ನೆಯಲ್ಲಿ, ವಿಶ್ವದ ಕ್ಷಮೆಯಾಚಿಸುವ ಸಮಯ ಬಂದಿದೆಯೇ ಮತ್ತು ಫಲಿತಾಂಶವನ್ನು ನೀಡದ ಲಸಿಕೆಗಳನ್ನು ಖರೀದಿಸಿದ ದೇಶಗಳಿಗೆ ಮರುಪಾವತಿಯನ್ನು ನೀಡಲು ಸಿದ್ಧರಿದ್ದೀರಾ? ಎಂದು ಪ್ರಶ್ನೆಗಳನ್ನು ಕೇಳಲಾಯಿತು. ಅದಕ್ಕೂ ಅವರಿಂದ ಉತ್ತರ ಬಂದಿರಲಿಲ್ಲ.

Covid Vaccine: ಈ ಲಸಿಕೆ ಬಿಟ್ಟು ಉಳಿದೆಲ್ಲವೂ ಒಮಿಕ್ರಾನ್ ವಿರುದ್ಧ ನಿಷ್ಪ್ರಯೋಜಕ: ಅಧ್ಯಯನದಲ್ಲಿ ಬಯಲು!

ಭಾರತದ ಮಾಹಿತಿ ಮತ್ತು ತಂತ್ರಜ್ಞಾನದ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್, ದಾವೋಸ್‌ನಲ್ಲಿ ವರದಿಗಾರರೊಂದಿಗೆ ಫಿಜರ್ ಸಿಇಒ ಅವರ ಮುಖಾಮುಖಿಯ ವೀಡಿಯೊವನ್ನು ಪೋಸ್ಟ್‌ ಮಾಡಿದ್ದು, "ಎಲ್ಲಾ ಭಾರತೀಯರಿಗೆ ನೆನಪಿಸುವುದಕ್ಕಾಗಿ, ಫಿಜರ್ ಭಾರತ ಸರ್ಕಾರವನ್ನು ನಷ್ಟ ಪರಿಹಾರದ ಷರತ್ತುಗಳನ್ನು ಸ್ವೀಕರಿಸಲು ಒತ್ತಾಯ ಹೇರಿತ್ತು" ಎಂದು ಟ್ವೀಟ್ ಮಾಡಿದ್ದಾರೆ. ಕಾಂಗ್ರೆಸ್‌ನ ರಾಹುಲ್ ಗಾಂಧಿ, ಪಿ ಚಿದಂಬರಂ ಮತ್ತು ಜೈರಾಮ್ ರಮೇಶ್ ಅವರನ್ನು ಟೀಕಿಸಿದ ಸಚಿವರು, ಈ ಮೂವರು ಭಾರತದಲ್ಲಿ ವಿದೇಶಿ ಲಸಿಕೆಗಳನ್ನು ನೀಡಬೇಕು ಎಂದು ಬಯಸಿದ್ದರು ಎಂದು ಬರೆದಿದ್ದಾರೆ. ವಿಶೇಷವೆಂದರೆ, ಕೋವಿಡ್ ವಿರುದ್ಧದ ಭಾರತದ ಪ್ರತಿರಕ್ಷಣೆ ಡ್ರೈವ್ ಅನ್ನು ಸ್ಥಳೀಯವಾಗಿ ತಯಾರಿಸಿದ ಲಸಿಕೆಗಳ ಮೂಲಕ ಮತ್ತು ದೊಡ್ಡದಾಗಿ ಪೂರೈಸಲಾಗಿತ್ತು.

Follow Us:
Download App:
  • android
  • ios