Asianet Suvarna News Asianet Suvarna News

UP Elections : ಉತ್ತರ ಪ್ರದೇಶದಿಂದ ಬಿಜೆಪಿಯನ್ನು ತೊಲಗಿಸುವುದು 1947ಕ್ಕಿಂತ ದೊಡ್ಡ ಸ್ವಾತಂತ್ರ್ಯ!

1947ರಲ್ಲಿ ಬ್ರಿಟಿಷರನ್ನು ತೊಲಗಿಸಿದ್ದಕ್ಕಿಂತ ದೊಡ್ಡ ಸಾಧನೆ ಉತ್ತರ ಪ್ರದೇಶದಿಂದ ಬಿಜೆಪಿಯನ್ನು ಹೊರಹಾಕುವುದು
ಬಿಜೆಪಿ ನೇತೃತ್ವದಲ್ಲಿ ಜಮ್ಮು-ಕಾಶ್ಮೀರ ರಾಜ್ಯದ ಅಸ್ತಿತ್ವವೇ ಇಂದು ಅಪಾಯದಲ್ಲಿದೆ
ಹರಿದ್ವಾರ ದ್ವೇಷ ಭಾಷಣವನ್ನೂ ಉಲ್ಲೇಖಿಸಿದ ಪಿಡಿಪಿ ನಾಯಕಿ ಮೆಹಬೂಬಾ ಮಫ್ತಿ

People Democratic Party President Mehbooba Mufti said getting rid of BJP in Uttar Pradesh will be bigger than freedom of 1947 san
Author
Bengaluru, First Published Jan 18, 2022, 1:32 PM IST

ಜಮ್ಮು (ಜ. 18): ದೇಶದಲ್ಲಿ ಬಿಜೆಪಿ (BJP) ನೇತೃತ್ವದ ಸರ್ಕಾರವು ವಿವಿಧ ಸಮುದಾಯಗಳ ನಡುವೆ ದ್ವೇಷದ ಬೀಜವನ್ನು (sowing seeds of hatred) ಬಿತ್ತುತ್ತಿದೆ. ಮುಂಬರುವ ಉತ್ತರ ಪ್ರದೇಶ (Uttar Pradesh) ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಬೇಕಿದೆ. ಬಿಜೆಪಿಯನ್ನು ದೇಶದ ಅತಿದೊಡ್ಡ ರಾಜ್ಯದಿಂದ ತೊಲಗಿಸುವುದು, 1947ರಲ್ಲಿ ಬ್ರಿಟಿಷರನ್ನು ತೊಲಗಿಸಿ ದೇಶ ಸ್ವಾತಂತ್ರ್ಯ ಪಡೆದುಕೊಂಡ ಸಾಧನೆಗಿಂತ ದೊಡ್ಡದಾಗಿರಲಿದೆ ಎಂದು ಜಮ್ಮು ಕಾಶ್ಮೀರದ (Jammu and Kashmir ) ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ (People Democratic Party ) ಅಧ್ಯಕ್ಷೆ ಮೆಹಬೂಬಾ ಮಫ್ತಿ (Mehbooba Mufti ) ಹೇಳಿದ್ದಾರೆ. ಬಿಜೆಪಿ ಆಡಳಿತದಲ್ಲಿ ಜಮ್ಮು ಮತ್ತು ಕಾಶ್ಮೀರದ ಅಸ್ತಿತ್ವವು ಅಪಾಯದಲ್ಲಿದೆ ಎಂದು ಹೇಳಿದ ಮಾಜಿ ಮುಖ್ಯಮಂತ್ರಿ, ತನ್ನ ವಿರುದ್ಧ ದನಿ ಎತ್ತುವವರ ವಿರುದ್ಧ ಸರ್ಕಾರದ ಶಕ್ತಿಯನ್ನು ಆಡಳಿತ ಪಕ್ಷವು ಬಳಸುತ್ತಿದೆ. ಆದರೆ, ಇದಕ್ಕೆ ಹೆದರದೆ, “ಪ್ರೀತಿ ಮತ್ತು ಸ್ನೇಹ” ಹರಡುವ ಮೂಲಕ ದೇಶ ಎದುರಿಸುತ್ತಿರುವ ಸವಾಲುಗಳ ವಿರುದ್ಧ ಯುವಕರು ನಿಲ್ಲಬೇಕು ಎಂದು ಹೇಳಿದರು.

ಸೋಮವಾರ ಜಮ್ಮುವಿನಲ್ಲಿ (Jammu) ನಡೆದ ಬುಡಕಟ್ಟು ಯುವ ಸಮಾವೇಶದಲ್ಲಿ (Tribal Youth convention )ಮಾತನಾಡಿದ ಅವರು, "ಇಡೀ ದೇಶವನ್ನು ಬಿಜೆಪಿ ಹಾಳು ಮಾಡಿದೆ. ಪ್ರಸ್ತುತ ಪರಿಸ್ಥಿತಿಯಲ್ಲಿ ಪ್ರತಿಯೊಬ್ಬರಲ್ಲೂ ಅಸುರಕ್ಷಿತ ಭಾವನೆ ಕಾಡುತ್ತಿದೆ.  ನಾಳೆ ನಾವು ಜೀವಂತವಾಗಿ ಇರುತ್ತೇವೋ, ಇಲ್ಲವೋ ಎನ್ನುವುದು ಗೊತ್ತಿಲ್ಲ. ವಿರೋಧ ಪಕ್ಷದ ನಾಯಕರ ವಿರುದ್ಧ ಇಡಿ ದಾಳಿ, ಸರ್ಕಾರಿ ಏಜೆನ್ಸಿಗಳಿಂದ ಬಂಧನಗಳು ಪ್ರತಿ ದಿನದ ಸುದ್ದಿಗಳಾಗಿ ಮಾರ್ಪಟ್ಟಿದೆ. ದೇಶದ ಇತರ ಎಲ್ಲಾ ಭಾಗಕ್ಕಿಂತ ಜಮ್ಮು ಕಾಶ್ಮೀರದಲ್ಲಿ ಇದು ಹೆಚ್ಚಾಗಿದೆ' ಎಂದು ಹೇಳಿದರು.

ಉತ್ತರ ಪ್ರದೇಶದಲ್ಲಿ ಚುನಾವಣೆ ಘೋಷಣೆಯಾಗಿದೆ. ಈಗ ಅವರು ಬಾಬರ್ ಹಾಗ ಔರಂಗಜೇಬ್ ಅವರನ್ನು ನೆನಪು ಮಾಡಿಕೊಳ್ಳುತ್ತಾರೆ. ಬಿಜೆಪಿಯನ್ನು ತೊಲಗಿಸಲು ನಮಗೆ ಒಂದು ಅವಕಾಶ ಸಿಕ್ಕಿದೆ. ದೇಶವನ್ನು ವಿಭಜನೆ ಮಾಡುವ ಹುನ್ನಾರದಲ್ಲಿರುವ ಬಿಜೆಪಿಯನ್ನು ನಾವು ಉತ್ತರ ಪ್ರದೇಶ ಹಾಗೂ ದೇಶದಿಂದ ತೊಲಗಿಸಿದರೆ, ಅದು 1947ರಲ್ಲಿ ಬ್ರಿಟಿಷರಿಂದ ಪಡೆದುಕೊಂಡ ಸ್ವಾತಂತ್ರ್ಯಕ್ಕಿಂತ ದೊಡ್ಡದಾಗಿರಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಹರಿದ್ವಾರದ "ದ್ವೇಷ ಸಮಾವೇಶ"ವನ್ನು ಉಲ್ಲೇಖಿಸಿದ ಅವರು, "ಸಭೆಯಲ್ಲಿ ಭಾಗವಹಿಸಿದ್ದ ಪ್ರಮುಖರು ಮುಸ್ಲಿಮರ ನರಮೇಧಕ್ಕೆ ಬಹಿರಂಗವಾಗಿ ಕರೆ ನೀಡಿದರು. ಆದರೆ, ಇಡೀ ಬಿಜೆಪಿ ನಾಯಕತ್ವ ಮೌನವಾಗಿದ್ದು ಮಾತ್ರವಲ್ಲದೆ ದೇಶದಲ್ಲಿ ಪ್ರತಿಯೊಬ್ಬರಿಗೂ ತಮ್ಮ ಅಭಿಪ್ರಾಯವನ್ನು ಹೇಳಲು ಹಕ್ಕಿದೆ ಎನ್ನುವ ಅರ್ಥದಲ್ಲಿ ಮಾತನಾಡಿದೆ' ಎಂದರು.

UP Elections: ಯೋಗಿಗೆ ಶಾಕ್ ಕೊಡಲು ಮುಂದಾದ ಕೇಸರಿ ಪಕ್ಷಾಂತರಿಗಳಿಗೆ ಅಖಿಲೇಶ್ ಏಟು!
ಮಹಾತ್ಮಾ ಗಾಂಧೀ (Mahatma Gandhi) ಅವರ ಭಾರತಕ್ಕೆ ಜಮ್ಮು ಕಾಶ್ಮೀರ ಸೇರಿಕೊಂಡಿದೆ. ಈ ದೇಶವನ್ನು ಯಾವುದೇ ಕಾರಣಕ್ಕೂ ಅವರ ಹಂತಕ ನಾಥೂರಾಮ್ ಗೋಡ್ಸೆ (Nathuram Godse)ಅವರ ದೇಶವಾಗಲು ನಾವು ಬಿಡುವುದಿಲ್ಲ."ಅವರು ಗೋಡ್ಸೆಯನ್ನು ಪೂಜಿಸುತ್ತಾರೆ. ಗಾಂಧಿ ದೇಶ ಕಂಡ ಅತೀದೊಡ್ಡ ಹಿಂದು. ಸಸ್ಯಾಹಾರಿಯಾಗಿದ್ದು ಮಾತ್ರವಲ್ಲದೆ ಜಾತ್ಯತೀತ ನಾಯಕರಾಗಿದ್ದರು, ಅವರು ಮಾಂಸಾಹಾರಿಗಳು ಸೇರಿದಂತೆ ಯಾರ ವಿರುದ್ಧವೂ ದ್ವೇಷವನ್ನು ಹೊಂದಿರಲಿಲ್ಲ" ಎಂದು ಮಫ್ತಿ ಹೇಳಿದ್ದಾರೆ.

UP Elections: ಇರೋ ಗದ್ದುಗೆ ಉಳಿಸಿಕೊಳ್ಳಲು ಬಿಜೆಪಿ ಯತ್ನ, ಯೋಗಿಪುರ ರಹಸ್ಯ!
ಯಾರಾದರೂ ಬಿಜೆಪಿ ವಿರುದ್ಧ ಮಾತನಾಡಿದರೆ, ಹಿಂದೂಗಳು ಮತ್ತು ರಾಷ್ಟ್ರವನ್ನು ನಿಂದಿಸುತ್ತಿದ್ದಾರೆ ಎಂದು ಅವರು ಆರೋಪ ಮಾಡುತ್ತಾರೆ. "ಹಿಂದುಗಳಿಗಾಗಲಿ, ಈ ದೇಶಕ್ಕಾಗಿ ಬಿಜೆಪಿ ಗಾಡ್ ಫಾದರ್ ಅಲ್ಲ. ನಾವು ನಮ್ಮ ಧರ್ಮ, ಜಾತಿ ಮತ್ತು ಪಂಥವನ್ನು ಲೆಕ್ಕಿಸದೆ ಒಟ್ಟಿಗೆ ನಿಲ್ಲಬೇಕು ಮತ್ತು ಸವಾಲುಗಳನ್ನು ಎದುರಿಸಬೇಕು ಮತ್ತು ಪ್ರೀತಿ ಮತ್ತು ಸ್ನೇಹವನ್ನು ಹರಡುವ ಮೂಲಕ ಅವುಗಳನ್ನು ಎದುರಿಸಬೇಕು' ಎಂದರು. ಉತ್ತರ ಪ್ರದೇಶಲ್ಲಿ ಈಗ ಚುನಾವಣೆಯ ಕಾಲ ಬಾಬರ್ ಮತ್ತು ಔರಂಗಜೇಬ್ ನಂಥ ಮೊಘಲ್ ಚಕ್ರವರ್ತಿಗಳ ಹೆಸರನ್ನು ಬಿಜೆಪಿ ಎತ್ತುತ್ತದೆ. ರಾಜ್ಯದಲ್ಲಿ ಉತ್ತಮ ಆಡಳಿತ, ಉದ್ಯೋಗ ಸೃಷ್ಟಿ ಮತ್ತು ಖಾತರಿಪಡಿಸುವಲ್ಲಿ ಸರ್ಕಾರ ವಿಫಲವಾಗಿರುವ ಕಾರಣ, ಮಂದಿರ ಹಾಗೂ ಮಸೀದಿಯ ಹೆಸರಲ್ಲಿ ಜನರ ದಾರಿ ತಪ್ಪಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ ಎಂದು ಟೀಕೆ ಮಾಡಿದರು.

Follow Us:
Download App:
  • android
  • ios